Asianet Suvarna News Asianet Suvarna News

ಗ್ರಾಮಗಳ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಿ: ಎಚ್‌.​ಕೆ.​ಪಾ​ಟೀ​ಲ್

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಒಂದು ಉತ್ತಮ ಕಾರ್ಯಕ್ರಮವಾಗಿದ್ದು, ಜಿಲ್ಲಾಡಳಿತವು ಸಾರ್ವಜನಿಕರಿಗೆ ಸ್ಪಂದಿಸುವದರ ಮೂಲಕ ಜನರ ಬದುಕಿನಲ್ಲಿ ಬದಲಾವಣೆ ತರಲು ಮುಂದಾಗಬೇಕೆಂದು ಶಾಸಕ ಎಚ್‌.ಕೆ. ಪಾಟೀಲ್ ಹೇಳಿ​ದ​ರು. 

Create an enabling environment for the development of villages says mla hk patil gvd
Author
Bangalore, First Published Aug 21, 2022, 10:29 PM IST

ಗದಗ (ಆ.21): ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಒಂದು ಉತ್ತಮ ಕಾರ್ಯಕ್ರಮವಾಗಿದ್ದು, ಜಿಲ್ಲಾಡಳಿತವು ಸಾರ್ವಜನಿಕರಿಗೆ ಸ್ಪಂದಿಸುವದರ ಮೂಲಕ ಜನರ ಬದುಕಿನಲ್ಲಿ ಬದಲಾವಣೆ ತರಲು ಮುಂದಾಗಬೇಕೆಂದು ಶಾಸಕ ಎಚ್‌.ಕೆ. ಪಾಟೀಲ್ ಹೇಳಿ​ದ​ರು. ಅವರು ಗದಗ ತಾಲೂಕಿನ ಬಿಂಕದಕಟ್ಟಿಗ್ರಾಮದಲ್ಲಿ ಜರುಗಿದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಯಕವೇ ಕೈಲಾಸ ಎಂಬ ಬಸವಣ್ಣರ ವಚನವನ್ನು ಎಲ್ಲ ಅಧಿಕಾರಿಗಳು ಅಳವಡಿಸಿಕೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವದರ ಮೂಲಕ ಗ್ರಾಮೀಣ ಜನರ ಬದುಕಿನ ಗುಣಮಟ್ಟಎತ್ತರಿಸಲು ಮುಂದಾಗಬೇಕು ಎಂದರು.

ಜಿಲ್ಲೆಯ ಎಲ್ಲ ಗ್ರಾಮಗಳನ್ನು ಪೋಡಿ ಮುಕ್ತ ಗ್ರಾಮಗಳನ್ನಾಗಿಸಬೇಕು. ಪ್ರಸ್ತುತ ಈ ಕಾರ್ಯದಲ್ಲಿ ತುಂಬಾ ವಿಳಂಬವಾಗುತ್ತಿದ್ದು, ಇದನ್ನು ತಡೆಯಲು ಗ್ರಾಮಗಳಲ್ಲಿ ವಿಶೇಷ ಅದಾಲತ್‌ ಆಯೋಜಿಸುವಂತೆ ತಿಳಿಸಿದ ಅವರು, ಗ್ರಾಮೀಣ ಭಾಗದ ಎಷ್ಟೋ ಜನರಿಗೆ ಪಿಂಚಣಿ ಸ್ಥಗಿತವಾಗಿದ್ದು ಈ ಕುರಿತು ಅಧಿಕಾರಿ, ಸಿಬ್ಬಂದಿಗಳಿಗೆ ಮಾಹಿತಿ ಇರುವುದಿಲ್ಲ ಅಂತಹ ಪಿಂಚಣಿದಾರರನ್ನು ಗುರುತಿಸಿ ಅರ್ಹರೆಲ್ಲರಿಗೂ ಪಿಂಚಣಿ ಸೌಲಭ್ಯ ಒದಗಿಸಲು ಅಧಿಕಾರಿ, ಸಿಬ್ಬಂದಿಗಳು ಮುಂದಾಗಬೇಕು. ಪ್ರಸ್ತುತ ಜನರ, ಜನಪ್ರತಿನಿಧಿಗಳ ದೂರುಗಳಿಗೆ ಸ್ಪಂದಿಸಿ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಬೇಕಾದಂತಹ ವಾತಾವರಣ ನಿರ್ಮಿಸುವದರ ಮೂಲಕ ಜನರ ಬದುಕಿನ ಗುಣಮಟ್ಟ ಸುಧಾರಿಸಲು ಮುಂದಾಗಬೇಕು. ಹೆಸರು ಬೆಂಬಲ ಬೆಲೆ ಕೇಂದ್ರವನ್ನು ಪ್ರಾರಂಭಿಸುವಂತೆ ಕೋರಿದರು.

