Asianet Suvarna News Asianet Suvarna News

ಕಾಂಗ್ರೆಸ್‌ ಗೆದ್ದರೆ ಕುಕ್ಕರ್‌ನಲ್ಲಿ ಬಾಂಬ್‌ ಇಡುವವರು ಎದ್ದು ಕುಳಿತುಕೊಳ್ಳುತ್ತಾರೆ: ಸಿ.ಟಿ.ರವಿ

ನಗರದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ರೋಡ್‌ ಶೋ ಶನಿವಾರ ಭರ್ಜರಿ ನಡೆಯಿತು. ಇಲ್ಲಿನ ಪುರಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ಯಾತ್ರೆ ಮಾರುಕಟ್ಟೆರಸ್ತೆ, ಗಾಂಧಿ ವೃತ್ತಿ, ಜೆಪಿ ವೃತ್ತದ ಮೂಲಕ ಸಿದ್ದಪ್ಪ ವೃತ್ತಕ್ಕೆ ಆಗಮಿಸಿ ಸಮಾವೇಶಗೊಂಡಿತು. 

BJP National General Secretary CT Ravi Slams Outraged Against Congress At Haveri gvd
Author
First Published Mar 19, 2023, 2:20 AM IST

ಹಾವೇರಿ (ಮಾ.19): ನಗರದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ರೋಡ್‌ ಶೋ ಶನಿವಾರ ಭರ್ಜರಿ ನಡೆಯಿತು. ಇಲ್ಲಿನ ಪುರಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ಯಾತ್ರೆ ಮಾರುಕಟ್ಟೆರಸ್ತೆ, ಗಾಂಧಿ ವೃತ್ತಿ, ಜೆಪಿ ವೃತ್ತದ ಮೂಲಕ ಸಿದ್ದಪ್ಪ ವೃತ್ತಕ್ಕೆ ಆಗಮಿಸಿ ಸಮಾವೇಶಗೊಂಡಿತು. ಈ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿ, ಹಾವೇರಿ ಜಿಲ್ಲೆಯಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು ವಿಜಯ ಯಾತ್ರೆಯನ್ನಾಗಿ ಪರಿವರ್ತಿಸಿದ್ದೀರಿ. ಹಾವೇರಿಯಲ್ಲಿ ಮೆಡಿಕಲ್‌ ಕಾಲೇಜ್‌ ಸ್ಥಾಪನಗೆ ಕಾಂಗ್ರೆಸ್ಸಿಗರು ಅಡ್ಡಗಾಲು ಹಾಕಿದ್ದೀರಿ. ಈಗ ಮೆಡಿಕಲ್‌ ಕಾಲೇಜು ಆರಂಭವಾಗಿದೆ. ಪ್ರತ್ಯೇಕ ಹಾಲು ಒಕ್ಕೂಟ ರಚನೆ ಆಗಿದೆ. 

ಹೊಸ ವಿಶ್ವವಿದ್ಯಾಲಯ, ಎಂಜಿನಿಯರಿಂಗ್‌ ಕಾಲೇಜು ಆರಂಭವಾಗಿದೆ. ಹೀಗಾಗಿ ಕಾಂಗ್ರೆಸ್ಸಿಗರು ಯಾವ ಮುಖ ಇಟ್ಟುಕೊಂಡು ವೋಟ್‌ ಕೇಳೋಕೆ ಬರುತ್ತೀರಿ ಎಂದು ನೀವು ಪ್ರಶ್ನಿಸಬೇಕು ಎಂದರು. ಕಾಂಗ್ರೆಸ್‌ ಗೆದ್ದರೆ ದೇಶ, ರಾಜ್ಯ ಸೋತಂತೆ. ನಾವು ಗೆದ್ದರೆ ಭಾರತ ಮಾತಾ ಕೀ ಜೈ ಎನ್ನುತ್ತೇವೆ. ಕಾಂಗ್ರೆಸ್‌ ಗೆದ್ದರೆ ಕುಕ್ಕರ್‌ನಲ್ಲಿ ಬಾಂಬ್‌ ಇಡುವವರು ಎದ್ದು ಕುಳಿತುಕೊಳ್ಳುತ್ತಾರೆ. ಹೀಗಾಗಿ ನಮಗೆ ಕಾಂಗ್ರೆಸ್‌ ಬೇಡ. ನಮಗೆ ಬೇಕಾಗಿರುವುದು ದೇಶ ನಾಯಕ ನರೇಂದ್ರ ಮೋದಿ, ರೈತ ನಾಯಕ ಯಡಿಯೂರಪ್ಪ, ಕಾಮನ್‌ಮ್ಯಾನ್‌ ಬಸವರಾಜ ಬೊಮ್ಮಾಯಿ. ಹೀಗಾಗಿ ಕಮಲ ಅರಳಿಸುವ ಸಂಕಲ್ಪ ಮಾಡಿ ಮತ್ತಷ್ಟು ವೇಗವಾಗಿ ಅಭಿವೃದ್ಧಿ ಕೆಲಸ ಮಾಡಲು ಬಿಜೆಪಿಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಧೂಳಿಪಟ ಗ್ಯಾರಂಟಿ: ಸಿ.ಟಿ.ರವಿ

ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಬಿಜೆಪಿ ನವ ಭಾರತ, ನವ ಕರ್ನಾಟಕ, ನವ ಹಾವೇರಿ ನಿರ್ಮಾಣಕ್ಕಾಗಿ ಈ ವಿಜಯ ಸಂಕಲ್ಪ ಯಾತ್ರೆ ನಡೆಯುತ್ತಿದೆ. ಕೇಂದ್ರ, ರಾಜ್ಯ ಸರ್ಕಾರದ ಅಭಿವೃದ್ಧಿ ಮಾಡೆಲ್‌ ಆಧಾರವಾಗಿ ಮತಯಾಚಿಸುತ್ತಿದ್ದೇವೆ. ಹೀಗಾಗಿ ನಮ್ಮ ಶಾಸಕರು ರಿಪೋರ್ಚ್‌ ಕಾರ್ಡ್‌ ಹಾಗೂ ಪ್ರೋಗ್ರೇಸ್‌ ಕಾರ್ಡ್‌ ಹಿಡಿದು ನಿಂತಿದ್ದಾರೆ. ಕಾಂಗ್ರೆಸ್ಸಿಗರ ರೀತಿ ನಾವು ಗ್ಯಾರಂಟಿ ಕಾರ್ಡ್‌ ಹಿಡಿದು ನಿಂತಿಲ್ಲ, ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಡ್‌ ಹಿಡಿದು ಮತ ಕೇಳುತ್ತಿದ್ದೇವೆ. ನಮಗೆ ಯಾವುದೇ ಗ್ಯಾರಂಟಿ, ವಾರಂಟಿ ಕಾರ್ಡ್‌ ಬೇಕಿಲ್ಲ. ಯಾವ ವಸ್ತುವಿನ ಮೇಲೆ ವಿಶ್ವಾಸ ಇರುವುದಿಲ್ಲವೋ ಅಂತಹವರು ಗ್ಯಾರಂಟಿ, ವಾರಂಟಿ ಕಾರ್ಡ್‌ ಕೊಡ್ತಾರೆ ಎಂದು ಟೀಕಿಸಿದರು. ಶಾಸಕ ಓಲೇಕಾರ ಮಾತನಾಡಿ, ಜಿಲ್ಲೆಯಲ್ಲಿ ನಡೆದ ಸಂಕಲ್ಪ ಯಾತ್ರೆ ಯಶಸ್ವಿಯಾಗಿದೆ. ನಮ್ಮ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. 

ಕಾಂಗ್ರೆಸ್‌ನಿಂದ ಸುಳ್ಳು ಗ್ಯಾರಂಟಿ ಕಾರ್ಡ್‌ ವಿತರಣೆ: ನಳಿನ್‌ ಕುಮಾರ್‌ ಕಟೀಲ್‌

ಡಬಲ್‌ ಎಂಜಿನ್‌ ಸರ್ಕಾರದಿಂದ ದೇಶ ಅಭಿವೃದ್ಧಿ ಪಥದಲ್ಲಿ ಸಾಗಿದೆ. ಬಿಜೆಪಿ ಅಂದ್ರೆ ಗ್ಯಾರಂಟಿ ಕಾರ್ಡ್‌ ಇದ್ದಂಗೆ. ಕಾಂಗ್ರೆಸ್ಸಿನ ವಾರಂಟಿ ಕಾರ್ಡ್‌ನ ವಾರಂಟಿ ಮುಗಿದಿದೆ. ಹಿಂದೆ ಕಾಂಗ್ರೆಸ್ಸಿಗರು ಕ್ಷೇತ್ರದ ಜನತೆ ಮನೆ ಕೊಡ್ತಿವಿ, ಜಾಗೆ ಕೊಡ್ತಿವಿ ಎಂದು ವಾರೆಂಟಿ ಕಾರ್ಡ್‌ ಕೊಟ್ಟಿದ್ರು. ಆದರೆ ಯಾರಿಗೂ ಜಾಗೆ, ಮನೆ ಕೊಟ್ಟಿಲ್ಲ. ಈಗ ಮತ್ತೆ ಸುಳ್ಳು ಹೇಳುತ್ತಾ ಹೊರಟ್ಟಿದ್ದಾರೆ. ಕಾಂಗ್ರೆಸ್ಸಿಗರು ಸುಳ್ಳಿನ ಸರದಾರರು, ಅವರ ಮಾತಿಗೆ ಕಿವಿಕೊಡಬೇಡಿ. ಮುಂದಿನ ದಿನಗಳಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದು ಜನರ ಸೇವೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು. ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಚಿವ ಬಿ.ಸಿ. ಪಾಟೀಲ, ಲಿಡ್ಕರ್‌ ಉಪಾಧ್ಯಕ್ಷ ಡಿ.ಎಸ್‌. ಮಾಳಗಿ, ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಗಿರೀಶ ತುಪ್ಪದ, ಬಸವರಾಜ ಕಳಸೂರ, ಪಾಲಾಕ್ಷಗೌಡ ಪಾಟೀಲ, ಜಗದೀಶ ಬಸೇಗಣ್ಣಿ, ಪರಮೇಶ್ವರಪ್ಪ ಮೇಗಳಮನಿ, ವೆಂಕಟೇಶ ನಾರಾಯಣಿ ಇದ್ದರು.

Follow Us:
Download App:
  • android
  • ios