Asianet Suvarna News Asianet Suvarna News

Dharawada: ಕೈ ಅಭ್ಯರ್ಥಿ ನಾನೇ ನಾನೇ ಅಂತ ತಿರುಗಾಡ್ತಿದ್ದ ದೀಪಕ್ ಚಿಂಚೋರೆಗೆ ಕಾಂಗ್ರೆಸ್ ನೋಟಿಸ್

2023 ರ ವಿಧಾನಸಭೆಗೆ ಚುಣಾವಣೆಗೂ ಮುನ್ನವೇ  ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ನಾನೇ ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗಾಡುತ್ತಿರುವ ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆಗೆ ಹುಬ್ಬಳ್ಳಿ ಧಾರವಾಡ ಜಿಲ್ಲಾ ಕಾಂಗ್ರೆಸ್ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದೆ.

congress party in Dharawada sent notice to party member deepak chinchore akb
Author
First Published Sep 28, 2022, 3:57 PM IST

ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ 
ಧಾರವಾಡ : 2023 ರ ವಿಧಾನಸಭೆಗೆ ಚುಣಾವಣೆಗೂ ಮುನ್ನವೇ  ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ನಾನೇ ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗಾಡುತ್ತಿರುವ ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆಗೆ ಹುಬ್ಬಳ್ಳಿ ಧಾರವಾಡ ಜಿಲ್ಲಾ ಕಾಂಗ್ರೆಸ್ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದೆ. ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಅವರು ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಚುನಾವಣೆ ಘೋಷಣೆಗೂ ಮೊದಲೇ ತಮ್ಮ ಹೋರ್ಡಿಂಗ್ಸ್‌ಗಳನ್ನು ಹಾಕಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿ ಪ್ರಶ್ನಿಸಿ ಸದ್ಯ ಹುಬ್ಬಳ್ಳಿ ಧಾರವಾಡ ಜಿಲ್ಲಾ ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ರಾಬರ್ಟ್‌  ದದ್ದಾಪುರಿ, ದೀಪಕ್‌ಗೆ  ನೋಟಿಸ್ ನೀಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ (Congress Candidate) ಎಂದು ನೀವು ಸ್ವಯಂ ಘೋಷಿಸಿಕೊಂಡಿದ್ದೀರಿ. ಇದು ಪಕ್ಷದ ಸಂವಿಧಾನಕ್ಕೆ (Constitution)ವಿರುದ್ಧವಾದ ನಡವಳಿಕೆಯಾಗಿದೆ. ಪಕ್ಷದ ಸಂವಿಧಾನ ಬಾಹಿರವಾಗಿ ನೀವು ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭೆ (Dharawad west cOnstituency) ಮತಕ್ಷೇತ್ರ 74 ರ ಕಾಂಗ್ರೆಸ್ ಅಭ್ಯರ್ಥಿಎಂದು ಸಾರ್ವಜನಿಕವಾಗಿ ಹಾಕಿರುವ ಹೋರ್ಡಿಂಗ್ಸ್ ಗಳು (Hordings)  ಕರ್ನಾಟಕ ರಾಜ್ಯದ 224 ವಿಧಾನಸಭಾ ಮತಕ್ಷೇತ್ರಗಳಿಗೆ ತಪ್ಪು ಸಂದೇಶ ಹೋಗುವಂತೆ ಮಾಡಿದೆ. ಇದು ಪಕ್ಷ ವಿರೋಧಿ ಚಟುವಟಿಕೆ ಎಂಬುದು ಎದ್ದು ಕಾಣುತ್ತದೆ. ಈ ಕುರಿತು ತಮಗೆ ಸದರಿ ಹೋರ್ಡಿಂಗ್ ಗಳನ್ನು ತೆರವುಗೊಳಿಸುವಂತೆ ಕೆ.ಪಿ.ಸಿ.ಸಿ. ಉಪಾಧ್ಯಕ್ಷರು ಮತ್ತು ಹುಬ್ಬಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಸ್ತುವಾರಿ ಪಿ.ವಿ.ಮೋಹನ ಸಾಹೇಬರು ವಾಟ್ಸಪ್ (Whatsapp) ಮೂಲಕ ಸುಮಾರು
15 ದಿನಗಳ ಹಿಂದೆ ಎಚ್ಚರಿಕೆಯನ್ನು ಕೊಟ್ಟು ಸದರಿ ಹೋರ್ಡಿಂಗ್ ಗಳನ್ನು ತೆರವುಗೊಳಿಸಲು ಸೂಚಿಸಿದ್ದರು.

