ಚಾಮರಾಜಪೇಟೆ ಟಿಕೆಟ್ ಸಮರ್ಥಿಸಿಕೊಂಡ ಭಾಸ್ಕರ್ ರಾವ್: ಗೆದ್ದು ಇತಿಹಾಸ ನಿರ್ಮಿಸ್ತೇನೆ
ಚಾಮರಾಜಪೇಟೆ ಮೂಲ ನಿವಾಸಿ ಆಗಿರುವ ನನಗೆ ಇಲ್ಲಿಂದಲೇ ಟಿಕೆಟ್ ಕೊಟ್ಟಿದ್ದು, ಈವರೆಗೆ ಬಿಜೆಪಿ 30 ವರ್ಷ ಗೆಲ್ಲಲು ಸಾಧ್ಯವಾಗದ ಕ್ಷೇತ್ರದಲ್ಲಿ ಗೆದ್ದು ತೋರಿಸಿ ಇತಿಹಾಸ ನಿರ್ಮಿಸುತ್ತೇನೆ.
ಬೆಂಗಳೂರು (ಏ.12): ಬಿಜೆಪಿ ಘೋಷಣೆ ಮಾಡಿದ 189 ಕ್ಷೇತ್ರದ ಅಭ್ಯರ್ಥಿಗಳ ಟಿಕೆಟ್ ಪಟ್ಟಿಯಲ್ಲಿ ನಗೂ ಸುವರ್ಣಾವಕಾಶ ನೀಡಿದೆ. ಚಾಮರಾಜಪೇಟೆ ಮೂಲ ನಿವಾಸಿ ಆಗಿರುವ ನನಗೆ ಇಲ್ಲಿಂದಲೇ ಟಿಕೆಟ್ ಕೊಟ್ಟಿದ್ದು, ಈವರೆಗೆ ಬಿಜೆಪಿ 30 ವರ್ಷ ಗೆಲ್ಲಲು ಸಾಧ್ಯವಾಗದ ಕ್ಷೇತ್ರದಲ್ಲಿ ಗೆದ್ದು ತೋರಿಸಿ ಇತಿಹಾಸ ನಿರ್ಮಿಸುತ್ತೇನೆ ಎಂದು ಬೆಂಗಳೂರು ನಗರ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಚಾಮರಾಜಪೇಟೆಗೆ ಪರಿಚಯವೇ ಇಲ್ಲವೆಂದು ಕೆಲವರು ಹೇಳುತ್ತಾರೆ. ಆದರೆ, ನಾನು ಚಾಮರಾಜಪೇಟೆಯ ಮೂಲ ನಿವಾಸಿ ಆಗಿದ್ದೇನೆ. ಬಿಜೆಪಿ 189 ಟಿಕೆಟ್ ಘೋಷಣೆ ಮಾಡಿದೆ. ನನಗೂ ಸುವರ್ಣ ಅವಕಾಶ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯ ಚುನಾವಣಾ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಚಿರ ಋಣಿ ಆಗಿದ್ದೇನೆ ಎಂದು ಹೇಳಿದರು.
ಬಿಜೆಪಿಗೆ ರಾಜಿನಾಮೆ ನೀಡಿದ ಎಂಎಲ್ಸಿ ಆರ್. ಶಂಕರ್: ಪಕ್ಷೇತರ ಸ್ಪರ್ಧೆಗೆ ಸಿದ್ಧತೆ
ನಾನು ಕೂಡ ಚಾಮರಾಜಪೇಟೆ ನಿವಾಸಿ: ಬಿಜೆಪಿ ಪಕ್ಷದಲ್ಲಿ ಸಿದ್ದಾಂತ, ರಾಷ್ಟ್ರೀಯತೆ ಇರೋದ್ರಿಂದ ಪಕ್ಷಕ್ಕೆ ಸೇರಿದ್ದೇನೆ. 30 ವರ್ಷದಿಂದ ಚಾಮರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿಲ್ಲ. 10ನೇ ತಾರೀಖು ಉತ್ತರ ಸಿಗುತ್ತದೆ. ನಾನು ಸಹ ಚಾಮರಾಜಪೇಟೆ ನಿವಾಸಿ ಆಗುದ್ದೇನೆ. ಇನ್ನು ನಾನೇನು ಚಾಮರಾಜಪೇಟೆಗೆ ಹೊಸಬನಲ್ಲ. ನಾನು ಚಾಮರಾಜಪೇಟೆಯಲ್ಲೇ ನನ್ನ ಕಚೇರಿ ಮಾಡುತ್ತಿದ್ದೇನೆ. ಇನ್ನು ಚಾಮರಾಜಪೇಟೆಯಲ್ಲಿ ಟಿಕೆಟ್ ಆಕಾಂಕ್ಷೆ ಸುನೀಲ್ ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ನೀವು ಹೇಳುತ್ತಿದ್ದೀರಿ. ಆದರೆ, ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ. ಹಾಗೇನಾದರೂ ಇದ್ದರೆ ಆ ನಾಯಕರನ್ನ ಭೇಟಿ ಮಾಡುತ್ತೇನೆ. ನಾಯಕರ ಮನವೊಲಿಸುವ ಪ್ರಯತ್ನ ಮಾಡುತ್ತೇನೆ. ನನಗೆ ಪಕ್ಷದ ಎಲ್ಲ ನಾಯಕರ ಬೆಂಬಲವೂ ಇದೆ. ಎಲ್ಲರೂ ಒಗ್ಗಟ್ಟಾಗಿ ಶ್ರಮಿಸುವ ಮೂಲಕ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
