Asianet Suvarna News Asianet Suvarna News

ಕರ್ನಾಟಕಕ್ಕೆ ಸಾರ್ವಭೌಮತ್ವ ಎಂದ ಸೋನಿಯಾ: ಕಾಂಗ್ರೆಸ್ ಮತ್ತೆ ದೇಶ ವಿಭಜಿಸಲು ಹೊರಟಿದೆ ಎಂದು ಬಿಜೆಪಿ ಟೀಕೆ

ಕರ್ನಾಟಕದ ಪ್ರತಿಷ್ಠೆ, ಸಾರ್ವಭೌಮತೆ ಅಥವಾ ಸಮಗ್ರತೆಗೆ ಧಕ್ಕೆ ತರಲು ಕಾಂಗ್ರೆಸ್ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಸೋನಿಯಾ ಗಾಂಧಿ ಹೇಳಿದ್ದು, ಇದಕ್ಕೆ ಬಿಜೆಪಿ ಸೇರಿ ಅನೇಕ ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ. 

congress tweet on sonia gandhi statement on sovereignity to karnataka bjp and netizens oppose ash
Author
First Published May 7, 2023, 4:15 PM IST | Last Updated May 7, 2023, 4:22 PM IST

ಬೆಂಗಳೂರು (ಮೇ 7, 2023): ಕಾಂಗ್ರೆಸ್ ಸಂಸದೀಯ ಪಕ್ಷ ಮುಖ್ಯಸ್ಥೆ ಸೋನಿಯಾ ಗಾಂಧಿ ಇಂದು ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದಾರೆ. ಈ ವೇಳೆ ಸೋನಿಯಾ ಗಾಂಧಿ ಕರ್ನಾಟಕದ ಸಾರ್ವಭೌಮತೆಯ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ ಪಕ್ಷ ಟ್ವೀಟ್‌ ಮಾಡಿದೆ. ಆದರೆ, ಬಿಜೆಪಿ ಹಾಗೂ ಹಲವು ನೆಟ್ಟಿಗರು ಸೋನಿಯಾ ಗಾಂಧಿ ಹೇಳಿಕೆಗೆ ಟೀಕೆ ಮಾಡಿದ್ದು, ಭಾರತ್ ಜೋಡೋ ಯಾತ್ರೆ ನಡೆಸಿದ್ದ ಕಾಂಗ್ರೆಸ್‌ಈಗ ಮತ್ತೆ ಭಾರತ ವಿಭಜಿಸಲು ಹೊರಟಿದೆಯಾ ಎಂದು ತಿರುಗೆಟು ನೀಡಿದ್ದಾರೆ.

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಭಾಷಣದ ಬಗ್ಗೆ ಟ್ವೀಟ್‌ ಮಾಡಿದ ಕಾಂಗ್ರೆಸ್‌, ಸಿಪಿಪಿ ನಾಯಕಿ ಸೋನಿಯಾ ಗಾಂಧಿ ಅವರು 6.5 ಕೋಟಿ ಕನ್ನಡಿಗರಿಗೆ ಗಟ್ಟಿ ಸಂದೇಶ ರವಾನಿಸಿದ್ದಾರೆ. 
ಕರ್ನಾಟಕದ ಪ್ರತಿಷ್ಠೆ, ಸಾರ್ವಭೌಮತೆ ಅಥವಾ ಸಮಗ್ರತೆಗೆ ಧಕ್ಕೆ ತರಲು ಕಾಂಗ್ರೆಸ್ ಯಾರಿಗೂ ಅವಕಾಶ ನೀಡುವುದಿಲ್ಲ ಎಂದಿದ್ದಾರೆ ಎಂದು ಕಾಂಗ್ರೆಸ್‌ ಮೇ 6 ರಂದು ರಾತ್ರಿ ಟ್ವೀಟ್‌ ಮಾಡಿತ್ತು. ಕಾಂಗ್ರೆಸ್‌ನ ಈ ಟ್ವೀಟ್‌ಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. 

ಇದನ್ನು ಓದಿ: 2024ರಲ್ಲೂ ಮೋದಿ ವಿರುದ್ಧ ಕಾಂಗ್ರೆಸ್‌ ಮೈತ್ರಿ ರಚನೆ: ಖರ್ಗೆ; ಸೋನಿಯಾ ರಾಜಕೀಯ ವಿದಾಯ..?

