ಬಿಜೆಪಿಗೆ ರಾಜಿನಾಮೆ ನೀಡಿದ ಎಂಎಲ್ಸಿ ಆರ್. ಶಂಕರ್‌: ಪಕ್ಷೇತರ ಸ್ಪರ್ಧೆಗೆ ಸಿದ್ಧತೆ

ರಾಜ್ಯದಲ್ಲಿ ಗುಜರಾತ್‌ ಮಾಡೆಲ್‌ಗೆ ಮತ್ತೊಂದು ವಿಕೆಟ್‌ ಬಿದ್ದಿದ್ದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಗಿದ್ದ ಆರ್. ನಾಗೇಶ್‌ ಇಂದು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಕೆ ಮಾಡಿದ್ದಾರೆ.

Another wicket for Gujarat model Former Minister R Shankar resigns from BJP sat

ಬೆಂಗಳೂರು (ಏ.12): ರಾಜ್ಯದಲ್ಲಿ ಗುಜರಾತ್‌ ಮಾಡೆಲ್‌ಗೆ ಮತ್ತೊಂದು ವಿಕೆಟ್‌ ಬಿದ್ದಿದ್ದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಗಿದ್ದ ಆರ್. ನಾಗೇಶ್‌ ಇಂದು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಕೆ ಮಾಡಿದ್ದಾರೆ.

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಆರ್. ಶಂಕರ್‌ ಅವರಿಗೆ ಬಿಜೆಪಿ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಇಂದು ಬಿಜೆಪಿಗೆ ರಾಜಿನಾಮೆ ಸಲ್ಲಿಕೆ ಮಾಡಿದ್ದಾರೆ. ಇನ್ನು ಅವರನ್ನು ಬಿಜೆಪಿಯಿಂದ ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಲಾಗಿದ್ದು, ಮಧ್ಯಾಹ್ನ 3 ಗಂಟೆಗೆ ರಾಜಿನಾಮೆ ಸಲ್ಲಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ. 

ಟಿಕೆಟ್ ಸಿಗದ ಹಿನ್ನೆಲೆ ಲಕ್ಷ್ಮಣ ಸವದಿ ಬಿಜೆಪಿಗೆ ಗುಡ್‌ಬೈ: ಸಿಎಂ ಬೊಮ್ಮಾಯಿ ವಿರುದ್ಧ ಮಾಜಿ ಡಿಸಿಎಂ ಆಕ್ರೋಶ

