Asianet Suvarna News Asianet Suvarna News

Assembly election: ಚುನಾವಣೆಗೂ ಮುನ್ನವೇ ಗೆಲುವು ಸಾಧಿಸಿದ ಸಿ.ಟಿ. ರವಿ: ಗೆಲುವಿನ ಅಪ್ಪಣೆ ನೀಡಿದ ಚೌಡೇಶ್ವರಿ ದೇವಿ

ಸಿ.ಟಿ.ರವಿ ಸೊಲ್ತಾರೋ... ಗೆಲ್ತಾರೋ... ಎಂದು ದೇವರ ಮೊರೆ
ಸೋಲು ಗೆಲುವು ಲೆಕ್ಕಚಾರವನ್ನ ದೇವರ ಮುಂದಿಟ್ಟ ಅರ್ಚಕ
ಸಿ.ಟಿ.ರವಿ ಗೆಲ್ತಾರೆ ಅಂತ ಅಪ್ಪಣೆ ನೀಡಿದ ಚೌಡೇಶ್ವರಿ

CT Ravi won before election Chowdeshwari Devi gave the order of victory sat
Author
First Published Feb 1, 2023, 8:01 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಫೆ.01): ರಾಜ್ಯವಿಧಾನ ಸಭಾ ಚುನಾವಣೆಗೆ ಇನ್ನು ಕೆಲ ತಿಂಗಳ ಅಷ್ಟೇ ಬಾಕಿ ಉಳಿದಿದೆ.ಚುನಾವಣೆ ಘೋಷಣೆ ಆಗುವ ಮೊದಲೇ  ರಾಜಕೀಯ ನಾಯಕರು ಪ್ರಚಾರಕ್ಕೆ ಇಳಿದಿದ್ದಾರೆ. ಅವರ ಬೆಂಬಲಿಗರು ಕೂಡ ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಇದರ ನಡುವೆ ಚುನಾವಣೆಯಲ್ಲಿ ಸೋಲು, ಗೆಲುವಿನ ಬಗ್ಗೆ ದೇವಿಯ ಮೊರೆ ಹೋಗಿದ್ದು, ಗೆಲ್ಲುವುದಾಗಿ ಸಿ.ಟಿ.ರವಿಗೆ ಆಶೀರ್ವಾದ ಮಾಡಿದ್ದಾಳೆ.

ರಾಜಕೀಯ ರಣರಂಗದಲ್ಲಿ ಮಾತಿನ ಯುದ್ದವೂ  ವಾತಾವರಣ ನಿರ್ಮಾಣವಾಗಿದೆ. ನಾಯಕರು ನಾ ಮುಂದು ತಾ ಮುಂದು ಎಂಬಂತೆ ಮತದಾರರ ಮನಸ್ಸು ಗೆಲ್ಲಲು ತಯಾರಿ ನಡೆಸುತ್ತಿದ್ದಾರೆ. ಇದರ ನಡುವೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ರಾಜ್ಯ ರಾಜಕಾರಣದಲ್ಲಿ ಕದನ ಕುತೂಹಲಕ್ಕೆ ಕಾರಣವಾಗಿದೆ.ಈ ಭಾರೀ ಚುನಾವಣಾ ನಾನಾ ಕಾರಣಗಳಿಂದ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ ಈ ಬಾರಿ ಜಿದ್ದಾಜಿದ್ದಿ ಕ್ಷೇತ್ರದಲ್ಲಿ ಸಿ.ಟಿ ರವಿ ವಿರುದ್ದ ಪ್ರಬಲ ಅಭ್ಯರ್ಥಿ ಹುಡುಕಾಟದಲ್ಲಿ ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ , ಅಮ್ಮಾದ್ಮಿ ಪಕ್ಷಗಳು ನಿರತವಾಗಿವೆ. ಈ ಎಲ್ಲಾ ಬೆಳವಣಿಗೆಯ ನಡುವೆ ದೇವಸ್ಥಾನದ ಆರ್ಚಕರೊಬ್ಬರು  ಸಿ.ಟಿ.ರವಿ ಸೊಲ್ತಾರೋ, ಗೆಲ್ತಾರೋ  ದೇವರ ಮೊರೆ ಹೋಗಿದ್ದಾರೆ.

