30 ಕಡೆ ಇರಿದು ಹಿಂದೂ ಕಾರ್ಯಕರ್ತನ ಕೊಲೆ: ಸಿ.ಟಿ.ರವಿ
ಯುವ ಬ್ರಿಗೇಡ್‌ನ ವೇಣುಗೋಪಾಲ್ ನಾಯಕ ಅವರದ್ದು ಪೂರ್ವ ನಿಯೋಜಿತ ಕೊಲೆ. 30 ಕಡೆ ಇರಿದು, ಶಸ್ತಾ್ರಸ್ತ್ರ ಬಳಸಿ ಕೊಲೆ ಮಾಡಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದರು.
ಮೈಸೂರು (ಜು.12): ಯುವ ಬ್ರಿಗೇಡ್‌ನ ವೇಣುಗೋಪಾಲ್ ನಾಯಕ ಅವರದ್ದು ಪೂರ್ವ ನಿಯೋಜಿತ ಕೊಲೆ. 30 ಕಡೆ ಇರಿದು, ಶಸ್ತಾ್ರಸ್ತ್ರ ಬಳಸಿ ಕೊಲೆ ಮಾಡಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದರು. ಟಿ.ನರಸೀಪುರದಲ್ಲಿರುವ ವೇಣುಗೋಪಾಲ್ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ವೇಣುಗೋಪಾಲ್ ನಾಯಕ ಹನುಮ ಜಯಂತಿ ನೇತೃತ್ವ ವಹಿಸಿದ್ದ ಕಾರಣ ಈ ಕೊಲೆಯಾಗಿದೆ ಎಂದು ದೂರಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಒಂದು ವರ್ಗದ ಜನ ಯುದ್ಧೋತ್ಸಾಹದಲ್ಲಿದ್ದಾರೆ. ಹಿಂದೂ ಸಂಘಟನೆಗಳ ಚಟುವಟಿಕೆ ಹತ್ತಿಕುವ, ಸಂಘಟನೆಗಳ ಮುಖಂಡರಿಗೆ ಭಯ ಹುಟ್ಟಿಸುವ ಕೆಲಸ ನಡೆದಿದೆ ಎಂದರು.
ಬೋಸ್ ಆಪ್ತ: ಕ್ಷೇತ್ರದ ಶಾಸಕ ಡಾ.ಮಹದೇವಪ್ಪ ಕಡೆಯಿಂದಾಗಲೀ, ಸಿಎಂ ಕಡೆಯಿಂದಾಗಲೀ ಈ ಕುಟುಂಬಕ್ಕೆ ಒಂದು ಸಾಂತ್ವನದ ನುಡಿಯೂ ಬಂದಿಲ್ಲ. ಆರೋಪಿಗಳು ಪ್ರಭಾವಿಗಳ ಸಂಪರ್ಕ ವಲಯದಲ್ಲಿದ್ದಾರೆ. ಡಾ.ಮಹದೇವಪ್ಪ ಮಗ ಸುನಿಲ್ ಬೋಸ್‌ಗೆ ಆರೋಪಿಗಳ ಜೊತೆ ಗಾಢ ಸ್ನೇಹವಿದೆ ಎಂದು ಅವರು ಆರೋಪಿಸಿದರು.
ಉಚಿತ ಅಕ್ಕಿ ಕೊಡುವ ಪ್ರಮೇಯ ಏನಿದೆ?: ಸಿಎಂ ವಿರುದ್ಧ ಎಚ್‌ಡಿಕೆ ವಾಗ್ದಾಳಿ
ವಿಪಕ್ಷ ನಾಯಕನ ಆಯ್ಕೆ ವಿಳಂಬಕ್ಕೆ ಉತ್ತರವಿಲ್ಲ: ಲವು ಸಂಗತಿಗಳನ್ನು ಹೇಳಲಾಗುವುದಿಲ್ಲ. ವಿರೋಧ ಪಕ್ಷದ ನಾಯಕನ ಆಯ್ಕೆಯಲ್ಲಿ ಆಗಿರುವ ವಿಳಂಬದ ಪ್ರಶ್ನೆಗೆ ನನ್ನ ಬಳಿಯೂ ಉತ್ತರವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ಮುರುಳಿ ಅವರ ನಿವಾಸದಲ್ಲಿ ಉಪಹಾರ ಸೇವಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ದೆಹಲಿಯಿಂದ ಬಂದಿದ್ದ ಇಬ್ಬರು ವೀಕ್ಷಕರು ಈಗಾಗಲೇ ವರದಿಯನ್ನು ತೆಗೆದುಕೊಂಡು