ಆರ್. ಅಶೋಕ್‌ ಸ್ಪರ್ಧೆಯ ಎರಡೂ ಕ್ಷೇತ್ರದಲ್ಲಿ ಡಿಕೆ ಬ್ರದರ್ಸ್‌ ಎದುರಾಳಿ: ಪದ್ಮನಾಭನಗರದಿಂದ ಡಿ.ಕೆ. ಸುರೇಶ್‌ ಕಣಕ್ಕೆ!

ಆರ್. ಅಶೋಕ್‌ ಸ್ಪರ್ಧಿಸುವ ಕನಕಪುರ ಮತ್ತು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಡಿಕೆ ಸಹೋದರರು ಪ್ರಭಲ ಎದುರಾಳಿಗಳಾಗಿ ಕಾಂಗ್ರೆಸ್‌ನಿಂದ ಸ್ಪರ್ಧೆಗೆ ಇಳಿಯಲಿದ್ದಾರೆ.

DK Brothers opponent in both constituency of R Ashok competition sat

ಬೆಂಗಳೂರು (ಏ.12): ರಾಜ್ಯ ಬಿಜೆಪಿಯ ಒಕ್ಕಲಿಗ  ಪ್ರಬಲ ರಾಜಕಾರಣಿಯಾದ ಆರ್. ಅಶೋಕ್‌ ಅವರಿಗೆ ಬಿಜೆಪಿಯಿಂದ ಕನಕಪುರ ಮತ್ತು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್‌ ನೀಡಲಾಗಿದೆ. ಆದರೆ, ಕನಕಪುರದಲ್ಲಿ ಈಗಾಗಲೇ ಡಿ.ಕೆ. ಶಿವಕುಮಾರ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದು, ಈಗ ಪದ್ಮನಾಭನಗರದಲ್ಲಿ ಡಿ.ಕೆ. ಸುರೇಶ್‌ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುಳಿವು ಸಿಕ್ಕಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪದ್ಮನಾಭನಗರ  ವಿಧಾನಸಭಾ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಹೆಸರು ಕೂಡ ಚರ್ಚೆ ಇದೆ. ಆದರೆ, ಸದ್ಯಕ್ಕೆ ಅಭ್ಯರ್ಥಿ ಬದಲಾವಣೆ ಇಲ್ಲ. ಡಿಕೆ ಸುರೇಶ್ ಗೆ ಡಿಮ್ಯಾಂಡ್ ಇದೆ . ಕಳೆದ ಬಾರಿ ಒಕ್ಕಲಿಗ ಅಭ್ಯರ್ಥಿ ಹಾಕಿದ್ದಾಗ ಸೋತಿದ್ದರು. ಈ ಬಾರಿ ನಾಯ್ಡು ಜನಾಂಗದವರಿಗೆ ಕೊಟ್ಟಿದ್ದೇವೆ. ಅಲ್ಲಿ ನಾಯ್ಡು ಜನರು ಜಾಸ್ತಿ ಇದ್ದಾರೆ. ಹೀಗಾಗಿ ಅಶೋಕ್ ಪದ್ಮನಾಭ ನಗರದಲ್ಲಿ ಸೋಲಲುತ್ತಾರೆ. ಕನಕಪುರದಲ್ಲಿ ಕೂಡ ಅಶೋಕ್ ಸೋಲುವುದು ನಿಶ್ಚಿತವಾಗಿದೆ. ಅವರಿಗೆ ಒಳ್ಳೆಯದಾಗಲಿ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಚಾಮರಾಜಪೇಟೆ ಟಿಕೆಟ್‌ ಸಮರ್ಥಿಸಿಕೊಂಡ ಭಾಸ್ಕರ್‌ ರಾವ್‌: ಗೆದ್ದು ಇತಿಹಾಸ ನಿರ್ಮಿಸ್ತೇನೆ

 

