Asianet Suvarna News Asianet Suvarna News

ಕಾಂಗ್ರೆಸ್‌ನ ಎಂಪಿ ಗೆದ್ದರೂ ಹೊಳೆನರಸೀಪುರದತ್ತ 'ಕೈ' ಸರ್ಕಾರದ ಗಮನವಿಲ್ಲ: ಸಿಎಂ ವಿರುದ್ಧ ಸಾರ್ವಜನಿಕರ ಆಕ್ರೋಶ

ಕ್ಷೇತ್ರದ ಜನತೆಯನ್ನು ಆಡಳಿತ ಪಕ್ಷ ಮಲತಾಯಿ ಧೋರಣೆಯಿಂದ ಕಾಣತೊಡಗಿದ್ದು, ಮತದಾರರು ಸಂಸದರಿಗೆ ನೀಡಿದ ಹೆಚ್ಚಿನ ಅಂತರದ ಮತಗಳೇ ಸಮಸ್ಯೆ ಬಗೆಹರಿಸುವಲ್ಲಿ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ ಎಂದು ನಾಗರಿಕರು ದೂರಿದ್ದಾರೆ.

Even if the Congress MP wins the Congress government is not paying attention to holenarasipura gvd
Author
First Published Aug 5, 2024, 7:16 PM IST | Last Updated Aug 6, 2024, 9:18 AM IST

ಹೊಳೆನರಸೀಪುರ (ಆ.05): ಕ್ಷೇತ್ರದ ಜನತೆಯನ್ನು ಆಡಳಿತ ಪಕ್ಷ ಮಲತಾಯಿ ಧೋರಣೆಯಿಂದ ಕಾಣತೊಡಗಿದ್ದು, ಮತದಾರರು ಸಂಸದರಿಗೆ ನೀಡಿದ ಹೆಚ್ಚಿನ ಅಂತರದ ಮತಗಳೇ ಸಮಸ್ಯೆ ಬಗೆಹರಿಸುವಲ್ಲಿ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ ಎಂದು ನಾಗರಿಕರು ದೂರಿದ್ದಾರೆ. ಆಗಸ್ಟ್ 3ರ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಕಲೇಶಪುರದ ಶಿರಾಡಿಘಾಟ್ ವೀಕ್ಷಣೆಗೆ ತೆರಳುವ ಸಂದರ್ಭದಲ್ಲಿ ಜೆಲ್ಲೆಯ ಸಂಸದ ಹಾಗೂ ಪಟ್ಟಣದ ನಿವಾಸಿ ಶ್ರೇಯಸ್ ಎಂ.ಪಟೇಲ್ ಅವರ ಮನೆಗೆ ಭೇಟಿ ನೀಡುವರು ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸಾಗುವ ಮಾರ್ಗದ ಗುಂಡಿಗಳಿಗೆ ಜಲ್ಲಿ ಹಾಗೂ ಎಂ ಸ್ಯಾಂಡ್ ಹಾಕಿ ಮುಚ್ಚಿದ್ದರು. ಸಂಸದರ ಮನೆಯಿಂದ ತೆರಳುವಾಗ ಮಹಾತ್ಮಗಾಂಧಿ ವೃತ್ತ, ಡಾ. ಅಂಬೇಡ್ಕರ್ ವೃತ್ತ ಮಾರ್ಗವಾಗಿ ಕನಕ ಭವನದ ರಸ್ತೆ ಮೂಲಕ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಸಾಗಿ ಫ್ಲೈಓವರ್ ಮೂಲಕ ಹಾಸನಕ್ಕೆ ತೆರಳಿದರು. 

ಆದರೆ ಡಾ. ಅಂಬೇಡ್ಕರ್ ವೃತ್ತದಲ್ಲಿ ಎಡತಿರುವು ಪಡೆದು ಬಸವ ಭವನ ಮೂಲಕ ಪ್ಲೈಓವರ್ ರಸ್ತೆಗೆ ತೆರಳಿದ್ದರೆ ಪ್ರತಿನಿತ್ಯ ಸೂರಾರು ಜನರಿಗೆ ವಾಹನ ಚಾಲಕರಿಗೆ ನರಕ ದರ್ಶನ ಮಾಡಿಸುತ್ತಿರುವ ಹೆದ್ದಾರಿಯ ದೊಡ್ಡಗುಂಡಿಗಳ ವಿಶ್ವರೂಪ ದರ್ಶನ ಮುಖ್ಯಮಂತ್ರಿಗಳಿಗೂ ಆಗುತ್ತಿತ್ತು. ಅಧಿಕಾರಿಗಳು ಗುಂಡಿಗಳನ್ನು ಮುಚ್ಚುವ ಪ್ರಯತ್ನವನ್ನು ಮಾಡಲಿಲ್ಲ ಮತ್ತು ಬುದ್ಧಿವಂತರಂತೆ ಬಳಸು ರಸ್ತೆಯ ಮೂಲಕ ಮುಖ್ಯಮಂತ್ರಿಯನ್ನು ಸಾಗ ಹಾಕಿದರು.

