Asianet Suvarna News Asianet Suvarna News

ಬಳ್ಳಾರಿಯಲ್ಲಿ ಕುಕ್ಕರ್ ಪಾಲಿಟಿಕ್ಸ್ ಆರಂಭ: ಪ್ರತಿ ಮನೆಗೊಂದು ಕುಕ್ಕರ್ ಉಡುಗೊರೆ

ಚುನಾವಣೆ ಹತ್ತಿರವಾಗುತ್ತಿದ್ದ ಜನರ ಮನವೊಲೈಕೆ ಮಾಡಲು ಜನಪ್ರತಿನಿಧಿಗಳು ನಾನಾ ಕಸರತ್ತು ಮಾಡ್ತಿರೋ ಬೆನ್ನಲ್ಲೆ ಬಳ್ಳಾರಿಯಲ್ಲಿ ಈಗಿನಿಂದಲೇ ಗಿಫ್ಟ್ ಪಾಲಿಟಿಕ್ಸ್ ಪ್ರಾರಂಭವಾಗಿದೆ. ಬಳ್ಳಾರಿಯಂದ್ರೇ ಗಣಿಧಣಿಗಳ ನಾಡು ಇಲ್ಲಿ ಏನೇ ಮಾಡಿದ್ರು, ಒಂದಷ್ಟು ಡಿಫರೆಂಟ್ ಅನ್ನೋದು ಇಡೀ ರಾಜ್ಯದ ಜನರಿಗೆ ಗೊತ್ತಿದೆ. 

Cooker was gifted to every household by a former Zilla Panchayat member of Ballari gvd
Author
First Published Nov 3, 2022, 9:04 PM IST

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಬಳ್ಳಾರಿ

ಬಳ್ಳಾರಿ (ನ.03): ಚುನಾವಣೆ ಹತ್ತಿರವಾಗುತ್ತಿದ್ದ ಜನರ ಮನವೊಲೈಕೆ ಮಾಡಲು ಜನಪ್ರತಿನಿಧಿಗಳು ನಾನಾ ಕಸರತ್ತು ಮಾಡ್ತಿರೋ ಬೆನ್ನಲ್ಲೆ ಬಳ್ಳಾರಿಯಲ್ಲಿ ಈಗಿನಿಂದಲೇ ಗಿಫ್ಟ್ ಪಾಲಿಟಿಕ್ಸ್ ಪ್ರಾರಂಭವಾಗಿದೆ. ಬಳ್ಳಾರಿಯಂದ್ರೇ ಗಣಿಧಣಿಗಳ ನಾಡು ಇಲ್ಲಿ ಏನೇ ಮಾಡಿದ್ರು, ಒಂದಷ್ಟು ಡಿಫರೆಂಟ್ ಅನ್ನೋದು ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಅದರಂತೆ ಇದೀಗ ಚುನಾವಣೆ ಸ್ಪರ್ಧೆ ಮಾಡಲು ಆಕಾಂಕ್ಷಿಯಾಗಿರೋ ವ್ಯಕ್ತಿಯೊಬ್ಬರು ಬಳ್ಳಾರಿ ನಗರದ ಮನೆ ಮನೆಗೆ ಕುಕ್ಕರ್ (5 ltr) ನೀಡೋ ಮೂಲಕ ಮಹಿಳಾ ಮತದಾರರ ಮನಸ್ಸು ಗೆಲ್ಲಲು ಹರಸಾಹಸ ಪಡುತ್ತಿದ್ದಾರೆ.  ಆದ್ರೇ ಇದು ಎಷ್ಟರ ಮಟ್ಟಿಗೆ ಚುನಾವಣೆಯಲ್ಲಿ ವರ್ಕೌಟ್ ಆಗುತ್ತದೆ ಅನ್ನೋದು ಮಾತ್ರ ಗೊತ್ತಿಲ್ಲ. ಆದ್ರೇ ಪ್ರಯತ್ನ ಒಂದು ನಿರಂತರವಾಗಿ ಇರಬೇಕೆಂದು ಈ ರೀತಿ ಮಾಡುತ್ತಿದ್ದಾರೆ.

