ಕಾಂಗ್ರೆಸ್‌ನ ಐದು ಗ್ಯಾರಂಟಿ ಅನುಷ್ಠಾನ ವಿಳಂಬ, ಕೇಸು ದಾಖಲಿಸಲು ಮುಂದಾದ ವಕೀಲ
ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ನೀಡಿರುವ ಐದು ಗ್ಯಾರಂಟಿಯನ್ನು ಅನುಷ್ಠಾನಕ್ಕೆ ತರುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಹಿನ್ನೆಲೆ ವಕೀಲರೊಬ್ಬರು ಕೇಸ್ ದಾಖಲಿಸಲು ಮುಂದಾಗಿದ್ದಾರೆ.
ಬಳ್ಳಾರಿ (ಮೇ.29): ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ನೀಡಿರುವ ಐದು ಗ್ಯಾರಂಟಿಯನ್ನು (guarantee ) ಅನುಷ್ಠಾನಕ್ಕೆ ತರುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಹಿನ್ನೆಲೆ ವಕೀಲರೊಬ್ಬರು ಕೇಸ್ ದಾಖಲಿಸಲು ಮುಂದಾಗಿದ್ದಾರೆ. ಬಳ್ಳಾರಿಯ ವಕೀಲ ಹೆಚ್. ಚಂದ್ರಶೇಖರ ರೆಡ್ಡಿ ಎಂಬುವವರು ಈ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಕೋರ್ಟ್ ನಲ್ಲಿ ಕೇಸ್ ದಾಖಲಿಸಲು ನಿರ್ಧರಿಸಿದ್ದಾರೆ. ಮಾತ್ರವಲ್ಲ ಗ್ಯಾರಂಟಿ ಕಾರ್ಡ್ ಹೋರಾಟ ಎನ್ನುವ ಸಮಿತಿಯನ್ನು ಮಾಡಿಕೊಂಡಿಕೊಂಡಿದ್ದಾರೆ.
ಕೊಟ್ಟ ಮಾತಿನಂತೆ ಯಾವುದೇ ನೆಪ ಹೇಳದೇ ಜೂನ್ 1ರಂದು ಐದು ಗ್ಯಾರಂಟಿಗಳನ್ನು ಜಾರಿಗೆ ತನ್ನಿ. ಇಲ್ಲವಾದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣ ದಾಖಲಿಸೋದಾಗಿ ಹೇಳಿದ್ದಾರೆ. ವೈಯಕ್ತಿಕವಾಗಿ ಕೇಸ್ ದಾಖಲಿ ಸೋದು ಒಂದು ಕಡೆಯಾದ್ರೇ. ಸಾರ್ವಜನಿಕರು ಯಾರಾದರೂ ಕೇಸ್ ದಾಖಲಿಸಿದರೆ ಅವರ ಪರವಾಗಿ ಹೋರಾಟ ಮಾಡುತ್ತೇನೆ ಎಂದಿದ್ದಾರೆ.
ಗ್ಯಾರಂಟಿ ಯೋಜನೆ ಜಾರಿಗೆ ಜೂ.1ಕ್ಕೆ ಸಂಪುಟ ಸಭೆ: ಡಿ.ಕೆ.ಶಿವಕುಮಾರ್
ಮಾತ್ರವಲ್ಲ ಮನೆ ಮನೆಗೆ ಡಿಕೆ ಶಿವಕುಮಾರ್ (DK shivakumar) ಮತ್ತು ಸಿದ್ದರಾಮಯ್ಯ ತಮ್ಮ ಸಹಿ ಇರೋ ಕಾರ್ಡ್ ನೀಡೋ ಮೂಲಕ ಭರವಸೆ ನೀಡಿದ್ದಾರೆ. ಕೊಟ್ಟ ಮಾತಿನಂತೆ ಭರವಸೆ ಈಡೇರಿಸಿ ಇಲ್ಲವಾದ್ರೆ ಕೇಸ್ ಹಾಕ್ತೇನೆ ಫೈಟ್ ಮಾಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಕನಿಷ್ಠ 20 ಎಂಪಿ ಸೀಟು: ಸಚಿವರಿಗೆ ಸಿದ್ದರಾಮಯ್ಯ ಗುರಿ
ಇನ್ನು ಈಗಾಗಲೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಗ್ಯಾರಂಟಿ ಯೋಜನೆಗಳನ್ನು ನಾವು ಮಾತು ಕೊಟ್ಟಂತೆ ಜಾರಿ ಮಾಡ್ತೇವೆ. ಇವತ್ತು ಸಿಎಂ ಅಧಿಕಾರಿಗಳ ಜತೆ ಚರ್ಚೆ ಮಾಡ್ತಾರೆ. ಸಿಎಂ ಹತ್ರ ಹಣಕಾಸು ಇಲಾಖೆ ಇದೆ. ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ. ಕ್ರಮಬದ್ಧವಾಗಿ ಗ್ಯಾರಂಟಿ ಜಾರಿ ಮಾಡ್ತೇವೆ. ನಮ್ಮದು ಜವಾಬ್ದಾರಿಯುತ ಸರ್ಕಾರ. ಎಲ್ಲರಿಗೂ ಏನು ಮಾತು ಕೊಟ್ಟಿದ್ದೇವೆಯೋ ಅದನ್ನು ಉಳಿಸಿಕೊಳ್ಳುತ್ತೇವೆ. ನೀವೇನೂ ಗಾಬರಿ ಪಟ್ಕೋಬೇಡಿ . ಇವತ್ತು ಸಿಎಂ ಪರಿಶೀಲನಾ ಸಭೆ ನಡೆಸ್ತಾರೆ ಸಂಪುಟ ಸಭೆಗೆ ಬೇಕಿರುವ ಮಾಹಿತಿ ಪಡ್ಕೋತಾರೆ ಎಂದು ಸೋಮವಾರ ಸ್ಪಷ್ಟಪಡಿಸಿದ್ದಾರೆ.