ಪದವೀಧರರು, ಡಿಪ್ಲೊಮೊದಾರರಿಗೆ ನಿರುದ್ಯೋಗ ಭತ್ಯೆ ನೀಡುವ ‘ಯುವ ನಿಧಿ’ ಜಾರಿ: ಸಿದ್ದರಾಮಯ್ಯ
ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದಂತೆ ನಿರುದ್ಯೋಗಿಗಳಿಗೆ ಭತ್ಯೆ ನೀಡುವ ‘ಯುವ ನಿಧಿ’ ಯೋಜನೆಗೆ ಬದ್ಧತೆ ಪ್ರಕಟವಲ್ಲದೆ, ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಆರು ಇಎಸ್‌ಐ ಆಸ್ಪತ್ರೆಗಳಿಗೆ ಕಾರ್ಯಕಲ್ಪ, ಸ್ವಿಗ್ಗಿ, ಜೊಮ್ಯಾಟೋ, ಅಮೆಜಾನ್ ಮತ್ತಿತರ ಇ-ಕಾಮರ್ಸ್ ಸಂಸ್ಥೆಗಳ ಡೆಲಿವರಿ ಬಾಯ್‌ಗಳಿಗೆ 2 ಲಕ್ಷ ರು. ಜೀವವಿಮಾ ಹಾಗೂ ಅಪಘಾತ ವಿಮಾದಂತಹ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಬೆಂಗಳೂರು (ಜು.08): ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದಂತೆ ನಿರುದ್ಯೋಗಿಗಳಿಗೆ ಭತ್ಯೆ ನೀಡುವ ‘ಯುವ ನಿಧಿ’ ಯೋಜನೆಗೆ ಬದ್ಧತೆ ಪ್ರಕಟವಲ್ಲದೆ, ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಆರು ಇಎಸ್‌ಐ ಆಸ್ಪತ್ರೆಗಳಿಗೆ ಕಾರ್ಯಕಲ್ಪ, ಸ್ವಿಗ್ಗಿ, ಜೊಮ್ಯಾಟೋ, ಅಮೆಜಾನ್ ಮತ್ತಿತರ ಇ-ಕಾಮರ್ಸ್ ಸಂಸ್ಥೆಗಳ ಡೆಲಿವರಿ ಬಾಯ್‌ಗಳಿಗೆ 2 ಲಕ್ಷ ರು. ಜೀವವಿಮಾ ಹಾಗೂ ಅಪಘಾತ ವಿಮಾದಂತಹ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಅಲ್ಲದೆ, ಆರು ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗಳಲ್ಲಿ 35 ಹಾಸಿಗೆ ಸಾಮರ್ಥ್ಯದ ಐ.ಸಿ.ಯು/ಎಂ.ಐ.ಸಿ.ಯು. ಘಟಕ ಸ್ಥಾಪನೆ, 2 ಟ್ರಾಮಾ ಕೇರ್ ಸೆಂಟರ್, 4 ಆಧುನಿಕ ಓ.ಟಿ. ಮತ್ತು ರೋಗ ಪತ್ತೆ ಹಚ್ಚುವ ಕೇಂದ್ರಗಳ ಉನ್ನತೀಕರಣ ಸೇರಿದಂತೆ ಒಟ್ಟಾರೆ 85 ಕೋಟಿ ರು. ಅನುದಾನ ಮೀಸಲಿಡಲಾಗಿದೆ. ಅಸಂಘಟಿತ ವಲಯಗಳಾದ ಸ್ವಿಗ್ಗಿ, ಜೊಮ್ಯಾಟೋ, ಅಮೆಜಾನ್ ಮತ್ತಿತರ ಇ-ಕಾಮರ್ಸ್ ಸಂಸ್ಥೆಗಳಲ್ಲಿ ದುಡಿಯುತ್ತಿರುವವರಿಗೆ ಭದ್ರತೆ ಒದಗಿಸಲು 2 ಲಕ್ಷ ರು. ಜೀವವಿಮಾ ಹಾಗೂ 2 ಲಕ್ಷ ರು. ಅಪಘಾತ ವಿಮೆ ಪ್ರಕಟಿಸಲಾಗಿದೆ. ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗಳಲ್ಲಿ ಆಯುರ್ವೇದ, ಹೋಮಿಯೋಪಥಿ ಮತ್ತು ಯೋಗ ಕೇಂದ್ರ ಒಳಗೊಂಡ ಆಯುಷ್ ವಿಭಾಗ ಪ್ರಾರಂಭಿಸಲು ಸಿದ್ದರಾಮಯ್ಯ ಅವರು 3 ಕೋಟಿ ರು. ಅನುದಾನ ಮೀಸಲಿರಿಸಿದ್ದಾರೆ.
