ವರುಣ ಕ್ಷೇತ್ರದ ಬಗ್ಗೆ ಅಮಿತ್‌ ಶಾ ಜತೆ ಚರ್ಚೆ ಆಗಿದೆ: ಬಿ.ವೈ.ವಿಜಯೇಂದ್ರ

ವರುಣ ಸೇರಿದಂತೆ ಪ್ರಮುಖ ಕ್ಷೇತ್ರಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ನಮ್ಮ ಜೊತೆ ಚರ್ಚೆ ಮಾಡಿದ್ದಾರೆ. ಹಾಗಂತ ಅದು ನನ್ನ ಸ್ಪರ್ಧೆಯ ವಿಚಾರ ಅಲ್ಲ. 

Discussed with Amit Shah about Varuna constituency Says BY Vijayendra gvd

ಮೈಸೂರು (ಮಾ.25): ವರುಣ ಸೇರಿದಂತೆ ಪ್ರಮುಖ ಕ್ಷೇತ್ರಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ನಮ್ಮ ಜೊತೆ ಚರ್ಚೆ ಮಾಡಿದ್ದಾರೆ. ಹಾಗಂತ ಅದು ನನ್ನ ಸ್ಪರ್ಧೆಯ ವಿಚಾರ ಅಲ್ಲ. ಆದರೆ, ವರುಣ ಸೇರಿದಂತೆ ಪ್ರಮುಖ ಕ್ಷೇತ್ರಗಳ ಸ್ಥಿತಿಗಳ ಬಗ್ಗೆ ಗಂಭೀರ ಚರ್ಚೆಯಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು. ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕಾರಿಪುರದ ಜನ ನನ್ನ ಬಗ್ಗೆ ಒಲವು ತೋರಿಸಿದ ಕಾರಣ ಆ ಕ್ಷೇತ್ರದಲ್ಲಿ ನಾನು ಪ್ರಚಾರ ಮಾಡುತ್ತಿದ್ದೇನೆ. ಸ್ಪರ್ಧೆ ಎಲ್ಲಿಂದ ಎಂಬುದನ್ನ ನಾನು ನಿರ್ಧರಿಸಲು ಆಗುವುದಿಲ್ಲ. ನಮ್ಮ ಪಕ್ಷದ ಹೈಕಮಾಂಡ್‌ ಅದನ್ನ ನಿರ್ಧರಿಸುತ್ತದೆ ಎಂದು ಸ್ಪಷ್ಟಪಡಿಸಿದರು.

ವಿಜಯೇಂದ್ರ ಬೆನ್ನು ತಟ್ಟಿದ ಅಮಿತ್‌ ಶಾ: ತಮಗೆ ಅಮಿತ್‌ ಶಾ ಬೆನ್ನು ತಟ್ಟಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿ.ವೈ.ವಿಜಯೇಂದ್ರ ಅವರು, ಬೆನ್ನು ತಟ್ಟಿದ ಸದ್ದು ಯಾರು ಯಾರಿಗೆ ಹೇಗೆ ಕೇಳಿಸಿದೆ ಗೊತ್ತಿಲ್ಲ. ಅವರು ಸಂಘಟನೆ ಹೇಗೆ ನಡೆಯುತ್ತಿದೆ, ಮೋರ್ಚಾ ಸಮಾವೇಶಗಳನ್ನ ಎಷ್ಟುಮಾಡಿದ್ದೀಯಾ? ನೀನು ಖುದ್ದಾಗಿ ಎಷ್ಟುಜಿಲ್ಲೆಗಳಿಗೆ ಪ್ರವಾಸ ಹೋಗಿದ್ದೀಯಾ ಎಂದು ಕೇಳುತ್ತಾ ಬೆನ್ನು ತಟ್ಟಿದರು ಎಂದರು. ನಾನು ಮೋರ್ಚಾ ಸಮಾವೇಶಗಳ ವರದಿಗಳನ್ನ ಅಮಿತ್‌ ಶಾ ಅವರಿಗೆ ಕೊಟ್ಟಿದ್ದೇನೆ. ಈ ಬಾರಿ ಸ್ಪಷ್ಟಬಹುಮತ ಬರಬೇಕು. ಅದಕ್ಕಾಗಿ ಇನ್ನೂ ಹೆಚ್ಚಿನ ಸಂಘಟನೆ ಮಾಡಿ ಎಂದು ಅಮಿತ್‌ ಶಾ ಸೂಚಿಸಿದ್ದಾರೆ. ಪಕ್ಷ ಈಗಾಗಲೇ ದೊಡ್ಡ ಜವಾಬ್ದಾರಿಯನ್ನೇ ಕೊಟ್ಟಿದೆ. ಅದನ್ನು ನಾನು ನಿಭಾಯಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.

ಮನೆಗೆ ಅಮಿತ್‌ ಶಾ ಬಂದಿದ್ದರಿಂದ ಆನೆ ಬಲ: ಬಿ.ವೈ.ವಿಜಯೇಂದ್ರ

ಕಾಂಗ್ರೆಸ್‌ನಿಂದ ರಾಜ್ಯದಲ್ಲಿ ಅಧಿಕಾರದ ಹಗಲುಗನಸು: ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರದ ಹಗಲುಗನಸು ಕಾಣುತ್ತಿದ್ದು, ಅದು ಅವರ ಭ್ರಮೆಯಾಗಲಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಪಟ್ಟಣದ ಗುಂಜಾ ನರಸಿಂಹಸ್ವಾಮಿ ದೇವಾಲಯದ ಸಮೀಪದ ಆವರಣದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ನಡೆದ ಯುವ ಚೈತನ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್‌ ನೀಡುತ್ತಿರುವ ಗ್ಯಾರಂಟಿಗೆ ಮೂರು ಕಾಸಿನ ಬೆಲೆ ಇಲ್ಲ. ದೇಶದಲ್ಲಿ ಕಾಂಗ್ರೆಸ್‌ ಈಗಾಗಲೇ ಹೀನಾಯ ಸ್ಥಿತಿ ತಲುಪಿದೆ. 50-60 ಸ್ಥಾನಗಳಿಗೆ ಬಂದು ನಿಂತಿದೆ. ಇದ್ದ ಕೆಲವು ಸಂಸದರ ಸ್ಥಾನಗಳಲ್ಲಿ ಇಂದು ರಾಹುಲ ಗಾಂಧಿ ನಾಲಿಗೆ ಹರಿ ಬಿಟ್ಟು ಸದಸ್ಯತ್ವ ಕಳೆದುಕೊಂಡಿದ್ದಾರೆ. ರಾಜ್ಯದಲ್ಲೂ ಕೂಡ ಕಾಂಗ್ರೆಸ್‌ ಪ್ರತಿಪಕ್ಷವಾಗಿ ಉಳಿಯಲಿದೆ ಎಂದರು.

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಕರ್ನಾಟಕ ಹೆಬ್ಬಾಲಾಗಿದೆ. ಪಕ್ಷವನ್ನು ಯಡಿಯೂರಪ್ಪ ಅವರು ಹಳ್ಳಿ ಹಳ್ಳಿ ಸುತ್ತಿ ಅಧಿಕಾರಕ್ಕೆ ತಂದಿದ್ದಾರೆ. ಯಡಿಯೂರಪ್ಪನವರ ಪ್ರಾಮಾಣಿಕತೆಯ ಹೋರಾಟದ ಪರಿಶ್ರಮದಿಂದಾಗಿ ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ಬಿಜೆಪಿಯನ್ನು ಹಳ್ಳಿ ಹಳ್ಳಿಗಳಲ್ಲೂ ಪರಿಚಯವಾಯಿತು ಎಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿರುವ ಜನಪರ ಯೋಜನೆಗಳನ್ನು ಮನೆ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಿದರೆ, ಟಿ.ನರಸೀಪುರ, ವರುಣ ಕ್ಷೇತ್ರಗಳಲ್ಲಿ ಮಾತ್ರವಲ್ಲದೇ ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಗೆಲ್ಲಿಸಲು ಸಾಧ್ಯವಿದೆ ಎಂದರು. 

15 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದ ವೇಳೆ ಬರಡಾಗಿದ್ದ ಕೆ.ಆರ್‌. ಪೇಟೆ, ಶಿರಾ ಕ್ಷೇತ್ರಗಳಲ್ಲಿ ಕಮಲವನ್ನು ಅರಳಿಸಿದ್ದೇವೆ. ಕಾರ್ಯಕರ್ತರು ಮನಸ್ಸು ಮಾಡಿದರೆ ರಾಜ್ಯದ ಯಾವುದೇ ಕ್ಷೇತ್ರದಲ್ಲಾದರೂ ಕಮಲ ಅರಳಿಸಬಹುದು ಎಂದು ಅವರು ತಿಳಿಸಿದರು. ಈ ಬಾರಿ ಸಿದ್ದರಾಮಯ್ಯರವರನ್ನು ಮನೆಯಲ್ಲೇ ಕುರಿಸಬೇಕೆಂದು ಕಾಂಗ್ರೆಸ್‌ ಮುಖಂಡರೆ ತೀರ್ಮಾನ ಮಾಡಿದ್ದಾರೆ, ಇದನ್ನು ನಾನು ಹೇಳುತ್ತಿಲ್ಲ ಕಾಂಗ್ರೆಸ್‌ ಮುಖಂಡರು ತೀರ್ಮಾನ ಮಾಡಿದ್ದಾರೆ. ಯಾರನ್ನು ಮನೆಯಲ್ಲಿ ಕುರಿಸಬೇಕು, ಯಾರಿಗೆ ಗುಂಡಿ ತೋಡಬೇಕೆಂದು ಕಾಂಗ್ರೆಸ್‌ನವರೇ ತೀರ್ಮಾನಿಸಿದ್ದಾರೆ ಎಂದು ಅವರು ಹೇಳಿದರು.

ಕಾಂಗ್ರೆಸ್‌ನ ಬಸ​ನ​ಗೌ​ಡ​ರಿಗೆ ತಿರು​ಗೇಟು ​ನೀ​ಡು​ವುದೇ ಬಿಜೆಪಿ?: ರೆಡ್ಡಿ ಪಕ್ಷದಿಂದ ಎದುರಾಗಿದೆ ಮತ ವಿಭಜನೆಯ ಭೀತಿ

ಚಾಮರಾಜನಗರಕ್ಕೆ ನನ್ನನ್ನು ಉಸ್ತುವಾರಿ ಮಾಡಿ ಎಂದು ಕೇಳುವುದರಲ್ಲಿ ಅರ್ಥವಿಲ್ಲ. ವಿ.ಸೋಮಣ್ಣ ನಮ್ಮ ಪಕ್ಷದ ಹಿರಿಯ ನಾಯಕರು. ಅವರಿಗೆ ಅಲ್ಲಿ ಸಂಘಟನೆ ಮಾಡುವ ದೊಡ್ಡ ಶಕ್ತಿ ಇದೆ. ಅವರೇ ಆ ಕೆಲಸ ಮಾಡುತ್ತಾರೆ.
- ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ

Latest Videos
Follow Us:
Download App:
  • android
  • ios