ಸಿ.ಟಿ.ರವಿ ಹಿಂದೂ ಧರ್ಮದಲ್ಲಿ ಇರಲಿಕ್ಕೆ ಯೋಗ್ಯರಲ್ಲ: ಸಚಿವ ಆರ್.ಬಿ.ತಿಮ್ಮಾಪೂರ

ಸಿ.ಟಿ.ರವಿ ಅವರು ಹಿಂದೂ ಧರ್ಮದಲ್ಲಿ ಇರಲಿಕ್ಕೆ ಯೋಗ್ಯರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಚಿವ ಆರ್.ಬಿ.ತಿಮ್ಮಾಪೂರ ಅವರು, ಆ ಪಿಪಿ ರವಿಗೆ ಯೋಗ್ಯತೆ ಇಲ್ಲ ಎಂದು ಹೇಳಿದ್ದಾರೆ.

Minister Rb Timmapur Slams On CT Ravi At Bagalkote gvd

ಬಾಗಲಕೋಟೆ (ಡಿ.21): ಸಿ.ಟಿ.ರವಿ ಅವರು ಹಿಂದೂ ಧರ್ಮದಲ್ಲಿ ಇರಲಿಕ್ಕೆ ಯೋಗ್ಯರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಚಿವ ಆರ್.ಬಿ.ತಿಮ್ಮಾಪೂರ ಅವರು, ಆ ಪಿಪಿ ರವಿಗೆ ಯೋಗ್ಯತೆ ಇಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿ.ಟಿ.ರವಿ ಬಂಧನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಿಂದೂ ಧರ್ಮದ ಪ್ರತಿಪಾದಕರಾಗಿರಲಿಕ್ಕೆ ಯೋಗ್ಯರಲ್ಲ. ಹೆಣ್ಣು ಮಕ್ಕಳ ಬಗ್ಗೆ ಅಗೌರವವಾಗಿ ನಡೆದುಕೊಳ್ಳೋದು ಸರಿಯಲ್ಲ ಎಂದರು. ಸಿ.ಟಿ.ರವಿಗೆ ಕಾನೂನಾತ್ಮಕವಾಗಿ ಶಿಕ್ಷೆ ಆಗಬೇಕು. ರವಿ ಹೇಳಿಕೆ ತಿರುಚಿ ಬಚಾವ ಆಗಲು ಹೊರಟಿದ್ದಾರೆ. ಆದರೆ ನಮ್ಮ ನಾಡಿನ ಕಾನೂನು ಗಟ್ಟಿಯಾಗಿದೆ. 

ಹಿಂದೆ ಜಾಲಪ್ಪ ಎಂಬಂತವರಿಗೆ ಬೇಡಿ ಹಾಕೊಂಡ ಹೋದರು. ಇನ್ನು ಈ ಸಿ.ಟಿ.ರವಿ ಅವ್ರನ್ನ ಬಿಡ್ತಾರಾ? ಎಂದು ಹೇಳಿದರು. ಸಿ.ಟಿ.ರವಿ ಅವ್ರನ್ನ ಪೊಲೀಸರು ನಡೆದುಕೊಂಡ ವಿಚಾರದ ಕುರಿತು ಮಾತನಾಡಿ, ಸಿ.ಟಿ.ರವಿ ಅವರನ್ನು ಸನ್ಮಾನ ಮಾಡಿಕೊಂಡು ಕರೆದುಕೊಂಡು ಹೋಗಬೇಕಿತ್ತಾ?, ಪೊಲೀಸರು ಅವರ ಕೆಲಸ ಅವರು ಮಾಡುತ್ತಾರೆ. ನೀವೇ ಹೇಳಿ ಪೊಲೀಸರು ಹೇಗೆ ನಡೆದುಕೊಳ್ಳಬೇಕಿತ್ತು ಅಂತಾ, ಅಂತಾ ಮಾತುಗಳನ್ನ ಸದನದಲ್ಲಿ ಮಾತಾಡಬಾರದಿತ್ತು. ಇಂತವರನ್ನ ಗೌರವಯುತವಾಗಿ ಹೆಲಿಕಾಪ್ಟರ್‌ನಲ್ಲಿ ಕರೆದೊಯ್ಯಬೇಕಿತ್ತಾ, ಎಂದು ಪ್ರಶ್ನಿಸಿದ ಅವರು, ನೋಡಿ ಸಿ.ಟಿ.ರವಿ ಆ ಪದ ಬಳಸಿದ್ದು ಸತ್ಯ ಎಂದು ತಿಮ್ಮಾಪೂರ ತಿಳಿಸಿದರು.