ಹೋಗಿದ್ದಾರೆ. ವಿಪಕ್ಷ ನಾಯಕನ ಆಯ್ಕೆ ವಿಚಾರದಲ್ಲಿ ರಾಷ್ಟ್ರಮಟ್ಟದ ನಾಯಕರಿಗೆ ಬಹುಶಃ ಬೇರೆಯದೇ ಯೋಚನೆ ಇರಬಹುದು ಎಂದರು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಆರಂಭದಿಂದಲೇ ಹಲವು ಗೊಂದಲಗಳಲ್ಲಿ ಮುಳುಗಿದೆ. ಚುನಾವಣೆಗೂ ಮುನ್ನಾ ಗ್ಯಾರಂಟಿ ಯೋಜನೆಗಳು ರಾಜ್ಯದ ಎಲ್ಲಾ ಜನರಿಗೂ ಅನ್ವಯವೆಂದು ಹೇಳುತ್ತಿದ್ದವರು ಈಗ ಹಲವು ಷರತ್ತುಗಳನ್ನು ವಿಧಿಸುತ್ತಿದ್ದಾರೆ. ರಾಜ್ಯದಲ್ಲಿ ಅಗತ್ಯ ಸಾಮಗ್ರಿಗಳ ಬೆಲೆಗಳು ಗಗನಕ್ಕೆ ಏರಿವೆ. ಇಂತಹ ಸಮಯದಲ್ಲಿ ವಿದ್ಯುತ್ ದರಗಳನ್ನು ಏರಿಕೆ ಮಾಡಿರುವುದು ಜನವಿರೋಧಿ ಕೆಲಸವೆಂದು ರವಿ ಹೇಳಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡುತ್ತಿರುವುದನ್ನು ಗಮನಿಸಿದ್ದೇವೆ. ಇದಕ್ಕೆ ಆಧಾರವೂ ಕುಮಾರಸ್ವಾಮಿ ಅವರ ಬಳಿ ಇರಬಹುದು. ಅದನ್ನು ಅವರು ಬಹಿರಂಗಪಡಿಸಬೇಕು ಎಂದು ಹೇಳಿದರು. ಬಿಜೆಪಿ ಹೊಡೆದಾಳುವ ನೀತಿಯನ್ನು ಅನುಸರಿಸುತ್ತದೆಂದು ಹೇಳುವ ಕಾಂಗ್ರೆಸ್, ಕಮ್ಯುನಿಸ್ಟರು ಕೇಂದ್ರ ಸರ್ಕಾರದ ಏಕರೂಪ ನಾಗರಿಕ ಸಂಹಿತೆಯನ್ನು ಒಪ್ಪಿಕೊಳ್ಳಬೇಕು ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ರವಿ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದರು. ಮತಾಂತರ ಪಿಡುಗು ಹಿಂದೂ ಸಮಾಜಕ್ಕೆ ಗೆದ್ದಲು ಹುಳುವಿನ ರೀತಿ.
ಕಾನೂನು, ಸುವ್ಯವಸ್ಥೆ ಹದಗೆಡಲು ಯಾವ ಕಾರಣಕ್ಕೂ ಬಿಡಲ್ಲ: ಸಿದ್ದರಾಮಯ್ಯ
ಮಾಜಿ ಶಾಸಕ ಗೂಳಿಹಟ್ಟಿಶೇಖರ್ ಕುಟುಂಬ ಜೀವಂತ ಉದಾಹರಣೆ. ಬಲವಂತದ ಮತಾಂತರವನ್ನು ನಮ್ಮ ಸರ್ಕಾರ ನಿಷೇಧಿಸಿತ್ತು. ಕಾಂಗ್ರೆಸ್ ಸರ್ಕಾರ ಮೋಸ, ಆಮಿಷದ ಮತಾಂತರ ಸರಿ ಎನ್ನುವುದಾದರೆ ಆ ಸಂಗತಿಯನ್ನು ಒಪ್ಪಿಕೊಳ್ಳಲಿ. ಅವರು ಎಲ್ಲಾ ಸಮುದಾಯಗಳ ಮುಖಂಡರು, ಮಠಾಧೀಶರರು ಮತಾಂತರ ಬಗ್ಗೆ ಚರ್ಚೆ ನಡೆಸಬೇಕು. ಹೀಗೆ ಎಲ್ಲಾ ಜನರು ಮತಾಂತರ ಆಗುತ್ತಲೇ ಇದ್ದರೆ ಮಠಗಳಿಗೆ ಹೋಗುವವರು ಯಾರು ಎಂದು ಪ್ರಶ್ನೆ ಮಾಡಿದ ರವಿ, ಹೊಸದುರ್ಗ ಮಾಜಿ ಶಾಸಕ ಗೂಳಿಹಟ್ಟಿಶೇಖರ್ ಅವರ ಕುಟುಂಬದ ಮತಾಂತರದ ನೋವನ್ನು ಅನುಭವಿಸಿದ್ದಾರೆ ಎಂದರು.