ಬಿಜೆಪಿ ಬಾಹುಳ್ಯವಿಲ್ಲದ ಸ್ಥಳದಲ್ಲೇ ಮೊದಲ ಜನಸ್ಪಂದನ ಸಮಾವೇಶ, ಬಿಜೆಪಿ ಟಾರ್ಗೆಟ್ ಏನು..?

ಬಿಜೆಪಿ ಬಾಹುಳ್ಯವಿಲ್ಲದ ಸ್ಥಳದಲ್ಲೇ ಮೊದಲ ಸಮಾವೇಶ/ ವಲಸಿಗ ಮಂತ್ರಿಗಳ ಮುಂದಾಳತ್ವದಲ್ಲಿ ನಡೆಯಿತು ಮೊದಲ ಸಮಾವೇಶ/ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಭಾಗದಲ್ಲಿ ಸ್ಥಾನ ಹೆಚ್ಚಿಸಿಕೊಳ್ಳುವ ಯತ್ನ/ವಲಸಿಗರಾದ ಎಂಟಿಬಿ, ಸುಧಾಕರ್ ಮುಂದಿಟ್ಟುಕೊಂಡು ಹೆಚ್ಚು ಸ್ಥಾನ ಗೆಲ್ಲೋ ಪ್ರಯತ್ನ.

How Is Karnataka BJP First Janaspandana Rally In Doddaballapur explainer rbj

ಬೆಂಗಳೂರು , (ಸೆಪ್ಟೆಂಬರ್ 10): ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಐದಾರು ತಿಂಗಳು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಕಮಲ ಪಡೆ ಸಜ್ಜಾಗಿದ್ದು, ಇದಕ್ಕೆ ಪೂರಕವೆಂಬಂತೆ ಬಿಜೆಪಿ ಇಂದು(ಸೆ.10) ಹೈಕಮಾಂಡ್ ನಾಯಕರ ಅನುಪಸ್ಥಿತಿಯಲ್ಲಿ ಬಿಜೆಪಿ ಜನಸ್ಪಂದನ ಸಮಾವೇಶ ಮಾಡುವ ಮೂಲಕ ಮುಂದಿನ ಚುನಾವಣೆಗೆ ರಣಕಹಳೆ ಮೊಳಗಿಸಿದೆ. 

ಹೌದು....ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಂದ್ರದ ಜನಪರ ಯೋಜನೆಗಳನ್ನ ಮನೆ-ಮನೆಗೆ ಮುಟ್ಟಿಸಿ ಎಂದು ರಾಜ್ಯ ಬಿಜೆಪಿ ನಾಯಕರ ಕಿವಿಗೆ ಊದಿದ್ದರು. ಈ ಹಿನ್ನೆಲೆಯಲ್ಲಿ ಮೋದಿ ಮೋಡಿಗೆ ಹುರುಪಿನೊಂದಿಗೆ ಸಿಡಿದೆದ್ದ ಕಮಲ ಪಡೆ ದೊಡ್ಡಬಳ್ಳಾಪುರದಲ್ಲಿ ಬೃಹತ್ ಸಮಾವೇಶವನ್ನು ಮಾಡಿ ಶಕ್ತಿ ಪ್ರದರ್ಶನ ಮಾಡಿದೆ.

ಬಿಜೆಪಿ ಬಾಹುಳ್ಯವಿಲ್ಲದ ಸ್ಥಳದಲ್ಲೇ  ಮೊದಲ ಸಮಾವೇಶ
How Is Karnataka BJP First Janaspandana Rally In Doddaballapur explainer rbj

2018ರಲ್ಲಿ ಮೈಸೂರು ಕರ್ನಾಟಕದಲ್ಲಿ ಬಿಜೆಪಿ ಕಡಿಮೆ ಸ್ಥಾನ ಗಳಿಸಿತ್ತು. ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲೂ ಪಕ್ಷದ ಸಂಘಟನೆ ಗಟ್ಟಿಯಾಗಿಲ್ಲ.ಆದರೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಮಾಡಿದೆ. ಈ ಮೂಲಕ ಹಳೆ ಮೈಸೂರು ಭಾಗದಲ್ಲಿ ಪ್ರಬಲವಾಗಿರುವ ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಟಕ್ಕರ್‌ ನೀಡಿದೆ. ಬಿಜೆಪಿ ಬಾಹುಳ್ಯವಿಲ್ಲದ ಸ್ಥಳದಲ್ಲೇ  ಮೊದಲ ಸಮಾವೇಶ ಮಾಡಿರುವ ಹಿಂದೆ ಹತ್ತು ಹಲವು ಲೆಕ್ಕಾಚಾರಗಳಿವೆ.

