Asianet Suvarna News Asianet Suvarna News

ಕಾಂಗ್ರೆಸ್‌ ತೊರೆಯುವವರನ್ನು ತಡೆಯಲ್ಲ; ಬಿಜೆಪಿಗೆ ಸೇರಲು ನನ್ನ ಕಾರು ಬೇಕಾದ್ರೂ ಕೊಡುತ್ತೇನೆ: Kamal Nath

ಕಾಂಗ್ರೆಸ್‌ನಿಂದ ಹೋಗಲು ರೆಡಿಯಾಗಿರುವುದನ್ನು ಪಕ್ಷ ತೊರೆಯದಂತೆ ಸಮಾಧಾನ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ. ಹಾಗೂ, ಪಕ್ಷದಲ್ಲಿ ಯಾರಿಂದಲೂ ಯಾರ ಮೇಲೂ ಒತ್ತಡವಿಲ್ಲ ಎಂದು ಕಮಲ್‌ ನಾಥ್‌ ಹೇಳಿದ್ದಾರೆ. 

congress wont stop anyone from quitting i can even lend my car says kamal nath ash
Author
First Published Sep 19, 2022, 10:59 AM IST

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ (Bharat Jodo Yatra) ನಡೆಯುತ್ತಿದೆ. ಆದರೂ, ಈ ನಡುವೆಯೇ ಹಲವರು ಕಾಂಗ್ರೆಸ್‌ ಪಕ್ಷವನ್ನು ತೊರೆಯುತ್ತಿದ್ದು, ಅನೇಕರು ಬಿಜೆಪಿ ಸೇರ್ಪಡೆ ಆಗುತ್ತಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಮಧ್ಯ ಪ್ರದೇಶ ಕಾಂಗ್ರೆಸ್‌ ಮುಖ್ಯಸ್ಥ (Madhya Pradesh Congress Chief) ಕಮಲ್‌ ನಾಥ್‌, ನಮ್ಮ ಪಕ್ಷವನ್ನು ತೊರೆಯುವವರನ್ನು ಯಾರನ್ನೂ ತಡೆಯುವುದಿಲ್ಲ. ಹಾಗೂ, ಯಾರಾದರೂ ಬಿಜೆಪಿಗೆ ಸೇರಲು ಬಯಸಿದರೆ ನನ್ನ ಕಾರನ್ನು ಬೇಕಾದರೂ ಕೊಡುತ್ತೇನೆ ಎಂದು ಮಧ್ಯ ಪ್ರದೇಶ ರಾಜಧಾನಿ ಭೋಪಾಲ್‌ನಲ್ಲಿ ಕಮಲ್‌ ನಾಥ್‌ ಹೇಳಿದ್ದಾರೆ. ಗೋವಾ ರಾಜ್ಯದ 11 ಶಾಸಕರ ಪೈಕಿ 8 ಶಾಸಕರು ಬಿಜೆಪಿಗೆ ಹೋದ ಕೆಲ ದಿನಗಳ ಬಳಿಕ ಕಮಲ್‌ ನಾಥ್‌ ಈ ಹೇಳಿಕೆ ನೀಡಿದ್ದಾರೆ. ಚುನಾವಣೆಯಲ್ಲಿ ಗೆದ್ದ ಬಳಿಕ ಕಾಂಗ್ರೆಸ್‌ ತೊರೆಯುವುದಿಲ್ಲ ಎಂದು ಪ್ರಮಾಣ ಮಾಡಿದ್ದರೂ ಸಹ ಬಿಜೆಪಿಗೆ ಸೇರಿದ್ದು, ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಗೋವಾದಲ್ಲಿ ಕಾಂಗ್ರೆಸ್‌ ನಾಶವಾಗಿದೆ ಎಂದೂ ಚರ್ಚೆಯಾಗುತ್ತಿದೆ. 

ನೀವು ಏನಂದುಕೊಂಡಿದ್ದೀರಿ..? ಕಾಂಗ್ರೆಸ್‌ ನಾಶ (Destroy) ಆಗುತ್ತೆಂದೇ..? ಕೆಲವರು ಬಿಜೆಪಿಗೆ ಸೇರಬೇಕೆಂದು ನೀವು ಹೇಳುತ್ತಿದ್ದೀರಿ. ಯಾರಾದರೂ ಬಿಜೆಪಿಗೆ ಸೇರುವುದಾದರೆ ಹೋಗಲಿ. ನಾವು ಯಾರನ್ನೂ ತಡೆಯುವುದಿಲ್ಲ ಎಂದು ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾದ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರು ಬಿಜೆಪಿಗೆ ಹೋಗುವುದಾದರೆ ಹಾಗೂ ತಮ್ಮ ಕನಸು ಹಾಗೂ ಯೋಚನೆಗಳನ್ನು ಕೇಸರಿ ಪಕ್ಷದೊಂದಿಗೆ ಕಾಣುವುದಾರೆ ಹೋಗಲಿ.. ಅವರು ಹೋಗಿ ಬಿಜೆಪಿಗೆ ಸೇರಲು ನಾನು ನನ್ನ ಕಾರನ್ನು (Car) ಬೇಕಾದ್ರೂ ಕೊಡುತ್ತೇನೆ ಎಂದೂ ಕೈ ಪಕ್ಷದ ಹಿರಿಯ ನಾಯಕ ಹೇಳಿಕೊಂಡಿದ್ದಾರೆ.  

