ಮೈಸೂರು (ಜ.17): ಏಪ್ರಿಲ್ ಬಳಿಕ ಯಡಿಯೂರಪ್ಪ ರನ್ನ ತೆಗೆಯುತ್ತಾರೆ. ನನಗೆ ಆರ್ ಎಸ್ ಎಸ್ ಮೂಲಗಳಿಂದ ಮಾಹಿತಿ ಇದೆ ಎಂದು ನಾಯಕತ್ವ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಪುನರುಚ್ಚಾರ ಮಾಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಯಡಿಯೂರಪ್ಪ ಮುಂದುವರೆಯುತ್ತಾರೆ ಎಂದು ಅಮಿತ್ ಶಾ ಹೇಳಿಕೆದ್ದಾರೆ. ಇನ್ನೇನು ಬಂದು ತೆಗೆಯುತ್ತೇನೆಂದು ಹೇಳೊಕಾಗುತ್ತಾ..?

ಯಾವುದೇ ಪಾರ್ಟಿಯ ಹೈಕಮಾಂಡ್ ಆದ್ರೂ ತೆಗೆಯುತ್ತೇನೆಂದು ಹೇಳಲ್ಲ. ಹೈಕಮಾಂಡ್ ತೆಗೆಯುತ್ತೇನೆಂದರೆ ಸರ್ಕಾರ ನಡೆಯುತ್ತಾ..? ಕೆಲಸ ಮಾಡೋಕಾಗುತ್ತಾ..?
ಅವರು ಆ ರೀತಿ ಹೇಳಬಹುದು ಆದರೆ ನನಗಿರುವ ಮಾಹಿತಿ ಬೇರೆ ಎಂದು ಸಿದ್ದಾರಾಮಯ್ಯ ಹೇಳಿದರು. 

ಅಮಿತ್ ಶಾ ಆಗಮನಕ್ಕೂ ಮುನ್ನವೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ..!

ನನಗೆ ಆರ್ ಎಸ್ಎಸ್ ಮೂಲಗಳಿಂದ ಮಾಹಿತಿ ಇದೆ.  ಸಿಎಂ ಯಡಿಯೂರಪ್ಪ ಅವರನ್ನು ಏಪ್ರಿಲ್ ಆದ ಮೇಲೆ ತೆಗೆಯುತ್ತಾರೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಿಎಂ ವಿರುದ್ಧ ಸಿಡಿ ಬ್ಲಾಮೇಲ್ ವಿಚಾರದ ಬಗ್ಗೆಯೂ ಮಾತನಾಡಿದ ಸಿದ್ದರಾಮಯ್ಯ ಯಡಿಯೂರಪ್ಪ ಈ ವಯಸ್ಸಲ್ಲಿ ಏನೇನ್ ಮಾಡಿದ್ದಾನೋ ಯಾರಿಗ್ ಗೊತ್ತು.? ಅದು ಅಸಯ್ಯವಾಗಿ ಬೇರೆ ಇದೆಯಂತಲ್ಲಪ್ಪ..! ಅದು ಗೊತ್ತಾಗ್ಬೇಕಲ್ವೆ. ಈ ಬಗ್ಗೆ ತನಿಖೆಯಾಗಬೇಕು. ಸಿಡಿಲಿ ಏನೇನ್ ಮಾಡಿದಾರೋ ಅನ್ನೊದು ಬಹಿರಂಗವಾಗಲಿ. ಎಲ್ಲವೂ ಗೊತ್ತಾಗಬೇಕು ಅಂದ್ರೆ ತನಿಖೆಯಾಗಬೇಕು ಎಣದು ಯಡಿಯೂರಪ್ಪ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.