Asianet Suvarna News Asianet Suvarna News

Gadag: ಮಠದ ಹಣವನ್ನೂ ಕಿತ್ತುಕೊಳ್ಳುವ ಇವರನ್ನ ದೇವರೇ ಕಾಪಾಡಬೇಕು: ಹೆಚ್.ಕೆ.ಪಾಟೀಲ್

ದಿಂಗಾಲೇಶ್ವರ ಸ್ವಾಮೀಜಿಗಳ 30 ಪರ್ಸೆಂಟೇಜ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಹೆಚ್ ಕೆ ಪಾಟೀಲ, ಮಠದ ಹಣವನ್ನೂ ಕಿತ್ತುಕೊಳ್ಳುವ ಮನೋಭಾವ ಸರ್ಕಾರದಲ್ಲಿದ್ರೆ ಇವರನ್ನ ದೇವರೇ ಕಾಪಾಡಬೇಕು ಎಂದು ಹೇಳಿದರು. 

Gadag News Congress Mla HK Patil Reacts 30 Percentage Statement of Dingaleswara Swamiji
Author
Bangalore, First Published Apr 18, 2022, 3:22 PM IST

ಗದಗ (ಏ.18): ದಿಂಗಾಲೇಶ್ವರ ಸ್ವಾಮೀಜಿಗಳ (Dingaleshwara Swamiji) 30 ಪರ್ಸೆಂಟೇಜ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಹೆಚ್ ಕೆ ಪಾಟೀಲ (HK Patil), ಮಠದ ಹಣವನ್ನೂ ಕಿತ್ತುಕೊಳ್ಳುವ ಮನೋಭಾವ ಸರ್ಕಾರದಲ್ಲಿದ್ರೆ ಇವರನ್ನ ದೇವರೇ ಕಾಪಾಡಬೇಕು ಎಂದು ಹೇಳಿದರು. ಬಿಜೆಪಿ ಸರ್ಕಾರ (BJP Govt) ಯಾವ ಮಟ್ಟಕ್ಕೆ ಇಳಿದಿದೆ ಅನ್ನೋದು ಇದರಿಂದ ಸ್ಪಷ್ಟವಾಗುತ್ತೆ. ವಿಧಾನಸಭೆ, ಪರಿಷತ್‌ನಲ್ಲಿ ಈ ಹಿಂದೆ ಅವರದೇ ಪಕ್ಷದ ಸದಸ್ಯರು ಆ ಭಾವ ಬರುವ ಹಾಗೆ ಮಾತಾಡಿದ್ರು. ಅಲ್ಲದೇ ಗುತ್ತಿಗೆದಾರರ ಸಂಘವು ಪ್ರಧಾನ ಮಂತ್ರಿಯವರಿಗೆ (PM Narendra Modi) ಹಾಗೂ ಜೆಪಿ ನಡ್ಡಾ (JP Nadda) ಅವರಿಗೆ ಪತ್ರ ಬರೆದರು.

ಇವೆಲ್ಲದರ ನಂತರ ಸ್ವಾಮಿಗಳೇ ಆ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಂದರೆ ಎಷ್ಟು ಬಹಿರಂಗ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ‌‌. ಬಹಿರಂಗ ಭ್ರಷ್ಟಾಚಾರ ಅವರ ಕಾರ್ಯಕರ್ತನನ್ನೇ ಬಲಿ ಪಡೆದಿದೆ ಎಂಧು ಸಂತೋಷ್ ಪಾಟೀಲ ವಿಚಾರವನ್ನ ಪ್ರಸ್ತಾಪಿಸಿದ ಹೆಚ್ ಕೆ ಪಾಟೀಲ, ಇನ್ನು ಏನಾದ್ರೂ ಸಾಬೀತು ಮಾಡುವುದು ಉಳಿದಿದೆಯೆ ಎಂದು ಪ್ರಶ್ನಿಸಿದರು. ಬಿಜೆಪಿ ಸರ್ಕಾರ ರಾಜೀನಾಮೆ ಕೊಡಬೇಕು. ಈಶ್ವರಪ್ಪ ಒಬ್ಬರ ರಾಜೀನಾಮೆಯಲ್ಲ, ಬಂಧಿಸುವುದಲ್ಲ ಇಡೀ ಸರ್ಕಾರ ರಾಜೀನಾಮೆ ಕೊಡಬೇಕೆಂದು ಆಗ್ರಹಿಸುತ್ತೆನೆ ಎಂದರು. ಇಷ್ಟೆಲ್ಲ ನಡೆದರೂ ಸರ್ಕಾರ ನಡೆಸುತ್ತಿದ್ದಾರೆ ಅಂದರೆ ಇವರಿಗೆ ನಾಚಿಕೆಯಾಗ್ಬೇಕು. ಬಿಜೆಪಿ ಸರ್ಕಾರ ನೈತಿಕ ಹಕ್ಕನ್ನು ಕಳೆದುಕೊಂಡಿದೆ ಎಂದು ಹೆಚ್ ಕೆ ಪಾಟೀಲ ತಿಳಿಸಿದರು.

