Asianet Suvarna News Asianet Suvarna News

‘ಒಳ್ಳೇ ಮುಹೂರ್ತ’ ನೋಡಿ ಪಕ್ಷಕ್ಕೆ ಅನ್ಯರ ಸೇರ್ಪಡೆ: ಡಿಕೆಶಿ

ತನ್ಮೂಲಕ ಪರೋಕ್ಷವಾಗಿ ಆಪರೇಷನ್‌ ಹಸ್ತ ಪ್ರಯತ್ನವನ್ನು ಒಪ್ಪಿಕೊಂಡಿದ್ದು, ‘ಯಾರಾರ‍ಯರು ಯಾವ್ಯಾಗ ಪಕ್ಷ ಸೇರ್ಪಡೆಯಾಗುತ್ತಾರೆ ಎಂಬುದನ್ನು ಕಾದು ನೋಡಿ’ ಎಂದು ಹೇಳಿದ ಡಿ.ಕೆ.ಶಿವಕುಮಾರ್‌ 

DCM DK Shivakumar Talks Over Operation Congress grg
Author
First Published Sep 9, 2023, 4:30 AM IST

ಬೆಂಗಳೂರು(ಸೆ.09): ‘ನಾನು ಆಪರೇಷನ್‌ ಹಸ್ತ, ಆಪರೇಷನ್‌ ಕಮಲ ಎರಡಕ್ಕೂ ವಿರೋಧಿ. ಯಾವುದೇ ಕಾರಣಕ್ಕೂ ಆಪರೇಷನ್‌ ಕೆಲಸಕ್ಕೆ ಮುಂದಾಗುವುದಿಲ್ಲ. ನಮ್ಮದೇನಿದ್ದರೂ ಕೋ-ಆಪರೇಷನ್‌. ನಾವು ಸ್ನೇಹದ ಹಸ್ತ ಚಾಚುತ್ತೇವೆ. ಯಾರಿಗೆ ಒಲವಿದೆಯೋ ಅವರ ಕೈ ಹಿಡಿದು ಹೆಜ್ಜೆ ಹಾಕುತ್ತೇವೆ. ಯಾರಾರ‍ಯರು ಪಕ್ಷ ಸೇರ್ಪಡೆಯಾಗುತ್ತಾರೆ ಎಂಬುದು ಒಳ್ಳೆಯ ಮುಹೂರ್ತ, ಲಗ್ನ ಕೂಡಿದಾಗ ತಿಳಿಯಲಿದೆ’ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ತನ್ಮೂಲಕ ಪರೋಕ್ಷವಾಗಿ ಆಪರೇಷನ್‌ ಹಸ್ತ ಪ್ರಯತ್ನವನ್ನು ಒಪ್ಪಿಕೊಂಡಿದ್ದು, ‘ಯಾರಾರ‍ಯರು ಯಾವ್ಯಾಗ ಪಕ್ಷ ಸೇರ್ಪಡೆಯಾಗುತ್ತಾರೆ ಎಂಬುದನ್ನು ಕಾದು ನೋಡಿ’ ಎಂದು ಹೇಳಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ‘ನಾವು ಸ್ನೇಹದ ಹಸ್ತ ಚಾಚುತ್ತೇವೆ. ನಮ್ಮ ಪಕ್ಷದ ತತ್ವ ಸಿದ್ಧಾಂತ, ಭಾರತ್‌ ಜೋಡೊ ಬಗ್ಗೆ ಯಾರಿಗೆ ಒಲವಿದೆಯೋ ಅವರನ್ನು ತಬ್ಬಿಕೊಳ್ಳುತ್ತೇವೆ. ಅವರ ಹೆಗಲ ಮೇಲೆ ಕೈಹಾಕಿಕೊಂಡು ಹೆಜ್ಜೆ ಹಾಕುತ್ತೇವೆ’ ಎಂದು ಸೂಚ್ಯವಾಗಿ ಹೇಳಿದರು.

ಕಾಂಗ್ರೆಸ್‌ನ ಕನಸಿನ ಯೋಜನೆಗೆ ಕೆವೈಸಿ ತೊಂದರೆನಾ..? ಗೃಹಲಕ್ಷ್ಮಿ ಗೊಂದಲ ಶುರುವಾಗಿದ್ದು ಎಲ್ಲಿ ..?

ಹಾಲಿ- ಮಾಜಿಗಳನ್ನ ಯಾವಾಗ ತಬ್ಬಿಕೊಳ್ಳುತ್ತೀರಿ ಎಂಬ ಪ್ರಶ್ನೆಗೆ, ‘ಎಷ್ಟುಜನ ಸೇರಲಿದ್ದಾರೆ ಎನ್ನುವ ಪಟ್ಟಿಹೇಳಲು ಆಗಲ್ಲ. ಅವರವರೇ ಹೇಳಿರುವಂತೆ ಒಳ್ಳೆ ಮುಹೂರ್ತ, ಲಗ್ನ ಕೂಡಿಬಂದಾಗ ಪಕ್ಷ ಸೇರ್ಪಡೆ ನಡೆಯಲಿದೆ. ರಾಜಕೀಯದಲ್ಲಿ ಯಾರೂ ಮಿತ್ರರಲ್ಲ, ಶತ್ರುಗಳಲ್ಲ. ರಾಜಕೀಯ ಎನ್ನುವುದು ಸಾಧ್ಯತೆಗಳ ಕಲೆ. ರಾಜಕೀಯದಲ್ಲಿ ಯಾರೂ ದಡ್ಡರಲ್ಲ. ಎಲ್ಲರೂ ಅವರವರ ಭವಿಷ್ಯ ನೋಡಿಕೊಳ್ಳಬೇಕು. ಮಹಾರಾಷ್ಟ್ರದಲ್ಲಿ ಎಲ್ಲಾ ವಾಶಿಂಗ್‌ ಮೆಷಿನ್‌ ಸೇರಿಕೊಂಡು ಶುಭ್ರವಾಗಿದ್ದು ನೋಡಿಲ್ಲವೇ’ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

Follow Us:
Download App:
  • android
  • ios