ಸಿ.ಡಿ ಲೇಡಿ ಪೋಷಕರ ಸುದ್ದಿಗೋಷ್ಠಿ: ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ
ಸಿ.ಡಿ. ಲೇಡಿಯ ಪೋಷಕರು ಎಸ್‌ಐಟಿ ಅಧಿಕಾರಿಗಳ ಮುಂದೆ ತನಿಖೆಗ ಹಾಜರಾಗಿದ್ದು, ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. ಬಳಿಕ ಯುವತಿಯ ಪೋಷಕರು ಸುದ್ದಿಗೋಷ್ಠಿ ನಡೆಸಿದ್ದು, ಅದರ ಸಮಗ್ರ ಮಾಹಿತಿ ಈ ಕೆಳಗಿನಂತಿದೆ
ಬೆಂಗಳೂರು, (ಮಾ.27): ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ.ಕೇಸ್‌ಗೆ ಸಂಬಂಧಿಸಿದಂತೆ ದಿನಕ್ಕೊಂದು ಬೆಳವಣಿಗೆಗಗಳು ಆಗುತ್ತಿದೆ. ಈ ಹಿನ್ಕೆಯಲಲ್ಇ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಇನ್ನೂ ಇದೇ ಮೊದಲ ಬಾರಿಗೆ ಸಿ.ಡಿ. ಲೇಡಿಯ ಪೋಷಕರು ಎಸ್‌ಐಟಿ ಅಧಿಕಾರಿಗಳ ಮುಂದೆ ತನಿಖೆಗ ಹಾಜರಾಗಿದ್ದು, ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. ಬಳಿಕ ಯುವತಿಯ ಪೋಷಕರು ಸುದ್ದಿಗೋಷ್ಠಿ ನಡೆಸಿದ್ದು, ಅದರ ಸಮಗ್ರ ಮಾಹಿತಿ ಈ ಕೆಳಗಿನಂತಿದೆ.
ಡಿಕೆ ಶಿವಕುಮಾರ್ ನಮ್ಮ ಅಕ್ಕನ್ನ ಇಟ್ಟುಕೊಂಡು ಆಟ ಆಡುತ್ತಿದ್ದಾರೆ. ನಮಗೆ ನಮ್ಮ ಅಕ್ಕ ಬೇಕು. ಒಂದು ಹೆಣ್ಣು ಮಗಳನ್ನ ಇಟ್ಕೊಂಡು ಈ ರೀತಿ ಮಾಡಬೇಡಿ ಎಂದು ಯುವತಿಯ ಸಹೋದರ ಹೇಳಿದರು.
ಯುವತಿ ನನ್ನ ಭೇಟಿಗೆ ಪ್ರಯತ್ನಿದ್ದು ನಿಜ, ಡಿಕೆಶಿ ಮೊದಲ ಪ್ರತಿಕ್ರಿಯೆ
ನಮ್ಮ ಮಗಳನ್ನ ನಮಗೆ ಕೊಟ್ಟು ಬಿಡಿ. ಮಾನಸಿಕವಾಗಿ ನೊಂದು ನಮ್ಮ ಸಂಬಂಧಿಕರ ಮನೆಯಲ್ಲಿದ್ದೇವೆ. ನಾನೊಬ್ಬ ಮಾಜಿ ಸೈನಿಕ, ದೇಶ ಕಾಯ್ದೋನು, ನನ್ನ ಮಗಳನ್ನು ಕಾಯ್ದು ಕೊಳ್ಳುವುದು ಗೊತ್ತು ಎಂದು ಯುವತಿಯ ತಂದೆ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡರು.
ಮಾರ್ಚ್ 2ರಂದು ಸಿಡಿ ಪ್ರಕರಣದ ಬೆಳಕಿಗೆ ಬಂದಾಗ ನನ್ನ ಅಕ್ಕನ ಜತೆ ಮೊಬೈಲ್ನಲ್ಲಿ ಚರ್ಚಿಸಿದ್ದ ಆಡಿಯೋ ವೈರಲ್ ಆಗಿದೆ. ನನ್ನ ಅಕ್ಕನ ಮೊಬೈಲ್ ಸ್ವಿಚ್ಆಫ್ ಆಗಿತ್ತು. ನಮ್ಮ ಅಕ್ಕನನ್ನು ತಂದು ಕೊಡುವಂತೆ ಯುವತಿ ತಮ್ಮ ಮನವಿ ಮಾಡಿದ್ದಾರೆ. ಮಾರ್ಚ್ 2ನೇ ತಾರೀಖು ಡಿಕೆಶಿ ನಿವಾಸದ ಬಳಿ ತೆರಳಿದ್ದಳು. ನಮ್ಮ ಅಕ್ಕ ಡಿ.ಕೆ.ಶಿವಕುಮಾರ್ ಮನೆ ಮನೆ ಬಳಿ ತೆರಳಿದ್ದಳು ಎಂದು ಸಿಡಿ ಲೇಡಿ ಸಹೋದರ ಹೇಳಿದ್ದಾರೆ.
ನಮ್ಮ ಅಕ್ಕನನ್ನು ಬೆಂಗಾವಲಿನಲ್ಲಿ ಗೋವಾಗೆ ಕಳುಹಿಸಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಮ್ಮಕ್ಕ ಎಲ್ಲೂ ಕಾಣಲಿಲ್ಲ. ನಿಮ್ಮ ಹೊಲಸು ರಾಜಕಾರಣಕ್ಕಾಗಿ ನಮ್ಮಕ್ಕನ ಬಳಸಿದ್ದಾರೆ. ನೀವು ಗಂಡಸರೇ ಆಗಿದ್ದರೆ ಎದುರು ಬದುರು ಹೋರಾಡಿ. ನಮ್ಮ ಅಕ್ಕನನ್ನು ಮುಂದಿಟ್ಟುಕೊಂಡು ಹೀನ ರಾಜಕಾರಣ ಮಾಡಬೇಡಿ. ನಮ್ಮ ಅಕ್ಕನನ್ನು ಬಿಟ್ಟುಬಿಡಿ ಎಂದು ಸಿಡಿ ಲೇಡಿ ಸಹೋದರ ಮನವಿ ಮಾಡಿದರು.