ಈ ವರ್ಷದ ಆರಂಭದಲ್ಲಿ ಲಂಡನ್ ಪ್ರವಾಸ ಮಾಡಿದ್ದ ರಾಹುಲ್ ಗಾಂಧಿ ಭಾರಿ ವಿವಾದ ಸೃಷ್ಟಿಸಿದ್ದರು. ಇದೀಗ 5 ದಿನದ ಯೂರೋಪ್ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಈ ಬಾರಿಯೂ ಹಲವು ಸಂವಾದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಪಾಲ್ಗೊಲ್ಳುತ್ತಿದ್ದಾರೆ.

ನವದೆಹಲಿ(ಆ.29) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ಯೂರೋಪ್ ಪ್ರವಾಸಕ್ಕೆ ಸಜ್ಜಾಗಿದ್ದರೆ. ಸೆಪ್ಟೆಂಬರ್ ತಿಂಗಳ ಆರಂಭಿಕ ವಾರದಲ್ಲಿ ರಾಹುಲ್ ಗಾಂಧಿ 5 ದಿನಗಳ ಯೂರೋಪ್ ಪ್ರವಾಸ ಕೈಗೊಳ್ಳಲಿದ್ದಾರೆ. ದೆಹಲಿಯಲ್ಲಿ ಜಿ20 ಸಭೆ ನಡೆಯುತ್ತಿರುವ ವೇಳೆ ರಾಹುಲ್ ಗಾಂಧಿ ಯೂರೋಪ್ ಪ್ರವಾಸದಲ್ಲಿ ಕಾಲ ಕಳೆಯಲಿದ್ದಾರೆ. ಬೆಲ್ಜಿಯಂನಲ್ಲಿ ಯೂರೋಪಿಯನ್ ಕಮಿಷನ್ ಸಚಿವರು, ಪ್ಯಾರಿಸ್‌ನಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ, ನಾರ್ವೆ ಸೇರಿದಂತೆ ಹಲವು ದೇಶಗಳಿಗೆ ಭೇಟಿ ನೀಡಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಸೆಪ್ಟೆಂಬರ್ 7 ರಂದು ರಾಹುಲ್ ಗಾಂಧಿ ಬ್ರೂಸೆಲ್ಸ್‌ನಲ್ಲಿ ಯೋರಿಪಿಯನ್ ಯೂನಿಯನ್ ಮೆಂಬರ್ಸ್ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಸೆಪ್ಟೆಂಬರ್ 8 ರಂದು ಪ್ಯಾರಿಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ. ಸೆಪ್ಟೆಂಬರ್ 8 ರಂದು ಪ್ಯಾರಿಸ್‌ನ ಲೆಬರ್ ಯೂನಿಯನ್ ಘಟಕಕ್ಕೆ ಭೇಟಿಯಾಗಿ ಸದಸ್ಯರ ಜೊತೆ ಚರ್ಚೆ ನಡೆಸಲಿದ್ದಾರೆ. ಸೆಪ್ಟೆಂಬರ್ 10 ರಂದು ರಾಹುಲ್ ಗಾಂಧಿ ನಾರ್ವೆಗೆ ಭೇಟಿ ನೀಡಲಿದ್ದು, ಭಾರತೀಯ ಸಮುದಾಯವನ್ನುದ್ದೇಶಿ ಭಾಷಣ ಮಾಡಲಿದ್ದಾರೆ. 