ಯಡಿಯೂರಪ್ಪ ನೀಡಿದ್ದ ಭರವಸೆ ಮರೆತರು: ಟಿಕೆಟ್ ಕೈ ತಪ್ಪಿದ್ದಕ್ಕೆ ಮಾಧ್ಯಮಗಳ ಮುಂದೆ ಬೇಸರ ವ್ಯಕ್ತಪಡಿಸಿದ ವಿಧಾನ ಪರಿಷತ್‌ ಸದಸ್ಯ ಆರ್. ಶಂಕರ್, ಟಿಕೆಟ್ ಕೊಟ್ಟರೂ ಕೊಟ್ಟಿಲ್ಲವೆಂದರೂ ನಾನು ಸ್ಪರ್ಧಿಸುತ್ತೇನೆ ಎಂಬ ನಿರ್ಧಾರದಲ್ಲಿದ್ದೆನು. ಬಿಜೆಪಿ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಲು ನಾನು ಬಹಳ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಅಂತಹ ಸಂದರ್ಭದಲ್ಲಿ ನಾನು ಅನರ್ಹನಾಗಬಾರದಿತ್ತು, ಸುಪ್ರಿಂ ಕೋರ್ಟ್ ಆದೇಶಕ್ಕೆ ತಲೆ ಬಾಗಿ ನಿರ್ಧಾರ ತೆಗೆದುಕೊಂಡೆನು. ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವ ಭರವಸೆಯನ್ನು ಬಿಎಸ್ ಯಡಿಯೂರಪ್ಪ ನೀಡಿದ್ದರು. ಆದರೆ ಟಿಕೆಟ್ ನೀಡುವ ವೇಳೆ ನನ್ನ ಕೆಲಸವನ್ನು ಮರೆತು ಬಿಟ್ಟರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ತಂದವರನ್ನು ಸರಿಯಾಗಿ ನಡೆಸಿಕೊಂಡಿಲ್ಲ: ಹಲವಾರು ಹಗರಣ, ಜನ ವಿರೋಧಿ ಅಲೆ ಸೇರಿದಂತೆ ಕೆಟ್ಟ ಹೆಸರು ಪಡೆದಿರೋ ಅರುಣ್ ಕುಮಾರ್ ಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಇನ್ನು ಮೂರೂವರೆ ವರ್ಷ ವಿಧಾನ ಪರಿಷತ್‌ ಸದಸ್ಯನಾಗಿ ಇರಬಹುದಿತ್ತು. ಆದರೆ ಜನರ ಸೇವೆ ಮಾಡಲು ಇರುವವನು ನಾನು. ಅಧಿಕಾರ ಕಳೆದುಕೊಂಡು ಕುಳಿತುಕೊಳ್ಳುವ ಜಾಯಮಾನ ನನ್ನದಲ್ಲ. ನನ್ನ ತಾಲೂಕಿನ ಜನ ನನ್ನ ಮೇಲೆ ಭಾರೀ ನಂಬಿಕೆ ನಿರೀಕ್ಷೆ ಇಟ್ಟಿದ್ದರು. ನನಗೆ ಟಿಕೆಟ್ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದರು. ನಾನು ತಾಳ್ಮೆಯಿಂದ ಕಾಯ್ತಾ ಇದ್ದೆ, ಇವತ್ತು ನನ್ನ ತಾಳ್ಮೆ ಕಟ್ಟೆ ಹೊಡೆದಿದೆ. ಸರ್ಕಾರ ತಂದಂತಹ ನಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಟಿಕೆಟ್‌ ಸಿಗದಿದ್ದರೂ ಪಕ್ಷೇತರವಾಗಿ ಸ್ಪರ್ಧೆ: ನನ್ನ ಕ್ಷೇತ್ರದ ಜನ ನೋವಿಗೆ ಸ್ಪಂಧಿಸೋದೆ ನನ್ನ ಧರ್ಮ. ಇಂದು ಸಂಜೆ 3ಗಂಟೆಗೆ ಎಂಎಲ್ಸಿ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ. ಟಿಕೆಟ್ ಸಿಗದಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಪ್ರತಿ ಹಂತದಲ್ಲೂ ಅನ್ಯಾಯ ಮಾಡಿರುವ ಸರ್ಕಾರ ತರಲು ಮುಂದಾಗಿದ್ದೇ ತಪ್ಪಾಯ್ತು. ಪ್ರತಿ ಹಂತದಲ್ಲಿಯೂ ನನ್ನನ್ನು ಮುಗಿಸಲು ಸರ್ಕಾರ ಪ್ರಯತ್ನ ಮಾಡಿದ್ದು ಭಾರೀ ಬೇಸರ ತಂದಿದೆ ಎಂದು ಹೇಳಿದರು. 

ಬಿಜೆಪಿ ಮೊದಲ ಪಟ್ಟಿ ಪ್ರಕಟ: ಹೊಸ ಮುಖಗಳಿಗೆ ಮಣೆ, ಟಿಕೆಟ್ ತಪ್ಪಿದ್ದು ಯಾರಿಗೆ?

ಆರ್. ಶಂಕರ್‌, ಲಕ್ಷ್ಮಣ ಸವದಿ ಜೊತೆ ಮಾತಾಡ್ತೇನೆ: ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಾಣೆನೆನ್ನೂರು ಟಿಕೆಟ್‌ ಆಕಾಂಕ್ಷಿಯಾಗಿದ್ದ ಆರ್. ಶಂಕರ್ ಜೊತೆ ಮಾತನಾಡುತ್ತೇನೆ‌‌. ಅವರೊಂದಿಗೆ ಮಾತನಾಡಿ ಪಕ್ಷದಲ್ಲಿ ಉಳಿಸುವ ಕೆಲಸ ಮಾಡುತ್ತೇನೆ. ಇನ್ನು ಲಕ್ಷಣ್ ಸವದಿ ಜೊತೆ ಮಾತನಾಡುತ್ತೇನೆ. ದುಡುಕಿ ನಿರ್ಧಾರ ತಗೆದುಕೊಳ್ಳಬೇಡಿ   ಎಂದಿದ್ದೇವೆ. ಅವರಿಗೂ ಬಿಜೆಪಿಗೂ ಹಳೆಯ ನಂಟಿದೆ. ಅವರಿಗೆ ಇದೇ ಪಕ್ಷದಲ್ಲಿ ಉತ್ತಮ ಭವಿಷ್ಯ ಇದೆ ಎಂದು ಹೇಳಿದರು. 

Latest Videos
Follow Us:
Download App:
  • android
  • ios