ರೌಡಿಗಳನ್ನು ಎನ್‌ಕೌಂಟರ್ ಮಾಡಿದರೆ ಕಾಂಗ್ರೆಸ್ ಕಣ್ಣಲ್ಲಿ ನೀರು, ಚಿತ್ರದುರ್ಗದಲ್ಲಿ ಮೋದಿ ಮಾತಿಗೆ ವಿಪಕ್ಷ ಸುಸ್ತು!

ರೌಡಿಗಳನ್ನು, ಮಾಫಿಯಾ ಡಾನ್‌ಗಳನ್ನು ಹತ್ಯೆ ಮಾಡಿದರೆ ಕಾಂಗ್ರೆಸ್ ಕಣ್ಣಲ್ಲಿ ನೀರು ಬರುತ್ತದೆ. ಭಾರತೀಯ ಸೇನೆಯನ್ನು ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಪ್ರಶ್ನಿಸಿತು. ಕಾಂಗ್ರೆಸ್ ತುಷ್ಠೀಕರಣ ಮಾಡುತ್ತಲೇ ಬಂದಿದೆ ಎಂದು ಚಿತ್ರದುರ್ಗದಲ್ಲಿ ಮೋದಿ ಹೇಳಿದ್ದಾರೆ. ಮೋದಿ ಭಾಷಣದ ವಿವರ ಇಲ್ಲಿದೆ. 

Congress tears for mafia don terrorist encounter says PM Modi in chitradurga Karnataka Assembly Election ckm

ಚಿತ್ರದುರ್ಗ(ಮೇ.02): ಬಿಜೆಪಿ ನಾಗರೀಕರಿಗೆ ಚಿತ್ರದುರ್ಗಗ ಸುರಕ್ಷಿತ 7 ಸುತ್ತಿನ ಕೋಟೆ ರೀತಿಯ ಸುರಕ್ಷತಾ ಯೋಜನೆಯನ್ನು ಜಾರಿ ಮಾಡಿದೆ.  ಪಿಎಂ ಅವಾಸ್ ಯೋಜನೆಯಡಿಯಲ್ಲಿ ಮನೆ ನೀಡುವ ಮೂಲಕ ಸುರಕ್ಷತೆ, ಮನಗೆ ಗ್ಯಾಸ್ , ನೀರು ನೀಡುವ ಸುರಕ್ಷತೆ ಯೋಜನೆ ನೀಡಲಾಗಿದೆ. ಗರೀಬ್ ಕಲ್ಯಾಣ್ ಯೋಜನೆ ಮೂಲಕ ಪಡಿತರ ನೀಡುವ ಸುರಕ್ಷತೆ ಸೇರಿದಂತೆ 7 ಕೋಟೆಯ ಯೋಜನೆಯನ್ನು ಜನರಿಗೆ ನೀಡಿದ್ದೇವೆ. ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಯುಕ್ತ ಚಿತ್ರದುರ್ಗದಲ್ಲಿ ಆಯೋಜಿಸಿದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಿಂದ ಮತದಾರರು ದೂರವಿರಬೇಕು.ಇವರೆಡು ನೋಡಲು ಒಂದೇ ಪಕ್ಷವಾಗಿದ್ದರೂ, ಸೈದ್ದಾಂತಿಕ, ನಡೆಯಲ್ಲಿ ಒಂದೇ ಎಂದು ಮೋದಿ ಹೇಳಿದ್ದಾರೆ. 

ಅಮತ ಕಾಲದಲ್ಲಿ ನಡೆಯುತ್ತಿರುವ ಕರ್ನಾಟಕದ ಮೊದಲ ಚುನಾವಣೆ. ಕರ್ನಾಟಕವನ್ನು ನಂಬರ್ 1 ರಾಜ್ಯ ಮಾಡಲು ನಡೆಯುತ್ತಿರುವ ಚುನಾವಣೆಯಾಗಿದೆ. ಮುಂದಿನ 25 ವರ್ಷದಲ್ಲಿ ಕರ್ನಾಟಕ ಅಭಿವೃದ್ಧಿಯಲ್ಲಿ ಮೊದಲ ಸ್ಥಾನಕ್ಕೇರಲಿದೆ. ಕರ್ನಾಟಕದ ಅಭಿವೃದ್ಧಿಯಿಂದ ಭಾರತದಕ್ಕೆ ಮಹತ್ತರ ಕೊಡುಗೆ ನೀಡಲಿದೆ. ಇದಕ್ಕೆ ಡಬಲ್ ಎಂಜಿನ್ ಬಿಜೆಪಿ ಸರ್ಕಾರವನ್ನು ಮತ್ತೆ ಗೆಲ್ಲಿಸಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.