ಕೇಸರಿ ಪಾಳೆಯದಲ್ಲಿ ಮಿಂಚಿನ ಸಂಚಲನ, ಬಿಜೆಪಿಗೆ ಕರ್ನಾಟಕ ಗೆದ್ದು ಕೊಡಲಿದ್ಯಾ ಮೋದಿ ಬೂಸ್ಟರ್..?

ಹಳೆ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆ ನಿರೀಕ್ಷಿತ ಮಟ್ಟದಲ್ಲಿ ಬಲವಾಗಿಲ್ಲ ಎಂಬ ಅಂಶವನ್ನು ಹೈಕಮಾಂಡ್ ನಾಯಕರು ಹಿಂದೆ ರಾಜ್ಯಕ್ಕೆ ಆಗಮಿಸಿ ನಡೆಸಿದ ಕೋರ್‌ ಕಮಿಟಿ ಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿದ್ದರು. ಇಲ್ಲಿ ಪಕ್ಷ ಬಲವಾದರೆ ಮಾತ್ರ ಪೂರ್ಣ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯಬಹುದು ಎಂಬ ಮಾತನ್ನೂ ಸ್ಪಷ್ಟವಾಗಿ ಹೇಳಿದ್ದಾರೆ. ಈ ಹಿನ್ನೆಯಲ್ಲಿ ರಾಜ್ಯ ನಾಯಕರು ಈ ಭಾಗದಲ್ಲಿ ಜನಸ್ಪಂದನ ಸಮಾವೇಶದೊಂದಿಗೆ ಪಕ್ಷ ಸಂಘಟನೆಗೆ ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ ಎಂದು ರಾಜಕೀಯ ಪಂಡಿತರ ಲೆಕ್ಕಾಚಾರ.

ಹಳೆ ಮೈಸೂರು ಭಾಗದಲ್ಲಿ ಕಮಲ ಅರಳಿಸುವ ಪ್ಲಾನ್
How Is Karnataka BJP First Janaspandana Rally In Doddaballapur explainer rbj

ಯೆಸ್...ಉತ್ತರ ಕರ್ನಾಟಕ, ಕರಾವಳಿ ಭಾಗದಲ್ಲಿ ಬಿಜೆಪಿ ತನ್ನ ಹಿಡಿತ ಹೊಂದಿದೆ. ಹಾಗಾಗಿ ಆ ಭಾಗಗಲ್ಲಿ ಬಿಜೆಪಿ ತಲೆ ನೋವು ಇಲ್ಲ. ಆದ್ರೆ, ಬಿಜೆಪಿಗೆ ದೊಡ್ಡ ತಲೆನೋವಾಗಿದ್ದು ಅಂದ್ರೆ ಅದು ಹಳೆ ಮೈಸೂರು. ಬಿಜೆಪಿ ಬಹುಮತ ಪಡೆಯಲು ಮೈಸೂರು ಕರ್ನಾಟಕ ಅಡ್ಡಿಯಾಗಿದ್ದು, ಈ ಬಾರಿ ಈ ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ರಾಜ್ಯ ನಾಯಕರು ಮಾತ್ರವಲ್ಲದೇ ಹೈಕಮಾಂಡ್‌ ಸಹ ನಾನಾ ತಂತ್ರಗಳನ್ನ ರೂಪಿಸುತ್ತಿದೆ. 

ಬಿಜೆಪಿ ಜನಸ್ಪಂದನ ಸಮಾವೇಶ: ಕನ್ನಡದಲ್ಲೇ ಭಾಷಣ ಶುರುಮಾಡಿದ ಸ್ಮೃತಿ ಇರಾನಿ ಹೇಳಿದ್ದಿಷ್ಟು!

