Asianet Suvarna News Asianet Suvarna News

ಎಸ್‌ಡಿಪಿ, ಪಿಎಫ್‌ಐಗೆ ಬೆಂಬಲ ಕೊಟ್ಟ ಕಾಂಗ್ರೆಸ್‌: ಸಿ.ಟಿ.​ರವಿ ಆರೋಪ

ಹೆಣನ ಅವರ ಮನೆಯಲ್ಲೂ ಮೂರು ದಿನ ಇಟ್ಟುಕೊಳ್ಳಲ್ಲ. ಮನುಷ್ಯನ ಹೆಣಕ್ಕೆ ಮೂರುಕಾಸಿನ ಬೆಲೆ ಇಲ್ಲ. ಅದು ಎದ್ದು ಬಂದು ವೋಟು ಕೂಡ ಹಾಕಲ್ಲ. ಯಾರಾ​ದರು ಹೆಣ ತಗೊಂಡು ರಾಜಕಾರಣ ಮಾಡಲು ಆಗು​ತ್ತ​ದೆಯೆ ಎಂದು ಮಾಜಿ ಸಿಎಂ ಸಿದ್ದ​ರಾ​ಮಯ್ಯ ಅವ​ರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯ​ದರ್ಶಿ ಸಿ.ಟಿ.​ರವಿ ಟಾಂಗ್‌ ನೀಡಿ​ದರು.
 

BJP National General Secretary CT Ravi Outraged Against Congress At Ramanagara gvd
Author
First Published Feb 1, 2023, 2:57 PM IST

ರಾಮ​ನ​ಗರ (ಫೆ.01): ಹೆಣನ ಅವರ ಮನೆಯಲ್ಲೂ ಮೂರು ದಿನ ಇಟ್ಟುಕೊಳ್ಳಲ್ಲ. ಮನುಷ್ಯನ ಹೆಣಕ್ಕೆ ಮೂರುಕಾಸಿನ ಬೆಲೆ ಇಲ್ಲ. ಅದು ಎದ್ದು ಬಂದು ವೋಟು ಕೂಡ ಹಾಕಲ್ಲ. ಯಾರಾ​ದರು ಹೆಣ ತಗೊಂಡು ರಾಜಕಾರಣ ಮಾಡಲು ಆಗು​ತ್ತ​ದೆಯೆ ಎಂದು ಮಾಜಿ ಸಿಎಂ ಸಿದ್ದ​ರಾ​ಮಯ್ಯ ಅವ​ರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯ​ದರ್ಶಿ ಸಿ.ಟಿ.​ರವಿ ಟಾಂಗ್‌ ನೀಡಿ​ದರು.

ತಾಲೂ​ಕಿನ ಕೈಲಾಂಚ ಹೋಬಳಿ ಅಚ್ಚಲು ಗ್ರಾಮ​ದಲ್ಲಿ ಬೂತ್‌ ವಿಜಯ ಸಂಕಲ್ಪ ಅಭಿ​ಯಾ​ನ​ದಲ್ಲಿ ಪಾಲ್ಗೊಳ್ಳಲು ಆಗ​ಮಿ​ಸಿದ ವೇಳೆ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಹೆಸನ ಮನೆ​ಯ​ಲ್ಲಿಯೇ ಮೂರು ದಿನ ಇಟ್ಟು​ಕೊ​ಳ್ಳು​ವು​ದಿಲ್ಲ ಅಂದ ಮೇಲೆ ಇನ್ಯಾರು ಇಟ್ಟು​ಕೊ​ಳ್ಳು​ತ್ತಾರೆ. ಇದು ಸಿದ್ದ​ರಾ​ಮಯ್ಯ ಅವ​ರಿಗೂ ಗೊತ್ತಿದೆ. ಸಿದ್ದ​ರಾ​ಮ​ಯ್ಯನವರು 100 ವರ್ಷ ಬದು​ಕಿ​ರಲಿ ಎಂದು ಆಶಿ​ಸು​ತ್ತೇವೆ. ನಮಗೆ ಹೆಣದ ಅವ​ಶ್ಯ​ಕತೆ ಇಲ್ಲ. ಅವ​ರಿ​ಲ್ಲ​ದೆ ಕೇಂದ್ರ​ದಲ್ಲಿ 4ನೇ ಹಾಗೂ ರಾಜ್ಯ​ದಲ್ಲಿ 3ನೇ ಬಾರಿ ಬಿಜೆಪಿ ಅಧಿ​ಕಾ​ರಕ್ಕೆ ಬಂದಿದೆ. ​ಹಾ​ಗಾಗಿ ಸಿದ್ದ​ರಾ​ಮ​ಯ್ಯ​ ಹತಾ​ಶ​ರಾಗಿ ಹೆಣದ ಬಗ್ಗೆ ಮಾತನಾಡು​ತ್ತಿ​ದ್ದಾರೆ ಎಂದು ಟೀಕಿ​ಸಿ​ದ​ರು.