IIIT Dharwad ಉದ್ಘಾಟನೆ: ರಾಷ್ಟ್ರಪತಿ ದ್ರೌಪದಿಗೆ ಕೌದಿ, ಸಿಲ್ಕ್ ಸೀರೆ ನೀಡಿದ ಸುಧಾಮೂರ್ತಿ

ಆದರೆ ನೀವು ಈವರೆಗೂ ಸದರಿ ಹೋರ್ಡಿಂಗ್ಸ್ ಗಳನ್ನು ತೆರವುಗೊಳಿಸಿರುವುದಿಲ್ಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌  (Inadian National Congress) ಪಕ್ಷದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಂತಿಮಗೊಳಿಸುವವರು ಎ.ಐ.ಸಿ.ಸಿ. ಅಧ್ಯಕ್ಷರಾದ ಸೋನಿಯಾ ಗಾಂಧಿಯವರು. ಇದು ಗೊತ್ತಿದ್ದರೂ ಸಹ ತಾವೇ ಸ್ವಯಂ ಆಗಿ 'ಕಾಂಗ್ರೆಸ್‌ ಅಭ್ಯರ್ಥಿ' ಎಂದು ಸಾರ್ವಜನಿಕವಾಗಿ ಬಿಂಬಿತವಾಗುವ 30x40 ಹಾಗೂ 20x30 ಮತ್ತು 20x20 ಅಳತೆಯ ಸುಮಾರು ಹೋರ್ಡಿಂಗ್ ಗಳನ್ನು ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರ 74 ರಲ್ಲಿ ಸಾರ್ವಜನಿಕವಾಗಿ ಹಾಕಿರುತ್ತೀರಿ. ಈ ಕುರಿತು ಈಗಾಗಲೇ ಸಂಬಂಧಿತ ಬ್ಲಾಕ್ ಅಧ್ಯಕ್ಷರು, ಕೆಪಿಸಿಸಿ ಅಧ್ಯಕ್ಷ  ಡಿ.ಕೆ. ಶಿವಕುಮಾರ (D.K.Shivakumar) ಅವರಿಗೆ ಮತ್ತು ಪ್ರದೇಶ ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ರಹಮಾನ ಖಾನರಿಗೆ ಸಾಕ್ಷಾಧಾರಗಳ ಸಹಿತ ದೂರು ನೀಡಿದ್ದಾರೆ. 

Hubli-Dharwad Municipal Corporation: ನಾಲ್ಕು ಸ್ಥಾಯಿ ಸಮಿತಿಗೆ ಬಿಜೆಪಿಗರೇ ಅಧ್ಯಕ್ಷರು!

ತಮ್ಮ ಬೇಜವಾಬ್ದಾರಿಯುತ ಮತ್ತು ಅಶಿಸ್ತಿನ ನಡವಳಿಕೆಯ ಹಿನ್ನೆಲೆಯಲ್ಲಿ ತಮಗೆ ಕೊನೆಯದಾಗಿ ತಲೆ ನಿಮ್ಮ ಮೇಲೆ ಶಿಸ್ತು ಕ್ರಮ ಏಕೆ ತೆಗೆದುಕೊಳ್ಳಬಾರದು ಎಂದು ಕಾರಣ ಕೇಳಿ ಈ ಶೋಕಾಸ್ ನೋಟಿಸನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಶಿಸ್ತು ಸಮಿತಿಯು ಜಾರಿ ಮಾಡಿರುತ್ತದೆ. ಈ ನೋಟಿಸು ತಲುಪಿದ 7 ದಿನಗಳ ಒಳಗಾಗಿ ತಾವು, ತಾವೇ ಹಾಕಿರುವ ಮೇಲೆ ತಿಳಿಸಿದ ಸಾರ್ವಜನಿಕವಾಗಿ ಬಿಂಬಿತವಾಗಿರುವ ಹೋರ್ಡಿಂಗ್ಸ್ ಗಳನ್ನು ತೆರವುಗೊಳಿಸಬೇಕು ಮತ್ತು ಖುದ್ದಾಗಿ ಶಿಸ್ತು ಸಮಿತಿಯ ಅಧ್ಯಕ್ಷರ ಮುಂದೆ ಹಾಜರಾಗಿ ಲಿಖಿತ ರೂಪದಲ್ಲಿ ತಮ್ಮ ಸ್ಪಷ್ಟೀಕರಣ (Clarification) ನೀಡಬೇಕು ಎಂದು ನೋಟಿಸ್‌ನಲ್ಲಿ ಕೇಳಲಾಗಿದೆ.

Follow Us:
Download App:
  • android
  • ios