ಗಂಡಾಂತರ ತಪ್ಪಿದ್ದಲ್ಲ: ಮಿತಿಮೀರಿದ ರಾಜಕೀಯ ಲಾಲಸೆಯಿಂದ ಗಾಂಧಿ ಹಂತಕ ಗೋಡ್ಸೆಯನ್ನು ವೈಭವೀಕರಿಸುತ್ತ ಧರ್ಮ, ಜಾತಿಗಳ ಹೆಸರಲ್ಲಿ ಬಸವಣ್ಣನ ತತ್ವಗಳನ್ನು ಗಾಳಿಗೆ ತೂರಿ ಸುಳ್ಳುಗಳ ಸರಮಾಲೆಗಳನ್ನೇ ಹೇಳುತ್ತ ದೇಶಕ್ಕೆ ಗಂಡಾಂತರ ತರುವತ್ತ ಕೆಲವರು ಹೊರಟಿದ್ದಾರೆ. ಅಂಥವರಿಗೆ ಜನತೆ ಮತಗಳ ಮೂಲಕ ತಕ್ಕ ಉತ್ತರ ನೀಡಬೇಕು ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು. ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆ ಹಾಗೂ ತೇರದಾಳ ಮೈನಾರಿಟಿ ಬ್ಯಾಂಕಿನ ಕಟ್ಟಡ ಉದ್ಘಾಟನೆ ಬಳಿಕ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿದ್ದಾಗಲೇ ರೈತರಿಗೆ ವಕ್ಫ್ ಕಡೆಯಿಂದ ಅತೀ ಹೆಚ್ಚು ನೋಟಿಸ್ ಬಂದಿವೆ. ಅಧಿಕಾರ ಕಳೆದುಕೊಂಡ ಮೇಲೆ ನಮ್ಮ ಸರ್ಕಾರದ ಮೇಲೆ ಬಿಜೆಪಿಯವರು ದಿನವೂ ಬರೀ ಸುಳ್ಳು ಆರೋಪ ಮಾಡುತ್ತಿದ್ದಾರೆ. 

ಈ ಬಾರಿ ಹೆಲಿ ಟೂರಿಸಂ ಯಶಸ್ವಿಯಾದ್ರೆ ಮುಂದೆ ಧಾರ್ಮಿಕ ಕೇಂದ್ರ ಟೂರಿಸಂಗೆ ಚಿಂತನೆ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ಅಧಿಕಾರದಲ್ಲಿದ್ದಾಗ ನೋಟಿಸ್ ಕೊಟ್ಟು ಅಧಿಕಾರ ಕಳೆದುಕೊಂಡ ಮೇಲೆ ಹಿಂದುತ್ವದ ಹೆಸರಿನಲ್ಲಿ ರೈತರ ಮನದಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.ಅಬಕಾರಿ ಇಲಾಖೆಯಲ್ಲಿ ₹700 ಕೋಟಿ ಮೊತ್ತದ ಹಗರಣ ನಡೆದಿದ್ದು, ಅದನ್ನು ಮಹಾ ಚುನಾವಣೆಯಲ್ಲಿ ಬಳಸಲಾಗಿದೆ ಎಂದು ಸುಳ್ಳು ಸುದ್ದಿ ಹರಡುತ್ತಿರುವ ಬಿಜೆಪಿಯವರು ಅದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಘೋಷಿಸುವೆ ಎಂದು ಗುಡುಗಿದರು. ಹಿಂದೂ-ಮುಸ್ಲಿಮರ ಮಧ್ಯೆ ದ್ವೇಷದ ಬೆಂಕಿ ಹಚ್ಚಲು ನೂರೆಂಟು ಕಾರಣಗಳನ್ನು, ಸುಳ್ಳು ಕಥೆಗಳನ್ನು ಸೃಷ್ಟಿಸುತ್ತಿರುವ ಬಿಜೆಪಿಯ ರಾಷ್ಟ್ರೀಯ ನಾಯಕರ ಅನೇಕ ಮನೆಗಳು ಇಂದು ಮುಸ್ಲಿಮರೊಂದಿಗೆ ನೆಂಟಸ್ತಿಕೆ ಬೆಳೆಸಿದ್ದಾರೆ ಎಂದು ದೂರಿದರು.

Latest Videos
Follow Us:
Download App:
  • android
  • ios