ಈ ಬಗ್ಗೆ ಟ್ವೀಟ್‌ ಮಾಡಿದ ತಮಿಳುನಾಡು ಬಿಜೆಪಿ ಮುಖ್ಯಸ್ಥ ಹಾಗೂ ಕರ್ನಾಟಕದ ಸಹ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಕೈ ಪಕ್ಷದ ವಿರುದ್ಧ ವ್ಯಂಗ್ಯವಾಡಿದ್ದಾರೆ. ‘’ನಿಷೇಧಿತ ಪಿಎಫ್‌ಐ ಜೊತೆ ಕೈಜೋಡಿಸಿರುವ ಕಾಂಗ್ರೆಸ್ ಪಕ್ಷವು ಚುನಾವಣಾ ಲಾಭಕ್ಕಾಗಿ ಎಸ್‌ಡಿಪಿಐಯಂತಹ ಪಕ್ಷಗಳೊಂದಿಗೆ ಕೈ ಜೋಡಿಸಿವೆ. ಉಗ್ರರಿಗೆ ಹಣ ನೀಡುವ ಸಂಬಂಧಕ್ಕಾಗಿ ಕೇಂದ್ರ ಏಜೆನ್ಸಿಗಳು ದಾಳಿ ನಡೆಸಿದ ಅಭ್ಯರ್ಥಿಯನ್ನು ಸಾರ್ವಭೌಮತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ದಯವಿಟ್ಟು ನಿಮ್ಮನ್ನು ನೀವೇ ಅಪಹಾಸ್ಯ ಮಾಡುವುದನ್ನು ನಿಲ್ಲಿಸಿ’’ ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ಜತೆ ನನ್ನ ಇನ್ನಿಂಗ್ಸ್‌ ಅಂತ್ಯವಾಗ್ಬಹುದು: ರಾಜಕೀಯ ನಿವೃತ್ತಿ ಸುಳಿವು ನೀಡಿದ ಸೋನಿಯಾ..!

ಇನ್ನು, ಅಲೋಕ್ ಭಟ್ ಎಂಬುವರು ಸೋನಿಯಾ ಗಾಂಧಿ ಹೇಳಿಕೆ ಬಗ್ಗೆ ಟ್ವೀಟ್‌ ಮಾಡಿದ್ದು, ಇತ್ತೀಚೆಗೆ ಕೇಂಬ್ರಿಡ್ಜ್‌ನಲ್ಲಿ ಅವರ ಮಗ ರಾಹುಲ್‌ಗಾಂಧಿ ಬಿಟ್ಟುಹೋದ ಸ್ಥಳದಿಂದ ಮುಂದುವರಿಯುತ್ತಾ, ಸೋನಿಯಾ ಗಾಂಧಿಯವರು ಕರ್ನಾಟಕದಲ್ಲಿ ಸಾರ್ವಭೌಮತ್ವ ಎಂಬ ಪದವನ್ನು ಬಳಸಿದ್ದಾರೆ. ಇದು ಭಾರತದ ಒಕ್ಕೂಟದ 28 ರಾಜ್ಯಗಳು ಮತ್ತು 8 ಕೆಂದ್ರಾಡಳಿತ ಪ್ರದೇಶಗಳಲ್ಲೂ ಒಂದೇ ಆಗಿದೆ. ಸಾರ್ವಭೌಮ ಮತ್ತು ಸಾರ್ವಭೌಮತ್ವ ಪದವನ್ನು ತುಂಬಾ ಸಡಿಲವಾಗಿ ಬಳಸುವ ಈ ಅಪಾಯಕಾರಿ ಪ್ರವೃತ್ತಿಯು ಭಾರತ ವಿರೋಧಿಯಾಗಿದೆ ಮತ್ತು ಇದನ್ನು ತೀವ್ರವಾಗಿ ವಿರೋಧಿಸಬೇಕು ಎಂದಿದ್ದಾರೆ.