ಇದನ್ನು ಓದಿ: Digambar Kamat: ದೇವರ ಸೂಚನೆ ಬಳಿಕ ‘ಕೈ’ ಬಿಟ್ಟು ‘ಕಮಲ’ ಹಿಡಿದೆ ಎಂದ ಗೋವಾ ನಾಯಕ

ಮಾಜಿ ಸಂಸದ ಹಾಗೂ ಗಾಂಧಿ ಕುಟುಂಬದ ಬಹು ಕಾಲದ ನಂಬಿಕಸ್ಥ ನಾಯಕ ಎನಿಸಿಕೊಂಡಿರುವ ಕಮಲ್‌ನಾಥ್‌, ನಾನು ಪಕ್ಷ ತೊರೆಯದಂತೆ ಯಾರನ್ನೂ ಸಮಾಧಾನ ಪಡಿಸುವ ಬಗ್ಗೆ ನಂಬಿಕೆ ಇಲ್ಲ. ಹಾಗೂ ಪಕ್ಷದಲ್ಲಿ ಯಾರಿಂದಲೂ ಒತ್ತಡವಿಲ್ಲ ಎಂದೂ ಕಮಲ್‌ನಾಥ್ ಹೇಳಿದ್ದಾರೆ. ಕಾಂಗ್ರೆಸ್‌ನವರು ತಮ್ಮನ್ನು ತಾವು ಸಮರ್ಪಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಪಕ್ಷದಲ್ಲಿ ಯಾರಿಂದಲೂ ಅವರಿಗೆ ಒತ್ತಡವಿಲ್ಲ ಎಂದು 75 ವರ್ಷದ ಕಾಂಗ್ರೆಸ್‌ ನಾಯಕ ಹೇಳಿದ್ದಾರೆ. 

ಇತ್ತೀಚೆಗೆ ಮಧ್ಯ ಪ್ರದೇಶದ ಮಾಜಿ ಶಾಸಕ ಹಾಗೂ ಕಮಲ್‌ ನಾಥ್‌ ಸಹಚರ ಅರುಣೋದಯ್‌ ಚೌಬೇ ಕಾಂಗ್ರೆಸ್‌ ತೊರೆದಿದ್ದಾರೆ.  ಅಲ್ಲದೆ, ಹಿರಿಯ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಸಹ ಕಾಂಗ್ರೆಸ್‌ನೊಂದಿಗೆ ತಮ್ಮ 5 ದಶಕಗಳ ಸಂಬಂಧವನ್ನು ತೊರೆದು, ಆಗಸ್ಟ್‌ 26 ರಂದು ಕಾಂಗ್ರೆಸ್‌ ತೊರೆದಿದ್ದು ಹಾಗೂ ಕೈ ಪಕ್ಷ "ಸಮಗ್ರವಾಗಿ ನಾಶವಾಗಿದೆ’’ (Comprehensively Destroyed) ಎಂದು ಹೇಳಿದ್ದರು. ಹಾಗೂ, ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದ ಗುಲಾಂ ನಬಿ ಆಜಾದ್‌, ರಾಹುಲ್ ಪಕ್ಷದ ಸಂಪೂರ್ಣ ಸಮಾಲೋಚನಾ ಕಾರ್ಯವಿಧಾನವನ್ನು ಕೆಡವುತ್ತಿದ್ದಾರೆ ಎಂದು ಆರೋಪಿಸಿದ್ದರು. ಗುಲಾಂ ನಬಿ ಆಜಾದ್‌ ರಾಜೀನಾಮೆ ಬಳಿಕ ಜಮ್ಮು ಕಾಶ್ಮೀರದ ಹಲವು ನಾಯಕರು ಸಹ ಕಾಂಗ್ರೆಸ್‌ ಅನ್ನು ತೊರೆದಿದ್ದರು. 

ಇದನ್ನೂ ಓದಿ: Goa Congress MLAs join BJP: ಮೋದಿ ಕೈ ಬಲ ಪಡಿಸಲು ಬಿಜೆಪಿ ಸೇರಿದ್ದೇವೆ ಎಂದ ಕಾಂಗ್ರೆಸ್‌ ಶಾಸಕರು

Follow Us:
Download App:
  • android
  • ios