ಬೆಳಗಾವಿ ಜಿಲ್ಲೆಯ 18ಕ್ಕೆ 18 ಕ್ಷೇತ್ರ ಗೆಲ್ಲುವುದೇ ನಮ್ಮ ಗುರಿ: ಸಿ.ಟಿ.ರವಿ

ಸಿದ್ದುಗೆ ಜಿಲೆಬಿ ಕಂಡ​ರಾ​ಗಲ್ಲ: ಸುಳ್ಳು ಹೇಳು​ವುದು ಅವರ ಹುಟ್ಟು ಗುಣ, ಹಳೇ ಕಾಯಿಲೆ. ಅವ​ರು ಅಧಿಕಾರಕ್ಕಾಗಿ ಅಹಿಂದ ರಾಜಕಾರಣ ಮಾಡಿದರು. ಅಧಿಕಾರಕ್ಕೆ ಬಂದ ಮೇಲೆ ಅ​ಹಿಂದ​ವನ್ನು ಹಿಂದಕ್ಕೆ ದೂಡಿದರು. ಅವರು ಅಧಿಕಾರದಲ್ಲಿದ್ದಾಗ ಜಿಲೆಬಿ ಕಂಡರೆ ಆಗಲ್ಲ ಎಂಬ ಆರೋಪ ಕೂಡ ಇತ್ತು. ಜಿಲೆಬಿ ಅಂದರೆ ತಿನ್ನುವ ಜಿಲೆಬಿ ಅಲ್ಲ. ಗೌಡ, ಲಿಂಗಾಯತ, ಬ್ರಾಹ್ಮಣ ಅನ್ನು​ತ್ತಾರೆ. ಅವ​ರನ್ನೂ ಕಂಡ​ರಾ​ಗದ ರಾಜ​ಕಾ​ರ​ಣ​ವನ್ನು ಸಿದ್ದ​ರಾ​ಮಯ್ಯ ಮಾಡು​ತ್ತಿ​ದ್ದರು. ಅದೇನು ಜನರನ್ನು ಪ್ರೀತಿ​ಸುವ ರಾಜ​ಕಾ​ರ​ಣವೇ ಎಂದು ಪ್ರಶ್ನೆ​ಯೊಂದಕ್ಕೆ ಉತ್ತ​ರಿ​ಸಿ​ದರು.

ಹಿಂದು ಆದ​ವರು ರಾಮ ಮಂದಿರ ಕಟ್ಟಲು ವಿರೋಧ ಮಾಡಲ್ಲ. ಟಿಪ್ಪು ಜಯಂತಿ ಆಚ​ರಿ​ಸದೆ ನಾಲ್ವಡಿ ಕೃಷ್ಣ​ರಾಜ ಒಡೆ​ಯರ್‌ ಜಯಂತಿ ಆಚ​ರಿ​ಸು​ತ್ತಾರೆ. ಅವ​ರನ್ನು ಹಿಂದೂ ಅಂತ ಹೇಳು​ವು​ದ​ರಲ್ಲಿ ಸಂಶಯ ಉಳಿ​ದಿಲ್ಲ. ಆದರೆ, ಅವರ ಅನು​ಕೂ​ಲಕ್ಕೆ ತಕ್ಕಂತ ನಡ​ವ​ಳಿಕೆ ಇರ​ಬಾ​ರದು ಅಷ್ಟೆ. ಕುಂಕುಮ ಕಂಡರೆ ಆಗದವರು ಯಾವ ಸೀಮೆ ಹಿಂದು. ಕೇಸರಿ ಕಂಡರೆ ಅಲರ್ಜಿ ಇರುವ​ವರು ಎಲ್ಲ​ರನ್ನು ಪ್ರೀತಿ​ಸುವ ಜನರಾ? ನಮ್ಮ ರಾಷ್ಟ್ರಧ್ವಜದಲ್ಲೇ ಕೇಸರಿ ಇದೆ. ಅದನ್ನು ದೂರ ಇಡುತ್ತಾರಾ? ನಮ್ಮ ಎಲ್ಲಾ ಸ್ವಾಮೀಜಿಗಳು ಧರಿಸುವ ಬಟ್ಟೆಯೂ ಕೇಸರಿ. ಅವರಿಗೆ ಸ್ವಾಮೀ​ಜಿ​ಗ​ಳ ಆಶೀರ್ವಾದ ಬೇಕು, ಕೇಸರಿ ಕಂಡರೆ ಆಗಲ್ಲ ಎಂದರೆ ಏನರ್ಥ ಎಂದು ಸಿ.ಟಿ.​ರವಿ ಪ್ರಶ್ನಿ​ಸಿ​ದರು.

