ಭ್ರಷ್ಟಾಚಾರ ಆರಂಭವಾಗಿದ್ದೇ ಜೆಡಿಎಸ್-ಬಿಜೆಪಿಯಿಂದ: ಸಚಿವ ಈಶ್ವರ ಖಂಡ್ರೆ

ಮುಡಾದಲ್ಲಿ ಯಾವುದೇ ಹಗರಣ ನಡೆಯದೇ ಇದ್ದರೂ ಸಿದ್ದರಾಮಯ್ಯ ಹೆಸರಿಗೆ ಕಳಂಕ ತರಲು ಪಾದಯಾತ್ರೆ ಮಾಡಲಾಗುತ್ತದೆ. ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆರಂಭವಾಗಿದ್ದೇ ಬಿಜೆಪಿ-ಜೆಡಿಎಸ್ ಅವಧಿಯಲ್ಲಿ ಎಂದು ಸಚಿವ ಈಶ್ವರ ಖಂಡ್ರೆ ವಾಗ್ದಾಳಿ ನಡೆಸಿದರು. 

Corruption started from JDS and BJP Says Minister Eshwar Khandre gvd

ಚನ್ನಪಟ್ಟಣ (ಆ.05): ಮುಡಾದಲ್ಲಿ ಯಾವುದೇ ಹಗರಣ ನಡೆಯದೇ ಇದ್ದರೂ ಸಿದ್ದರಾಮಯ್ಯ ಹೆಸರಿಗೆ ಕಳಂಕ ತರಲು ಪಾದಯಾತ್ರೆ ಮಾಡಲಾಗುತ್ತದೆ. ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆರಂಭವಾಗಿದ್ದೇ ಬಿಜೆಪಿ-ಜೆಡಿಎಸ್ ಅವಧಿಯಲ್ಲಿ ಎಂದು ಸಚಿವ ಈಶ್ವರ ಖಂಡ್ರೆ ವಾಗ್ದಾಳಿ ನಡೆಸಿದರು. ಈ ಹಿಂದೆ ಇವರ ಅವಧಿಯಲ್ಲಿ ಬಳ್ಳಾರಿಯಲ್ಲಿ ನಡೆದಿದ್ದ ಹಗರಣ ದೇಶವ್ಯಾಪಿ ಕುಖ್ಯಾತಿ ಗಳಿಸಿತ್ತು. ರಾಜ್ಯದಲಿ ಆಪರೇಶನ್ ಕಮಲ ಮಾಡಿ ಶಾಸಕರ ಖರೀದಿ ಮಾಡಿ ಸರ್ಕಾರ ರಚಿಸಿ ಭ್ರಷ್ಟಾಚಾರ ಮಾಡಿದರು. ಇವರ ಸರ್ಕಾರ ಇದ್ದಾಗ ಇಡಿ, ಸಿಬಿಐ ಯಾವುದು ಬರಲಿಲ್ಲ. 

ಕೋವಿಡ್ ಸಮಯದಲ್ಲಿ ಸತ್ತ ಹೆಣಗಳ ಮೇಲೆ ಲೂಟಿ ಹೊಡೆದರು. ಅಂದ್ರೆ ಅದು ಬಿಜೆಪಿ. ಭೋವಿ, ಅಂಬೇಡ್ಕರ್ ಸೇರಿದಂತೆ ಭೂ ಮಾಫಿಯಾ ಮಾಡಿದರು ಎಂದು ಆರೋಪಿಸಿದರು. ತಮ್ಮ ಸರ್ಕಾರವನ್ನ ಬೀಳಿಸಿದ ಬಿಜೆಪಿಯನ್ನು ಕೋಮುವಾದಿಗಳು ಅಂದಿದ್ದ ಜೆಡಿಎಸ್‌ನವರು ಈಗ ಅವಕಾಶವಾದಿಗಳಾಗಿ ಬಿಜೆಪಿ ಜತೆ ಕೈ ಜೋಡಿಸಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿದ ಎಲ್ಲರ ಮೇಲೂ ತನಿಖೆ ಮಾಡಿಸುತ್ತೇವೆ. ತನಿಖೆ ಬಳಿಕ ಇವರ ನಿಜವಾದ ಬಣ್ಣ ಬಯಲಾಗುತ್ತಿದೆ. ಚನ್ನಪಟ್ಟಣ ಬೈ ಎಲೆಕ್ಷನ್‌ನಲ್ಲಿ ಬಿಜೆಪಿ - ಜೆಡಿಎಸ್ ಬುಡಸಮೇತ ಕಿತ್ತಾಕಿ, ಬಡವರ ಪಕ್ಷ ಕಾಂಗ್ರೆಸ್ ಗೆಲ್ಲಿಸಿ ಎಂದು ಮನವಿ ಮಾಡಿದರು.

