ಧರ್ಮದ ಹೆಸರಿನಲ್ಲಿ ಭಾವನೆಗಳ ಕೆರಳಿಸುತ್ತಿರುವ ಬಿಜೆಪಿ: ಮಧು ಬಂಗಾರಪ್ಪ

*  ಆನವಟ್ಟಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ ಆರೋಪ
*  ಯುವ ಜನಾಂಗದ ಮೇಲೆ ಜಾತಿ ವೈಷಮ್ಯದ ಬೀಜ ಬಿತ್ತುವಂತಹ ನೀಚ ಕೃತ್ಯಗಳೇ ಬಿಜೆಪಿಯ ಸಾಧನೆಗಳು
*  ಬಿಜೆಪಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ

Congress Leader Madhu Bangarappa Slams to BJP Government grg

ಸೊರಬ(ಜು.03):  ಬಿಜೆಪಿ ಧರ್ಮದ ಹೆಸರಿನಲ್ಲಿ ಜನರ ಭಾವನೆಗಳನ್ನು ಕೆರಳಿಸುವ ಮೂಲಕ ದೇಶದಲ್ಲಿ ದ್ವೇಷದ ಕಿಚ್ಚು ಹಚ್ಚುತ್ತಿದೆ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ, ಮಾಜಿ ಶಾಸಕ ಮಧು ಬಂಗಾರಪ್ಪ ಆರೋಪಿಸಿದರು.

ತಾಲೂಕಿನ ಆನವಟ್ಟಿ ಪಟ್ಟಣದ ಆಜಾದ್‌ ಬೀದಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹಿಜಾಬ್‌ ಸಮಸ್ಯೆಯ ಸೃಷ್ಠಿ, ಪಠ್ಯಪುಸ್ತಕದಲ್ಲಿ ಹಿರಿಯ ಸಾಹಿತಿಗಳನ್ನು ಕಡೆಗಣಿಸಿ ಹಿಂದುತ್ವವನ್ನು ಬಿಂಬಿಸುವಂತಹ ವ್ಯಕ್ತಿಗಳ ಪಠ್ಯ ಅಳವಡಿಸುವುದು, ಯುವ ಜನಾಂಗದ ಮೇಲೆ ಜಾತಿ ವೈಷಮ್ಯದ ಬೀಜ ಬಿತ್ತುವಂತಹ ನೀಚ ಕೃತ್ಯಗಳೇ ಬಿಜೆಪಿಯ ಸಾಧನೆಗಳು ಎಂದು ಕುಟುಕಿದರು.

ಬಿಜೆಪಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಇಂದು ಕೋಮುವಾದ ಸೃಷ್ಠಿಸಿ, ಸಮಾಜದಲ್ಲಿ ಸಾಮರಸ್ಯವನ್ನು ಕದಡುತ್ತಿರುವ ಬಿಜೆಪಿಯವರಿಂದ ಇಂದು ದೇಶದಲ್ಲಿ ಸಮಸ್ಯೆಗಳು ಹುಟ್ಟುಕೊಂಡಿವೆ. ಆದರೆ ಕಾಂಗ್ರೆಸ್‌ ಸರ್ವಧವåರ್‍ಗಳನ್ನು ಒಗ್ಗೂಡಿಸಿ, ನಾವೆಲ್ಲರೂ ಭಾರತೀಯರು ಎಂದು ಜಗತ್ತಿಗೆ ತೋರಿಸಿಕೊಟ್ಟಿದೆ ಎಂದರು.

Karnataka Politics: 2023ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೇರೋದು ಫಿಕ್ಸ್‌: ಮಧು ಬಂಗಾರಪ್ಪ

ಶಾಸಕನಾಗಿದ್ದ ಸಂದರ್ಭದಲ್ಲಿ ಬಡರೈತರಿಗೆ ಬಗರ್‌ಹುಕುಂ ಸಾಗುವಳಿ ಹಕ್ಕುಪತ್ರ ಹಾಗೂ 94 ಸಿ ಅಡಿಯಲ್ಲಿ ಮನೆಗಳಿಗೆ ಹಕ್ಕುಪತ್ರಗಳನ್ನು ನೀಡಿದ್ದೇನೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಕೂಡ ಪಡೆದಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಬಗರ್‌ಹುಕುಂ ಹಕ್ಕುಪತ್ರದ ಮೂಲಕ ಬ್ಯಾಂಕ್‌ಗಳು ಸಾಲಸೌಲಭ್ಯ ನೀಡಬಹುದು ಎಂದು ಹೇಳಿದರೂ ಸ್ಥಳೀಯ ಶಾಸಕರು ಸಾಲ ಸೌಲಭ್ಯ ನೀಡದಿರುವಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿ, ಬಡರೈತರ ಮೇಲೆ ಪ್ರಹಾರ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷ ಚೌಟಿ ಚಂದ್ರಶೇಖರ್‌ ಮಾತನಾಡಿ, ಬಡವರು ಹಾಗೂ ಅರಣ್ಯ ವಾಸಿಗಳಿಗೆ ರಕ್ಷಣೆ ನೀಡಿದವರು ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ. ಅವರ ಮಗ ಮಧು ಬಂಗಾರಪ್ಪ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿ ಭೂ ಒಡೆತನಕ್ಕೆ ಕಾರಣರದವರು. ಆದರೆ ಶಾಸಕ ಕುಮಾರ ಬಂಗಾರಪ್ಪ ಬಗರ್‌ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಿ, ಭೂಗಳ್ಳರಂತೆ ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸಭೆಯಲ್ಲಿ ಆನವಟ್ಟಿ ಬ್ಲಾಕ್‌ ಅಧ್ಯಕ್ಷ ಆರ್‌.ಸಿ. ಪಾಟೀಲ್‌, ಮುಖಂಡರಾದ ಜರ್ಮಲೆ ಚಂದ್ರಶೇಖರ್‌, ಮಧುಕೇಶ್ವರ ಪಾಟೀಲ್‌, ರಫೀಕ್‌ ಅಹ್ಮದ್‌ ಪಟೇಲ್‌, ಹಬಿಬುಲ್ಲಾ ಹವಾಲ್ದಾರ್‌, ಸಂಜೀವ ತರಕಾರಿ, ಎಚ್‌. ಅಕ್ರಂ ಭಾಷಾ, ಇರ್ಫಾನ್‌ ಬೆನ್ನೂರು, ಇಮ್ರಾನ್‌ ಶೇಕ್‌, ಅಕ್ರಂ, ಆರ್‌. ಇರ್ಫಾನ್‌, ಸಾಧಿಕ್‌ ಖಾನ್‌ ಮೊದಲಾದವರಿದ್ದರು.
 

Latest Videos
Follow Us:
Download App:
  • android
  • ios