ಸಿ.ಟಿ. ರವಿ ಸುತ್ತಾಡಿಸಿದ್ದಕ್ಕೆ ನಾನು ಕಾರಣ ಹೇಗೆ ಆಗ್ತಿನಿ?: ಡಿ.ಕೆ.ಶಿವಕುಮಾರ್

ಸಿ.ಟಿ.ರವಿ ಅವರನ್ನು ರಾತ್ರಿಯಿಡೀ ಪೊಲೀಸರು ಸುತ್ತಾಡಿಸಿದ ವಿಚಾರದಲ್ಲಿ ಅವರುಂಟು, ಪೊಲೀಸರುಂಟು. ಅವರ ಮನೇಲಿ, ಅವರ ಪಕ್ಷದಲ್ಲಿ ಏನೇ ಆದರೂ ನಾನೇ ಕಾರಣ ಎಂಬಂತೆ ಮಾತನಾಡುತ್ತಾರೆ.  ನನ್ನನ್ನು ಸ್ಮರಿಸದಿದ್ದರೆ ಅವರಿಗೆ ನಿದ್ದೆ ಬರುವುದಿಲ್ಲ ಎಂದು ತಿರುಗೇಟು ನೀಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 
 

DCM DK Shivakumar React to BJP MLC CT Ravi Arrest grg

ಬೆಂಗಳೂರು(ಡಿ.22):  ಬಿಜೆಪಿ ನಾಯಕರು ತಮ್ಮ ಆಕ್ಷೇ ಪಾರ್ಹ ಹೇಳಿಕೆಯನ್ನು ಮುಚ್ಚಿ ಕೊಳ್ಳಲು ಪೊಲೀಸರ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರು ಆಡಳಿತ ಮಾಡುವಾಗ ಪೊಲೀಸರನ್ನು ಹೇಗೆ ಬಳಸಿಕೊಂಡಿದ್ದರು ಎಂಬುದು ಗೊತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ಸಿ.ಟಿ.ರವಿ ಅವರನ್ನು ರಾತ್ರಿಯಿಡೀ ಪೊಲೀಸರು ಸುತ್ತಾಡಿಸಿದ ವಿಚಾರದಲ್ಲಿ ಅವರುಂಟು, ಪೊಲೀಸರುಂಟು. ಅವರ ಮನೇಲಿ, ಅವರ ಪಕ್ಷದಲ್ಲಿ ಏನೇ ಆದರೂ ನಾನೇ ಕಾರಣ ಎಂಬಂತೆ ಮಾತನಾಡುತ್ತಾರೆ.  ನನ್ನನ್ನು ಸ್ಮರಿಸದಿದ್ದರೆ ಅವರಿಗೆ ನಿದ್ದೆ ಬರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ. 

ನನಗೆ ಈಗ ಬೆದರಿಕೆ ಕರೆಗಳು ಬರುತ್ತಿವೆ, ನನಗೇನಾದ್ರೂ ಆದರೆ ಡಿಕೆಶಿ ಲಕ್ಷ್ಮೀ, ಸರ್ಕಾರವೇ ಹೊಣೆ: ಸಿ.ಟಿ.ರವಿ