ಕುಕ್ಕರ್ ನೀಡಿದವರೆಲ್ಲರೂ ಈ ಹಿಂದೆ ಗೆದ್ದಿದ್ದಾರಂತೆ: ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ನಾರಾ ಭರತ್ ರೆಡ್ಡಿಯವರೇ ಇದೀಗ ಮನೆ ಮನೆಗೆ ಕುಕ್ಕರ್ ನೀಡೋ ಮೂಲಕ ಮಹಿಳಾ ಮತದಾರರ ಮನಸ್ಸು ಗೆಲ್ಲಲು ಪ್ರಯತ್ನ ಮಾಡುತ್ತಿರೋ ಆಕಾಂಕ್ಷಿ. ಈಗಾಗಲೇ ಒಂದು ಬಾರಿ ಕಾಂಗ್ರೆಸ್‌ನಿಂದ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿರೋ ಭರತ್ ರೆಡ್ಡಿ ಇದೀಗ ಶಾಸಕರಾಗೋ ಕನಸನ್ನು ಕಾಡುತ್ತಿದ್ದಾರೆ. ಹೀಗಾಗಿ ಚುನಾವಣೆಗೆ ಇನ್ನಾರು ತಿಂಗಳು ಬಾಕಿ ಇರೋವಾಗಲೇ ಗಿಫ್ಟ್ ಗಳನ್ನು ಕೊಡೋ ಮೂಲಕ ಮತದಾರರ ಮನವೊಲಿಕೆಗೆ ಹರಸಾಹಸ ಪಡುತ್ತಿದ್ದಾರೆ. ಇನ್ನೂ ಈ ಹಿಂದೆ ಮುನಿರತ್ನ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೂಡ ಚುನಾವಣೆ ಆರಂಭದಲ್ಲಿ ಕಕ್ಕುರ್ ನೀಡೋ ಮೂಲಕ ಗೆಲುವನ್ನು ಸಾಧಿಸಿದ್ರು. ಹೀಗಾಗಿ ಅದೇ ಸೆಂಟಿಮೆಂಟ್‌ನಿಂದಲೇ ಕುಕ್ಕರ್ ಹಂಚುತ್ತಿದ್ದಾರೆ ಎನ್ನಲಾಗುತ್ತಿದೆ. 

ಬಳ್ಳಾರಿ: ಕಾಲುವೆ ಬಳಿ ಶ್ರೀರಾಮುಲು ವಾಸ್ತವ್ಯ ಮುಂದುವರಿಕೆ

ಇನ್ನೂ ಈ ಬಗ್ಗೆ ಸ್ಪಷ್ಟನೆ ನೀಡಿರೋ ಭರತ್ ಇದ್ಯಾವುದು ಚುನಾವಣೆ ತಂತ್ರಗಾರಿಕೆ ಅಲ್ಲ ಪ್ರತಿ ವರ್ಷ ನನ್ನ ಹುಟ್ಟು ಹಬ್ಬಕ್ಕೆ ಬಡವರಿಗೆ ಈ ರೀತಿಯ ಉಡುಗೊರೆ ನಿಡುತ್ತಾ ಬಂದಿದ್ದೇನೆ. ಕಳೆದ ವಾರ ನನ್ನ ಹುಟ್ಟುಹಬ್ಬದ ದಿನ ಗ್ರಹಣವಿತ್ತು. ಹೀಗಾಗಿ ಅಂದು ನೀಡಬೇಕಿದ್ದ ಗಿಫ್ಟ್ ಇವತ್ತು ನಿಡುತ್ತಿದ್ದೇನೆ. ಅಲ್ಲದೇ ಮನೆ ಮನೆಗೆ ಹೋಗೊದ್ರಿಂದ ಜನರ ಕಷ್ಟ ಸುಖ ನನಗೆ ಗೊತ್ತಾಗುತ್ತದೆ. ಅವರ ಕಷ್ಟಕ್ಕೆ ಸ್ಪಂದಿಸುವೆ ಎನ್ನುತ್ತಿದ್ದಾರೆ. ಕಾಂಗ್ರೆಸ್‌ನಿಂದ ಟಿಕೆಟ್ ಕೊಟ್ರೇ ಮಾತ್ರ ಸ್ಪರ್ಧೆ ಮಾಡುತ್ತೇನೆ. ಇಲ್ಲಾವಾದಲ್ಲಿ ಕಾಂಗ್ರೆಸ್ ಕಾರ್ಯಕರ್ತನಾಗಿಯೇ ಉಳಿಯುತ್ತೇನೆ ಎನ್ನುತ್ತಿದ್ದಾರೆ. ಆದ್ರೇ, ಭರತ್ ಬೆಂಬಲಿಗರೇ ಹೇಳೋ ಪ್ರಕಾರ ಒಂದು ವೇಳೆ ಟಿಕೆಟ್ ಕೈತಪ್ಪಿದ್ರೇ, ಪಕ್ಷೇತರರಾಗಿ ಕಣಕ್ಕಿಳಿಯೋ ಬಗ್ಗೆ ಚರ್ಚೆ ಮಾಡುತ್ತಿದ್ದಾರಂತೆ.