Gadag: ಸಾವರ್ಕರ್ ಇವರ ಆರಾಧ್ಯ ದೈವ: ಇವರ ಮನೆ ಹೆಸರೂ ವೀರ ಸಾವರ್ಕರ್!

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌ ಮಾತನಾಡಿ, ಕಂದಾಯ ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿ ಸೌಲಭ್ಯಗಳನ್ನು ಮನೆ ಬಾಗಿಲಿಗೆ ಒದಗಿಸುವುದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಪಹಣಿ ತಿದ್ದುಪಡಿ, ಪೋತಿ,ಪಿಂಚಣಿ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ವಿತರಿಸುವದಾಗಿದೆ. ಅಲ್ಲದೇ ಸಮುದಾಯಿಕ ಹಾಗೂ ಇತರೆ ಇಲಾಖೆಗಳ ಸಮಸ್ಯೆಗಳನ್ನು ಆಲಿಸಿ ಆದ್ಯತೆ ಮೇರೆಗೆ ಪರಿಹರಿಸಲಾಗುವುದು ಎಂದರು.

18 ವರ್ಷ ಮೇಲ್ಪಟ್ಟವರನ್ನು ಕಡ್ಡಾಯವಾಗಿ ಮತದಾರರ ಪಟ್ಟಿಗೆ ಸೇರಿಸುವದು ಹಾಗೂ ಆಧಾರ ಜತೆ ಮತದಾರರ ಗುರುತಿನ ಚೀಟಿ ಜೊಡಣೆಗೆ ಪ್ರತಿಯೊಬ್ಬರು ಮುಂದಾಗುವಂತೆ ತಿಳಿಸಿದರು. ವಿವಿಧ ಇಲಾಖೆಗಳಿಂದ ಜಾರಿಯಿರುವ ಯೋಜನೆಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ಒದಗಿಸಲು ಅಧಿಕಾರಿಗಳು ಮುಂದಾಗಬೇಕು ಎಂದ​ರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಗಂಗವ್ವ ತಡಸಿ, ಉಪಾಧ್ಯಕ್ಷ ಅಶೋಕ ಕರೂರ, ಜಿಪಂ ಸಿಇ​ಓ ಡಾ.ಸುಶೀಲ.ಬಿ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ತಹಸೀಲ್ದಾರ ಕಿಶನ ಕಲಾಲ್‌, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ, ಭೂ ದಾಖಲೆಗಳ ಉಪನಿರ್ದೇಶಕ ರವಿಕುಮಾರ ಎಂ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟಪ್ಪನವರ, ಕೌಶಲ್ಯಭಿವೃದ್ಧಿ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮಂಜುಳಾ ಪೂಜಾರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು,ಗ್ರಾಮ ಪಂಚಾಯತ ಸದಸ್ಯರು, ಸಾರ್ವಜನಿಕರು ಹಾಜರಿದ್ದರು.

ಅಪ್ಪು ಕುಟುಂಬಸ್ಥರೇ ನನ್ನ ಮಗುವಿಗೆ ಹೆಸರಿಡಬೇಕು : ಗದಗದಿಂದ ಅಭಿಮಾನಿಯ ವಿಶಿಷ್ಟ ಬಯಕೆ!

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌ ಅವರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗೆ ಪೌಷ್ಠಿಕ ಆಹಾರ ಪೂರೈಕೆ ಕುರಿತು ಪರೀಶಿಲಿಸಿ ಸೂಕ್ತ ನಿರ್ದೇಶನಗಳನ್ನು ನೀಡಿ ಎಸ್‌ಸಿ,ಎಸ್‌ಟಿ ಕಾಲನಿಗೆ ಭೇಟಿ ನೀಡಿದರು. ನ್ಯೂಟ್ರಿಸಿಯನ್‌ ಗಾರ್ಡನ್‌ಗೆ ಸಸಿ ನೆಡುವ ಮೂಲಕ ಚಾಲನೆ ನೀಡಿದರು. ಶಾಸಕರಾದ ಎಚ್‌.ಕೆ.ಪಾಟೀಲ ಹಾಗೂ ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆಯಿಂದ ಎರ್ಪಡಿಸಲಾಗಿದ್ದ ಆರೋಗ್ಯ ಶಿಬಿರ, ವಿವಿಧ ಇಲಾಖೆಗಳ ಮಳಿಗೆಗಳನ್ನು ಉದ್ಘಾಟಿಸಿ ವೀಕ್ಷಿಸಿದರು.ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅನಾಥ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.

Follow Us:
Download App:
  • android
  • ios