ಬೆಂಗಳೂರು (ಮಾ.09): ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಅವರಿಗೆ ನೆರೆಯ ತಮಿಳುನಾಡಿನ ಒಂದು ವಿಧಾನಸಭಾ ಕ್ಷೇತ್ರದ ಚುನಾವಣಾ ಜವಾಬ್ದಾರಿ ವಹಿಸಲಾಗಿದೆ.

ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿನ ಕರೂರು ಜಿಲ್ಲೆಯ ಅರವಕುರಿಚಿ ವಿಧಾನಸಭಾ ಕ್ಷೇತ್ರದ ಹೊಣೆಯನ್ನುವಹಿಸಲಾಗುತ್ತಿದೆ. 

ಎಂಟಿಬಿ, ಮುನಿರತ್ನ ಎಲ್ಲಾ ಯೂಸ್ ಅಂಡ್ ಥ್ರೋ : ಸ್ಫೋಟಕ ಹೇಳಿಕೆ ನೀಡಿದ ನಾಯಕ ...

ಆ ಕ್ಷೇತ್ರದಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ತಮಿಳುನಾಡು ಬಿಜೆಪಿ ಉಸ್ತುವಾರಿಯೂ ಆಗಿರುವ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮುನಿರತ್ನ ಅವರಿಗೆ ಪತ್ರ ಬರೆದಿದ್ದಾರೆ.