ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ಮಾಜಿ ಸಿಎಂ ಎಸ್‌ ಎಂ ಕೃಷ್ಣ ಮತ್ತು ಮಾಜಿ ಪ್ರಧಾನಿ ಹೆಚ್‌ ಡಿ ದೇವೇ ಗೌಡ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.

ಬೆಂಗಳೂರು (ಮೇ.22): ಬೆಳಿಗ್ಗೆ ಎಸ್.ಎಂ.ಕೃಷ್ಣರನ್ನ ಭೇಟಿ ‌ಮಾಡಿ ಆಶೀರ್ವಾದ ಪಡೆದಿದ್ದ ಡಿಕೆಶಿ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಾಯಂಕಾಲ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ಪದ್ಮನಾಭನಗರದ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಡಿಸಿಎಂ ಡಿಕೆಶಿ ಅವರಿಗೆ ಹಾರ ಮತ್ತು ಶಾಲು ಹೊದಿಸಿ ಹೆಚ್ಡಿಡಿ ಅಭಿನಂದಿಸಿದರು. 

ದೇವೇಗೌಡರ ಭೇಟಿ ಬಳಿಕ ಮಾತನಾಡಿದ ಡಿಸಿಎಂ ಡಿಕೆಶಿ, ದೇವೇಗೌಡರು ಕರ್ನಾಟಕ ರಾಜ್ಯದ ಅತಿದೊಡ್ಡ ಸೇವೆ,ಕೊಡುಗೆ ಕೊಟ್ಟಿದ್ದಾರೆ. ಅತಿದೊಡ್ಡ ಸ್ಥಾನ ತುಂಬಿದ್ದಾರೆ. ಅವರು ದೊಡ್ಡ ಛಲಗಾರರು,ಅವರ ಆಶೀರ್ವಾದ ಪಡೆಯೋಣ ಅಂತ ಬಂದಿದ್ದೆ. ರಾಜಕೀಯ ಮುಗಿದು ಹೋಯ್ತು. ಇನ್ನೇನಿದ್ದರೂ ಕರ್ನಾಟಕ ಉಳಿಯಬೇಕು. ಹಾಗಾಗಿ ದೇವೇಗೌಡರ ಬಳಿ ಅನೇಕ ಸಲಹೆ ಕೇಳಿದ್ದೇವೆ. ಅವರು ಕೂಡ ಸ್ಪೂರ್ತಿ ಮತ್ತು ಧೈರ್ಯ ತುಂಬಿ ಕಳುಹಿಸಿದ್ದಾರೆ ಎಂದರು.

ಎಲೆಕ್ಷನ್ ಮುಗೀತು, ಇನ್ಯಾಕೆ ನೆಗೆಟಿವ್? ಇದರಿಂದ ಲಾಭ ಏನೂ ಇಲ್ಲ. ಜನ ನಮಗೆ ಕೊಟ್ಟಿರುವ ಭರವಸೆ ಈಡೇರಿಸಬೇಕು. ನುಡಿದಂತೆ ನಡೆಯಬೇಕು. ಕಾಂಗ್ರೆಸ್ ಪಕ್ಷ ಮತ್ತು ವೈಯಕ್ತಿಕವಾಗಿ ನಾನು ಪಾಸಿಟಿವ್ ಆಗಿರ್ತೀನಿ. ಅನೇಕರು ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. 
ನಾವು ಅದನ್ನು ಒಪ್ಪಿಕೊಂಡು ಗೌರವಿಸಬೇಕು. ಎಲ್ಲಾ ಹಿರಿಯ ನಾಯಕರನ್ನು ಭೇಟಿ ಮಾಡಿದ್ದೇನೆ. ಕಾವೇರಿ ನದಿ ವಿಚಾರ ಸೇರಿದಂತೆ ಅನೇಕ ವಿಚಾರ ಚರ್ಚೆ ಮಾಡಿದ್ದೇನೆ ಎಂದು ಈ ವೇಳೆ ಹೇಳಿದ್ದಾರೆ. 

Scroll to load tweet…

ಒಕ್ಕಲಿಗ ನಾಯಕತ್ವದ ವಿಚಾರವಾಗಿ ಮಾತನಾಡಿದ ಅವರು ಅದರ ಬಗ್ಗೆ ನಾನು ಮಾತನಾಡಲ್ಲ. ಸಮುದಾಯದ ವಿಚಾರ ಅಲ್ಲ. ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು. ಬೆಂಗಳೂರಿನಲ್ಲಿ ಮಳೆಯಿಂದ ಆದ ಅವಾಂತರ ವಿಚಾರವಾಗಿ ಮಾತನಾಡಿದ ಡಿಕೆಶಿ, ಆ ಬಗ್ಗೆ ಸಭೆ ಮಾಡಿ‌ ಚರ್ಚೆ ಮಾಡಿದ್ದೇವೆ. ಮಳೆ ಬಂದಾಗ ಎಲ್ಲೆಲ್ಲಿ ನೀರು ತುಂಬಿಕೊಳ್ಳುತ್ತೆ. ಅಂತಾ ಕಡೆ ಶಾಶ್ವತ ಪರಿಹಾರ ಕಂಡಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆಗೆ ನಿಂತು ಕೆಲಸ ಮಾಡ್ತಿವಿ ಎಂದರು. 

ಕರುನಾಡ ಯುದ್ಧವೀರರ ಮುಂದೆ ಟಾರ್ಗೆಟ್ 7 ಚಾಲೆಂಜ್: ದಕ್ಷಿಣಾಪಥೇಶ್ವರರ ದಂಡಯಾತ್ರೆಗೆ ರೆಡಿಯಾಗಿದೆ ರಣವ್ಯೂಹ !

ಇದಕ್ಕೂ ಮುನ್ನ ಇಂದು ಬೆಳಗ್ಗೆ ಡಿಕೆಶಿ ಅವರು, ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಈ ವೇಳೆ ಡಿಕೆ ಶಿವಕುಮಾರ್ ಅವರನ್ನು ಹಾರ ಹಾಕಿ ಎಸ್ ಎಮ್‌ ಕೃಷ್ಣ ಸ್ವಾಗತಿಸಿದರು. ಬ.ನ. ಸುಂದರ ರಾವ್ ಅವರು ಬರೆದಿರುವ ಬೆಂಗಳೂರು ಇತಿಹಾಸ ಎನ್ನುವ ಪುಸ್ತಕವನ್ನು ಉಡುಗೊರೆಯಾಗಿ ಕೃಷ್ಣ ಅವರಿಗೆ ಡಿಕೆಶಿಗೆ ಕೊಟ್ಟರು. ಜೊತೆಗೆ ಎಸ್ ಎಮ್ ಕೃಷ್ಣ ಅವರ ಕಾಲಿಗೆ ನಮಸ್ಕರಿಸಿದ ಡಿಕೆ ಶಿವಕುಮಾರ್ ಆಶಿರ್ವಾದ ಪಡೆದರು.

ಡಿಕೆಶಿ ನನ್ನ ದೈವವೆಂದು ಶಾಸಕ ಪ್ರಮಾಣವಚನ: ಹಿಂದು ಹುಲಿ ಯತ್ನಾಳ್‌ ಘರ್ಜನೆ

Scroll to load tweet…