ಲೈಸನ್ಸ್‌ ನವೀಕರಿಸದೇ ರಿವಾಲ್ವರ್‌ ಹೊಂದಿದ್ದ ಪ್ರಕರಣದಲ್ಲಿ ಶಾಸಕ ಸೋಮಶೇಖರ್‌ ರೆಡ್ಡಿ ದೋಷಿ!

ದೇವಸ್ಥಾನಕ್ಕೆ ಪ್ರವಾಸಕ್ಕೆ ಕಳುಹಿಸಿದ್ರು: ಇನ್ನೂ ಭರತ್ ರೆಡ್ಡಿ ಕಳೆದೊಂದು ವರ್ಷದಿಂದ ಚುನಾವಣೆಗೆ ಬೇಕಾದ ಎಲ್ಲ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಯಾಕೆಂದ್ರೇ ಇದೀಗ ಕುಕ್ಕರ್ ಕೊಟ್ಟಿರೋದಷ್ಟೇ ಅಲ್ಲದೇ ಈ ಹಿಂದೆ ಜನರ ಮನವೊಲಿಸಲು ಸಾಕಷ್ಟು ಕಸರತ್ತ ಮಾಡಿದ್ದಾರೆ.  ಕಳೆದ ವರ್ಷ ಶ್ರೀಶೈಲ, ತಿರುಪತಿ, ಮುಸ್ಲಿಂರಿಗೆ ಅಜ್ಮೀರ್ ಸೇರಿದಂತೆ ಯಾವೆಲ್ಲ ಧರ್ಮದವರು ತಮ್ಮ ಇಚ್ಛಪಟ್ಟ ದೇವಸ್ಥಾನಕ್ಕೆ ಹೋಗ್ತಾರೋ ಅಲ್ಲಿಗೆ ವಾಹನ ವ್ಯವಸ್ಥೆ ಮಾಡಿ ಕರೆದುಕೊಂಡು ಹೋಗಿ ಬಂದಿದ್ದಾರೆ. ಇದೆಲ್ಲವೂ ಚುನಾವಣೆ ಪೂರ್ವ ನಿಯೋಜಿತ ಪ್ಲಾನ್ ಅನ್ನೋದು ಗುಟ್ಟಾಗಿಲ್ಲ. ಆದ್ರೇ, ಅವರು ಹೇಳೋ ಪ್ರಕಾರ ಇದೆಲ್ಲವೂ ನಮ್ಮ ಮತ್ತು ಜನರ ನಡುವೆ ಇರೋ ಭಾಂಧವ್ಯ ಗಟ್ಟಿಯಾಗಿರಲು ಎನ್ನುತ್ತಿದ್ದಾರೆ. ಇನ್ನೂ ಭರತ್ ತಂದೆ ಸೂರ್ಯನಾರಾಯಣ ರೆಡ್ಡಿ ಅವರು ಕೂಡ ಈ ಹಿಂದೆ (2004)ರಲ್ಲಿ ಕುರುಗೋಡು ಕ್ಷೇತ್ರದ ಶಾಸಕರಾಗಿದ್ರು. 2008ರಲ್ಲಿ ಮೀಸಲಾತಿ ಬದಲಾವಣೆಯಾದ ಹಿನ್ನೆಲೆ ಚುನಾವಣೆ ಕಣದಿಂದಲೇ ಹಿಂದೆ ಸರಿದಿದ್ದರು.  

Follow Us:
Download App:
  • android
  • ios