Asianet Suvarna News Asianet Suvarna News

ನಾಳೆಯಿಂದ 5 ದಿನ ರಾಜ್ಯದಲ್ಲಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮೇ 7ರಿಂದ 12 ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Rain likely in the state for 5 days from On Apr 7th Says Meteorological Department gvd
Author
First Published May 6, 2024, 4:38 AM IST

ಬೆಂಗಳೂರು (ಮೇ.06): ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮೇ 7ರಿಂದ 12 ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ 7ರಂದು ಕರಾವಳಿಯ ಜಿಲ್ಲೆಗಳು ಹಾಗೂ ದಕ್ಷಿಣ ಕರ್ನಾಟಕದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಕೊಡಗು, ಕೋಲಾರ, ಮೈಸೂರು, ರಾಮನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ ಹಾಗೂ ತುಮಕೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಮೇ 8ರಿಂದ ಮಳೆ ಬಿರುಸುಗೊಳ್ಳಲಿದೆ ಎಂದು ತಿಳಿಸಿದೆ.

ಮೇ 8ರಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆ ಆರಂಭವಾಗಲಿದೆ. ಮೇ 9ರ ನಂತರ ವಿವಿಧ ಜಿಲ್ಲೆಗಳನ್ನು ವ್ಯಾಪಿಸಲಿದ್ದು, ಹಗುರ ಮಳೆಯಾಗಲಿದೆ. ಮೇ 5ರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಹವಾಮಾನ ವರದಿ ಪ್ರಕಾರ ಚಾಮರಾಜನಗರದಲ್ಲಿ 4 ಸೆಂ.ಮೀ ಮಳೆಯಾಗಿದೆ. ಕಲಬುರಗಿಯಲ್ಲಿ ಅತಿ ಹೆಚ್ಚು 44.7 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ನಾಳೆಯಿಂದ 3 ದಿನ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ಕಾಡು ಪ್ರಾಣಿಗಳ ಹಸಿವು ನೀಗಿಸಿದ ಯುವಕರು: ಜಿಲ್ಲಾದ್ಯಂತ ಈ ವರ್ಷ ತೀವ್ರ ಬರಗಾಲ ಎದುರಾಗಿ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಪ್ರಾಣಿ, ಪಕ್ಷಿಗಳಿಗೆ ಆಸರೆಯಾಗಲು ಸೋಂಪುರ ಹೋಬಳಿಯ ಯುವಕರ ತಂಡವೊಂದು ಬೆಟ್ಟದಲ್ಲಿರುವ ಪ್ರಾಣಿ- ಪಕ್ಷಿಗಳಿಗೆ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹೌದು! ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ಮಳೆ ಇಲ್ಲದೇ ಬಿಸಿಲನ ತಾಪಕ್ಕೆ ಮನುಷ್ಯರಲ್ಲದೇ ಪ್ರಾಣಿ- ಪಕ್ಷಿಗಳು ಆಹಾರಕ್ಕಾಗಿ, ನೀರಿಗಾಗಿ ಪರದಾಡುವ ಸ್ಥಿತಿ ಬಂದೊಂದಗಿದೆ. ಈ ಸಮಸ್ಯೆಯನ್ನು ಆದಷ್ಟು ನಿವಾರಿಸಲು ಯುವಕರ ತಂಡ ಸ್ವಯಂ ಪ್ರೇರಣೆಯಿಂದ ಬೆಟ್ಟದಲ್ಲಿರುವ ಪ್ರಾಣಿ, ಪಕ್ಷಿಗಳಿಗೆ ನೀರು, ಜ್ಯೂಸ್ ಹಾಗೂ ತಿನ್ನಲು ತರಕಾರಿ, ಹಣ್ಣು- ಹಂಪಲುಗಳನ್ನು ನೀಡಿ ಅವುಗಳ ಹಸಿವನ್ನು ನೀಗಿಸುತ್ತಿದ್ದಾರೆ.

ನೆಲಮಂಗಲ ತಾಲೂಕಿನ ಶಿವಗಂಗೆ, ಸಿದ್ದರಬೆಟ್ಟ, ಮಹಿಮರಂಗನ ಬೆಟ್ಟ ಸೇರಿ ಅರಣ್ಯದಲ್ಲಿ ಕೆಲ ಮರಗಳಿಗೆ ಮರಳಲ್ಲಿ ಸರ್ವ ಜೀವಿಗಳಿಗೂ ಸಮಬಾಳು ಎನ್ನುವ ಪರಿಸರ ಸಂರಕ್ಷಣೆಯ ಘೋಷಣೆಯೊಂದಿಗೆ ಪ್ರಾಣಿ ಪಕ್ಷಿಗಳಿಗೆ ಬೇಕಾದ ಆಹಾರ, ನೀರಿನ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಹರ್ಷತಂದ ವರ್ಷಧಾರೆ: ಸತತ 2ನೇ ದಿನವೂ ಮಳೆಯ ಸಿಂಚನ

ಸೋಂಪುರ ಹೋಬಳಿಯ ಯುವಕರಾದ ಗೌರಾಪುರ ರುದ್ರೇಶ್, ಹೊನ್ನೇನಹಳ್ಳಿ ಗ್ರಾಮದ ಆರಾಧ್ಯ, ಪುಟ್ಟಣ್ಣ, ಶಿವಕುಮಾರ್, ಚೇತನ್, ಕಾರ್ತಿಕ್, ಸಂತೋಷ್ ಮತ್ತಿತರರು ತಮ್ಮ ಸ್ವಂತ ಖರ್ಚಿನಿಂದ 5, 10 ಲೀ ನೀರಿನ ಕ್ಯಾನ್‌ಗಳನ್ನು ಖರೀದಿಸಿ, ಪಕ್ಷಿಗಳು ಕುಡಿಯಲು ಅನುಕೂಲವಾಗುವಂತೆ ಮರ, ಗಿಡಗಳ ಪೊದೆಗಳಲ್ಲಿ ನೀರು ಸಂಗ್ರಹಿಸಿ ಇಡುವಷ್ಟು ಪ್ಲಾಸ್ಟಿಕ್ ಪಾತ್ರೆಗಳನ್ನು ಮರಕ್ಕೆ ಶಾಶ್ವತವಾಗಿ ನೇತಾಕಿ ಅದರಲ್ಲಿ ನೀರು ಹಾಕಿ, ಕೆಲವು ಕಡೆಗಳಲ್ಲಿ ತರಕಾರಿ, ಹಣ್ಣಿನ ಕಾಳುಗಳನ್ನು ಒದಗಿಸುವ ಮೂಲಕ ಕಾಡು ಪ್ರಾಣಿ, ಪಕ್ಷಿಗಳಿಗೆ ನೆರವಾಗಿ ಇತರರಿಗೆ ಮಾದರಿಯಾಗಿದ್ದಾರೆ.

Latest Videos
Follow Us:
Download App:
  • android
  • ios