ಉದ್ಯಮಗಳಿಗೆ ಏಕರೂಪದ ಜಿಎಸ್‌ಟಿ ಮಾಡಬೇಕು: ರಾಹುಲ್‌ ಗಾಂಧಿ

ಈ ವರ್ಷದ ಆರಂಭದಲ್ಲಿ ರಾಹುಲ್ ಗಾಂಧಿ ಲಂಡನ್ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ರಾಹುಲ್ ಗಾಂಧಿ ಆಡಿದ್ದ ಮಾತುಗಳು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಪ್ರಜಾಪ್ರಭುತ್ವದ ಮೇಲೆ ದಾಳಿಯಾಗುತ್ತಿದೆ. ನಮ್ಮ ಸದ್ದಗಡಿಸುವ ಪ್ರಯತ್ನಗಳು ನಡೆಯತ್ತಿದೆ. ಸಂಸತ್ತಿನಲ್ಲಿ ನಾನು ಮಾತನಾಡುವಾಗ ಮೈಕ್ ಆಫ್ ಮಾಡುತ್ತಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವದಲ್ಲಿ ವಿಪಕ್ಷಗಳ ಧ್ವನಿಯನ್ನು ದಮನ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.

ದೆಹಲಿಯಲ್ಲಿ ನಡೆಯುವ ಜಿ20 ಸಭೆ ವೇಳೆ ರಾಹುಲ್ ಗಾಂಧಿ ಯೂರೋಪ್ ಪ್ರವಾಸ ಮಾಡಲಿದ್ದಾರೆ. ಇತ್ತೀಚೆಗೆ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿತ್ತು. ಈ ಹೇಳಿಕೆ ಬಳಿಕ ಇದೀಗ 2024ರ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪ್ರಧಾನಿ ಇಮೇಜ್ ಮತ್ತಷ್ಟು ಹೆಚ್ಚಿಸಿಕೊಳ್ಳಲು ಯೂರೋಪ್ ಪ್ರವಾಸ ಮಾಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.

2024ರ ಲೋಕಸಭಾ ಚುನಾವಣೆ ವಿಪಕ್ಷಗಳು ಈಗಾಗಲೇ ಇಂಡಿಯಾ ಒಕ್ಕೂಟ ಮಾಡಿಕೊಂಡಿದೆ. 26ಕ್ಕೂ ಹೆಚ್ಚು ಪಕ್ಷಗಳು ಈ ಒಕ್ಕೂಟದಲ್ಲಿ ಸೇರಿಕೊಂಡಿದೆ. ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎಂದು ಬಿಜೆಪಿ ಪದೇ ಪದೇ ವಿಪಕ್ಷಗಳ ಮೈತ್ರಿಯನ್ನು ಕುಟುಕುತ್ತಲೇ ಬಂದಿದೆ. ಇದೇ ವೇಳೆ ಹಲವು ಪಕ್ಷಗಳು ತಮ್ಮ ತಮ್ಮ ನಾಯಕರನ್ನು ಪ್ರಧಾನಿ ಅಭ್ಯರ್ಥಿ ಎಂದು ಹೇಳಿಕೆ ನೀಡಿದ್ದಾರೆ.ಈ ಸಾಲಿನಲ್ಲಿ ರಾಹುಲ್ ಗಾಂಧಿ, ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ ಸೇರಿದಂತೆ ಇತರ ಕೆಲ ನಾಯಕರು ಸೇರಿದ್ದಾರೆ.

ಚೀನಾದಿಂದ ಲಡಾಖ್‌ ಜಾಗ ಕಬಳಿಕೆ: ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ರಾಹುಲ್‌ ಗಾಂಧಿ

ಬಿಜೆಪಿ ಟೀಕೆ ಹಾಗೂ ವ್ಯಂಗ್ಯಕ್ಕೆ ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್ ಉತ್ತರಿಸಿದ್ದರು. ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ್ದರು. ಈ ಘೋಷಣೆ ಇತರ ಪಕ್ಷಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಇಂಡಿಯಾ ಸಭೆಯಿಂದ ಬಿಜೆಪಿ ವಿಚಲಿತಗೊಂಡಿದೆ. ಈ ಬಾರಿ ಇಂಡಿಯಾ ಒಕ್ಕೂಟದತ್ತ ಜನರ ಒಲವಿದೆ. ಹೀಗಾಗಿ ಮೋದಿ ಮತ್ತೆ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.