ಸಿದ್ರಾ​ಮು​ಲ್ಲಾ​ಖಾನ್‌ ಅಂತ ಜನ​ರಿಟ್ಟ ಹೆಸರು: ಸಿದ್ದ​ರಾ​ಮಯ್ಯ ಅವರಿಗೆ ನಾನು ಸಿದ್ರಾ​ಮು​ಲ್ಲಾ​ಖಾನ್‌ ಅಂತ ಹೆಸ​ರಿ​ಟ್ಟಿಲ್ಲ. ನಾಡಿನ ಜನರು ಅವ​ರಿಗೆ ಇಟ್ಟಿ​ರುವ ಹೆಸರು. ಅವ​ರನ್ನು ಹುಲಿಯಾ ಅಂತಾರೆ ಅದೇನು ಅವರ ತಂದೆ ತಾಯಿ ಇಟ್ಟಿದ್ದರಾ. ನನ್ನನ್ನ ಹಿಂದೂ ಹುಲಿ ಅಂತಾರೆ. ನಮ್ಮಪ್ಪ ಇಟ್ಟಹೆಸರಲ್ಲ ಅದು. ಪ್ರೀತಿಯಿಂದ ಜನ ಇಟ್ಟಿರುವ ಹೆಸರು ಎಂದು ತಮ್ಮ ಹೇಳಿ​ಕೆ​ಯನ್ನು ಸಮ​ರ್ಥಿ​ಸಿ​ಕೊಂಡ​ರು.

ಕಾಂಗ್ರೆಸ್‌ ನವರು ಎಸ್‌ಡಿಪಿಐ ಮತ್ತು ಪಿಎಫ್‌ಐಗೆ ಬೆಂಬಲ ಕೊಟ್ಟರು. ಅವರು ಬಿಜೆಪಿ ಶಾಸ​ಕರ ಮೇಲೆ ಕತ್ತಿ ಇಡ​ಲಿಲ್ಲ. ಕಾಂಗ್ರೆಸ್‌ ಶಾಸ​ಕ ತನ್ವೀರ್‌ ಸೇಠ್‌ ಮೇಲೆ ಕತ್ತಿ ಇಟ್ಟರು. ದಲಿತ ಶಾಸ​ಕನ ಮನೆಗೆ ಬೆಂಕಿ ಇಟ್ಟರು. ಡಿಜೆ ಹಳ್ಳಿ - ಕೆಜೆ ಹಳ್ಳಿ ಗ್ಯಾಂಗ್‌ಗೆ ಬೆಂಬಲ ಕೊಡು​ವುದು ಕಾಂಗ್ರೆಸ್‌ನ ನೀತಿ​ಯಾ​ಗಿದ್ದು, ಆ ನೀತಿ ಮತ್ತೆ ಜಾರಿ​ಯಾಗಿ ವಿಸ್ತ​ರಣೆ ಆಗ​ಬೇಕಾ. ಅದು ಬರ​ಬಾ​ರದು ಎನ್ನು​ವು​ದಾ​ದರೆ ಬಿಜೆಪಿ ಮತ್ತೆ ಅಧಿ​ಕಾ​ರಕ್ಕೆ ಬರ​ಬೇಕು ಎಂದು ಹೇಳಿ​ದ​ರು.

