ಈ ಬಾರಿ ಕಾಂಗ್ರೆಸ್ 145ಕ್ಕೂ ಹೆಚ್ಚಿನ ಸೀಟುಗಳನ್ನು ಗೆದ್ದು ಜಯಭೇರಿ ಭಾರಿಸಲಿದೆ. ಪ್ರಚಾರಕ್ಕೆ ಹೋದೆಡೆಯಲ್ಲಿ ಜನತೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಶಾಸಕನಾಗಿದ್ದ ಅವಧಿಯುದ್ದಕ್ಕೂ ನಿರಂತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇವೆ: ಹೆಬ್ಬಾಳದ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬೈರತಿ ಸುರೇಶ್
ಬೆಂಗಳೂರು(ಮೇ.09): ಹಿಂದಿನ ಅವಧಿಯಲ್ಲಿ ಬಹುಮತದಿಂದ ಗೆಲ್ಲಿಸಿ ಜನಸೇವೆಗೆ ಅವಕಾಶ ಮಾಡಿಕೊಟ್ಟಂತೆ ಈ ಬಾರಿಯೂ ಜನತೆ ನನಗೆ ಶಕ್ತಿ ತುಂಬಿ ಜನಸೇವೆಗೆ ಅವಕಾಶ ಮಾಡಿಕೊಡಿ ಎಂದು ಹೆಬ್ಬಾಳದ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬೈರತಿ ಸುರೇಶ್ ಮನವಿ ಮಾಡಿದರು.
ಸೋಮವಾರ ಅವರು ಕ್ಷೇತ್ರದ 8ಕ್ಕೂ ಹೆಚ್ಚಿನ ವಾರ್ಡ್‌ಗಳಲ್ಲಿ ಕಾರ್ಯಕರ್ತರು, ಅಭಿಮಾನಿಗಳ ಜೊತೆಗೆ ಮನೆಮನೆ ಪ್ರಚಾರ ಕೈಗೊಂಡು ಮಾತನಾಡಿದರು. ರಾಧಾಕೃಷ್ಣ ನಗರ, ಸಂಜಯನಗರ, ಗಂಗಾನಗರ, ಹೆಬ್ಬಾಳ, ನಾಗೇನಹಳ್ಳಿ, ಗಂಗೇನಹಳ್ಳಿ, ಮುನಿರಾಯನಪಾಳ್ಯ, ಜೆ.ಸಿ.ನಗರಗಳಲ್ಲಿ ಅವರು ನಿವಾಸಿಗಳನ್ನು ಭೇಟಿಯಾಗಿ ಮತ ನೀಡುವಂತೆ ಕೋರಿಕೊಂಡರು.
70,000 ಮತಗಳ ಅಂತರದಿಂದ ಗೆಲ್ಲುವೆ: ಆರ್.ಅಶೋಕ್
ಈ ಬಾರಿ ಕಾಂಗ್ರೆಸ್ 145ಕ್ಕೂ ಹೆಚ್ಚಿನ ಸೀಟುಗಳನ್ನು ಗೆದ್ದು ಜಯಭೇರಿ ಭಾರಿಸಲಿದೆ. ಪ್ರಚಾರಕ್ಕೆ ಹೋದೆಡೆಯಲ್ಲಿ ಜನತೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಶಾಸಕನಾಗಿದ್ದ ಅವಧಿಯುದ್ದಕ್ಕೂ ನಿರಂತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇವೆ. ಕ್ಷೇತ್ರದಲ್ಲಿ 200 ಹಾಸಿಗೆ ಮಾದರಿಯ ಆಸ್ಪತ್ರೆಯನ್ನು ನಿರ್ಮಾಣ ಮಾಡಬೇಕು. ಜೊತೆಗೆ ಸ್ಪೋಟ್ಸ್‌ರ್ ಕಾಂಪ್ಲೆಕ್ಸ್‌ವೊಂದನ್ನು ನಿರ್ಮಿಸುವುದು ನನ್ನ ಕನಸಿನ ಯೋಜನೆಯಾಗಿದೆ. ವಾರ್ಡ್ ನಂ. 22ರಲ್ಲಿ ಒಂದು ಉದ್ಯಾನವನ ನಿರ್ಮಿಸಲು ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದರು.