ಈಗಾಗಲೇ ಹಳೆ ಮೈಸೂರು ಭಾಗದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಮುಖಂಡರನ್ನು ಸೆಳೆಯುವ ಪ್ರಯತ್ನ ಆರಂಭವಾಗಿದೆ. ಇಂಥ ಸಮಾವೇಶಗಳು ಇತರ ಮುಖಂಡರು ಹಾಗೂ ಕಾರ್ಯಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ನೆರವಾಗುತ್ತವೆ. ಮುಖ್ಯವಾಗಿ ಈ ಭಾಗದ ಜನರಿಗೂ ಬಿಜೆಪಿ ಬಗ್ಗೆ ವಿಶೇಷವಾದ ಆಸಕ್ತಿ ಮೂಡುತ್ತದೆ. ಇದು ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲು ಕಾರಣವಾಗುತ್ತದೆ ಎನ್ನುವುದು ಬಿಜೆಪಿಯ ಪ್ಲಾನ್‌.

 ವಲಸಿಗ ಮಂತ್ರಿಗಳಿ ಸಮಾವೇಶ ಮುಂದಾಳತ್ವ
How Is Karnataka BJP First Janaspandana Rally In Doddaballapur explainer rbj

ಮೊದಲೇ ಬಿಜೆಪಿಯಲ್ಲಿ ಒಳಗೊಳಗೆ ಮೂಲ ಹಾಗೂ ವಲಸಿಗ ಎನ್ನುವ ಕಿಚ್ಚು ಉರಿಯುತ್ತಿದೆ. ಇದರ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಚ್ಚು ವಲಸಿಗ ಮಂತ್ರಿಗಳ ಮೇಲೆ ಅವಲಂಬಿತರಾಗಿರುವುದು ಗಮನರ್ಹ ಜೊತೆಗೆ ಅಚ್ಚರಿ ಮೂಡಿಸಿದೆ.

ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಭಾಗದಲ್ಲಿ ಸ್ಥಾನ ಹೆಚ್ಚಿಸಿಕೊಳ್ಳುವ ಸಲುವಾಗಿ ಈ ಭಾಗದಲ್ಲಿ ಒಕ್ಕಲಿಗ ಸಮುದಾಯ ಪ್ರಾಬಲ್ಯ ಹೊಂದಿರುವುದರಿಂದ ಆ ಸಮುದಾಯದ ಮುಖಂಡರನ್ನು ಜನಸ್ಪಂದನ ಕಾರ್ಯಕ್ರಮ ಆಯೋಜಿಸಲು ಮುಂಚೂಣಿಗೆ ಬಿಡಲಾಗಿದೆ. ಈ ಮೂಲಕ ವಲಸಿಗ ಮಂತ್ರಿಗಳ ಮೇಲೆ ಬೊಮ್ಮಾಯಿ ಹೆಚ್ಚು ಅವಲಂಬಿತರಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಯೂ ಆಗಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರು ಇದರ ನೇತೃತ್ವ ವಹಿಸಿಕೊಂಡಿದ್ದು, ಇವರ ಜೊತೆಗೆ ಎಂಟಿಬಿ ನಾಗರಾಜ್, ಮುನಿರತ್ನ ಕಾರ್ಯಕ್ರಮದ ಭರ್ಜರಿ ಯಶಸ್ಸಿಗೆ ಟೊಂಕ ಕಟ್ಟಿನಿಂತಿದ್ರು.

