Hassan: ಜೆಡಿಎಸ್ ನಾಯಕರನ್ನು ಡಕೋಟಗೆ ಹೋಲಿಸಿದ ಸಿ.ಟಿ.ರವಿ
ಅಭಿವೃದ್ಧಿ ವಿಷಯದಲ್ಲಿ ನಾವು ಜಾಗ್ವಾರ್ ಥರ ಕೆಲಸ ಮಾಡಿದ್ದೇವೆ. ಡಕೋಟ ಥರ ಅಲ್ಲ ಎನ್ನುವ ಮೂಲಕ ಜೆಡಿಎಸ್ ನಾಯಕರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಜರಿದರು.
ಹಾಸನ (ಫೆ.22): ಅಭಿವೃದ್ಧಿ ವಿಷಯದಲ್ಲಿ ನಾವು ಜಾಗ್ವಾರ್ ಥರ ಕೆಲಸ ಮಾಡಿದ್ದೇವೆ. ಡಕೋಟ ಥರ ಅಲ್ಲ ಎನ್ನುವ ಮೂಲಕ ಜೆಡಿಎಸ್ ನಾಯಕರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಜರಿದರು. ಒಂದು ಪಕ್ಷಕ್ಕೆ ನೀತಿ, ಸಿದ್ಧಾಂತ ಇರಬೇಕು. ದೇಶ ಮೊದಲು ಎನ್ನುವುದು ನಮ್ಮ ತತ್ವ, ಕುಟುಂಬ, ಅಧಿಕಾರ ಮೊದಲು ಎಂಬುದಲ್ಲ. ಎಲ್ಲರ ಅಭಿವೃದ್ಧಿ ಎಂದರೆ ತಾತ, ಮುತ್ತಾತರ ಅಭಿವೃದ್ಧಿಯಲ್ಲ.
ಬಡವ, ಶೋಷಿತರ ಅಭಿವೃದ್ಧಿ ನಮ್ಮ ನೀತಿ. ಕಳೆದ ಬಾರಿ ಶಾಸಕನಾಗಿ ಪ್ರೀತಂರನ್ನು ಆಯ್ಕೆ ಮಾಡಿದ್ದೀರಿ. ಈ ಬಾರಿ ಸಚಿವರಾಗಲು ಅವರನ್ನು ಆಯ್ಕೆ ಮಾಡಬೇಕು ಎಂದರು. ಕೆಲಸ ಮಾಡೋದು ಹೇಗೆ, ರಾಜಕಾರಣ ಮಾಡೋದು ಹೇಗೆ ಎನ್ನುವುದನ್ನು ಶಾಸಕ ಪ್ರೀತಂಗೌಡ ತೋರಿಸಿಕೊಟ್ಟಿದ್ದಾನೆ. ಕಾಂಗ್ರೆಸ್, ಸಮಾಜವಾದಿ ಪಕ್ಷ, ಆರ್ ಜೆಡಿ,ಎಸ್, ಸಿಪಿಎಂ ನಂತೆ ಕುಟುಂಬವೇ ನೇತಾರ ಆಗಿರುವ ಪಕ್ಷಗಳಂತೆ ರಾಜ್ಯದಲ್ಲಿಯೂ ಒಂದು ಪಕ್ಷವಿದೆ ಎಂದು ಜೆಡಿಎಸ್ ವಿರುದ್ಧ ಹರಿಹಾಯ್ದರು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಅದು ನಮ್ಮ ನೀತಿ.
ಕಟೀಲ್ ರೀತಿ ಜೆ.ಪಿ.ನಡ್ಡಾ ಅವರಿಗೂ ರಾಜಕೀಯ ಜ್ಞಾನ ಇಲ್ಲ: ಸಿದ್ದರಾಮಯ್ಯ
ಎಲ್ಲರೊಂದಿಗೆ, ಎಲ್ಲರ ಅಭಿವೃದ್ಧಿ ಅದು ನಮ್ಮ ನೀತಿ. ಮುತ್ತಜ್ಜನಿಂದ ಮರಿಮಕ್ಕಳವರೆಗೆ ಅಲ್ಲ ಎಂದು ದೇವೇಗೌಡರ ಕುಟುಂಬ ವಿರುದ್ಧ ಆರೋಪಿಸಿದರು. ಅಭಿವೃದ್ಧಿಗೆ ಆದ್ಯತೆ ನಮ್ಮ ನೀತಿ, ಹಿಂದುತ್ವಕ್ಕೆ ಬದ್ದತೆ ನಮ್ಮ ನೀತಿ, ದೇಶ ಮೊದಲು ಎನ್ನುವುದು ನಮ್ಮ ನೀತಿ. ನಮ್ಮ ನೇತೃತ್ವ ವಿಶ್ವದ ಅತ್ಯಂತ ಜನಪ್ರಿಯ ನೇತಾರ ನರೇಂದ್ರಮೋದಿ, ಯಡಿಯೂರಪ್ಪ ಅವರು, ಬೊಮ್ಮಯಿ ಅವರು ನಮ್ಮ ನೇತಾರರು. ಹಾಸನದ ವಿಷಯಕ್ಕೆ ಬಂದರೆ ಪ್ರೀತಂಗೌಡ ನಮ್ಮ ನೇತಾರ ಎಂದು ಪ್ರೀತಂ ಗೌಡರನ್ನು ಹೊಗಳಿದರು.
