ತಾವು ಮತ್ತು ಸಿದ್ದರಾಮಯ್ಯ ಇಬ್ಬರೂ ಬಿಜೆಪಿ ವಿರುದ್ಧವಾಗಿ ಹೋರಾಟ ಮಾಡಿಕೊಂಡು ಬಂದವರು, ಆ ರೀತಿ ಯಾರು ಹೇಳಿದರು ಅಂತ ಗೊತ್ತಿಲ್ಲ. ಈ ವಿಚಾರ ಯಾವತ್ತೂ ತಮ್ಮ ಗಮನಕ್ಕೆ ಬಂದಿಲ್ಲ ಎಂದ ಕಾಂಗ್ರೆಸ್‌ ಶಾಸಕ ಬಿ.ಆರ್. ಪಾಟೀಲ್ 

ಕಲಬುರಗಿ(ಸೆ.13): ಬಿ.ಆರ್. ಪಾಟೀಲ್ ಮೂಲಕ ಬಿಜೆಪಿ ಸೇರಲು ಸಿದ್ದರಾಮಯ್ಯ ಯತ್ನಿಸಿದ್ದರು ಎನ್ನುವ ಆರೋಪಗಳನ್ನು ತಳ್ಳಿ ಹಾಕಿರುವ ಆಳಂದ ಕಾಂಗ್ರೆಸ್‌ ಶಾಸಕ ಬಿ.ಆರ್. ಪಾಟೀಲ್ ಕಲಬುರಗಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರನ್ನು ಬಿಜೆಪಿಗೆ ಸೇರಿಸುವಷ್ಟು ದೊಡ್ಡ ವ್ಯಕ್ತಿ ನಾನಲ್ಲ ಎಂದಿದ್ದಾರೆ.

ತಾವು ಮತ್ತು ಸಿದ್ದರಾಮಯ್ಯ ಇಬ್ಬರೂ ಬಿಜೆಪಿ ವಿರುದ್ಧವಾಗಿ ಹೋರಾಟ ಮಾಡಿಕೊಂಡು ಬಂದವರು, ಆ ರೀತಿ ಯಾರು ಹೇಳಿದರು ಅಂತ ಗೊತ್ತಿಲ್ಲ. ಈ ವಿಚಾರ ಯಾವತ್ತೂ ತಮ್ಮ ಗಮನಕ್ಕೆ ಬಂದಿಲ್ಲ ಎಂದರು.

ಭ್ರಷ್ಟರಿಗೆ ಕಾಂಗ್ರೆಸ್ ಸರ್ಕಾರ ಶ್ರೀರಕ್ಷೆ: ಕ್ರಮ ಕೈಗೊಳ್ಳದಿದ್ದರೆ ಸಿಎಂಗೆ ಮುತ್ತಿಗೆ

ಸಿದ್ದರಾಮಯ್ಯ ವಿರುದ್ಧ ಬಿ.ಕೆ. ಹರಿಪ್ರಸಾದ್ ಬಹಿರಂಗ ಹೇಳಿಕೆ ವಿಚಾರವಾಗಿ ಸ್ಪಂದಿಸಿದ ಪಾಟೀಲ್‌ ಬಿ.ಕೆ. ಹರಿಪ್ರಸಾದ್ ಹೈಕಮಾಂಡ್ ನಲ್ಲಿ ಇದ್ದವರು, ಆಲ್ ಇಂಡಿಯಾ ಜನರಲ್ ಸೆಕ್ರೆಟರಿ ಆಗಿ ಕೆಲಸ ಮಾಡಿದವರು. ನಮ್ಮ ಹೈಕಮಾಂಡ್ ಅವರ ಬಗ್ಗೆ ಮಾತಾಡುತ್ತಾರೆ. ಅವರ ಬಗ್ಗೆ ಮಾತಾಡೋದಿಲ್ಲ, ಹರಿಪ್ರಸಾದ ಬಹಿರಂಗವಾಗಿ ಮಾತನಾಡಿದರೆ ನಾನೇನು ಮಾಡಲಿ? ಅದರ ಬಗ್ಗೆ ನೋಡಿಕೊಳ್ಳಲು ಹೈಕಮಾಂಡಿದೆ, ಮಲ್ಲಿಕಾರ್ಜುನ ಖರ್ಗೆ ಇದ್ದಾರೆ, ರಾಹುಲ್ ಗಾಂಧಿ ಇದ್ದಾರೆ ಎಂದರು.