Karnataka Budget 2023: ಬ್ರ್ಯಾಂಡ್ ಬೆಂಗಳೂರಿಗೆ ಹರಿಯಲಿದೆ ಹಣ: ಬಿಬಿಎಂಪಿಗೆ 4093 ಕೋಟಿ ಅನುದಾನ
12 ಐಟಿಐಗೆ 100 ಕೋಟಿ: ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯಲ್ಲಿ ವ್ಯವಹಾರ ಸರಳೀಕರಣಗೊಳಿಸಲು ಆನ್-ಲೈನ್ ವ್ಯವಸ್ಥೆ ಜಾರಿಗೆ ತರುವುದಾಗಿ ತಿಳಿಸಿದೆ. ರಾಜ್ಯದಲ್ಲಿ 50 ವರ್ಷ ಪೂರೈಸಿದ 12 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಪಾರಂಪರಿಕ ಸಂಸ್ಥೆಗಳೆಂದು ಘೋಷಿಸಿ ನಿರ್ಮಾಣ ಕಾರ್ಯ, ಹೊಸ ಉಪಕರಣ ಮತ್ತು ಯಂತ್ರೋಪಕರಣ ಖರೀದಿಗೆ 100 ಕೋಟಿ ರು. ಅನುದಾನ ಮೀಸಲಿಟ್ಟಿದ್ದು, ಕೌಶಲ್ಯಾಭಿವೃದ್ಧಿ ಇಲಾಖೆಯಡಿ ಖಾಸಗಿ ಸಂಸ್ಥೆಗಳ ಮೂಲಕ ನಡೆಯುತ್ತಿದ್ದ ಎಲ್ಲಾ ಕೌಶಲ್ಯ ತರಬೇತಿಯನ್ನು ಐಟಿಐ, ಜಿಟಿಟಿಸಿ, ಪಾಲಿಟೆಕ್ನಿಕ್ ಸಂಸ್ಥೆಗಳ ಮೂಲಕವೇ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
45 ದಿನದಲ್ಲೇ ಪಕ್ಷದ ಭರವಸೆ ಈಡೇರಿಕೆ, ಎದೆ ಎತ್ತಿ ಉತ್ತರಿಸಿ: ಸಿಎಂ ಸಿದ್ದರಾಮಯ್ಯ
ಕನಿಷ್ಠ ವೇತನ ಹೆಚ್ಚಳ ಆಗಿಲ್ಲ: 5 ವರ್ಷಕ್ಕೊಮ್ಮೆ ಪರಿಷ್ಕರಿಸುವ ಕಾರ್ಮಿಕರ ಕನಿಷ್ಠ ವೇತನವನ್ನು ಹಿಂದಿನ ಸರ್ಕಾರ ಅವೈಜ್ಞಾನಿಕವಾಗಿ ಬಿಡಿ ಗಾಸಿನ ಹೆಚ್ಚಳ ಮಾಡಿತ್ತು. ಬೆಲೆ ಏರಿಕೆಗೆ ತಕ್ಕಂತೆ ವೈಜ್ಞಾನಿಕವಾಗಿ ಹೆಚ್ಚಿಸಲು ನಾವು ಕೇಳಿಕೊಂಡಿದ್ದೆವು. ಅದು ಕೈಗೂಡಿಲ್ಲ. ಅಸಂಘಟಿತ ವಲಯದ ಕಾರ್ಮಿಕರ ಸೌಲಭ್ಯಗಳಿಗೆ ಅನುದಾನ ಕೇಳಿದ್ದು ಅದೂ ಬಿಡುಗಡೆಯಾಗಿಲ್ಲ. ಇದರಿಂದ ಸುಮಾರು ಎರಡೂವರೆ ಕೋಟಿ ಕಾರ್ಮಿಕರು ಸೌಲಭ್ಯ ವಂಚಿತರಾಗುತ್ತಿದ್ದಾರೆ. ಹಿಂದಿನ ಸರ್ಕಾರ ದುಡಿತದ ಅವಧಿಯನ್ನು 12 ಗಂಟೆಗೆ ಹೆಚ್ಚಿಸಿ ಮಹಿಳೆಯರಿಗೆ ರಾತ್ರಿ ಪಾಳಿಗೆ ಅನುಮತಿ ನೀಡಿತ್ತು. ಈ ಆದೇಶ ರದ್ದುಗೊಳಿಸದಿರುವುದು ಬೇಸರ ತಂದಿದೆ.
ಕೆ.ವಿ.ಭಟ್, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರ್ನಾಟಕದ ರಾಜ್ಯ ಸಂಚಾಲಕ