ಎರಡನೇ ಹಂತದ ಚುನಾವಣಾ ಪ್ರಚಾರ, ಇಂದಿನಿಂದ ಎರಡು ದಿನ ರಾಜ್ಯದಲ್ಲಿ 7 ಕಡೆ ಮೋದಿ ಅಬ್ಬರ

ಕರ್ನಾಟಕ ಬಿಜೆಪಿ ಪಕ್ಷವನ್ನು ಅಭಿನಂದನೆ ಸಲ್ಲಿಸುತ್ತೇನೆ. ನಿನ್ನೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಪ್ರಣಾಳಿಕೆಯಲ್ಲಿ ಮೂಲಭೂತ ಸೌಕರ್ಯದ ಆಧುನೀಕರಣ, ಮಹಿಳಾ ಸಬಲೀಕರಣ, ಯುವ ಸಮುದಾಯಕ್ಕೆ ಉದ್ಯೋಗ ಸೃಷ್ಟಿ, ದೀನದಲೀಕರ ಕಲ್ಯಾಣ, ಎಲ್ಲಾ ಸುರಕ್ಷತೆ ಸೇರಿದಂತೆ ಸಬ್ ಕಾ ಸಾಥ್ ಸಬ್‌ಕಾ ವಿಕಾಸ್ ಮೂಲ ಮಂತ್ರವನ್ನಾಗಿಟ್ಟುಕೊಂಡು ಪ್ರಣಾಳಿಕೆ ಮಾಡಲಾಗಿದೆ. ಈ ಪ್ರಣಾಳಿಕೆ ಕರ್ನಾಟವನ್ನು ನಂಬರ್ 1 ರಾಜ್ಯವನ್ನಾಗಿ ಮಾಡಲು ನೀಲ ನಕ್ಷೆಯಾಗಿದೆ ಎಂದು ಮೋದಿ ಹೇಳಿದ್ದಾರೆ.

ಕರ್ನಾಟಕದ ಜನರು ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ದೂರವಿರಬೇಕು. ಇವೆರಡು ನೋಡಲು ಎರಡು ಪಕ್ಷಗಳು. ಆದರೆ ಇವರೆಡೂ ಸಿದ್ದಾಂತ, ನಡೆಯಿಂದ ಒಂದೇ ಎಂದು ಮೋದಿ ಹೇಳಿದ್ದಾರೆ. ಎರಡೂ ಕುಟುಂಬ ರಾಜಕಾರಣದ ಪಕ್ಷ. ಎರಡೂ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಈ ಎರಡೂ ಪಕ್ಷಗಳಿಂದ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ. ನಿಮ್ಮ ಮಕ್ಕಳ ಭವಿಷ್ಯದ ಕುರಿತು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ಚಿಂತೆ ಇಲ್ಲ ಎಂದು ಮೋದಿ ಹೇಳಿದ್ದಾರೆ. 

ಭದ್ರಾ ಮೇಲ್ದಂಡೆ ಯೋಜನೆ ಕುರಿತು ಕಾಂಗ್ರೆಸ್ ಹಾಗೂ ಜೆಡಿಎಸ್ ತಿರುಗಿ ನೋಡಿಲ್ಲ. ಅವರಿಗೆ ರೈತರ ಕುರಿತು ಕಾಳಜಿ ಇಲ್ಲ. ಆದರೆ ಬಿಜೆಪಿ ಭದ್ರಮೇಲ್ದಂಡೆ ಯೋಜನೆಗೆ ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ಹಣ ಬಿಡುಗಡೆ ಮಾಡಿದೆ. ಐದುವರೆ ಸಾವಿರ ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಈ ಯೋಜನೆಯಿಂದ ಈ ಜಿಲ್ಲೆಯ ಪ್ರತಿಯೊಬ್ಬ ರೈತನಿಗೆ ನೀರು ಸಿಗಲಿದೆ. ವಾಣಿವಿಲಾಸ ಸಾಗರ ಅಣೆಕಟ್ಟು ಆಧುನೀಕರಣ, ನೀರಿನ ಪೂರೈಕಗೆ ಹಣ ಬಿಡುಗಡೆ ಮಾಡಿದೆ ಎಂದು ಮೋದಿ ಹೇಳಿದ್ದಾರೆ. 