ರಾಜಕೀಯ ಮತ್ತು ಪೊಲೀಸ್ ಇಲಾಖೆ ಬೇರೆ ಬೇರೆ: ಇನ್ನು ರೌಡಿಶೀಟರ್ ಸೈಲೆಂಟ್ ಸುನೀಲ್ ಪಕ್ಷೇತರವಾಗಿ ಸ್ಪರ್ಧೆ ಮಾಡುವುದು ನನಗೆ ತಿಳಿದಿಲ್ಲ. ಇನ್ನು ರೌಡಿ- ಪೊಲೀಸ್ ಎನ್ನುವುದಕ್ಕೆ ಇದು ಸೂಕ್ತ ವೇದಿಕೆಯಲ್ಲಿ. ರಾಜಕೀಯವೇ ಬೇರೆ, ಪೋಲಿಸ್ ಇಲಾಖೆ ಬೇರೆ. ಈಗಾಗಲೇ ನಾನು ಪೊಲೀಸ್ ಇಲಾಖೆ ಬಿಟ್ಟು ಆಗಿದೆ. ಅದೇ ಬೇರೆ ಚಾಪ್ಟರ್, ಇದೇ ಬೇರೆ ಚಾಪ್ಟರ್ ಆಗಿದೆ. ಸಂವಿಧಾನದ ಅಡಿಯಲ್ಲಿ ಯಾರ್ಯಾರಿಗೆ ಅವಕಾಶವಿದ್ಯೋ ಅವರನ್ನು ಗೌರವಿಸುವುದು ನನ್ನ ಕರ್ತವ್ಯ. ಏನು ಕೇಸ್ ಇದೆ, ಇಲ್ಲ ಅನ್ನೋದೆ ಸೆಕೆಂಡರಿ. ಸಂವಿಧಾನ ಅವರಿಗೆ ಒಂದು ಅವಕಾಶ ಕೊಟ್ಟಿದೆ. ಸಂವಿಧಾನದ ಅಡಿಯ ವೇದಿಕೆಯಲ್ಲಿ ಸರಿಸಮಾನರಾಗಿದ್ದೇವೆ. ಪೋಲಿಸ್ ಬ್ಯಾಗೆಜ್ ತಗೊಂಡು ರಾಜಕೀಯಕ್ಕೆ ಬಂದರೆ ಸರಿಹೋಗಲ್ಲ. ಅದೆಲ್ಲವೂ ಈಗ ಮುಗಿದಿರುವ ಅಧ್ಯಾಯವಾಗಿದೆ ಎಂದು ಭಾಸ್ಕರ್‌ರಾವ್ ಹೇಳಿದರು.
ಬೆಂಗಳೂರಿನ 25 ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆ: 3 ಸಸ್ಪೆನ್ಸ್
ಟಿಕೆಟ್ ಆಕಾಂಕ್ಷಿ ಸುನೀಲ್ ವೆಂಕಟೇಶ್ ಪ್ರತ್ಯೇಕ ಸಭೆ: ಚಾಮರಾಜಪೇಟೆಯಲ್ಲಿ ಭಾಸ್ಕರ್ ರಾವ್‌ಗೆ ಟಿಕೆಟ್ ಘೋಷಣೆ ಹಿನ್ನೆಲೆ ಟಿಕೆಟ್ ಆಕಾಂಕ್ಷಿ ಸುನೀಲ್ ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನ ಕಡೆಗಣಿಸಿದ್ದಾರೆ. ಹೀಗಾಗಿ ಅಭ್ಯರ್ಥಿ ಪರ ಕೆಲಸ ಮಾಡ್ಬೇಕಾ ಬೇಡವಾ ಎಂದು ಮುಖಂಡರ ಸಭೆಯನ್ನು ಕರೆದಿದ್ದಾರೆ. ಇಷ್ಟು ವರ್ಷ ಪಕ್ಷಕ್ಕಾಗಿ ದುಡಿದಿದ್ದುನಾವು, ಅದ್ರೇ ಟಿಕೆಟ್ ಮಾತ್ರ ಮತ್ಯಾರಿಗೋ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಘ ಹಾಗೂ ಪಕ್ಷದಲ್ಲಿ ದುಡಿದ ನಿಷ್ಠಾವಂತ ಕಾರ್ಯಕರ್ತರನ್ನ ಕಡೆಗಣಿಸಲಾಗಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಸುನೀಲ್ ವೆಂಕಟೇಶ್ ರಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.