ಸಿದ್ರಾಮುಲ್ಲಾ ಖಾನ್‌ ಅವರಿಗೆ ಕೇಳ ಬಯಸುತ್ತೇನೆ. ಹಾವೇರಿಗೆ ಮೇಗಾ ಡೈರಿ ಕೊಟ್ಟಿದ್ದು ಯಾರು? ಮೆಡಿಕಲ್‌ ಕಾಲೇಜ್‌ ಕೊಟ್ಟಿದ್ದು ಯಾರು? ಎಂಜಿನಿಯರಿಂಗ್‌ ಕಾಲೇಜು ಕೊಟ್ಟಿದ್ದು ಯಾರು? 60 ವರ್ಷ ದೇಶವನ್ನಾಳಿದ ನೀವುಗಳು ಇದೀಗ ಗ್ಯಾರಂಟಿ ಕಾರ್ಡ್‌ ಕೊಡಲು ಮುಂದಾಗಿರಿ. ನಿಮ್ಮ ಅಸ್ತಿತ್ವವೇ ಗ್ಯಾರಂಟಿ ಇಲ್ಲದಿರುವಾಗ ನಿಮ್ಮ ಗ್ಯಾರಂಟಿ ಕಾರ್ಡ್‌ ಹಾಗೂ ನಿಮ್ಮ ಸುಳ್ಳು ನಂಬಲು ಜನರು ಪೆದ್ದರಲ್ಲ ಸಿಟಿ ರವಿ ವಾಗ್ದಾಳಿ

ಬ್ಯಾಡಗಿ (ಮಾ.19) : ರಾಜ್ಯ ಹಾಗೂ ದೇಶದಲ್ಲಿ ಡಬಲ್‌ ಎಂಜಿನ್‌ ಸರ್ಕಾರದ ಅಭಿವೃದ್ಧಿ ಕಾರ್ಯ ನೋಡಿ ಬೆಚ್ಚಿ ಬಿದ್ದಿರುವ ಕಾಂಗ್ರೆಸ್ಸಿನದ್ದು ಕಣ್ಣಿದ್ದು ಕುರುಡರಂತೆ, ಕಿವಿ ಇದ್ದು ಕಿವುಡರಂತೆ ವರ್ತಿಸುವ ಸ್ಥಿತಿ ಬಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ(CT Ravi) ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ(BJP Vijayasankalpa yatre haveri)ಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಣ್ಣಿದ್ದವರಿಗೆ ಕೊಟ್ಟಿದ್ದು ಕಾಣಿಸುತ್ತೆ. ಕಿವಿ ಇದ್ದವರಿಗೆ ಹೇಳಿದ್ದು ಕೇಳಿಸುತ್ತೆ. ಆದರೆ ಕಣ್ಣಿದ್ದು ಕುರುಡರಂತೆ, ಕಿವಿ ಇದ್ದು ಕಿವುಡರಂತೆ ನಾಟಕವಾಡುವ ಕಲೆಯನ್ನು ಕಾಂಗ್ರೆಸ್‌ ಕರಗತ ಮಾಡಿಕೊಂಡಿದೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ ಗೆದ್ದರೆ ಕುಕ್ಕರ್‌ನಲ್ಲಿ ಬಾಂಬ್‌ ಇಡುವವರು ಎದ್ದು ಕುಳಿತುಕೊಳ್ಳುತ್ತಾರೆ: ಸಿ.ಟಿ.ರವಿ

ಸಿದ್ರಾಮುಲ್ಲಾ ಖಾನ್‌ ಅವರಿಗೆ ಕೇಳ ಬಯಸುತ್ತೇನೆ. ಹಾವೇರಿಗೆ ಮೇಗಾ ಡೈರಿ ಕೊಟ್ಟಿದ್ದು ಯಾರು? ಮೆಡಿಕಲ್‌ ಕಾಲೇಜ್‌ ಕೊಟ್ಟಿದ್ದು ಯಾರು? ಎಂಜಿನಿಯರಿಂಗ್‌ ಕಾಲೇಜು ಕೊಟ್ಟಿದ್ದು ಯಾರು? 60 ವರ್ಷ ದೇಶವನ್ನಾಳಿದ ನೀವುಗಳು ಇದೀಗ ಗ್ಯಾರಂಟಿ ಕಾರ್ಡ್‌ ಕೊಡಲು ಮುಂದಾಗಿರಿ. ನಿಮ್ಮ ಅಸ್ತಿತ್ವವೇ ಗ್ಯಾರಂಟಿ ಇಲ್ಲದಿರುವಾಗ ನಿಮ್ಮ ಗ್ಯಾರಂಟಿ ಕಾರ್ಡ್‌ ಹಾಗೂ ನಿಮ್ಮ ಸುಳ್ಳು ನಂಬಲು ಜನರು ಪೆದ್ದರಲ್ಲ ಎಂದರು.

ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರÜತಿಯರನ್ನು ಕರೆತಂದಿದ್ದು ಬಿಜೆಪಿ ಸರ್ಕಾರ. ಮೈಸೂರ-ಬೆಂಗಳೂರ ರಸ್ತೆ ಅಭಿವೃದ್ಧಿಪಡಿಸಿದ್ದು ಬಿಜೆಪಿ, ಆದರೆ ಅದು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಮಂಜೂರಾಗಿತ್ತು ಎಂದು ಬೊಬ್ಬೆ ಹೊಡೆಯುತ್ತಿರುವ ಕಾಂಗ್ರೆಸ್‌ ಮುಂದೆ ಬಸವಣ್ಣನ ಅನುಭವ ಮಂಟದ ಮಾಡಿದ್ದು ನಾವೇ ಎಂದು ಹೇಳುವ ಕಾಲ ದೂರವಿಲ್ಲ ಎಂದು ವ್ಯಂಗ್ಯವಾಡಿದರು.

ಕೃಷಿ ಸಚಿವ ಬಿ.ಸಿ. ಪಾಟೀಲ್‌ ಮಾತನಾಡಿ, ದೇಶದಲ್ಲಿ ಕೃಷಿ ಹಾಗೂ ರೈತರ ಬದುಕು ಹಸನಾಗಿದ್ದು ಬಿಜೆಪಿ ಸರ್ಕಾರದಲ್ಲಿ ಎಂದರು.

ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಾಕಷ್ಟುಅನುದಾನ ತರುವ ಮೂಲಕ ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸಿದ್ದೇನೆ. ಮುಂದಿನ ದಿನಗಳಲ್ಲಿ ಬ್ಯಾಡಗಿ ವಿಧಾನಸಭಾ ಕ್ಷೇತ್ರ ನೀರಾವರಿ ಕ್ಷೇತ್ರವಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಯಡಿಯೂರಪ್ಪರನ್ನು ಬಿಟ್ಟು ಬಿಜೆಪಿಯನ್ನು ಗೆಲ್ಲಿಸುವ ಎದೆಗಾರಿಕೆ ಯಾರಿಗೆ ಇದೆ?:

ಕಾರ್ಯಕ್ರಮದಲ್ಲಿ ಸಂಸದ ಶಿವಕುಮಾರ ಉದಾಸಿ, ಮಾಜಿ ಶಾಸಕ ಸುರೇಶಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ, ತಾಲೂಕಾಧ್ಯಕ್ಷ ಹಾಲೇಶ ಜಾಧವ, ಪುರಸಭೆ ಅಧ್ಯಕ್ಷೆ ಫಕೀರಮ್ಮ ಛಲವಾದಿ, ಉಪಾಧ್ಯಕ್ಷೆ ಮಲ್ಲಮ್ಮ ಪಾಟೀಲ, ವೀರೇಂದ್ರ ಶೆಟ್ಟರ, ಮುರಿಗೆಪ್ಪ ಶೆಟ್ಟರ, ವಿ.ವಿ. ಹಿರೇಮಠ, ಶಂಕ್ರಣ್ಣ ಮಾತನವರ, ಎಂ.ಎಸ್‌. ಪಾಟೀಲ, ಶಿವಬಸಪ್ಪ ಕುಳೆನೂರ, ವೀರಭದ್ರಪ್ಪ ಗೊಡಚಿ, ಸುರೇಶ ಯತ್ನಳ್ಳಿ, ಚಂದ್ರಣ್ಣ ಮುಚ್ಚಟ್ಟಿ, ಎಸ್‌.ಎನ್‌. ಯಮನಕ್ಕವರ, ಸರೋಜಾ ಉಳ್ಳಾಗಡ್ಡಿ, ಕಲಾವತಿ ಬಡಿಗೇರ, ಕವಿತಾ ಸೊಪ್ಪಿನಮಠ. ಗಾಯತ್ರಾ ರಾಯ್ಕರ, ವಿದ್ಯಾ ಶೆಟ್ಟಿ, ಸೇರಿದಂತೆ ಹಲವರು ಭಾಗವಹಿಸಿದ್ದರು.