Chikkamagaluru: ಗೋಮಾಂಸ ಕಡಿಯುವಾಗ ಪೊಲೀಸರಿಂದ ದಾಳಿ: ಓಡಿ ಹೋದ ಗೋಕಳ್ಳರು

ಹುಬ್ಬಳ್ಳಿ ಗಲಭೆಗೆ ಪ್ರತಿಕ್ರಿಯೆ‌: ನಮ್ಮ ಭಾಗದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಿಕೊಳ್ಳಬೇಕು. ಕಳೆದ ಕೆಲ ದಿನಗಳಿಂದ ರಾಜದಲ್ಲಿ ಕ್ಷೋಭೆ ಹುಟ್ಟು ಹಾಹಲು ಪ್ರತ್ನಿಸುತ್ತಿದ್ದಾರೆ. ಅದಕ್ಕೆ ಅಂತ್ಯ ಹಾಡಬೇಕು. ಭ್ರಾತೃತ್ವವನ್ನು ಸೌಹಾರ್ದವನ್ನು ಕಾಪಾಡಿಕೊಳ್ಳುವಲ್ಲಿ ನಮ್ಮನ್ಮ ನಾವು ತೊಡಗಿಸಿಕೊಳ್ಳಬೇಕು.

ಕಲ್ಲಂಗಡಿ ಒಡೆದಿಕ್ಕಾಗಿ ಮಾತನಾಡಿದ ನಾಯಕರು ಈಗ ಮಾತಾಡುತ್ತಿಲ್ಲ: ಕಲ್ಲಂಗಡಿ ಒಡೆದವರು ಈ ಮಾತು ಹೇಳುತ್ತಿದ್ದಾರೆ. ಆದರೆ ಎಲ್ಲರಿಗೂ ದೇವರು ಸದ್ಬುದ್ಧಿ ಕೊಡಲಿ, ಭ್ರಾತೃತ್ವ ಕಾಪಾಡುವಲ್ಲಿ ಎಲ್ಲರೂ ಮುಂದಾಗಬೇಕು ಎಂದು ಜನರಿಗೆ ಹೆಚ್ ಕೆ ಪಾಟೀಲ ಕಿವಿ ಮಾತು ಹೇಳಿದರು.

Mangaluru: ಭಗವಾಧ್ವಜ ಹಾನಿಗೈದವರ ವಿರುದ್ದ ಶಾಸಕ ಹರೀಶ್ ಪೂಂಜಾ ಕಿಡಿ

ಮಠಮಾನ್ಯಗಳ ಅನುದಾನದಲ್ಲಿ 30% ಕಮಿಷನ್ ನೀಡಬೇಕಿದೆ: ಮಠ ಮಾನ್ಯಗಳಿಗೆ ಸರ್ಕಾರ ನೀಡುವ ಅನುದಾನದಲ್ಲಿ (Grant) ಶೇ. 30 ಷ್ಟು ಕಮಿಷನ್ (Commission) ಕೊಡಬೇಕಿದೆ. ಇಂದು ಭ್ರಷ್ಟಾಚಾರದ (Corruption) ಪರಿಸ್ಥಿತಿ ಇಲ್ಲಿಗೆ ಬಂದು ನಿಂತಿದೆ. ಅನುದಾನದಲ್ಲಿ ಅಧಿಕಾರಿಗಳ ಕಡಿತ ಮಾಡದೇ ಅನುದಾನ ನೀಡಲು ಸಾಧ್ಯವಿಲ್ಲ ಎನ್ನುತ್ತಾರೆ. ಬೆಂಗಳೂರಿನಲ್ಲಿ (Bengaluru) ಐಸ್‌ಕ್ರೀಂ ಬಿಡುಗಡೆಯಾದರೆ ನಮ್ಮ ಉತ್ತರ ಕರ್ನಾಟಕಕ್ಕೆ (North Karnataka) ಬರೋದು ಬರೀ ಐಸ್‌ಕ್ರೀಂ ಕಡ್ಡಿ ಮಾತ್ರ. ಹೀಗಾಗಿ 30 % ಕಮಿಷನ್ ಕಟ್ ಆದ ಮೇಲೆ ಕಟ್ಟಡ ಶುರುವಾಗುತ್ತದೆ ಎಂದು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿಯಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ. 

Follow Us:
Download App:
  • android
  • ios