ಡಿಎನ್‌ಎಯಿಂದಲ್ಲ, ಜನರಿಂದ ಲೀಡರ್ ಹುಟ್ಟುತ್ತಾರೆ: ಇತರ ಪಕ್ಷಗಳಲ್ಲಿ ಕುಟುಂಬವೇ ಮೊದಲು ಎಂಬ ನೀತಿ ಇದ್ದರೆ, ಬಿಜೆಪಿಯಲ್ಲಿ ಮಾತ್ರ ದೇಶವೇ ಮೊದಲು ಎಂಬುದು ನೀತಿ. ಡಿಎನ್‌ಎಯಿಂದ ಲೀಡರ್ ಹುಟ್ಟುವುದಿಲ್ಲ, ಲೀಡರ್ ಜನರ ಮಧ್ಯದಿಂದ ಹುಟ್ಟುತ್ತಾರೆ ಎಂದು ರಾಷ್ಟ್ರೀಯ ಬಿಜೆಪಿ ಕಾರ್ಯದರ್ಶಿ ಸಿ.ಟಿ.ರವಿ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಚಾಟಿ ಬೀಸಿದ್ದಾರೆ. 1982ರಲ್ಲಿ ಪಕ್ಷದ ಬೂತ್ ಅಧ್ಯಕ್ಷರಾಗಿದ್ದ ಅಮಿತ್ ಶಾ ಇಂದು ದೇಶದ ಗೃಸಹಚಿವರಾಗಿದ್ದಾರೆ. 88ರಲ್ಲಿ ಬೂತ್ ಅಧ್ಯಕ್ಷನಾಗಿದ್ದ ನಾನೀಗ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದೇನೆ. ಬಿಜೆಪಿಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತರಿಗೂ ಅವಕಾಶ ಇದೆ ಎಂದರು. ಬಿಜೆಪಿಗೆ ರಾಮ ಮತ್ತು ಎಲ್ಲ ದೇವರುಗಳ, ಕರಾವಳಿಯ ಪಂಜುರ್ಲಿ ಮತ್ತು ಇತರ ದೈವಗಳ ಅನುಗ್ರಹ ಇದೆ. ಆದ್ದರಿಂದ ಬಿಜೆಪಿ ಕಾರ್ಯಕರ್ತರು ಪ್ರತಿಷ್ಠೆ ಮತ್ತು ಜಾತಿಯ ಮೋಹಕ್ಕೊಳಗಾಗದೇ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್, ಜೆಡಿಎಸ್‌ಗೆ ಭವಿಷ್ಯವಿಲ್ಲ: ಸಚಿವ ಅಶ್ವತ್ಥನಾರಾಯಣ
ಸ್ಮಶಾನಕ್ಕೆ ಕಳುಹಿಸಿ: ಮಾಜಿ ಮುಖ್ಯಮಂತ್ರಿಯೊಬ್ಬರು ತಾನು ಹಿಂದು, ಆದರೆ ಹಿಂದುತ್ವವಾದಿಯಲ್ಲ ಎಂದು ಹೇಳಿದ್ದಾರೆ. ಆದರೆ ಹಿಂದು ಎಂಬ ದೇಹದಲ್ಲಿ ಹಿಂದುತ್ವ ಎಂಬ ಜೀವ ಇರುತ್ತದೆ, ಅದಿಲ್ಲದಿದ್ದರೇ ಅದು ಹೆಣಕ್ಕೆ ಸಮ. ಅಂತಹ ಹೆಣವನ್ನು ತುಂಬಾ ದಿನ ಇಟ್ಟುಕೊಳ್ಳುವುದಕ್ಕಾಗುವುದಿಲ್ಲ, ಆದ್ದರಿಂದ ಮುಂದಿನ ಚುನಾವಣೆಯಲ್ಲಿ ರಾಜಕೀಯದ ಸ್ಮಶಾನಕ್ಕೆ ಕಳುಹಿಸಬೇಕು ಎಂದು ಸಿದ್ದರಾಮಯ್ಯ ಅವರ ಹೆಸರು ಹೇಳದೇ ಟಾಂಗ್ ಕೊಟ್ಟರು. ಕಾಂಗ್ರೆಸ್‌ಗೆ ನಾವೇ ಚೆಂಡು ಹೂವು ಹಾಕೋಣ ಎಂದುಕೊಂಡಿದ್ದೆವು, ಆದರೆ ಅವರೇ ಕಿವಿ ಮೇಲೆ ಹೂವಿಟ್ಟುಕೊಂಡು ಬಂದು, ನಮ್ಮ ಅವಕಾಶ ತಪ್ಪಿಸಿದ್ದಾರೆ. ಇನ್ನು ಊದುಬತ್ತಿ ಹಚ್ಚಿ, ಧೂಪ ಹಾಕಿ ಸ್ಮಶಾನಕ್ಕೆ ಕಳಿಸೋಣ ಎಂದವರು ವ್ಯಂಗ್ಯವಾಡಿದರು.