ಮನೆಗೆ ಅಮಿತ್ ಶಾ ಬಂದಿದ್ದರಿಂದ ಆನೆ ಬಲ: ಬಿ.ವೈ.ವಿಜಯೇಂದ್ರ
‘ನಮ್ಮ ಮನೆಗೆ ಉಪಾಹಾರಕ್ಕೆ ಬಂದು ನನ್ನನ್ನು ಅತ್ಯಂತ ಪ್ರೀತಿಯಿಂದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮಾತನಾಡಿಸಿದ್ದು ಆನೆ ಬಲ ಬಂದಂತಾಗಿದೆ’ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಮಾ.25): ‘ನಮ್ಮ ಮನೆಗೆ ಉಪಾಹಾರಕ್ಕೆ ಬಂದು ನನ್ನನ್ನು ಅತ್ಯಂತ ಪ್ರೀತಿಯಿಂದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮಾತನಾಡಿಸಿದ್ದು ಆನೆ ಬಲ ಬಂದಂತಾಗಿದೆ’ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ಯಡಿಯೂರಪ್ಪನವರ ಕುರಿತು ಕೆಲವು ಸೃಷ್ಟಿಸಿದ್ದ ಕೆಲ ವದಂತಿಗಳಿಗೆ ಅಮಿತ್ ಶಾ ಇತಿಶ್ರೀ ಹಾಡಿದಿದ್ದಾರೆ. ಯಡಿಯೂರಪ್ಪನವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದರು.
‘ನನ್ನ ತಂದೆಯವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟನಂತರ ಅನೇಕ ಬಾರಿ ರಾಜೀನಾಮೆ ನೀಡಲು ಕಾರಣವೇನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಆದರೂ ಕೆಲವರು ಯಡಿಯೂರಪ್ಪನವರನ್ನು ಸೈಡ್‌ಲೈನ್ ಮಾಡಲಾಗಿದೆ ಎಂಬ ಊಹಾಪೋಹ ಹುಟ್ಟು ಹಾಕಿದ್ದಾರೆ. ಯಡಿಯೂರಪ್ಪನವರನ್ನು ಸೈಡ್‌ಲೈನ್ ಮಾಡಲಾಗಿದೆ ಎಂಬುದು ಸತ್ಯಕ್ಕೆ ದೂರವಾದದ್ದು. ಬಿಜೆಪಿ ಅಧಿಕಾರಕ್ಕೆ ತರಲು ಹಿಂದಿಗಿಂತಲೂ ಅತ್ಯಂತ ಉತ್ಸಾಹದಿಂದ ಯಡಿಯೂರಪ್ಪನವರು ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.
ನನಗೆ ಆದೇಶ ಮಾಡೋ ಅಧಿಕಾರ ಅಂಬರೀಶ್‌ಗಷ್ಟೇ: ಸಂಸದೆ ಸುಮಲತಾ
‘ನಮ್ಮ ಮನೆಗೆ ಅತ್ಯಂತ ಬ್ಯುಸಿ ಕೆಲಸಗಳ ನಡುವೆಯೂ ಉಪಾಹಾರಕ್ಕೆ ಕೇಂದ್ರ ಗೃಹ ಸಚಿವರು ಬಂದಿದ್ದು ನಮ್ಮ ಕುಟುಂಬಕ್ಕೆ ಖುಷಿ ತಂದಿದೆ. ಈ ವೇಳೆ ಮುಖ್ಯಮಂತ್ರಿ ಬೊಮ್ಮಾಯಿ, ರಾಜ್ಯಾಧ್ಯಕ್ಷ ಕಟೀಲ್, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ಕಾರಜೋಳ, ಶ್ರೀರಾಮುಲು ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೂಡಾ ಉಪಸ್ಥಿತರಿದ್ದರು’ ಎಂದು ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ರಾಜ್ಯದಲ್ಲಿ ಇನ್ನೇನು ಚುನಾವಣೆ ಎದುರಿಸುವ ಸಂದರ್ಭದಲ್ಲಿ ರಾಜಕೀಯ ಪರಿಸ್ಥಿತಿ ಬಗ್ಗೆ ಎಲ್ಲರೂ ಮಾತನಾಡಿದರು. ಅಮಿತ್ ಶಾ ಹಾಗೂ ಯಡಿಯೂರಪ್ಪ ನಡುವೆ ರಾಜಕೀಯ ಹೊರತು ಬೇರೇನು ಚರ್ಚೆಯಾಗಲೂ ಕೂಡಾ ಸಾಧ್ಯವಿಲ್ಲ. ಹಾಗಾಗಿ ಉಪಾಹಾರ ಕೂಟದ ವೇಳೆ ನಮ್ಮ ಮನೆಯಲ್ಲಿ ರಾಜಕೀಯ ಚರ್ಚೆ ನಡೆದಿದೆ’ ಎಂದರು.
