Asianet Suvarna News Asianet Suvarna News

ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಮತ್ತೆ ಏರುಪೇರು, ಆಸ್ಪತ್ರೆಗೆ ದಾಖಲು

ಡಿ.ಕೆ.ಶಿವಕುಮಾರ್ ಅಪೋಲೋ ಆಸ್ಪತ್ರೆಗೆ ದಾಖಲು| ಬೆಂಗಳೂರಿನ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ದಾಖಲು| ಬಿಪಿ ಮತ್ತು ಶುಗರ್ ಪರೀಕ್ಷೆಗೆ ಒಳಪಟ್ಟ ಡಿಕೆಶಿ| ಲಗೇಜ್ ಸಮೇತ ಆಗಮಿಸಿರುವ ಡಿ.ಕೆ.ಶಿವಕುಮಾರ್| ಅಪೊಲೋ ಆಸ್ಪತ್ರೆಯಲ್ಲಿ ಅಡ್ಮೀಟ್ ಆಗುವ ಸಾಧ್ಯತೆ..?

Congress Leader DK Shivakumar admitted In apollo hospital at Bengaluru
Author
Bengaluru, First Published Nov 1, 2019, 8:11 PM IST

ಬೆಂಗಳೂರು, [ನ.01]: ಮಾಜಿ ಸಚಿವ ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ಡಿಕೆಶಿ ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆ ದಾಖಲಾಗಿದ್ದಾರೆ.

ಬಿಪಿ ಮತ್ತು ಶುಗರ್ ಸಂಬಂಧಿಸಿದಂತೆ ಇಂದು [ಶುಕ್ರವಾರ] ಲಗೇಜ್ ಸಮೇತರಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಅಡ್ಮೀಟ್ ಆಗುವ ಸಾಧ್ಯತೆಗಳಿವೆ.

ಡಿಕೆಶಿ ಆರೋಗ್ಯ ಏರುಪೇರು: ಗಾಲಿ ಕುರ್ಚಿಯಲ್ಲೇ ಸ್ಕ್ಯಾನಿಂಗ್‌ಗೆ!

ಈ ಹಿಂದೆ ಡಿಕೆಶಿ ಇಡಿ ವಶದಲ್ಲಿದ್ದಾಗಲೂ ಕೂಡ ಅವರಿಗೆ ಆಗಾಗ ಬಿಪಿ, ಶುಗರ್ ಸಮಸ್ಯೆ ಕಾಡುತ್ತಿತ್ತು. ಇದ್ರಿಂದ ಡಿಕೆಶಿ ಅವರನ್ನು ದೆಹಲಿಯಲ್ಲಿರುವ RML ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

ಇದೀಗ ಮತ್ತೆ ಅದೇ ಬಿಪಿ, ಶುಗರ್ ಸಮಸ್ಯೆಯಿಂದಾಗಿ ಡಿಕೆ ಶಿವಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೊಂದು ಪ್ರಮುಖ ಅಂಶ ಅಂದ್ರೆ ಹವಾಲಾ ಹಣ ಪ್ರಕಾರಣದಲ್ಲಿ ತಿಹಾರ್ ಜೈಲಿನಲ್ಲಿದ್ದ ಡಿಕೆಶಿಗೆ ದೆಹಲಿ ಹೈಕೋರ್ಟ್ ಆರೋಗ್ಯದ ಸಮಸ್ಯೆ ಕಾರಣಕ್ಕೆ ಜಾಮೀನು ಮಂಜೂರು ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು. 

ಈ ಒಂದೇ ಒಂದು ಕಾರಣಕ್ಕೆ ಡಿಕೆಶಿಗೆ ಜಾಮೀನು ಸಿಕ್ಕಿದ್ದು: ಏನದು?

Follow Us:
Download App:
  • android
  • ios