ಜನರಲ್ಲಿ ದೇಶಾಭಿಮಾನ ಮೂಡಿಸಲು ಕಾಂಗ್ರೆಸ್ ಪಾದಯಾತ್ರೆ
- ಕಾಂಗ್ರೆಸ್ ಪಾದಯಾತ್ರೆಗೆ ಶಾಸಕ ಎಚ್.ಕೆ. ಪಾಟೀಲ್ ಚಾಲನೆ
- ಜನರಲ್ಲಿ ದೇಶಾಭಿಮಾನ ಮೂಡಿಸುವುದು ಪಾದಯಾತ್ರೆ ಉದ್ದೇಶ
\ಗದಗ (ಆ.23): ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಜನರಲ್ಲಿ ದೇಶಭಿಮಾನ, ರಾಷ್ಟ್ರಭಕ್ತಿ ಮೂಡಿಸುವುದು ಕಾಂಗ್ರೆಸ್ ಪಾದಯಾತ್ರೆಯ ಉದ್ದೇಶವಾಗಿದೆ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು. ಅವರು ಸೋಮವಾರ ನಗರದ 24ನೇ ವಾರ್ಡ್‌ನ ಭೀಷ್ಮಕೆರೆ ಬನ್ನಿಮಹಾಕಾಳಿ ದೇವಸ್ಥಾನದಲ್ಲಿ ಶ್ರಾವಣ ಮಾಸದಂಗವಾಗಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಿ, ಮಾತನಾಡಿದರು.
Gadag: ಮಠದ ಹಣವನ್ನೂ ಕಿತ್ತುಕೊಳ್ಳುವ ಇವರನ್ನ ದೇವರೇ ಕಾಪಾಡಬೇಕು: ಹೆಚ್.ಕೆ.ಪಾಟೀಲ್
ಸ್ವಾತಂತ್ರ್ಯಾ ನಂತರ ದೇಶದಲ್ಲಿ ಕಾಂಗ್ರೆಸ್ ಸರ್ಕಾರವೇ ಹೆಚ್ಚಿನ ಆಡಳಿತ ನಡೆಸಿದ್ದು, ಪಂ. ಜವಾಹರಲಾಲ… ನೆಹರು, ಲಾಲ… ಬಹದ್ದೂರ ಶಾಸ್ತ್ರಿ, ಇಂದಿರಾಗಾಂಧಿ, ರಾಜೀವಗಾಂಧಿ, ಪಿ.ವಿ. ನರಸಿಂಹರಾವ್, ಮನಮೋಹನ್ ಸಿಂಗ್ ಸೇರಿದಂತೆ ಅನೇಕರು ಪ್ರಧಾನಿಗಳಾಗಿ ಇಡೀ ದೇಶದ 135 ಕೋಟಿ ಜನತೆಗೆ ಹೊಟ್ಟೆತುಂಬ ಊಟ, ವಾಸಿಸುವುದಕ್ಕೆ ಮನೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅನೇಕ ಸಮಸ್ಯೆಗಳನ್ನು ಪರಿಹರಿಸಿದ ಸಮಗ್ರ ಮಾಹಿತಿಯನ್ನು ಸಹ ಜನರಿಗೆ ನೀಡುತ್ತಾ ಬರಲಾಯಿತು.
8 ವರ್ಷಗಳ ಹಿಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ, ನರೇಂದ್ರ ಮೋದಿ ಅವರು ಚುನಾವಣೆ ಪೂರ್ವದ ತಮ್ಮ ಭಾಷಣದಲ್ಲಿ ದೇಶದಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿ, ಡೀಸೆಲ…, ಪೆಟ್ರೋಲ… ದರ ಅತ್ಯಂತ ಕಡಿಮೆ ಮಾಡುವುದು, ರೈತರು ಬೆಳೆದ ಬೆಳೆಗಳ ದರವನ್ನು ದ್ವಿಗುಣಗೊಳಿಸುವುದಾಗಿ, ಎಲ್ಲರಿಗೂ ಉಚಿತ ಅಡುಗೆ ಅನಿಲವನ್ನು ನೀಡುವ ಮೂಲಕ ಹೊಗೆರಹಿತ ಭಾರತ ಮಾಡುವ ಭರವಸೆ ನೀಡಿದ್ದರು. ಇಂದು ಅದ್ಯಾವುದೂ ಆಗಲಿಲ್ಲ. ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ದೇಶದ, ರಾಜ್ಯದ ಜನತೆ ಬೇಸತ್ತು ಹೋಗಿದ್ದು, ಜೀವನ ನಡೆಸುವುದು ಕಷ್ಟಕರವಾಗಿದೆ. ರೈತರಿಗೆ ಸರಿಯಾಗಿ ಗೊಬ್ಬರ ದೊರಯುತ್ತಿಲ್ಲ, ತುಂಬಿದ ಬೆಳೆವಿಮೆ ಸರಿಯಾಗಿ ದೊರೆಯುತ್ತಿಲ್ಲ, ಹೀಗೆ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಾ ಸರ್ಕಾರ ಅಧಿಕಾರ ನಡೆಸುತ್ತಿದೆ ಎಂದರು.
ಗ್ರಾಮಗಳ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಿ: ಎಚ್.ಕೆ.ಪಾಟೀಲ್
ಪಾದಯಾತ್ರೆಯೂ ನಗರದ ಬನ್ನಿಮಹಾಕಾಳಿ ದೇವಸ್ಥಾನದಿಂದ ಪ್ರಾರಂಭವಾಗಿ ಶೆಟ್ಟರ ದವಾಖಾನೆ, ಉಡಚಮ್ಮನ ದೇವಸ್ಥಾನ, ದರ್ಗಾ ಮೂಲಕ, ಮಕಾನಗಲ್ಲಿ, ಜಮಾದಾರ ಮನೆ ಲೈನ್‌ಗೆ ಬಂದು ಮುಕ್ತಾಯಗೊಂಡಿತು.ಈ ಸಂದರ್ಭದಲ್ಲಿ ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗುರಣ್ಣ ಬಳಗಾನೂರ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ನಗರಸಭೆ ಸದಸ್ಯರು, ಮುಖಂಡರಾದ ಪ್ರಭು ಬುರಬುರೆ, ಉಮರ್ ಫಾರೂಕ್ ಹುಬ್ಬಳ್ಳಿ ಸೇರಿದಂತೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಇದ್ದರು.