ಮಾಂಸ ತಿಂದಿದ್ದು ನಿಜ, ಆದರೆ ದೇಗುಲದೊಳಕ್ಕೆ ಹೋಗಿಲ್ಲ: ಸಿ.ಟಿ.ರವಿ
‘ನಾನು ಅಂದು ನಾನ್‌ವೆಜ್ ಸೇವಿಸಿದ್ದು ನಿಜ. ಆದರೆ, ಭಟ್ಕಳದಲ್ಲಿ ಕರಿಬಂಟ ಹನುಮಂತ ದೇವಸ್ಥಾನ ಹಾಗೂ ನಾಗಬನದ ಒಳಗೆ ಹೋಗಲಿಲ್ಲ. ಬದಲಾಗಿ ಹೊರಗೆ ನಿಂತು ಕೈ ಮುಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಮಜಾಯಿಷಿ ನೀಡಿದ್ದಾರೆ.
ಬೆಂಗಳೂರು (ಫೆ.24): ‘ನಾನು ಅಂದು ನಾನ್‌ವೆಜ್ ಸೇವಿಸಿದ್ದು ನಿಜ. ಆದರೆ, ಭಟ್ಕಳದಲ್ಲಿ ಕರಿಬಂಟ ಹನುಮಂತ ದೇವಸ್ಥಾನ ಹಾಗೂ ನಾಗಬನದ ಒಳಗೆ ಹೋಗಲಿಲ್ಲ. ಬದಲಾಗಿ ಹೊರಗೆ ನಿಂತು ಕೈ ಮುಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಮಜಾಯಿಷಿ ನೀಡಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ನಾನು ನಾನ್‌ವೆಜ್ ಊಟ ಮಾಡಿದ್ದೆ. ಕರಿಬಂಟ ಹನುಮಂತ ದೇವಸ್ಥಾನದ ಬೀಗ ಹಾಕಿದ್ದರಿಂದ ರಸ್ತೆಯಲ್ಲಿ ನಿಂತು ಕೈಮುಗಿದೆ. ಸುಳ್ಳು ಹೇಳುವ ಜಾಯಮಾನ ನನ್ನದಲ್ಲ. ಕಾಂಗ್ರೆಸ್ ಪಕ್ಷದವರ ಮನೆ ದೇವರೇ ಸುಳ್ಳು. ಕಾಂಗ್ರೆಸ್ಸಿಗರು ನಾನು ಮಾಂಸ ತಿಂದಿದ್ದೇನೆ.
ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದೆ. ಏನಿವಾಗ ಎಂಬ ಧಾಷ್ಟ್ಯ ಪ್ರದರ್ಶಿಸಿದ್ದರು. ನಾನು ವಾಸ್ತವಿಕ ಸತ್ಯ ಹೇಳುತ್ತಿದ್ದೇನೆ ಎಂದರು. ನಮ್ಮಲ್ಲಿ ವೆಜಿಟೇರಿಯನ್ ಹಾಗೂ ನಾನ್‌ವೆಜಿಟೇರಿಯನ್ ದೇವರುಗಳಿವೆ. ಉದಾಹರಣೆಗೆ ಧರ್ಮಸ್ಥಳದ ಮಂಜುನಾಥ, ನಾಗಬನ ಇಲ್ಲಿ ವ್ರತ ಪಾಲಿಸಬೇಕು. ನಾನು ನಾಗಬನದ ಒಳಗೆ ಹೋಗಿಲ್ಲ. ಇನ್ನು ಮಾರಪ್ಪ, ಭೂತಪ್ಪ ನಾನ್‌ವೆಜ್ ದೇವರುಗಳು. ಇವಕ್ಕೆ ಕುರಿ, ಕೋಳಿ ನೈವೇದ್ಯ ನೀಡಲಾಗುತ್ತದೆ. ಇದು ಕಾಂಗ್ರೆಸ್‌ಗೆ ಅರ್ಥವಾಗದಿರುವುದು ದುರದೃಷ್ಟಕರ ಎಂದರು.