ಕಾಂಗ್ರೆಸ್‌ನ ಎಂಪಿ ಗೆದ್ದರೂ ಹೊಳೆನರಸೀಪುರದತ್ತ 'ಕೈ' ಸರ್ಕಾರದ ಗಮನವಿಲ್ಲ: ಸಿಎಂ ವಿರುದ್ಧ ಸಾರ್ವಜನಿಕರ ಆಕ್ರೋಶ

ಸಕ್ಕರೆ ಜಪ್ತಿ ಮಾಡಿ ಹರಾಜು ಹಾಕಿ: ಕಬ್ಬಿನ ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳಲ್ಲಿನ ಸಕ್ಕರೆ ದಾಸ್ತಾನನ್ನು ಜಪ್ತಿ ಮಾಡಿಕೊಂಡು ಹರಾಜು ಮಾಡಿ ರೈತರಿಗೆ ಕೂಡಲೇ ಕಬ್ಬಿನ ಬಾಕಿ ಹಣ ಪಾವತಿಸಲು ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೆಕೆಆರ್‌ಡಿಬಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ 5 ಸಕ್ಕರೆ ಕಾರ್ಖಾನೆಗಳಲ್ಲಿ 3 ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಬ್ಬಿನ ಬಾಕಿ ಹಣ ಪಾವತಿಸಿದ್ದು, ಬಾಕಿ ಉಳಿಸಿಕೊಂಡಿರುವ ಬೀದರ್‌ ಕಿಸಾನ್‌ ಸಕ್ಕರೆ ಕಾರ್ಖಾನೆ ಮೋಗದಾಳ 3.4 ಕೋಟಿ ರು. ಹಾಗೂ ಭಾಲ್ಕೇಶ್ವರ ಸಕ್ಕರೆ ಕಾರ್ಖಾನೆ ಭಾಲ್ಕಿ 3.18 ಕೋಟಿ ರು.ಗಳನ್ನು ರೈತರಿಗೆ ಪಾವತಿಸಬೇಕಾಗಿದ್ದು ಕೂಡಲೆ ಪಾವತಿಸಲು ಕ್ರಮ ವಹಿಸಿ ಎಂದರು.

ಪಾದಯಾತ್ರೆ ಬೇಡವೆಂದವರೇ ಪೋಸ್ಟರ್‌ನಲ್ಲಿ ಮುಂದಿದ್ದಾರೆ: ಸಚಿವ ಪರಮೇಶ್ವರ್ ವ್ಯಂಗ್ಯ

ಕೆಕೆಆರ್‌ಡಿಬಿ ಕಾಮಗಾರಿ ತ್ವರಿತ ಪೂರ್ಣಗೊಳಿಸಿ: ಜಿಲ್ಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು. ಲೋಕೋಪಯೋಗಿ ಇಲಾಖೆ, ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌, ಕೆಆರ್‌ಐಡಿಎಲ್‌ ವತಿಯಿಂದ ಕೆಕೆಆರ್‌ಡಿಬಿ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಬೇಗನೆ ಪೂರ್ಣಗೊಳಿಸಬೇಕು. ಮಳೆಯಿಂದ ಹಾನಿಗೊಳಗಾದ ಸೇತುವೆಗಳು, ರಸ್ತೆಗಳನ್ನು ಕೂಡಲ್‌ ದುರಸ್ತಿಗೊಳಿಸಬೇಕು. ಮಾಂಜ್ರಾ ನಂದಿಯಿಂದ ಅಕ್ಕ ಪಕ್ಕದ ಜಮೀನಿನಲ್ಲಿ ಹೆಚ್ಚುವರಿ ನೀರು ಬಂದು ಬೆಳೆ ನಾಶ ಆಗಿದೆ. ಅಂತಹ ರೈತರಿಗೆ ಪ್ರಕೃತಿ ವಿಕೋಪದಡಿ ಪರಿಹಾರ ನೀಡಬೇಕು ಮತ್ತು ಮನೆ ಕುಸಿತ ಆದವರಿಗೂ ಆದಷ್ಟು ಬೇಗನೆ ಪರಿಹಾರ ಕೊಡುವ ಕೆಲಸ ಆಗಬೇಕಾಗಿದೆ. ಕಂದಾಯ ಇಲಾಖೆ, ಕೃಷಿ ಇಲಾಖೆ ಅಧಿಕಾರಿಗಳು ಕೂಡಲೇ ಹಾನಿಯ ವರದಿ ಸಲ್ಲಿಸುವಂತೆ ಸೂಚಿಸಿದರು.

Latest Videos
Follow Us:
Download App:
  • android
  • ios