ಅಲ್ಲದೆ, ಪ್ರಧಾನಿ ನರೇಂದ್ರ ಮೋದಿಯವರ ಮೇಲಿನ ದ್ವೇಷದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿಂದೂ ವಿರೋಧಿ ರಾಜಕೀಯವನ್ನು ಅನುಸರಿಸುತ್ತಿದೆ. ಅಲ್ಲದೆ, ಈ ಮೂಲಕ ದೇಶದ ಏಕತೆ ಮತ್ತು ಸಮಗ್ರತೆಗೆ ಅಪಾಯಕಾರಿಯೂ ಆಗಿದೆ. ಕರ್ನಾಟಕ ಚುನಾವಣೆಗಳನ್ನು ಆಯೋಜಿಸಿರುವ ಭಾರತೀಯ ಸಂವಿಧಾನದ ಪೀಠಿಕೆಯು ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ವಿವರಿಸುತ್ತದೆ ಮತ್ತು ಅದು ಎಲ್ಲಕ್ಕಿಂತ ಹೆಚ್ಚಾಗಿ ಭಾರತದ ಸಾರ್ವಭೌಮತ್ವವಾಗಿದೆ ಎಂದು ಸೋನಿಯಾ ಗಾಂಧಿ ತಿಳಿದುಕೊಳ್ಳಲೇಬೇಕು ಎಂದೂ ಅಲೋಕ್‌ ಭಟ್ ಸರಣಿ ಟ್ವೀಟ್‌ ಮೂಲಕ ಕಾಂಗ್ರೆಸ್‌ ನಾಯಕಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ‘ಕೈ’ಗೆ ಈಗಲೂ ರಾಹುಲ್‌ ರಿಮೋಟ್‌; ಖರ್ಗೆಗೆ ಸ್ವತಂತ್ರ ನಿರ್ಧಾರದ ಅಧಿಕಾರವಿಲ್ಲ: ಆಜಾದ್‌

ಈ ಮಧ್ಯೆ, ಬಿಜೆಪಿ ಐಟಿ ಸೆಲ್‌ನ ಸಹ ಸಂಚಾಲಕಿ ಸಿ.ಟಿ. ಪಲ್ಲವಿ ಸಹ ಕಾಂಗ್ರೆಸ್‌ ಟ್ವೀಟ್‌ಗೆ ಅಂದರೆ ಸೋನಿಯಾ ಗಾಂಧಿ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ. ‘’ಕಾಂಗ್ರೆಸ್‌ ಹೇಳಿಕೆಯ ಅನುವಾದ ಹೀಗಿದೆ ಎಂದ ಅವರು, ‘’ನಾವು PFI ನ ರಾಜಕೀಯ ವಿಭಾಗ SDPI ಬೆಂಬಲವನ್ನು ತೆಗೆದುಕೊಳ್ಳುತ್ತೇವೆ. ನಾವು PFIನ ಮಿಷನ್ 2047 ಕ್ಕೆ ಸಹಾಯ ಮಾಡುತ್ತೇವೆ. ಅದಕ್ಕಾಗಿ, ನಾವು ಪ್ರಭು ಹನುಮಾನ್‌ಜೀ ಅವರ ಭಕ್ತರಿಗೆ ಬ್ಯಾನ್‌ ಮಾಡುವ ಭರವಸೆ ನೀಡುತ್ತೇವೆ (ಬಜರಂಗ ದಳ ಬ್ಯಾನ್‌ ಮಾಡುವ ಬಗ್ಗೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಹೇಳಿದೆ) ಮತ್ತು ನಾವು ಮತಾಂತರ ಮಾಫಿಯಾಗೆ ಸಹಾಯ ಮಾಡಲು ಮಹಿಳೆಯರಿಗೆ ಮೀಸಲಾತಿಯನ್ನು ತರುತ್ತೇವೆ. ಭಯೋತ್ಪಾದಕರು ಹತ್ಯೆಯಾದಾಗ ಅಳುತ್ತೇವೆ. ಈ ಬಗ್ಗೆ ನಿಮ್ಮ ಸ್ನೇಹಿತ ಸಂಜಯ್ ರಾವುತ್ ಏನು ಬರೆದಿದ್ದಾರೆ ಎಂಬುದನ್ನು ನೋಡಿ..’’ ಎಂದು ಸಿ.ಟಿ. ಪಲ್ಲವಿ ಅವರು ಕೆಲ ಸಾಮ್ನಾ ಲೇಖನಗಳ ಸ್ಕ್ರೀನ್‌ಶಾಟ್‌ ಹಂಚಿಕೊಂಡು ಟ್ವೀಟ್‌ ಮಾಡಿದ್ದಾರೆ. 