ನಾಲ್ಕೂ ಕ್ಷೇತ್ರ ಗೆದ್ದು ಬಿಜೆಪಿಗೆ ಶಕ್ತಿ ತುಂಬಿ: ಮುಂದಿನ ವಿಧಾನಸಭೆ ಚುನಾವಣೆಯ ಮತ ಎಣಿಕೆ ಮೊದಲ ಫಲಿತಾಂಶದಲ್ಲಿ ಗುಂಡ್ಲುಪೇಟೆ ಕ್ಷೇತ್ರವಾಗಲಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದ ಡಿ. ದೇವರಾಜ ಅರಸ್ ಕ್ರೀಡಾಂಗಣದಲ್ಲಿ ಬಿಜೆಪಿ ಜಿಲ್ಲಾ ಯುವ ಸಮಾವೇಶದಲ್ಲಿ ಮಾತನಾಡಿ ಶುಕ್ರವಾರ ನಡೆದ ಬೈಕ್ ರಾರಯಲಿ, ಯುವಕರ ಉತ್ಸಾಹ, ರಣೋತ್ಸಹ ಸ್ವಾಗತ ಕಂಡು ಮೇಲಿನಂತೆ ನುಡಿದರು. ಯಡಿಯೂರಪ್ಪ ಸಿಎಂ ಆದ ಬಳಿಕ ಬರದ ನಾಡಾಗಿದ್ದ ಜಿಲ್ಲೆಗೆ 212 ಕೋಟಿ ಅನುದಾನ ನೀಡಿ ಕೆರೆಗೆ ನೀರು ತುಂಬಿಸಿ ರೈತರಿಗೆ ಶಕ್ತಿ ನೀಡಿದ್ದು, ಮಲೈಮಹದೇಶ್ವರ ಬೆಟ್ಟದ ಅಭಿವೃದ್ಧಿ, ಹನೂರು, ಮಹದೇಶ್ವರ ಬೆಟ್ಟದ ರಸ್ತೆ ಮಾಡಿದ್ದು, ಗುಂಡ್ಲುಪೇಟೆ ಅಭಿವೃದ್ಧಿಗೆ 400 ಕೋಟಿ ನೀಡಿದ್ದು ಬಿಜೆಪಿ ಸರ್ಕಾರ ಎಂದರು.
ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸಲು ಮೀಸಲಾತಿ ಹಂಚಿಕೆ: ಸಿಎಂ ಬೊಮ್ಮಾಯಿ
ಬಿಎಸ್‌ವೈ ಗೆದ್ದಂಗೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಿರಂಜನ್‌ಕುಮಾರ್ 50 ಸಾವಿರ ಮತಗಳ ಅಂತರಕ್ಕಿಂತಲೂ ಗೆದ್ದು ಬಂದ್ರೆ ಯಡಿಯೂರಪ್ಪ ಎಂಎಲ್‌ಎ ಮಾಡ್ದಂಗೆ ಆಗುತ್ತದೆ ಎಂದರು. ವಿಶೇಷವಾಗಿ ಚಾಮರಾಜನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳು ಬಿಜೆಪಿ ಗೆಲ್ಲಬೇಕು. ನಾಲ್ಕು ಅಭ್ಯರ್ಥಿಗಳು ಗೆಲ್ಲುವ ಮೂಲಕ ಬಿಜೆಪಿಗೆ ಶಕ್ತಿ ತುಂಬುವ ಕೆಲಸ ಆಗಬೇಕಿದೆ ಎಂದರು. ಚುನಾವಣಾ ಪ್ರಚಾರಕ್ಕೆ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯದ ನಾಯಕರು ಪ್ರಚಾರಕ್ಕೆ ಬರಲಿದ್ದಾರೆ. ಎಲ್ಲರು ಒಗ್ಗಟಾಗಿ ದುಡಿದು ಯಡಿಯೂರಪ್ಪ, ಬೊಮ್ಮಾಯಿ ಅವರ ಕನಸು ನನಸು ಮಾಡುವ ಕೆಲಸ ಮಾಡಬೇಕು ಎಂದರು. ಬಿ.ಎಸ್. ಯಡಿಯೂರಪ್ಪ ಅವರ ಆಸೆಯಂತೆ ರಾಜ್ಯದಲ್ಲಿ 140 ಸೀಟಿನೊಂದಿಗೆ ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬರಲು ರಾಜ್ಯದ ಕಾರ್ಯಕರ್ತರ ಶಕ್ತಿ ಮೀರಿ ಶ್ರಮಿಸಬೇಕಿದೆ ಎಂದರು.