ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಮೂಲಮಂತ್ರದೊಂದಿಗೆ ಬಜೆಟ್‌ ಮಂಡಿಸಿದ್ದು, ಈ ಆಯವ್ಯಯ ಅಭಿವೃದ್ಧಿ ಪೂರಕವಾಗಿದೆ ಎಂದು ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ತಿಳಿಸಿದ್ದಾರೆ. 

ಬೆಂಗಳೂರು (ಜು.08): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಮೂಲಮಂತ್ರದೊಂದಿಗೆ ಬಜೆಟ್‌ ಮಂಡಿಸಿದ್ದು, ಈ ಆಯವ್ಯಯ ಅಭಿವೃದ್ಧಿ ಪೂರಕವಾಗಿದೆ ಎಂದು ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ತಿಳಿಸಿದ್ದಾರೆ. ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜತೆಗೆ ರಾಜ್ಯದ ಅಭಿವೃದ್ಧಿಯ ನೀಲಿನಕ್ಷೆ ಬಜೆಟ್‌ ಒಳಗೊಂಡಿದೆ. ಅಲ್ಪಸಂಖ್ಯಾತ ಸಮುದಾಯದ ಶಿಕ್ಷಣ ಮತ್ತು ಉದ್ಯೋಗ ಸೃಷ್ಟಿಗೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ಬಿಜೆಪಿ ಅವಧಿಯಲ್ಲಿ ಸ್ಥಗಿತಗೊಳಿಸಲಾಗಿದ್ದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿ ವೇತನವನ್ನು ಮತ್ತೆ ಆರಂಭಿಸಲು .60 ಕೋಟಿ ಮೀಸಲಿಟ್ಟಿದ್ದಾರೆ. 

ಅರ್ಧಕ್ಕೆ ನಿಂತಿರುವ ಶಾದಿ ಮಹಲ್‌ ಹಾಗೂ ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸಲು 54 ಕೋಟಿ ಅನುದಾನ ನೀಡುವುದಾಗಿ ತಿಳಿಸಿದ್ದು, ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ. ಮೊರಾರ್ಜಿ ದೇಸಾಯಿ ವಸತಿ ಶಾಲೆ ಮೇಲ್ದರ್ಜೆಗೇರಿಸಲು .30 ಕೋಟಿ, ಅರಿವು ಶಿಕ್ಷಣ ಯೋಜನೆಗೆ .73 ಕೋಟಿ, ಅಲ್ಪಸಂಖ್ಯಾತ ಸಮುದಾಯದ ಕಾಲೋನಿಗಳ ಅಭಿವೃದ್ಧಿಗೆ .360 ಕೋಟಿ ಹೀಗೆ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸಾಕಷ್ಟುಕೊಡುಗೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಅದೇ ರೀತಿ ವಸತಿ ಇಲಾಖೆ ಅಡಿಯಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ಅರ್ಧಕ್ಕೆ ಸ್ಥಗಿತಗೊಂಡಿದ್ದ 12 ಮನೆಗಳ ಪೈಕಿ ಪ್ರಸಕ್ತ ಸಾಲಿನಲ್ಲಿ 3 ಲಕ್ಷ ಮನೆಗಳನ್ನು ಪೂರ್ಣಗೊಳಿಸಿ ಹಂಚಿಕೆ ಮಾಡಲು .2,450 ಕೋಟಿ ಒದಗಿಸುವುದಾಗಿ ತಿಳಿಸಿರುವುದು ಸ್ವಾಗತಾರ್ಹ ಎಂದು ಹೇಳಿದ್ದಾರೆ.

ಪದವೀಧರರು, ಡಿಪ್ಲೊಮೊದಾರರಿಗೆ ನಿರುದ್ಯೋಗ ಭತ್ಯೆ ನೀಡುವ ‘ಯುವ ನಿಧಿ’ ಜಾರಿ: ಸಿದ್ದರಾಮಯ್ಯ

ನುಡಿದಂತೆ ನಡೆದಿದ್ದೇವೆ; ಪಂಚ ಗ್ಯಾರಂಟಿಗೆ ಹಣ ಇಟ್ಟಿದ್ದೇವೆ: ಸಂಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ ಸರ್ಕಾರದ ಚೊಚ್ಚಿಲ ಬಜೆಟ್‌ನಲ್ಲಿ ನಾಡಿನ ಏಳು ಕೋಟಿ ಕನ್ನಡಿಗರೂ ಸರ್ಕಾರದ ಯಾವುದಾದರೊಂದು ಯೋಜನೆಯ ಫಲಾನುಭವಿ ಆಗಬೇಕು ಎಂಬ ಸದಾಶಯ ಬಿಂಬಿತವಾಗಿದೆ. ಸರ್ವರನ್ನೂ ಒಳಗೊಂಡ, ಸರ್ವತೋಮುಖ ಪ್ರಗತಿಯ ಕರ್ನಾಟಕ ಅಭಿವೃದ್ಧಿ ಬಯಸುವಂತಹ ಮಾದರಿ ಬಜೆಟ್‌ ಸಿಎಂ ಸಿದ್ದರಾಮಯ್ಯನವರು ಮಂಡಿಸಿದ್ದಾರೆಂದು ಮಾಜಿ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕ ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.

