ದೇಶದೆಲ್ಲೆಡೆ ಬಿಜೆಪಿ ಪ್ರಾಬಲ್ಯ ಮೆರೆದಿದೆ. ಹಳೇ ಮೈಸೂರು ವಿಭಾಗದಲ್ಲಿ ಬಿಜೆಪಿ ಪ್ರಾಬಲ್ಯ ಕಡಿಮೆ ಇರುವ ಕಾರಣಕ್ಕೆ ಈ ಭಾಗವನ್ನು ಬಿಜೆಪಿ ಭದ್ರಕೋಟೆಯನ್ನಾಗಿ ನಿರ್ಮಿಸಲೆಂದೇ ನನಗೆ ಕನಕಪುರ ಕ್ಷೇತ್ರಕ್ಕೆ ಟಿಕೆಟ್‌ ನೀಡಿದರು. ನಾನು ಮರುಪ್ರಶ್ನೆ ಹಾಕದೆ ಒಪ್ಪಿಕೊಂಡೆ. ಪಕ್ಷದ ಶಿಸ್ತಿನ ಸಿಪಾಯಿ ಆಗಿರುವುದರಿಂದ ಪಕ್ಷ ಹೇಳಿದ್ದನ್ನು ಚಾಚು ತಪ್ಪದೇ ಪಾಲಿಸುವುದಾಗಿ ಹೇಳಿದ ಆರ್‌.ಅಶೋಕ್‌. 

ಬೆಂಗಳೂರು(ಮೇ.09):  ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ 70 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದು ಖಚಿತ ಎಂದು ಕಂದಾಯ ಸಚಿವರೂ ಆಗಿರುವ ಬಿಜೆಪಿ ಅಭ್ಯರ್ಥಿ ಆರ್‌.ಅಶೋಕ್‌ ಹೇಳಿದ್ದಾರೆ. ಸೋಮವಾರ ಕ್ಷೇತ್ರದ ಹೊಸಕೆರೆಹಳ್ಳಿ ವಾರ್ಡಿನಲ್ಲಿ ಭರ್ಜರಿ ಪ್ರಚಾರ ನಡೆಸಿ ಬಳಿಕ ಮಾತನಾಡಿದ ಅವರು, ಪದ್ಮನಾಭನಗರದಲ್ಲಿ ಉತ್ತಮ ರಸ್ತೆಗಳು, ಹೈಟೆಕ್‌ ಶಾಲೆಗಳು ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಈ ಬಾರಿ ಕಳೆದ ಬಾರಿಗಿಂತ ಹೆಚ್ಚು ಮತಗಳನ್ನು ಗಳಿಸುವ ವಿಶ್ವಾಸ ಇದೆ. ಅದರಲ್ಲೂ 70 ಸಾವಿರ ಮತಗಳ ಅಂತರದಿಂದ ಜಯ ಗಳಿಸುವ ದೃಢನಂಬಿಕೆ ಇದೆ ಎಂದರು.

ದೇಶದೆಲ್ಲೆಡೆ ಬಿಜೆಪಿ ಪ್ರಾಬಲ್ಯ ಮೆರೆದಿದೆ. ಹಳೇ ಮೈಸೂರು ವಿಭಾಗದಲ್ಲಿ ಬಿಜೆಪಿ ಪ್ರಾಬಲ್ಯ ಕಡಿಮೆ ಇರುವ ಕಾರಣಕ್ಕೆ ಈ ಭಾಗವನ್ನು ಬಿಜೆಪಿ ಭದ್ರಕೋಟೆಯನ್ನಾಗಿ ನಿರ್ಮಿಸಲೆಂದೇ ನನಗೆ ಕನಕಪುರ ಕ್ಷೇತ್ರಕ್ಕೆ ಟಿಕೆಟ್‌ ನೀಡಿದರು. ನಾನು ಮರುಪ್ರಶ್ನೆ ಹಾಕದೆ ಒಪ್ಪಿಕೊಂಡೆ. ಪಕ್ಷದ ಶಿಸ್ತಿನ ಸಿಪಾಯಿ ಆಗಿರುವುದರಿಂದ ಪಕ್ಷ ಹೇಳಿದ್ದನ್ನು ಚಾಚು ತಪ್ಪದೇ ಪಾಲಿಸುವುದಾಗಿ ಹೇಳಿದರು.

ಟ್ರಬಲ್‌ ಶೂಟರ್‌ ಡಿ.ಕೆ.​ಶಿ​ವ​ಕು​ಮಾರ್‌ ಮಣಿ​ಸಲು ಸಾಮ್ರಾಟ್‌ ಅಶೋಕಾಸ್ತ್ರ ಪ್ರಯೋ​ಗ

ಅಶೋಕ್‌ ಪರ ಪ್ರಚಾರ ನಡೆಸಿದ ನಾಯಕ ನಟ ಧ್ರುವ ಸರ್ಜಾ ಮಾತನಾಡಿ, ಅಶೋಕಣ್ಣನ ಪರವಾಗಿ ನಾನು ಪ್ರಚಾರಕ್ಕೆ ಬಂದಿದ್ದೇನೆ. ಪದ್ಮನಾಭನಗರ ಕ್ಷೇತ್ರ ಉತ್ತಮವಾಗಿ ಅಭಿವೃದ್ಧಿ ಹೊಂದಿದೆ. ಇದಕ್ಕೆ ಅಶೋಕ್‌ ಅವರು ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಾಜಿ ಪಾಲಿಕೆ ಸದಸ್ಯ ನಾರಾಯಣ, ಪಕ್ಷದ ಪ್ರಮುಖ ಮುಖಂಡರು, ಕಾರ್ಯಕರ್ತರು ಆರ್‌.ಅಶೋಕ್‌ಗೆ ಸಾಥ್‌ ನೀಡಿದರು.