ಇದನ್ನೂ ಓದಿ: ಇಂದು ಸರ್ಕಾರಿ ಬಂಗಲೆ ತೆರವು ಮಾಡಲಿರೋ ರಾಹುಲ್‌ ಗಾಂಧಿ: ಅಮ್ಮನ ಮನೆಗೆ ಶಿಫ್ಟ್‌ ಆಗ್ತಾರೆ ಕಾಂಗ್ರೆಸ್‌ ನಾಯಕ

ಇನ್ನೊಂದೆಡೆ, ವೈರಾಗಿ ಎಂಬುವರು ಸಹ ಸೋನಿಯಾ ಗಾಂಧಿ ಹೇಳಿಕೆಗೆ ಟೀಕೆ ಮಾಡಿದ್ದು, ‘’ಕರ್ನಾಟಕ "ಸಾರ್ವಭೌಮತ್ವ"...?? ಕರ್ನಾಟಕ ರಾಜ್ಯ ಯಾವಾಗ ಹೊಸ ದೇಶವಾಗಿ ರೂಪುಗೊಂಡಿತು. #BharatTodoYatra ಇದು "ಭಾರತ ಮಾತೆಯನ್ನು ತುಂಡು ಮಾಡುವುದರ ಬಗ್ಗೆಯೇ...?

ಗೌರವಾನ್ವಿತ @SushantBSinha ಜೀ ನಮಗೆ ಈ ಕುರಿತು ಒಂದು "ಪಾಠಶಾಲಾ" ಬೇಕು. ಮತ್ತು ಬಿಜೆಪಿ ವಕ್ತಾರ @gauravbh @SudhanshuTrived @sambitswaraj @alok_ajay ಜೀ ದಯವಿಟ್ಟು ಕಾಂಗ್ರೆಸ್‌ನ ವಿಭಜಕ ಕಾರ್ಯಸೂಚಿಯನ್ನು ಟೀಕಿಸಿ’’ ಎಂದೂ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಗ್ಯಾರಂಟಿ ಈಡೇರಿಸಿದ್ದೇವೆ: ಮೋದಿ ವಿರುದ್ಧ ಸೋನಿಯಾ ಗಾಂಧಿ ಕಿಡಿ

ಅಲ್ಲದೆ, ಉದ್ಯಮಿ ಅಖಿಲೇಶ್‌ ಮಿಶ್ರಾ ಎಂಬುವರು ಸಹ ಕಾಂಗ್ರೆಸ್‌ ಟ್ವೀಟ್‌ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದು ‘’ಸಮಾಜದಲ್ಲಿ ದ್ವೇಷ ಮತ್ತು ವೈಷಮ್ಯವನ್ನು ಹುಟ್ಟುಹಾಕುವ ಅಥವಾ ವಿಭಜಿಸುವುದನ್ನು ಬಿಟ್ಟು ಕಾಂಗ್ರೆಸ್ ಬೇರೆ ಏನನ್ನೂ ಮಾಡಿಲ್ಲ. ಕರ್ನಾಟಕ ಈಗ ಕಾಂಗ್ರೆಸ್‌ಗೆ ಸಾರ್ವಭೌಮನಾ? ಭಾರತವು ಸಾರ್ವಭೌಮವೇ ಅಥವಾ ಅದರ ಪ್ರದೇಶದೊಳಗಿನ ರಾಜ್ಯವೂ ಸಹ ಸಾರ್ವಭೌಮವೇ? ಕಾಂಗ್ರೆಸ್ ಈಗ ಮತ್ತೆ ಭಾರತವನ್ನು ವಿಭಜಿಸಲು ಹೊರಟಿದೆಯೇ?’’ ಎಂದು ಸೋನಿಯಾ ಗಾಂಧಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: ವಿಧಾನಸಭೆ ಪ್ರಚಾರ ಅಖಾಡಕ್ಕೆ ಕಾಲಿಟ್ಟ ಸೋನಿಯಾಗಾಂಧಿ: ಬಿಜೆಪಿ ವಿರುದ್ಧ ವಾಗ್ದಾಳಿ! 

Latest Videos
Follow Us:
Download App:
  • android
  • ios