ಎಸ್‌ಡಿಪಿ, ಪಿಎಫ್‌ಐಗೆ ಬೆಂಬಲ ಕೊಟ್ಟ ಕಾಂಗ್ರೆಸ್‌: ಸಿ.ಟಿ.​ರವಿ ಆರೋಪ

ಸೋಲು ಗೆಲುವು ಲೆಕ್ಕಚಾರ ದೇವರ ಮುಂದಿಟ್ಟ ಅರ್ಚಕ:
2023ರ ರಾಜ್ಯ ಚುನಾವಣಾಯಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಸೋಲು ಗೆಲುವಿನ ಲೆಕ್ಕಚಾರವನ್ನ ದೇವಸ್ಥಾನದ ಆರ್ಚಕ ರವಿ ದೇವರ ಮುಂದಿಟ್ಟಿದ್ದಾರೆ. ಚಿಕ್ಕಮಗಳೂರು ನಗರದ ಶಾಂತಿನಗರದ ಚೌಡೇಶ್ವರಿ ದೇವಸ್ಥಾನದ ಆರ್ಚಕ ರವಿ ಭಕ್ತರ ಬೇಡಿಕೆ ಮೇರೆಗೆ ಈ ಪ್ರಶ್ನೆ ಚೌಡೇಶ್ವರಿ ದೇವಿಯ ಮುಂದಿಟ್ಟಿದ್ದಾರೆ. ಐತಿಹಾಸಿಕ ಹಿನ್ನಲೆಯನ್ನು ಹೊಂದಿರುವ ಈ ಚೌಡೇಶ್ವರಿ ದೇವಿಯ ಅಪ್ಪಣೆ ನೀಡುವ ದೇವಿಯಂದೇ ಪ್ರಸಿದ್ದಿ ಪಡೆದಿದೆ. ಭಕ್ತರು ತಮ್ಮ ಕಷ್ಟ ಸುಖಗಳನ್ನು ಸೇರಿದಂತೆ ಮುಂದಾಗುವ ಕೆಲಸ ಬಗ್ಗೆ ದೇವಿಯ ಮುಂದೆ ಪ್ರಶ್ನೆ ಮಾಡಿ ಪ್ರಸಾದ ಕೇಳುವ ವಾಡಿಕೆ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.

ಸಿ.ಟಿ. ರವಿ ಗೆಲ್ಲುವುದಾಗಿ ಅಪ್ಪಣೆ ನಿಡಿದ ದೇವಿ: ಈ ಹಿನ್ನೆಲೆಯಲ್ಲಿ ಭಕ್ತರ ಒತ್ತಾಯಮೇರೆಗೆ ದೇವಸ್ಥಾನ ಆರ್ಚಕ ರವಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಸೋಲು ಗೆಲುವು ಲೆಕ್ಕಚಾರವನ್ನ ಚೌಡೇಶ್ವರಿ ದೇವಿಯ ಮುಂದಿಟ್ಟಿದ್ದಾರೆ. ಸಿ.ಟಿ.ರವಿ ಬೆಂಬಲಿಗರು ಇಂದು ಚಿಕ್ಕಮಗಳೂರು ಚೌಡೇಶ್ವರಿ ದೇವಿಯ ಆಸ್ಥಾನಕ್ಕೆ ಬಂದು ತಮ್ಮ ನಾಯಕನ ರಾಜಕೀಯ ಭವಿಷ್ಯದ ಬಗ್ಗೆ ದೇವರ ಬಳಿ ಪ್ರಶ್ನೆ ಮಾಡಿದ್ದಾರೆ. ಹಗ್ಗ ಬಲಕ್ಕೆ ತಿರುಗಿದ್ರೆ ಬಿಜೆಪಿ. ಎಡಕ್ಕೆ ತಿರುಗಿದ್ರೆ ಕಾಂಗ್ರೆಸ್ ಗೆಲುವು ಅಪ್ಪಣೆ ನೀಡುವಂತೆ ಮೊರೆ ಇಟ್ಟಿದ್ದಾರೆ. ತಾಯಿಗೆ ಪೂಜೆ ಸಲ್ಲಿಸಿ ನಂತರ ಹಗ್ಗ ಕೈಯಲ್ಲಿ ಹಿಡಿದು ಅರ್ಚಕ ನಿಂತಿದ್ದು ಈ ವೇಳೆ ಸಿ.ಟಿ.ರವಿ ಗೆಲ್ತಾರೆ ಅಂತ ತಾಯಿ ಚೌಡೇಶ್ವರಿ ಅಪ್ಪಣೆ ನೀಡಿದ್ದಾರಂತೆ. 