 

9 ಲಕ್ಷ ಟ್ವೀಟ್, 11 ಲಕ್ಷ ಫೋಟೋ ಪೋಸ್ಟ್, ದಾಖಲೆ ಬರೆದ ಮನ್ ಕಿ ಬಾತ್ 100ನೇ ಕಂತು!

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಎಲ್ಲಾ ಯೋಜನೆ ನಿಧಾನಗತಿಯಲ್ಲಿ ನಡೆಯುತ್ತಿತ್ತು. ಆದರೆ ಡಬಲ್ ಎಂಜಿನ್ ಸರ್ಕಾರ ಬಂದ ಬಳಿಕ ಕರ್ನಾಟಕದ ಅಭಿವೃದ್ಧಿಗೆ ಯೋಜನೆಗಳಿಗೆ ವೇಗ ಸಿಕ್ಕಿತು. ರೈಲ್ವೇ, ವಿಮಾನ ನಿಲ್ದಾಣ, ರಸ್ತೆ ಎಲ್ಲವೂ ಪ್ರಗತಿಯಲ್ಲಿದೆ.  ಚಿತ್ರದುರ್ಗ ಜಿಲ್ಲೆಗೆ 3.5 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ತುಮಕೂರು, ದಾವಣಗೆರೆ ಚಿತ್ರದುರ್ಗ ರೈಲ್ವೇ ಹಳಿಗಳ ಕಾರ್ಯ ನಡೆಯುತ್ತಿದೆ. ಡಬಲ್ ಎಂಜಿನ್ ಸರ್ಕಾರ ಕರ್ನಾಟಕ ಅಭಿವೃದ್ಧಿಗೆ ಬದ್ಧವಾಗಿದೆ. 9 ಕೈಗಾರಿಕಾ ಪ್ರದೇಶ ಸ್ಥಾಪನೆ ಮಾಡುತ್ತಿದೆ. ಇದರಲ್ಲಿ ಒಂದು ಪ್ರದೇಶ ಚಿತ್ರದುರ್ಗದಲ್ಲಿ ಸ್ಥಾಪನೆಯಾಗಲಿದೆ. ಇದರಿಂದ ಇಲ್ಲಿನ ಯುವಕರಿಗೆ ಉದ್ಯೋಗವಕಾಶ ಸಿಗಲಿದೆ.

ಚಿತ್ರದುರ್ಗ 7 ಸುತ್ತಿನ ಕೋಟೆ ಎಂದೇ ಹೆಸರುವಾಸಿಯಾಗಿದೆ. ಅಂದರೆ ಅತ್ಯಂತ ಸುರಕ್ಷತೆಯ ಕೋಟೆ. ಬಿಜೆಪಿ ಕೂಡ 7 ಸುತ್ತಿನ ಸುರಕ್ಷತೆಯ ಕೋಟೆ ನಿರ್ಮಾಣ ಮಾಡಿದೆ. ನಾಗರೀಕರಿಗೆ ಬಿಜೆಪಿ 7 ಸುತ್ತಿನ ಭದ್ರತೆ ಕೋಟೆ ನೀಡಿದ್ದೇವೆ. ಪಿಎಂ ಅವಾಸ್ ಯೋಜನೆಯಡಿಯಲ್ಲಿ ಮನೆ ನೀಡುವ ಮೂಲಕ ಸುರಕ್ಷತೆ, ಮನಗೆ ಗ್ಯಾಸ್ , ನೀರು ನೀಡುವ ಸುರಕ್ಷತೆ ಯೋಜನೆ ನೀಡಲಾಗಿದೆ. ಗರೀಬ್ ಕಲ್ಯಾಣ್ ಯೋಜನೆ ಮೂಲಕ ಪಡಿತರ ನೀಡುವ ಸುರಕ್ಷತಾ ಕೋಟೆ,  ಆಯುಷ್ಮಾನ್ ಭಾರತ್ ಸೇರಿದಂತೆ ಆರೋಗ್ಯ ಸುರಕ್ಷತೆ, ಜನಧನ ಬ್ಯಾಂಕ್ ಖಾತೆ ಹಾಗೂ ಮುದ್ರಾ ಯೋಜನೆ ಸೇರಿದಂತೆ ಸಾಲ ಸೌಲಭ್ಯ ಸುರಕ್ಷತೆ, ಎಲ್ಲರಿಗೂ ಭೀಮಾ ಯೋಜನೆ, ಜೀವನ ಜ್ಯೋತಿ ಸುರಕ್ಷಾ ಯೋಜನೆ ಅಟಲ್ ಪೆನ್ಶನ್ ಯೋಜನೆ ಸುರಕ್ಷತೆ, ತಾಯಂದರಿಗೆ ಸುರಕ್ಷತೆ ಯೋಜನೆ, ಎಲ್ಲರಿಗೂ ಸಾಮಾಜಿಕ ಭದ್ರತೆ ಹಾಗೂ ರಕ್ಷಣೆ ಕೋಟೆಯನ್ನು ಬಿಜೆಪಿ ಜನರಿಗೆ ನೀಡಿದೆ.