ರಘುನಾಥ್‌ ನಾಯ್ಡು ಈಗ ಅಲ್ಲಿನ ಅಭ್ಯರ್ಥಿ: ಪದ್ಮನಾಭನಗರ ಕ್ಯಾಂಡಿಡೇಟ್ ಘೋಷಣೆ ಮಾಡಿದ್ದೇವೆ. ಇಲ್ಲಿ ರಘುನಾಥ್ ನಾಯ್ಡು ನಮ್ಮ ಅಭ್ಯರ್ಥಿಯಾಗಿದ್ದಾರೆ. ನಮ್ಮ ಅಭ್ಯರ್ಥಿ ಬದಲಾವಣೆ ಇಲ್ಲ. ಆದರೆ, ಡಿ.ಕೆ. ಸುರೇಶ್ ಸ್ಪರ್ಧೆಗೆ ಕರೆತರುವಂತೆಯೂ ಭಾರಿ ಪ್ರಮಾಣದಲ್ಲಿ ಒತ್ತಡಗಳಿದ್ದಾವೆ. ಆದರೆ ಅಲ್ಲಿ ನಮ್ಮ ಕಾರ್ಯಕರ್ತನಿಗೆ ನೀಡಿದ್ದೇವೆ. ಸದ್ಯಕ್ಕೆ ರಘುನಾಥ ನಾಯ್ಡು ನಮ್ಮ ಕ್ಯಾಂಡಿಡೇಟ್. ಅಲ್ಲಿ ಅರ್ಥ್‌ಮೆಟಿಕ್ ವರ್ಕ್ ಆಗತ್ತದೆ. ಈ ಹಿಂದೆ ಒಕ್ಕಲಿಗ ಅಭ್ಯರ್ಥಿ ಹಾಕಿದ್ದೆವು ಅಲ್ಲಿ ಸೋತೆವು. ಅಲ್ಲಿ ಲೆಕ್ಕಾಚಾರದ ಪ್ರಕಾರ ಅಭ್ಯರ್ಥಿ ನಿಲ್ಲಿಸಿ ಗೆಲ್ಲಿಸಿಕೊಳ್ಳುತ್ತೇವೆ ಎಂದು ಹೇಳಿದರು.

ಮುಖ್ಯಮಂತ್ರಿ ವಿರುದ್ಧ ವಿನಯ್‌ ಕುಲಕರ್ಣಿ ಸ್ಪರ್ಧೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ದೆಹಲಿ ಹೈಕಮಾಂಡ್‌ ತೀರ್ಮಾನ ಕೈಗೊಳ್ಳುತ್ತದೆ. ಇನ್ನು ವಿನಯ್ ಕುಲಕರ್ಣಿ ಹೈಲಿ ಪಾಸಿಬಲ್ ಕ್ಯಾಂಡಿಡೇಟ್ ಆಗಿದ್ದಾರೆ. ಆದರೆ, ನಮಗಿಂತ ಜಾಸ್ತಿ ಕಾರ್ಯಕರ್ತರ ಒತ್ತಡ ಜಾಸ್ತಿ ಇದೆ. ಅದು ಧಾರವಾಡ ಹೋರಿ, ಎಮ್ಮೆ, ಹಸು. ಧಾರವಾಡದಲ್ಲಿ ಅವರಿಗೆ ಈಗಾಗಲೇ ಟಿಕೆಟ್ ಕೊಟ್ಟಿದ್ದೇವೆ. ಇನ್ನು ನಮ್ಮ ಪಕ್ಷದಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ಮಾಡುತ್ತೇವೆ ಎಂದು ಹೇಳಿದರು.

ಬಿಜೆಪಿಗೆ ರಾಜಿನಾಮೆ ನೀಡಿದ ಎಂಎಲ್ಸಿ ಆರ್. ಶಂಕರ್‌: ಪಕ್ಷೇತರ ಸ್ಪರ್ಧೆಗೆ ಸಿದ್ಧತೆ

ಹೊಂದಾಣಿಕೆ ರಾಜಕಾರಣ ನನ್ನದಲ್ಲ: ರಾಜಕಾರಣ ಎನ್ನುವುದು ಫುಟ್ ಬಾಲ್ ಅಲ್ಲ ಚೆಸ್ ಗೇಮ್. ಅವರು ಚೆಸ್ ಆಡ್ತಿದಾರೆ ಆಡಲಿ. ನಾವೂ ಕೂಡ ಆಡುತ್ತಿದ್ದೇವೆ. ನನಗೇನೂ ಹೋರಾಟ ಹೊಸದಲ್ಲ. 1985 ರಿಂದ ದೇವೇಗೌಡರ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದದೇನೆ. ನಂತರ ಕುಮಾರಸ್ವಾಮಿ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಇಡೀ ಜೀವನ ಹೋರಾಟ ಮಾಡಿಕೊಂಡು ಬಂದಿದ್ದೇನೆ. ನಾನು ಯಾರ ಹತ್ತಿರವೂ ಹೊಂದಾಣಿಕೆ ಮಾಡಿಕೊಳ್ಳೋ ಅವಶ್ಯಕತೆ ಇಲ್ಲ. ಇನ್ನು ಅಶೋಕ್‌ ನಮಗೆ ಯಾವ ಲೆಕ್ಕವೂ ಇಲ್ಲ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

Latest Videos
Follow Us:
Download App:
  • android
  • ios