10 ಸಾವಿರ ಕೋಟಿ ರೂ. ಹಗರಣಕ್ಕೆ ಸಹಕರಿಸದ ಹಿನ್ನೆಲೆ ಸಿಡಿ ಬಿಡುಗಡೆ: ಡಿಕೆಶಿ ವಿರುದ್ಧ ರಮೇಶ್‌ ಜಾರಕಿಹೊಳಿ ಆರೋಪ

ನಾನು ಸಹಕಾರ ಸಚಿವ ಆಗಿದ್ದಾಗ 10 ಸಾವಿರ ಕೋಟಿ ರೂ. ಫೈಲ್‌ಗಳನ್ನು ಕ್ಲಿಯರ್‌ ಮಾಡಲು ಹೇಳಿದ್ದರು. ಆದರೆ, ನಾನು ಇದಕ್ಕೂ ಒಪ್ಪಿಕೊಂಡಿರಲಿಲ್ಲ. ಜೊತೆಗೆ ಅವರು ಹೇಳಿದವರಿಗೆ ಕಾಮಗಾರಿಗಳ ಟೆಂಡರ್‌ ಕೊಡದಿದ್ದರಿಂದ ಸಿಡಿ ಬಿಡುಗಡೆ ಮಾಡಿದ್ದಾರೆ

 DK Shiva kumar 10 thousand crore scam Ramesh Jarakiholi alleges sat

ಬೆಳಗಾವಿ (ಜ.30): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ರಾಜಕಾರಣದಲ್ಲಿ ಇರಲು ನಾಲಾಯಕ್‌ ಆಗಿದ್ದಾರೆ. ಎಲ್ಲರ ಸಿಡಿ ಇಟ್ಟುಕೊಂಡು ಬ್ಲಾಕ್‌ ಮೇಲ್‌ ಮಾಡುತ್ತಾರೆ. ನಾನು ಸಹಕಾರ ಸಚಿವ ಆಗಿದ್ದಾಗ 10 ಸಾವಿರ ಕೋಟಿ ರೂ. ಫೈಲ್‌ಗಳನ್ನು ಕ್ಲಿಯರ್‌ ಮಾಡಲು ಹೇಳಿದ್ದರು. ಆದರೆ, ನಾನು ಇದಕ್ಕೂ ಒಪ್ಪಿಕೊಂಡಿರಲಿಲ್ಲ. ಜೊತೆಗೆ ಅವರು ಹೇಳಿದವರಿಗೆ ಕಾಮಗಾರಿಗಳ ಟೆಂಡರ್‌ ಕೊಡದಿದ್ದರಿಂದ ಸಿಡಿ ಬಿಡುಗಡೆ ಮಾಡಿದ್ದಾರೆ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಆರೋಪಿಸಿದ್ದಾರೆ.

ಬೆಳಗಾವಿಯಲ್ಲಿ ಖಾಸಗಿ ಹೋಟೆಲ್‌ನಲ್ಲಿ ಮಾಧ್ಯಮಗಳೊದಿಗೆ ಮಾತನಾಡಿದ ಅವರು, ರಾಜ್ಯದ ಹಲವು ನಾಯಕರ ಸಿಡಿ ಇಟ್ಟುಕೊಂಡು ಬ್ಲಾಕ್‌ ಮೇಲ್‌ ಮಾಡುತ್ತಾರೆ. ನಾನು ಸಚಿವನಾಗಿದ್ದರೂ ಅವರು ಹೇಳಿದ ಕಾಮಗಾರಿಗಳನ್ನು, ಯೋಜನೆಗಳನ್ನು ಜಾರಿಗೊಳಿಸಿ ಅವರು ಹೇಳಿದವರಿಗೆ ಟೆಂಡರ್‌ ಕೊಡಬೇಕಿತ್ತು. ಈ ಬಗ್ಗೆ ಭಾರಿ ಪ್ರಮಾಣದಲ್ಲಿ ನನಗೆ ಬ್ಲಾಕ್‌ಮೇಲ್‌ ಮಾಡಿದ್ದರು. ನೀವು ನಾನು ಹೇಳಿದ ಮಾತನ್ನು ಕೇಳದಿದ್ದರೆ ಸಿಡಿ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ, ನಾನು ಅವರ ಷರತ್ತಿಗೆ ಒಪ್ಪಿಕೊಂಡಿದ್ದರೆ ಅಂದು ಸಿಡಿ ಹೊರಬರುತ್ತಿರಲಿಲ್ಲ. ನಾನು ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ಸಿಡಿ ಬಿಡುಗಡೆ ಮಾಡಿದ್ದಾರೆ. ಇದರಿಂದ ನನ್ನ ಜೀವನ ಹಾಳಾಗಲಿಲ್ಲ ಎಂದರು.

ನಾನು ಡಿಕೆಶಿ ಅಣ್ಣ ತಮ್ಮಂದಿರಂತೆ ಇದ್ದೆವು- ಗ್ರಾಮೀಣ ಶಾಸಕಿ ಸಂಬಂಧ ಹಾಳು ಮಾಡಿದಳು: ರಮೇಶ್‌ ಜಾರಕಿಹೊಳಿ