ಪಾದಯಾತ್ರೆ ಬೇಡವೆಂದವರೇ ಪೋಸ್ಟರ್‌ನಲ್ಲಿ ಮುಂದಿದ್ದಾರೆ: ಸಚಿವ ಪರಮೇಶ್ವರ್ ವ್ಯಂಗ್ಯ

ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಅವರು ಜುಲೈ ೨೦ರ ಶನಿವಾರ ತಾಲೂಕಿನ ನಾಲ್ಕು ಸಂತ್ರಸ್ತ ವ್ಯಕ್ತಿಗಳಿಗೆ ಪರಿಹಾರದ ಚೆಕ್ ವಿತರಿಸಿ, ತೆರಳಿದ್ದರು. ಆದರೆ ತಾಲೂಕಿನಲ್ಲಿ ಶಂಕಿತ ಡೆಂಘೀ ಜ್ವರಕ್ಕೆ ೪ ಮಕ್ಕಳು ಸೇರಿದಂತೆ ಐದು ಜನರು ಬಲಿಯಾಗಿದ್ದರು, ಮೈಸೂರಿಗೆ ತೆರಳುವ ಮಾರ್ಗದ ದೊಡ್ಡಹಳ್ಳಿಯಲ್ಲಿ ಮಕ್ಕಳನ್ನು ಕಳೆದುಕೊಂಡ ೨ ಕುಟುಂಬಗಳನ್ನು ಭೇಟಿ ಮಾಡಿ ತೆರಳಿದ್ದರು, ಆದರೆ ಗುಡ್ಡೇನಹಳ್ಳಿ ಹಾಗೂ ಹಳ್ಳಿಮೈಸೂರಿನಲ್ಲಿ ಪುಟ್ಟ ಕಂದಮ್ಮಗಳು ಹಾಗೂ ಗೋಹಳ್ಳಿಯಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಮೃತಪಟ್ಟಿದ್ದರು ಆದರೆ ಸಚಿವ ರಾಜಣ್ಣ ಅವರು ಮಕ್ಕಳನ್ನು ಕಳೆದುಕೊಂಡ ಕುಟುಂಬಕ್ಕೆ ಸಾಂತ್ವನದ ಮಾತುಗಳನ್ನಾಡದೇ ತೆರಳಿದ್ದರು.

ಜುಲೈ ೨೫ರ ರಾತ್ರಿ ಪಟ್ಟಣದಲ್ಲಿ ಹೇಮಾವತಿ ನದಿಯ ನೀರಿನ ನೆರೆಯಿಂದಾಗಿ ಯಾಸಿನ್ ನಗರ, ಕುವೆಂಪು ಬಡಾವಣೆಯಲ್ಲಿ ಮೂವತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಚನ್ನರಾಯಪಟ್ಟಣಕ್ಕೆ ತೆರಳುವ ಗನ್ನಿಕಡ ಮಾರ್ಗ ಹಾಗೂ ಅರಕಲಗೂಡಿಗೆ ತೆರಳುವ ಹೆದ್ದಾರಿಯೂ ಜಲಾವೃತ್ತ ಗೊಂಡಿತ್ತು. ನೆರೆ ಹಿನ್ನೆಲೆಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಪಟ್ಟಣದ ಭೇಟಿ ನೀಡಿ, ನೆರೆ ಪೀಡಿತ ಪ್ರದೇಶ ವೀಕ್ಷಿಸುವರು ಎನ್ನಲಾಗಿತ್ತು, ಆದರೆ ಸಚಿವರು ಯಾಸಿನ್‌ನಗರದ ಮುಸ್ಲಿಂ ಬಡಾವಣೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಸಾಂತ್ವನದ ಮಾತುಗಳನ್ನಾಡಿ ತೆರಳಿದ್ದರು, ಅಂದು ಕುವೆಂಪು ಬಡಾವಣೆಯ ಜನರು ಮುಸ್ಲಿಮರ ಯಾಸಿನ್‌ ನಗರಕ್ಕೆ ತೆರಳಿದ್ದಾರೆ, ಹಿಂದುಗಳು ಇರುವ ಕುವೆಂಪು ಬಡಾವಣೆಗೆ ಬರಲಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಒಳಮೀಸಲಾತಿಯನ್ನ ಜಾರಿಗೊಳಿಸದಿದ್ದರೆ ಕಾವೇರಿಯಿಂದ-ಭೀಮಾ ನದಿಯವರೆಗೆ ಜನಾಂದೋಲನ‌: ಸಂಸದ ಕಾರಜೋಳ

ಹೇಮಾವತಿ ನದಿಯ ನೆರೆಯ ಜತೆಗೆ ರಣಮಳೆಗೆ ಮನೆಗಳನ್ನು ಗ್ರಾಮೀಣ ಜನರು ಕಳೆದುಕೊಂಡಿದ್ದಾರೆ ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದಿಗ್ಧ ಹಾಗೂ ಸಂಕಷ್ಟದ ಸನ್ನಿವೇಶದಲ್ಲಿ ನೆರೆ ಹಾವಳಿ ಉಂಟಾಗಿ ೧೦ ದಿನ ಕಳೆದರೂ ಜಿಲ್ಲಾ ಉಸ್ತುವಾರಿ ಸಚಿವರು ಸಂತ್ರಸ್ತರ ಭೇಟಿಗೆ ಆಗಮಿಸಿಲ್ಲ ಮತ್ತು ಜನರ ನೋವಿಗೆ ಸ್ಪಂದಿಸಬೇಕಿದ್ದ ಆಡಳಿತ ಪಕ್ಷದ ನಾಯಕರ ಧೋರಣೆಯೂ ಹೊಳೆನರಸೀಪುರ ಕ್ಷೇತ್ರವು ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ನಾಗರಿಕರ ಆಕ್ರೋಶಕ್ಕೆ ಪುಷ್ಠಿ ನೀಡುತ್ತದೆ.

Latest Videos
Follow Us:
Download App:
  • android
  • ios