ಉಚಿತ ಅಕ್ಕಿ ಕೊಡುವ ಪ್ರಮೇಯ ಏನಿದೆ?: ಸಿಎಂ ವಿರುದ್ಧ ಎಚ್‌ಡಿಕೆ ವಾಗ್ದಾಳಿ

2018ರ ಕೊನೆಯ ಬಜೆಟ್‌ನಲ್ಲಿ ರಾಜ್ಯದ ಜನ ಹಸಿವು ಮುಕ್ತರಾಗಿದ್ದಾರೆ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಿದ್ದ ಮೇಲೆ ಮತ್ತೆ ಉಚಿತ ಅಕ್ಕಿ ಕೊಡುವ ಪ್ರಮೇಯ ಏನಿದೆ.? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

Ex CM HD Kumaraswamy Slams On CM Siddaramaiah gvd

ಬೆಂಗಳೂರು (ಜು.12): 2018ರ ಕೊನೆಯ ಬಜೆಟ್‌ನಲ್ಲಿ ರಾಜ್ಯದ ಜನ ಹಸಿವು ಮುಕ್ತರಾಗಿದ್ದಾರೆ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಿದ್ದ ಮೇಲೆ ಮತ್ತೆ ಉಚಿತ ಅಕ್ಕಿ ಕೊಡುವ ಪ್ರಮೇಯ ಏನಿದೆ.? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಈ ಬಗ್ಗೆ ವಿಧಾನಮಂಡಲ ಅಧೀವೇಶನದಲ್ಲಿ ಮಾತನಾಡಿದ ಅವರು, ಜನ ಇನ್ನೂ ದಷ್ಟ ಪುಷ್ಟವಾಗಿ ಬೆಳೆಯಲಿ ಅಂತಾ ಇರಬಹುದು.

ಈಗ ಕೇಂದ್ರದ ಕಡೆ ಬೆರಳು ತೋರಿಸ್ತಿದಾರೆ. ಅಕ್ಕಿ ಸಿಗದೇ ಜನರಿಗೆ ತಲಾ 170 ಕೊಡಲು ನೀವು ಒಪ್ಪಿಕೊಂಡ್ರಿ. ಈಗ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಇಲ್ಲ ಅಂತಾ ಅಧಿಕಾರಿಗಳು ಹೇಳ್ತಾ ಇದಾರೆ ಎಂದರು.   ಈ ಸಂಧರ್ಭದಲ್ಲಿ ಈ ರೀತಿಯ ಮಾಹಿತಿ ಕೊಟ್ಟು ನಿಮ್ಮನ್ನು ತಪ್ಪು ದಾರಿಗೆ ಎಳೆದ ಅಧಿಕಾರಿಗಳು ಯಾರು ಎಂದು ಮಾಹಿತಿ ಕೊಡಿ ಎಂದ ಸಚಿವ ಎಚ್.ಕೆ.ಪಾಟೀಲ್‌ಗೆ ಅದನ್ನು ನೀವೇ ಮಾಹಿತಿ ತಿಳಿದುಕೊಳ್ಳಿ ಎಂದು ಕುಮಾರಸ್ವಾಮಿ ತಿರುಗೇಟು ಕೊಟ್ಟರು. 

ಈ ನಡುವೆ ಎದ್ದ ಸಿಎಂ ಸಿದ್ದರಾಮಯ್ಯ 12800000, ಎಪಿಎಲ್, 4 ಕೋಟಿ ನಲವತ್ತೆರಡು ಲಕ್ಷ ಬಿಪಿಎಲ್ ಬಳಕೆದಾರರು ಇದ್ದಾರೆ. ಇವರೆಲ್ಲರಿಗೂ ನಾವು  ಡಿಬಿಟಿ ಮೂಲಕ ಹಣ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ. ನಿಮಗೆ ಮಾಹಿತಿ ನೀಡಿದ ಅಧಿಕಾರಿಗಳು ಯಾರು ಅಂತಾ ಪತ್ತೆ ಹಚ್ಚೋಣ ಎಂದು ಸಿಎಂ ತಿಳಿಸಿದರು. ಜೊತೆಗೆ ಮೊದಲು ಎರಡು ರೂಪಾಯಿಗೆ ಅಕ್ಕಿ ಕೊಡಲು ಆರಂಭ ಮಾಡಿದ್ದು ಆಂಧ್ರಪ್ರದೇಶದ ಎನ್‌ಟಿಆರ್ ಸರ್ಕಾರದಲ್ಲಿ. ನಂತರ ರಾಮಕೃಷ್ಣ ಹೆಗಡೆ ಅವರು ಕರ್ನಾಟಕದಲ್ಲಿ ಇದೇ ಯೋಜನೆ ಜಾರಿಗೆ ತಂದರು. 

ರಾಹುಲ್ ಗಾಂಧಿ ಅನರ್ಹತೆ: ಫ್ರೀಡಂಪಾರ್ಕ್‌ನಲ್ಲಿ ಕಾಂಗ್ರೆಸ್ ಮೌನ ಪ್ರತಿಭಟನೆ

ಹಲವಾರು ಜನ ರಾಜ್ಯಕ್ಕೆ ಹಲವು ಕೊಡುಗೆಗಳನ್ನು ಕೊಟ್ಟಿದ್ದಾರೆ. ಅದನ್ನು ನಾವೂ ಸ್ಮರಿಸಿಕೊಳ್ಳಬೇಕು. ಐದು ಕೆಜಿ ಅಕ್ಕಿ ಕೊಡುವ ನಿರ್ಣಯ ಒಳ್ಳೆಯದೇ. ಆದರೆ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ್ದು ಹತ್ತು ಕೆಜಿ ಕೊಡ್ತೀವಿ ಅಂತ. ಆದರೆ ಕೇಂದ್ರದ ಐದು ಕೆಜಿ ಅಕ್ಕಿ ಹೊರತುಪಡಿಸಿ ನಾವು ಹತ್ತು ಕೆಜಿ ಕೊಡ್ತೀವಿ ಅಂದಿದಾರೆ ಅಂತಾ ವಿಶ್ಲೇಷಣೆ ನಡೆಯುತ್ತಿದೆ ಎಂದರು. ಈಗ 170 ರುಪಾಯಿ ಮನೆಯ ಯಜಮಾನನ ಅಕೌಂಟ್‌ಗೆ ಹೋಗುತ್ತೋ. ಅಥವಾ ಮನೆಯ ಒಡತಿಗೆ ಹೋಗುತ್ತೋ ಗೊತ್ತಿಲ್ಲ. ನೀವು ಕೊಟ್ಟ ಹಣ ಮದ್ಯಪಾನ, ಆನ್‌ಲೈನ್ ರಮ್ಮಿ, ಮತ್ತಿತರ ಚಟುವಟಿಕೆಗಳಿಗೆ ಹೋಗುತ್ತೋ ಯಾರಿಗೆ ಗೊತ್ತು.? ಹಣದ ಬದಲಿಗೆ ಎಣ್ಣೆ, ಬೆಲ್ಲ, ಮತ್ತಿತರ ಪೌಷ್ಟಿಕ ಆಹಾರ ಕೊಡವಹುದಲ್ಲವೇ ಎಂದರು.

Latest Videos
Follow Us:
Download App:
  • android
  • ios