ನಮ್ಮಲ್ಲಿನ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕೆ ಅನುಭವಿಸುತ್ತಿರುವ ತೊಂದರೆ ನಿವಾರಣೆಗೆ ನೂತನ ಪದವಿ ಪೂರ್ವ ಕಾಲೇಜು ನಿರ್ಮಾಣ, ಎಲ್ಲ ಸರ್ಕಾರಿ ಶಾಲೆಗಳ ನವೀಕರಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು. ಕ್ಷೇತ್ರದಲ್ಲಿ ಒಟ್ಟಾರೆ ಏಳು ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗೆ ಮುಂದಾಗಲಾಗಿದೆ. ಜೊತೆಗೆ ಎರಡು ಅಂಬೇಡ್ಕರ್ ಸಮುದಾಯ ಭವನಗಳು ಕೂಡ ತಲೆ ಎತ್ತಲಿವೆ ಎಂದು ತಿಳಿಸಿದರು.
ಘಟಾನುಘಟಿ ರಾಜಕೀಯ ನಾಯಕರಿಂದ ಲಾಸ್ಟ್ ಡೇ ಲಾಸ್ಟ್ ಶೋ ಅಬ್ಬರದ ಮತಬೇಟೆ..!
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ನಾವೇ ಸ್ವತಃ ಚೋಳನಾಯಕನ ಹಳ್ಳಿಯಲ್ಲಿ 1 ಕೋಟಿ ವೆಚ್ಚದಲ್ಲಿ ಕೋವಿಡ್ ಆಸ್ಪತ್ರೆ ನಿರ್ಮಾಣ ಮಾಡಿದ್ದೇವೆ. 30 ಲಕ್ಷ ವೆಚ್ಚದಲ್ಲಿ ಆಕ್ಸಿಜನ್ ಸಿಲಿಂಡರ್ ನೀಡಿದ್ದೇವೆ. 2 ಲಕ್ಷ ರೇಷನ್ ಕಿಟ್‌ಗಳ ಹಂಚಿಕೆ ಮಾಡಲಾಯಿತು. ರಾಜ್ಯದಲ್ಲೇ ಮೊದಲ ಬಾರಿಗೆ ಕ್ಷೇತ್ರದ ಪ್ರತಿಯೊಂದು ಬೀದಿಯನ್ನು ಸ್ಯಾನಿಟೈಸ್ ಮಾಡಲಾಯಿತು. ಕೋವಿಡ್‌ನಿಂದ ಮೃತಪಟ್ಟ ಕುಟುಂಬದ ವಾರಸುದಾರರಿಗೆ ಸ್ವಂತ ಹಣದಲ್ಲಿ . 20 ಸಾವಿರ ಚೆಕ್ ನೀಡಲಾಯಿತು.
ಶಸ್ತ್ರಚಿಕಿತ್ಸೆಗೆ ಸಹಾಯ, ಕಿವುಡರಿಗೆ ಹಿಯರಿಂಗ್ ಉಪಕರಣ, ಅಂಗವಿಕಲರಿಗೆ ತ್ರಿ-ಚಕ್ರ ವಾಹನಗಳು ವಿತರಣೆ ಮಾಡಲಾಗಿದೆ. ಇವರೆಲ್ಲರ ಆಶೀರ್ವಾದ ನನ್ನ ಮೇಲಿದ್ದು, ಜನತೆ ಮತ್ತೊಮ್ಮೆ ಗೆಲ್ಲಿಸುವ ವಿಶ್ವಾಸವಿದೆ ಎಂದರು.
ಪತಿ ಬೈರತಿ ಸುರೇಶ್ ಪರವಾಗಿ ಪತ್ನಿ ಪದ್ಮಾವತಿ ಸುರೇಶ್ ಅವರು ಹಾಗೂ ಪುತ್ರ ಸಂಜಯ್ ಸುರೇಶ್ ಅವರು ಹೆಬ್ಬಾಳದ ವಿವಿಧಡೆ ಪ್ರಚಾರ ನಡೆಸಿದರು.