ರಾಮನಗರದಲ್ಲಿ ತ್ಯಾಗದ ನಾಟಕ ನಡೀತಿದೆ: ಜೆಡಿಎಸ್‌ ವಿರುದ್ಧ ಹರಿಹಾಯ್ದ ಸಿ.ಟಿ. ರವಿ

ದೇವಿ ಅಪ್ಪಣೆಗೆ ಸಿ.ಟಿ ರವಿ ಹರ್ಷ  ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತಾ, ಕಾಂಗ್ರೆಸ್ ಗೆಲ್ಲುತ್ತಾ ಎಂಬ ದೇವರ ಮುಂದೆ ಅಪ್ಪಣೆ ಕೇಳಿದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ರಾಜಕೀಯ ಪಕ್ಷದ ಕಾರ್ಯಕರ್ತರಲ್ಲಿ ಪರ ವಿರೋಧದ ಚರ್ಚೆಯೂ ಆರಂಭವಾಗಿದೆ. ಈ ಇದಕ್ಕೆ ಸಂಬಂಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಸಿ,ಟಿ ರವಿ ನಾವು ಕೆಲಸ ಮಾಡಿಕೊಂಡು ಹೋಗುತ್ತೇನೆ. ದೇವರು ಯಾವಗಲೂ `ಭಕ್ತನಿಗೆ ಒಲಿಯುತ್ತದೆ. ದತ್ತಾತ್ರೇಯ, ಚೌಡೇಶ್ವರಿ, ಚಾಮುಂಡೇಶ್ವರಿ ಹಾಗೂ ತಂದೆತಾಯಿಯ ಆರ್ಶೀವಾದ ಸದಾ ಇರುತ್ತೆ. ಕ್ಷೇತ್ರ ಅಭಿವೃದ್ದಿ ಕೆಲಸಗಳು ನಿರಂತವಾಗಿ ನಡೆಯುತ್ತಲೇ ಇದೆ. ಇದಕ್ಕೆ ಜನರ ಆರ್ಶೀವಾದದ ಜೊತೆಗೆ ಒಳ್ಳೇಯ ಕೆಲಸಗಳಿಗೆ ದೇವರ  ಆರ್ಶೀವಾದವಿರುತ್ತೇದೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದರು. ಅಲ್ಲದೆ ಕೆಲವರು ಕಾಲೆಳೆಯುವ ಪ್ರಯತ್ನ ಮಾಡಿದರೂ, ದೇವರು ಜುಟ್ಟು ಹಿಡಿದು ಮೇಲೆತ್ತುವ ಪ್ರಯತ್ನ ನಡೆಯುತ್ತಲೆ ಇದೆ. ಕಾಲೆಳೆಯುವವರಿಗೆ ಏನು ಸಿಗುತ್ತದೆ ಎಂದು ಪ್ರಶ್ನಿಸಿದರು.

Follow Us:
Download App:
  • android
  • ios