10 ಸಾವಿರ ಕೋಟಿ ರೂ. ಫೈಲ್‌ ದೋಖಾ:  ನಾನು ಸಹಕಾರ ಸಚಿವ ಆಗಿದ್ದಾಗ ಡಿ.ಕೆ.ಶಿವಕುಮಾರ್‌ ಅವರು 10 ಸಾವಿರ ಕೋಟಿ ರೂ. ಫೈಲ್‌ಗಳನ್ನು ಕ್ಲಿಯರ್‌ ಮಾಡಲು ಹೇಳಿದ್ದರು. ಆದರೆ, ಇದರಲ್ಲಿ ಹಗರಣ ಇತ್ತು ಎಂಬುದರ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು ಅದಕ್ಕೆ ನಾನು ಸಹಿ ಮಾಡಲಿಲ್ಲ. ಅದರಲ್ಲಿ ಸೂಕ್ತ ದಾಖಲೆಗಳು ಇಲ್ಲದೇ ಸಾಲ ಪಡೆದುಕೊಂಡಿರುವ ಮಾಹಿತಿ ಇತ್ತು. ಇದರಿಂದ ಅಂತಹ ಫೈಲ್‌ಗಳನ್ನು ನಾನು ಕ್ಲಿಯರ್‌ ಮಾಡಲು ಒಪ್ಪಿಕೊಳ್ಳದೇ ಸಹಿ ಹಾಕುವುದನ್ನು ನಿರಾಕರಿಸಿದ್ದೆನು. ಅವರು ತಮ್ಮ ಕಪ್ಪು ಹಣವನ್ನು ಬೆಳಗಾವಿ ಫ್ಯಾಕ್ಟರಿ ಮೂಲಕ ವೈಟ್‌ ಮಾಡಿಕೊಳ್ಳಲು ಮುಂದಾಗಿದ್ದರು ಎಂದು ಆರೋಪಿಸಿದರು.

ಸಿಡಿ ತಯಾರಿಸಲು 40 ಕೋಟಿ ರೂ. ಖರ್ಚು:
ನನ್ನ ಬಗ್ಗೆ ಸಿಡಿ ಬಿಡುಗಡೆ ಮಾಡಿದ ಬಗ್ಗೆ ಷಡ್ಯಂತ ಮಾಡಲಾಗಿದೆ. ನನ್ನ ವಿರುದ್ಧ ಸಿಡಿ ಷಡ್ಯಂತ್ರ ಮಾಡಲು ಬರೋಬ್ಬರಿ ೪೦ ಕೋಟಿ ರೂ. ಖರ್ಚು ಮಾಡಲಾಗಿದೆ. ಈ ಸಿಡಿ ಷಡ್ಯಂತ್ರದಲ್ಲಿ ಡಿಕೆಶಿವಕುಮಾರ್‌ ಅವರ ಕೈವಾಡ ಇರುವುದಕ್ಕೆ ನನ್ನ ಬಳಿ ದಾಖಲೆಗಳಿವೆ. ನಾನು ತಪ್ಪು ಮಾಡದಿದ್ದರೂ ಅದನ್ನು ಒಪ್ಪಿಕೊಳ್ಳುವಂತಹ ಪರಿಸ್ಥಿತಿಯನ್ನು ತಂದೊಡ್ಡಿದರು. ರಮೇಶ್‌ ಜಾರಕಿಹೊಳಿ ಏನು ಎಂಬುದರ ಬಗ್ಗೆ ಜನರಿಗೆ ಪೂರ್ಣ ಮಾಹಿತಿ ಗೊತ್ತಿದೆ ಎಂದು ತಿಳಿಸಿದರು.

ಇದೇ ನನ್ನ ಕೊನೇ ಚುನಾವಣೆ, ಮುಂದೆ ಕ್ಷೇತ್ರ ಬಿಡುವೆ: ರಮೇಶ್‌ ಜಾರಕಿಹೊಳಿ

ನನ್ನ ಬಳಿ 120 ದಾಖಲೆಗಳು ಇದ್ದಾವೆ:ಡಿ.ಕೆ. ಶಿವಕುಮಾರ್‌ ಅವರಿ ನನ್ನ ಬಳಿ ಎವಿಡೆನ್ಸ್‌ಗಳು ಇದ್ದು ಸಿಬಿಐ ತನಿಖೆ ಆದರೆ ಕೊಡುತ್ತೇನೆ. ಒಟ್ಟಾರೆ ೧೨೦ ದಾಖಲೆಗಳು ನನ್ನ ಬಳಿ ಇದ್ದು ಅವುಗಳನ್ನು ತನಿಖೆ ಮಾಡಿವಾಗ ಕೊಡುತ್ತೇನೆ. ಇಂದು ನಾನು ಸಿಡಿಯನ್ನು ಬಿಡುಗಡೆ ಮಾಡುತ್ತಿಲ್ಲ. ಇದು ನನ್ನ ಮತ್ತು ಡಿಕೆಶಿ ಅವರ ನಡುವಿನ ವೈಯಕ್ತಿಕ ಯುದ್ಧವಾಗಿದೆ. ಎರಡು ವರ್ಷದಿಂದ ನ್ನ ಮೇಲೆ ತೇಜೋವಧೆ ಮಾಡಿದ್ದಾರೆ. ಮಹಿಳೆ ಮುಖಾಂತರ ನನ್ನ ತೇಜೋವಧೆ ಮಾಡಿದ್ದಾರೆ. ವೈಯಕ್ತಿಕ ತೇಜೋವಧೆಯನ್ನು ಮಾಡಿ ನನ್ನ ಜೀವನವನ್ನು ಹಾಳು ಮಾಡಿದ್ದಾರೆ. ಇಷ್ಟೆಲ್ಲಾ ಆದರೂ ನಾನು ಕಾನೂನಾತ್ಮಕವಾಗಿ ಹೋರಾಟ ಮಾಡಿದ್ದೇನೆ ಎಂದರು.

Latest Videos
Follow Us:
Download App:
  • android
  • ios