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೀನ ಮಾತುಗಳೇ ತಮ್ಮ ಸಂಸ್ಕೃತಿ ಎಂದು ಬಿಜೆಪಿ ನಾಯಕರು ಒಪ್ಪಿಕೊಳ್ಳಲಿ. ಮಹಿಳಾ ಸಚಿವೆ ಮೇಲೆ ಹೀನ ಹೇಳಿಕೆ ಈಗ ಅದನ್ನು ಮುಚ್ಚಿಕೊಳ್ಳಲು ಪೊಲೀಸರ ಮೇಲೆ ಆರೋಪ ಮಾಡಲಾಗುತ್ತಿದೆ. ಅವರ ಆಡಳಿತದಲ್ಲಿ ಪೊಲೀಸರನ್ನು ಹೇಗೆಲ್ಲ ಬಳಸಿಕೊಂಡಿದ್ದರು ಎಂಬುದು ತಿಳಿದಿದೆ. ಸಿ.ಟಿ.ರವಿ ಕೇವಲ ಸಚಿವೆ ಹೆಬ್ಬಾಳ್ಳ‌ರ್ ಅವರ ಬಗ್ಗೆ ಮಾತ್ರವಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆಯೂ ಹೀನ ಮಾತುಗಳನ್ನಾಡಿದ್ದಾರೆ. ಸದನದಲ್ಲಿ ನಿತ್ಯ ಸುಮಂಗಲಿ ಎಂಬ ಪದವನ್ನೂ ಬಳಕೆ ಮಾಡಿದ್ದಾರೆ. ಸಿ.ಟಿ.ರವಿ ಆಡಿರುವ ಮಾತುಗಳು ಸರಿಯೋ, ತಪ್ಪೋ ಎಂಬುದನ್ನು ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು. 

ಸಿ.ಟಿ.ರವಿ ಹಿಂದೂ ಧರ್ಮದಲ್ಲಿ ಇರಲಿಕ್ಕೆ ಯೋಗ್ಯರಲ್ಲ: ಸಚಿವ ಆರ್.ಬಿ.ತಿಮ್ಮಾಪೂರ

ನಮ್ಮ ಪಕ್ಷದ ಯಾವುದೇ ನಾಯಕರು ಆ ರೀತಿಯ ಹೇಳಿಕೆ ನೀಡಿದ್ದರೆ ನಾನು ಖಂಡಿಸುತ್ತಿದ್ದೆ. ಆದರೆ, ಬಿಜೆಪಿ ನಾಯಕರು ತಮ್ಮ ಪಕ್ಷದ ನಾಯಕರ ರಕ್ಷಣೆಗೆ ನಿಂತಿದ್ದಾರೆ. ಶಾಸಕ ಮುನಿರತ್ನ ಅವರ ಜಾತಿನಿಂದನೆ ಪ್ರಕರಣದಲ್ಲಿ ಎಫ್‌ಎಸ್ ಎಲ್ ವರದಿಯಲ್ಲಿ ಸತ್ಯಾಂಶ ಬಂದ ನಂತರ ಪಕ್ಷದಿಂದ ಹೊರಹಾಕುವುದಾಗಿ ಆರ್.ಅಶೋಕ್ ಹೇಳಿದ್ದರು. ಆದರೆ, ಆ ಪ್ರಕರಣದಲ್ಲಿ ಅವರು ಒಂದು ಭಾಗವಾ ಗಿದ್ದರೂ, ಅವರನ್ನು ಸಮರ್ಥಿಸಿಕೊಳ್ಳುತ್ತಿ ದಾರೆ ಎಂದು ಕಿಡಿಕಾಡಿದರು. 

ಎಲ್ಲದಕ್ಕೂ ಕೊನೆ ಹಾಡುತ್ತೇವೆ ಎಂಬ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ಇಂತಹ ಲೆಕ್ಕ ಚುಕ್ತಾ ಮಾಡು ವುದನ್ನು ಬಹಳ ನೋಡಿದ್ದೇವೆ. ಅವರು ಕೊನೆಯಾಗಿ ಸುವುದಾದರೆ ಬಹಳ ಸಂತೋಷ, ಅವರೊಬ್ಬರಿಗೇ ಲೆಕ್ಕಚುಕ್ತಾ ಮಾಡುವುದು ಬರುತ್ತದೆಯೇ? ಎಲ್ಲರೂ ಅವರವರ ಸಾಮರ್ಥಕ್ಕೆ ತಕ್ಕಂತೆ ಲೆಕ್ಕ ಚುಕ್ತಾ ಮಾಡುತ್ತಾರೆ. ಏನೇ ಆದರೂ, ಆತ್ಮಸಾಕ್ಷಿಯೇ ನ್ಯಾಯ ನೀಡುತ್ತದೆ ಎಂದರು.

Latest Videos
Follow Us:
Download App:
  • android
  • ios