ಶುದ್ಧ ಹಿಂದೂ​ಗಳು ವಿರೋಧ ಮಾಡ​ಲ್ಲ: ರಾಮದೇವರ ಬೆಟ್ಟಎಂದು ನಾವು ಇಟ್ಟಹೆಸ​ರಲ್ಲ. ರಾಮ​ನ​ಗರ ಎಂದು ಹೆಸರು ಬರಲು ಹಿನ್ನೆಲೆ ಏನು. ಇದನ್ನು ಉಳಿ​ಸ​ಬೇಕಾ, ಬೇಡವಾ. ನಮ್ಮ ಮೇಲೆ ಆರೋಪ ಮಾಡು​ವ​ವರು ರಾಮ​ಮಂದಿರ ನಿರ್ಮಾ​ಣಕ್ಕೆ ಏಕೆ ವಿರೋಧ ಮಾಡು​ತ್ತಿ​ದ್ದಾರೊ ಗೊತ್ತಿಲ್ಲ ಎಂದರು. ರಾಮ ಮಂದಿರ ನಿರ್ಮಾ​ಣಕ್ಕೆ ಶುದ್ಧ ಹಿಂದೂಗಳು ಯಾರೂ ವಿರೋಧ ಮಾಡುವು​ದಿ​ಲ್ಲ. ಆದರೆ, ಇವರಾರ‍ಯಕೆ ವಿರೋಧ ಮಾಡುತ್ತಿ​ದ್ದಾರೊ ಗೊತ್ತಿಲ್ಲ. ಇಲ್ಲಿಯವರೆಗೆ ರಾಮಮಂದಿರ ಕಟ್ಟಬೇಡಿ ಅಂತ ಯಾರಾ​ದರು ಅವರನ್ನು ಕಟ್ಟು ಹಾಕಿ​ದ್ದರೆ ಎಂದು ಮಾಜಿ ಸಿಎಂ ಕುಮಾ​ರ​ಸ್ವಾಮಿ ಮತ್ತು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ವಿರುದ್ಧ ಪರೋ​ಕ್ಷ​ವಾಗಿ ಆಕ್ರೋಶ ವ್ಯಕ್ತ​ಪ​ಡಿ​ಸಿ​ದ​ರು. 

ಎಲ್ಲ ವರ್ಗಗಳ ಹಿತರಕ್ಷಣೆ ಬಿಜೆಪಿಯ ಆದ್ಯತೆ: ಸಿ.ಟಿ.ರವಿ

ಇಲ್ಲಿ ಅವರೇ ಅಧಿಕಾರದಲ್ಲಿದ್ದವರು. ರಾಮದೇವರ ಬೆಟ್ಟಅಭಿವೃದ್ಧಿ ಮಾಡಿ ತೋರಿಸಬೇಕಿತ್ತು. ನಾವೂ ಹಿಂದೂಗಳು ಅಂತ ಹೇಳಿಕೊಳ್ಳುವವರು ಇಷ್ಟು ದಿನ ಏನು ಮಾಡು​ತ್ತಿ​ದ್ದರು ಎಂದು ಸಿ.ಟಿ.​ರವಿ ಪ್ರಶ್ನೆ ಮಾಡಿ​ದರು. ಗ್ರೇಟರ್‌ ಬೆಂಗಳೂರು ಬಿಡದಿ ಸ್ಮಾರ್ಚ್‌ ಸಿಟಿ ಯೋಜನಾ ಪ್ರಾಧಿ​ಕಾರ ಅಧ್ಯಕ್ಷ ವರದರಾಜುಗೌಡ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಿವಮಾದು, ಮಾಜಿ ಅಧ್ಯಕ್ಷ ಮುರಳೀಧರ್‌, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ಜಿಲ್ಲಾ ಪ್ರಭಾರಿ ವಿಜಯ ಕುಮಾರ್‌, ಮುಖಂಡರಾದ ಗೌತಮ ಗೌಡ, ರುದ್ರ​ದೇ​ವರು, ಚಂದ್ರ​ಶೇ​ಖರ್‌ ರೆಡ್ಡಿ ಇತರರಿದ್ದರು.

Follow Us:
Download App:
  • android
  • ios