ಬಿಜೆಪಿ ಜನಸ್ಪಂದನ ಸಮಾವೇಶ: ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ಉದ್ಯೋಗ ನೀಡುವುದಾಗಿ ಘೋಷಿಸಿದ ಸಿಎಂ

ಮೊದಲ ಜನಸ್ಪಂದನ ಸಮಾವೇಶಕ್ಕೆ ಜನ ಸ್ಪಂದಿಸಿದ್ರಾ?
How Is Karnataka BJP First Janaspandana Rally In Doddaballapur explainer rbj

ಆಡಳಿತರೂಢ ಸರ್ಕಾರಗಳು ಜನ ಸೇರಿಸಿ ಕಾರ್ಯಕ್ರಮಗಳನ್ನು ಯಶಸ್ವಿ ಮಾಡಿಕೊಳ್ಳುವುದು ಕಾಮನ್. ಆದ್ರೆ, ಇವತ್ತು ಬಿಜೆಪಿಯ ಜನಸ್ಪಂದನ ಸಮಾವೇಶ ನಡೆದಿದ್ದು, ಬಿಜೆಪಿ ಬಾಹುಳ್ಯವಿಲ್ಲದ ಸ್ಥಳದಲ್ಲೇ.ಸಮಾವೇಶ ನಡೆದ ಜಾಗದಲ್ಲಿ ಬಿಜೆಪಿಗೆ ಸಿಕ್ಕಿರುವುದು ಐದೇ ಸ್ಥಾನ. ಹಾಗಾಗಿ, ಈ ಜಾಗದಲ್ಲಿ ಹೇಳಿಕೊಳ್ಳುವಷ್ಟು ಬಿಜೆಪಿಗೆ ಬಲವಿಲ್ಲ. ಅದರ ಮಧ್ಯೆ ಸಮಾವೇಶ ನಡೆಸಿದ್ದು, ಇದಕ್ಕೆ ಜನ ಸ್ಪಂದನೆ ಮಾಡಿದ್ರಾ? ಇಲ್ಲಾ? ಎನ್ನುವ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ಶುರುವಾಗಿವೆ. ಬಿಜೆಪಿ ನಾಯಕರು ಮೂರು ಲಕ್ಷಕ್ಕೂ ಹೆಚ್ಚು ಜನ ಸೇರಿದ್ರು ಎಂದು ಹೇಳಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ವಿರೋಧ ಪಕ್ಷಗಳು ಅಷ್ಟು ಸೇರಿಲ್ಲ ಎನ್ನುವ ವಾದಗಳನ್ನು ಮಾಡುತ್ತಿವೆ. ಹಣ, ಎಣ್ಣೆ, ಊಟ ಕೊಟ್ಟ ಜನರನ್ನು ಕರೆತರಲಾಗಿದೆ ಎನ್ನವು ಆರೋಪಗಳನ್ನ ಸಹ ಮಾಡುತ್ತಿದ್ದಾರೆ. ಅಲ್ಲದೇ ಖಾಲಿ ಕುರ್ಚಿ ಇರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿವೆ.

ಈ ಎಲ್ಲಾ ಅಂಶಗಳನ್ನು ಸೂಕ್ಷ್ಮೂವಾಗಿ ಗಮನಿಸಿದ್ರೆ, ಬಿಜೆಪಿಯ ಮೊದಲ ಸಮಾವೇಶಕ್ಕೆ ಹರಿದುಬಂದ ಜನ ಅಷ್ಟಕಷ್ಟೇ ಅಂತ ಹೇಳಬಹುದು. ಇನ್ನು ಮತ್ತೊಂದೆಡೆ ಏನು ನೆಲೆ ಇಲ್ಲದ ಕಡೆ ಇಷ್ಟಾದ್ರೂ ನೆಲೆ ಕಂಡುಕೊಳ್ಳುತ್ತಿದ್ದೇವೆ ಎಂದು ಕೆಲ ಬಿಜೆಪಿ ನಾಯಕರು ತೃಪ್ತಿಪಟ್ಟುಕೊಂಡಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಬಿಜೆಪಿ ಸಾಮಾರ್ಥ್ಯವಿಲ್ಲದ ಕಡೆ ಮೊದಲ ಜನಸ್ಪಂದನ ಸಮಾವೇಶ ಆಯೋಜಿಸಿದ್ದು, ಇದು ಮುಂಬರು ಅಸೆಂಬ್ಲಿ ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಎನ್ನುವುದು ಕಾದುನೋಡಬೇಕಿದೆ.

Latest Videos
Follow Us:
Download App:
  • android
  • ios