ರೋಹಿಣಿ ವರ್ಸಸ್ ರೂಪಾಗೆ ಕೋರ್ಟ್ ಬ್ರೇಕ್: ಆಕ್ಷೇಪಾರ್ಹ, ಮಾನಹಾನಿ ಹೇಳಿಕೆ ನೀಡದಂತೆ ಇಬ್ಬರಿಗೂ ತಾಕೀತು
ನಾನು ಕರಿಬಂಟ ಹನುಮಂತ ದೇವಸ್ಥಾನಕ್ಕೆ ಹೋಗುವ ಉದ್ದೇಶವಿರಲಿಲ್ಲ. 800 ವರ್ಷದ ಇತಿಹಾಸವಿರುವ ನಾಗಬನಕ್ಕೆ ಭಟ್ಕಳ ಮುಸ್ಲಿಮರು ದೇವಸ್ಥಾನ ಕಟ್ಟಲು ಅವಕಾಶ ನೀಡಲಿಲ್ಲ. ಈಗ ನಾವು ಕಟ್ಟಿದ್ದೇವೆ ಎಂದು ಅದನ್ನು ತೋರಿಸಲು ಸ್ಥಳೀಯರು ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರು. ನಾನು ದೇವಸ್ಥಾನ ಪ್ರವೇಶಿಸಿ ಪೂಜೆ ಮಾಡಿಸಿಲ್ಲ. ವಿವಾದ ಮಾಡುವವರು ಮಾಡಲಿ. ವಿಡಿಯೋ ಸಾಕ್ಷಿಯಿದೆ. ನಾನು ದೇವಸ್ಥಾನ ಪ್ರವೇಶಿಸಿಲ್ಲ ಎಂದು ಎದೆ ಬಗೆದು ತೋರಿಸಲು ನಾನು ಹನುಮಂತನಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್, ಜೆಡಿಎಸ್‌ನಲ್ಲಿ ಕುಟುಂಬವೇ ಪ್ರಧಾನ: ಕಾಂಗ್ರೆಸ್, ಜೆಡಿಎಸ್ ಪಕ್ಷದವರು ರಾಜಕಾರಣವನ್ನು ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬದವರಿಗೋಸ್ಕರ ಎಂದುಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದರು. ನಗರದ ಮೈಷುಗರ್ ಕಾರ್ಖಾನೆ ಮೈದಾನದಲ್ಲಿ ನಡೆದ ಬಿಜೆಪಿ ರಾಜ್ಯ ಯುವ ಮೋರ್ಚಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ಮಂಡ್ಯ ಜಿಲ್ಲೆಯ ಜನರು ಕುಟುಂಬ ರಾಜಕಾರಣವನ್ನು ವಿರೋಧಿಸಬೇಕು. ಗೌಡಿಕೆಯನ್ನ ಅವರಿಗೆ ಗುತ್ತಿಗೆ ಕೊಟ್ಟು ಬಿಟ್ಟಿದ್ದೇವಾ ಎಂದು ದೇವೇಗೌಡರ ಕುಟುಂಬವನ್ನು ಗುರಿಯಾಗಿಸಿಕೊಂಡು ಪ್ರಶ್ನಿಸಿದರು.
ಕುಟುಂಬಕ್ಕಾಗಿ ರಾಜಕಾರಣ ಮಾಡುವ ಗೌಡ ನಾನಲ್ಲ. ಎಲ್ಲ ವರ್ಗ, ಜನರಿಗಾಗಿ ರಾಜಕಾರಣ ಮಾಡುವ ಗೌಡ ನಾನು. ಮಗ, ಮೊಮ್ಮಗನಿಗಾಗಿ ಎಂದೂ ನಾವು ಕಣ್ಣೀರು ಹಾಕಿಲ್ಲ ಎಂದು ಲೇವಡಿ ಮಾಡಿದರು. ಕೆಲವರು ಕಣ್ಣೀರು ಹಾಕುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಅದೇನು ಗ್ಲಿಸರಿನ್ ಹಾಕಿಕೊಂಡು ಅಳುತ್ತಾರೋ ಏನೋ ಗೊತ್ತಿಲ್ಲ. ಆದರೆ, ಒಂದಂತೂ ನಿಜ. ಅವರು ಮಂಡ್ಯ ಜನಕ್ಕಾಗಿ ಎಂದೂ ಕಣ್ಣೀರು ಹಾಕಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿಕೊಂಡು ಟೀಕಿಸಿದ ಸಿ.ಟಿ.ರವಿ, ಎಲ್ಲಿದ್ದಿಯಪ್ಪೋ..
Hassan: ಜೆಡಿಎಸ್ ನಾಯಕರನ್ನು ಡಕೋಟಗೆ ಹೋಲಿಸಿದ ಸಿ.ಟಿ.ರವಿ
ಅಂತಾ ಕರೆದಿದ್ದು ಮಂಡ್ಯದವರನ್ನಲ್ಲ, ಅವರ (ಎಚ್.ಡಿ.ಕುಮಾರಸ್ವಾಮಿ) ಮಗನನ್ನು. ಅವರನ್ನು ಎಲ್ಲಿಗೆ ಕಳಿಸಬೇಕೋ ಅಲ್ಲಿಗೆ ಕಳಿಸಿದ್ದೀರಿ. ಮಗನನ್ನು ಗೆಲ್ಲಿಸುವುದಕ್ಕಾಗಿ ನಾಲ್ವರು ಸುಮಲತಾರನ್ನ ಕಣಕ್ಕಿಳಿಸಿದ್ದರು. ಆದರೂ, ಮಂಡ್ಯ ಜನ ನಮ್ಮ ಅಂಬರೀಶಣ್ಣನ ಸುಮಲತಾ ಯಾರು ಎನ್ನುವುದನ್ನು ಗುರುತಿಸಿ ಗೆಲ್ಲಿಸಿದರು. ಕೆಲವರು ಮಂಡ್ಯ ಜನರನ್ನು ದಡ್ಡರು ಎಂದುಕೊಂಡಿದ್ದಾರೆ. ಬುದ್ಧಿವಂತಿಕೆಯಲ್ಲಿ ದಡ್ಡರಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಎಂದರು.