Asianet Suvarna News Asianet Suvarna News

ಬೀದರ್ ಶಾಸಕ ರಹೀಂ ಖಾನ್‌ಗೆ ಗ್ರಾಮಸ್ಥರಿಂದ ಫುಲ್ ಕ್ಲಾಸ್

ಊರಿಗೆ ಸರಿಯಾದ ರಸ್ತೆ ಇಲ್ಲ, ಚರಂಡಿ ವ್ಯವಸ್ಥೆ ಇಲ್ಲ, ಕುಡಿಯುವ ನೀರಿ‌ನ ವ್ಯವಸ್ಥೆ ಇಲ್ಲ ಅಂತ ಶಾಸಕ ಖಾನ್‌ಗೆ ಫುಲ್ ಕ್ಲಾಸ್ ತೆಗೆದುಕೊಂಡ ಗ್ರಾಮಸ್ಥರು

Villagers Outrage on Bidar MLA Rahim Khan grg
Author
First Published Nov 30, 2022, 1:15 PM IST

ಬೀದರ್(ನ.30):  ಮಾಜಿ ಸಚಿವ, ಬೀದರ್ ಶಾಸಕ ರಹೀಂ ಖಾನ್‌ಗೆ ಗ್ರಾಮಸ್ಥರು ಫುಲ್ ಕ್ಲಾಸ್ ತೆಗೆದುಕೊಂಡ ಘಟನೆ ಬೀದರ್ ತಾಲೂಕಿನ ಕಂಗಟಿ ಗ್ರಾಮದಲ್ಲಿ ಇಂದು(ಬುಧವಾರ) ನಡೆದಿದೆ. 

ಕಂಗಟಿ ಗ್ರಾಮದಲ್ಲಿ ಇಂದು(ಬುಧವಾರ) ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಶಾಸಕ ರಹೀಂ ಖಾನ್‌ ಅವರು, ಗ್ರಾಮದ ಅಭಿವೃದ್ಧಿಗೆ ಕೋಟಿ ಕೋಟಿ ಹಣ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ. ಈ ವೇಳೆ ಎಲ್ಲಿ ಕೊಟ್ಟಿದ್ದೀರಿ ಕೋಟಿ ಕೋಟಿ ಹಣ.?, ಊರಿಗೆ ಸರಿಯಾದ ರಸ್ತೆ ಇಲ್ಲ, ಚರಂಡಿ ವ್ಯವಸ್ಥೆ ಇಲ್ಲ, ಕುಡಿಯುವ ನೀರಿ‌ನ ವ್ಯವಸ್ಥೆ ಇಲ್ಲ ಅಂತ ಶಾಸಕ ಖಾನ್‌ಗೆ ಗ್ರಾಮಸ್ಥರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. 

ಹುಮನಾಬಾದ್‌: ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಎರಚಿದ ಕಿಡಿಗೇಡಿಗಳು

ಹೀಗಾಗಿ ಗರಂ ಆದ ಶಾಸಕ ಖಾನ್‌ ಅವರು, ನನ್ನ ಕೆಲಸ ಮದುವೆ ಮಾಡೋದು ಮಾತ್ರ ಮಕ್ಕಳು ಮಾಡೋದು ಅಧಿಕಾರಿಗಳ ಕೆಲಸ ಅಂತ ಸಬೂಬು ನೀಡಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಐದು ವರ್ಷ ನಿಮ್ದೆ ಸರ್ಕಾರ ಇತ್ತು ಆದರೂ ನಮ್ಮ ಗ್ರಾಮ ಅಭಿವೃದ್ಧಿ ಆಗಿಲ್ಲ. ಗ್ರಾಮದಲ್ಲಿ ಕೊಳಚೆ ನೀರು ಸಿಗುತ್ತಿದೆ ಏನ್ ಮಾಡುತ್ತಿದ್ದೀರಿ ನೀವೆಲ್ಲ? ಎಂದು ಶಾಸಕರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. 
 

Follow Us:
Download App:
  • android
  • ios