Asianet Suvarna News Asianet Suvarna News

ಇದು ಜನಸ್ಪಂದನೆಯಲ್ಲ, ಖಾಲಿ ಕುರ್ಚಿಗಳ ಸ್ಪಂದನೆ: ವಿಡಿಯೋ ಬಿಟ್ಟ ಕಾಂಗ್ರೆಸ್

ರಾಜ್ಯ ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಜನಸ್ಪಂದನ ಸಮಾವೇಶ ಮಾಡುವ ಮೂಲಕ ಶಕ್ತಿ ಪ್ರದಶರ್ನಕ್ಕೆ ಮುಂದಾಗಿದೆ. ಹಾಗಾದ್ರೆ, ಸಮಾವೇಶಕ್ಕೆ ಎಷ್ಟು ಜನ ಬಂದಿದ್ರು ಎನ್ನುವ ಚರ್ಚೆ ಜೋರಾಗಿದೆ.

Congress Releases Video Of Empty Chairs In BJP Janaspandana Rally rbj
Author
First Published Sep 10, 2022, 9:26 PM IST

ಬೆಂಗಳೂರು, (ಸೆಪ್ಟೆಂಬರ್.10): ಒಂದು ಮದುವೆ ಅಥವಾ ಯಾವುದೇ ಒಂದು ಕಾರ್ಯಕ್ರಮ ಮುಗಿದ ಬಳಿಕ ಸಹಜವಾಗಿ ಎಲ್ಲರೂ ಕೇಳಿವುದು ಸಮಾರಂಭ ಹೇಗಾಯ್ತು ಎನ್ನುವ ಅಭಿಪ್ರಾಯ.

ಅದರಂತೆ (ಇಂದು)ಶನಿವಾರ) ದೊಡ್ಡಬಳ್ಳಾಪುರದಲ್ಲಿ ಬಹುನರೀಕ್ಷಿತ ಆಯೋಜಿಸಲಾಗಿದ್ದ ಬಿಜೆಪಿಯ ಮೊದಲ ಜನಸ್ಪಂದನ ಸಮಾವೇಶ  ಸಮಾಪ್ತಿಯಾಗಿದೆ. ಆದ್ರೆ, ಇದೀಗ ಸಮಾವೇಶ ಹೇಗಾಯ್ತು? ಎಷ್ಟು ಜನ ಸೇರಿದ್ರು ಎನ್ನುವ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ಶುರುವಾಗಿವೆ.

ಬಿಜೆಪಿ ಬಾಹುಳ್ಯವಿಲ್ಲದ ಸ್ಥಳದಲ್ಲೇ ಮೊದಲ ಜನಸ್ಪಂದನ ಸಮಾವೇಶ, ಬಿಜೆಪಿ ಟಾರ್ಗೆಟ್ ಏನು..?

ಬಿಜೆಪಿ ನಾಯಕರು ಪ್ರಕಾರ ಸುಮಾರು ಮೂರು ಲಕ್ಷ ಜನರು ಸೇರಿದ್ರು ಎಂದು ಬಿಜೆಪಿ ನಾಯಕರು ಸೇರಿದ್ರು ಎನ್ನುತ್ತಿದ್ದಾರೆ. ಪಕ್ಷದ ವರ್ಚಸ್ಸು ಇಲ್ಲದ ಕಡೆ ಜನರು ಸೇರಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದ್ರೆ, ಇತ್ತ ಕಾಂಗ್ರೆಸ್‌ ಸಮಾವೇಶದಲ್ಲಿ ಖಾಲಿ ಕುರ್ಚಿಗಳ ವಿಡಿಯೋ ರಿಲೀಸ್ ಮಾಡುವ ಮೂಲಕ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿದೆ.

ಖಾಲಿ ಕುರ್ಚಿಗಳ ವಿಡಿಯೋ ಬಿಟ್ಟ ಕಾಂಗ್ರೆಸ್
ಹೌದು...ದೊಡ್ಡಬಳ್ಳಾಪುರಲ್ಲಿ ನಡೆದ ಬಿಜೆಪಿ ಜನಸ್ಪಂದನ ಸಮಾವೇಶದಲ್ಲಿ ಕುರ್ಚಿಗಳು ಖಾಲಿ ಖಾಲಿ ಇರುವುದು ಕಂಡುಬಂದಿದೆ. ಕಾಂಗ್ರೆಸ್‌ ಟ್ವಿಟ್ಟರ್‌ನಲ್ಲಿ ಖಾಲಿ ಕುರ್ಚಿಗಳ ವಿಡಿಯೋ ಹಂಚಿಕೊಂಡಿದೆ.

ಅಡಬಿಟ್ಟಿ ಮತ್ತು ಲಂಚದ ಹಣದಲ್ಲಿ ಬಿಜೆಪಿ ಜನಸ್ಪಂದನಾ ಕಾರ್ಯಕ್ರಮ: ಗುಡುಗಿದ ಸಿದ್ದು

ಇದು ಜನಸ್ಪಂದನೆಯಲ್ಲ, ಖಾಲಿ ಕುರ್ಚಿಗಳ ಸ್ಪಂದನೆ. ಇದು ಜನೋತ್ಸವವಲ್ಲ, ಖಾಲಿ ಕುರ್ಚಿಗಳ ಉತ್ಸವ! ರಾಜ್ಯಕ್ಕೆ ದ್ರೋಹವೆಸಗಿ ಪೊಳ್ಳು ಸಮಾವೇಶ ಮಾಡಿದ್ದಕ್ಕೆ ಜನತೆ ತಕ್ಕ ಉತ್ತರ ಕೊಟ್ಟಿದ್ದಾರೆ.  ಅವರ ಒಂದು ವರ್ಷದ ಸಾಧನೆ ಏನೆಂದು ಈ ಖಾಲಿ ಕುರ್ಚಿಗಳೇ ಹೇಳುತ್ತಿವೆ ಎಂದು ಬಿಜೆಪಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟ್ಯಾಗ್ ವ್ಯಂಗ್ಯವಾಡಿದೆ.

ರಾಜ್ಯ ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಶಕ್ತಿ ಪ್ರದಶರ್ನಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಅದ್ದೂರಿ ಬಿಜೆಪಿ ಜನಸ್ಪಂದನ ಸಮಾವೇಶ ಆಯೋಜನೆ ಮಾಡಿದೆ. ಈ ಮೂಲಕ ಮುಂಬರುವ ವಿಧಾನಸಭಾ ಚುಣಾವಣೆ ತಯಾರಿ ನಡೆಸಿದೆ.

ಸುಮಾರು 40 ಎಕರೆ ವಿಸ್ತೀರ್ಣದಲ್ಲಿ ಜನಸ್ಪಂದನ ಸಮಾವೇಶ ಆಯೋಜನೆ ಮಾಡಿದ್ದು, 3 ಲಕ್ಷ ಜನರಿಗೆ ಊಟದ ವ್ಯವಸ್ಥೆ, ಸುಮಾರು 200 ಎಕರೆ ಪ್ರದೇಶದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ, ಸರ್ಕಾರಿ ಹಾಗೂ ಖಾಸಗಿ ಸೇರಿದಂತೆ 5 ಸಾವಿರ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಬಿಜೆಪಿ ಮುಂಡರು, ಶಾಸಕರು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿ ಹಲವು ಗಣ್ಯರು ಭಾಗಿಯಾಗಿದ್ರು.

Follow Us:
Download App:
  • android
  • ios