ಪರಿಷ್ಟಿತ ಜಾತಿ, ಪರಿಶಿಷ್ಛ ಪಂಗಡ ಸಮುದಾಯಕ್ಕೆ ಹಲವು ಯೋಜನೆ ನೀಡಿದ್ದೇವೆ. ಎಸ್‌ಟಿ ಸಮುದಾಯಕ್ಕೆ ಮಂತ್ರಾಲಯವನ್ನು ಅಟಲ್ ಕಾಲದಲ್ಲಿ ನೀಡಲಾಗಿದೆ. ಬಂಜಾರ, ಲಂಬಾಣಿ ಸಮುದಾಯಕ್ಕೆ ಹಕ್ಕು ಪತ್ರ ನೀಡಿದ್ದೇವೆ. ಭೂಮಿ ಇರದವರಿಗೆ ಭೂಮಿ, ಮಕ್ಕಳಿಗೆ ಸ್ಕಾಲರ್‌ಶಿಪ್ ನೀಡಿದ್ದೇವೆ. ಎಲ್ಲಾ ವರ್ಗದ ಕಲ್ಯಾಣಕ್ಕೆ ಕೆಲಸ ಮಾಡುತ್ತೇದ್ದೇವೆ. ಕಾಂಗ್ರೆಸ್ ಎಂದೂ ಬಿಜೆಪಿಯ ಅಭಿವೃದ್ಧಿ ಕಾರ್ಯದ ಜೊತೆ ಮುಖಾಮುಖಿ ಮಾಡಲು ಸಾಧ್ಯವಿಲ್ಲ. 2014ರ ಮೊದಲು ಎಷ್ಟು ಮೆಡಿಕಲ್ ಕಾಲೇಜು ನಿರ್ಮಾಣ ಮಾಡಿದೆಯೋ ಕಳೆದ 9 ವರ್ಷದಲ್ಲಿ ಬಿಜೆಪಿ ಅದರ ದುಪ್ಪಟ್ಟು ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಿದೆ. ಚಿತ್ರದುರ್ಗದಲ್ಲೂ ಮೆಡಿಕಲ್ ಕಾಲೇಜು ಸ್ಥಾಪನೆಯಾಗಿದೆ. 

ಬಾಟ್ಲಾ ಹೌಸ್ ಎನ್‌ಕೌಂಟರ್ ನಡೆದಾಗ ಕಾಂಗ್ರೆಸ್ ಹಿರಿಯ ನಾಯಕನ ಕಣ್ಣಲ್ಲಿ ನೀರು ಬಂದಿತ್ತು. ಸರ್ಜಿಕಲ್ ಸ್ಟ್ರೈಕ್, ಏರ್‌ಸ್ಟ್ರೈಕ್ ನಡೆದಾಗ ಸೈನ್ಯವನ್ನೇ ಪ್ರಶ್ನೆ ಮಾಡಿತ್ತು. ಕರ್ನಾಟಕದಲ್ಲಿ ಯಾವ ರೀತಿಯಲ್ಲಿ ಆತಂಕವನ್ನು ಸೃಷ್ಟಿಸಿತ್ತು. ಆದರೆ ಬಿಜೆಪಿ ಸರ್ಕಾರ ಆತಂಕವಾದಿ ವಿರುದ್ದ ಹೋರಾಟ ನಡೆಸುುತ್ತಿದೆ.ಕಾಂಗ್ರೆಸ್ ತುಷ್ಠೀಕರಣ ರಾಜಾಕಾರಣ ಮಾಡಿದೆ ಎಂದು ಮೋದಿ ಹೇಳಿದ್ದರು. 

Latest Videos
Follow Us:
Download App:
  • android
  • ios