ಚುನಾವಣಾ ಪೂರ್ವದಲ್ಲಿ ನಾವು ನೀಡಿದ್ದ 5 ಗ್ಯಾರಂಟಿಗಳಿಗೆ ಅನುದಾನ ಒದಗಿಸಿದ್ದೇವೆ. ಕಲ್ಯಾಣ ನಾಡಿನ ಪ್ರಗತಿಗೆ ಪೂರಕವಾಗಿರುವ ಕೆಕೆಆರ್‌ಡಿಬಿಗೆ ವಾರ್ಷಿಕ 5 ಸಾವಿರ ಕೋಟಿ ರುಪಾಯಿ ಅನುದಾನ ಮೀಸಲಿಡುವ ಮೂಲಕ ಸುವ ಮೂಲಕ ನುಡಿದಂತೆ ನಡೆದಿದ್ದೇವೆ. ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಸಂಕಲ್ಪ ಕಾಂಗ್ರೆಸ್‌ ಸರ್ಕಾರದ್ದಾಗಿದೆ. ಈ ಗುರಿ ತಲುಪುವ ದಾರಿಯಲ್ಲಿನ ಸಮತೋಲಿತ ಹಾಗೂ ದೂರದೃಷ್ಟಿಯ ಬಜೆಟ್‌ ಅನ್ನು ನಾಡಿನ ಜನತೆಗೆ ಅರ್ಪಿಸಿದ್ದೇವೆ, ಇದೊಂದು ಜನಸಾಮಾನ್ಯರ ಬಜೆಟ್‌ ಆಗಿದೆ ಎಂದು ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.

Karnataka Budget 2023: ದಲಿತ ಸಮುದಾಯದ ಹಣ ದಲಿತರಿಗೇ ಬಳಕೆ ಕಡ್ಡಾಯ: ಸಿಎಂ ಸಿದ್ದರಾಮಯ್ಯ

ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ನಾಡಿನ ಪ್ರತಿ ಮನೆಯವರೂ 4 ರಿಂದ 5 ಸಾವಿರ ರುಪಾಯಿ ಹೊಂದಲಿದ್ದಾರೆ. ಬಡವರಿಗೆ ಈ ನೆರವು ವರದಾನವಾಗಲಿದೆ. ಅಲ್ಪಸಂಖ್ಯಾತರಿಗೆ ಅನುಕೂಲವಾಗುವ ಶಾಹಿಮಹೆಲ್‌ಗಳ ಕಾಮಗಾರಿಗಳಿಗೆ ಹಣ ಮೀಸಲಿಡಲಾಗಿದೆ. ಕೆಕೆಆರ್‌ಡಿಬಿ ಅನುದಾನ ಹೆಚ್ಚಿದ್ದರಿಂದ ಈ ಬಾಗದಲ್ಲಿ ಪ್ರಗತಿಯ ಫಸಲು ಬಂಪರ್‌ ಬರಲಿದೆ. ಅದು ಮುಂದೆ ತಲಾ ಆದಾಯ ಹೆಚ್ಚಳವಾಗಿ ಪರಿವರ್ತನೆ ಆಗಲಿದೆ ಎಂದು ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ. 2017-18ರಲ್ಲಿ ರಾಜ್ಯದ ಸಾಲದ ಹೊರೆ 2.45 ಲಕ್ಷ ಕೋಟಿ ರುಪಾಯಿ ಇತ್ತು. 2022-23 ರಲ್ಲಿ ಅದು 5 ಲಕ್ಷ 16 ಸಾವಿರ ಕೋಟಿ ರು.ಗೆ ಹೆಚ್ಚಿದೆ. ಈ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯನವರು ಸಾಲದ ಹೊರೆ ಹೆಚ್ಚದಂತೆ ಹಾಗೂ ಜನರಿಗೆ ಸವಲತ್ತು ದೊರಕುವಂತೆ ಚಾಕಚಕ್ಯತೆ ಪ್ರದಶಿರ್‍ಸುವ ಮೂಲಕ ಜನಪರ, ಬಡವರ ಪರವಾದಂತಹ ಬಜೆಟ್‌ ಮಂಡಿಸಿದ್ದಾರೆಂದು ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.