Asianet Suvarna News Asianet Suvarna News

'ಯಡಿಯೂರಪ್ಪಗೆ ಈಗ ಮದ್ವೆ ಮಾಡಿದ್ರೂ 4 ಮಕ್ಕಳು ಮಾಡುವಷ್ಟು ತಾಕತ್ ಇದೆ'

* ಯಡಿಯೂರಪ್ಪನವರನ್ನ ಭೇಟಿಯಾದ ಕಾಂಗ್ರೆಸ್ ಹಿರಿಯ ನಾಯಕ
* ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಭೇಟಿ
* ಯಡೊಯೂರಪ್ಪ ಪರ ಕಾಂಗ್ರೆಸ್ ಹಿರಿಯ ನಾಯಕ ಬ್ಯಾಟಿಂಗ್

Congress Leader CM Ibrahim Meets BS Yediyurappa at bengaluru rbj
Author
Bengaluru, First Published Jul 27, 2021, 2:58 PM IST

ಬೆಂಗಳೂರು, (ಜು.27): ಮುಖ್ಯಮಂತ್ರಿ ಸ್ಥಾನ ಬಿಎಸ್ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ್ದರಿಂದ ಅವರನ್ನ ಕಾಂಗ್ರೆಸ್‌ ನಾಯಕ ಸಿಎಂ ಇಬ್ರಾಹಿಂ ಭೇಟಿ ಮಾಡಿದರು.

ಬಳಿಕ ವಯಸ್ಸಿನ ಕಾರಣಕ್ಕೆ ಬಿಎಸ್ ಯಡಿಯೂರಪ್ಪ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಲಾಗಿದೆ ಎನ್ನುವ ವಿಚಾರಕ್ಕೆ ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ತಮ್ಮ ಹಾಸ್ಯ ಚಟಾಕೆ ಮಾತಿನ ಮೂಲಕ ಪ್ರತಿಕ್ರಿಯಿಸಿದ್ದು, ಯಡಿಯೂರಪ್ಪಗೆ ಈಗ ಮದುವೆ ಮಾಡಿದರೂ ನಾಲ್ಕು ಮಕ್ಕಳು ಮಾಡುವಷ್ಟು ತಾಕತ್ ಇದೆ ಎಂದು ಹಾಸ್ಯ ಚಟಾಕೆ ಹಾರಿಸಿದರು.

ಪದತ್ಯಾಗ ಬೆನ್ನಲ್ಲೇ ಬಿಎಸ್‌ವೈ ಸಂಪುಟದ ಹಿರಿಯ ಸಚಿವರಿಗೆ ನಡುಕ!

ಯಡಿಯೂರಪ್ಪನವರನ್ನು ಅವಮಾನಿಸಿ ಸಿಎಂ ಹುದ್ದೆಯಿಂದ ಕೆಳಗಿಳಿಸಲಾಗಿದೆ. ಓರ್ವ ಕನ್ನಡಿಗನಿಗಾದ ಅವಮಾನದ ವಿರುದ್ಧ ಸಮಾವೇಶ ನಡೆಸುತ್ತೇನೆ.. 1972 ರಿಂದ ನಾನು ಹೇಳಿದ್ದೆಲ್ಲ ನಡೆದಿದೆ. ಸೂಫಿ ಶರಣರ ಸಂಗದಲ್ಲಿ ಇರುವವರಿಗೆ ಆರನೇ ಇಂದ್ರಿಯ ಚೆನ್ನಾಗಿ ಕೆಲಸ ಮಾಡುತ್ತೆ, ಹಾಗೇ ಕೆಲಸ ಮಾಡಿದೆ. ಯಡಿಯೂರಪ್ಪನವರಿಗೇ ಹೇಳಿದ್ದೆ, ನಿಮ್ಮನ್ನು ಏಣಿಯಾಗಿ ಉಪಯೋಗಿಸಿಕೊಳ್ತಾರೆ ಅಂದಿದ್ದೆ ಯಡಿಯೂರಪ್ಪಗೆ ಈಗ ಮದುವೆ ಮಾಡಿದರೂ ನಾಲ್ಕು ಮಕ್ಕಳು ಮಾಡುವಷ್ಟು ತಾಕತ್ ಇದೆ. ಬಿಎಸ್​ವೈಗೆ ಆದ ಅವಮಾನ, ಕರ್ನಾಟಕಕ್ಕೆ, ಕನ್ನಡಿಗರಿಗೆ ಆದ ಅವಮಾನ. ಅಮಿತ್ ಶಾ ಹಾಗೂ ಯಡಿಯೂರಪ್ಪಗೆ ರನ್ನಿಂಗ್ ರೇಸ್ ನಡೆಯಲಿ ಗೊತ್ತಾಗುತ್ತೆ ಎಂದರು.

ಸೆಪ್ಟೆಂಬರ್-ಅಕ್ಟೋಬರ್ ನಲ್ಲಿ ಇದರ ರೂಪು ರೇಷೆ ಗೊತ್ತಾಗುತ್ತೆ. ರಾಷ್ಟ್ರೀಯ ಭಾವೈಕ್ಯ ಸಮ್ಮೇಳನ ಎಂಬ ಹೆಸರಲ್ಲಿ ಸೂಫಿ ಸಂತರ ಸಮಾವೇಶ ಮಾಡ್ತೇವೆ. ಕೂಗಿಲ್ಲದವರ ಕೂಗು ನಮ್ಮ ಸಮ್ಮೇಳನ, ಬೆಂಗಳೂರಿನಲ್ಲೇ ಮೊದಲ ಹಂತದ ಸಮಾವೇಶ. ಮೊದಲ ಭಾಗವಾಗಿ ಮುಸ್ಲಿಮರ ಸಮಾವೇಶ ನವೆಂಬರ್ ತಿಂಗಳಲ್ಲಿ ಮಾಡ್ತೀವಿ ಎಂದರು.

ನಮ್ಮ ನಾಯಕನ್ನ ನಾವು ಆರಿಸುತ್ತೇವೆ, ನಮ್ಮ ನಾಡು, ನಮ್ಮ ಊರು ನಮ್ಮ ನಾಯಕನ ಆರಿಸುವ ಶಕ್ತಿ ನಮಗಿದೆ. ಈ ಊರಲ್ಲಿ ಪಾನಿಪುರಿ ಮಾಡಲು ಬಂದಿರೋ ಬಿಕ್ನಾಸಿಗಳು ಗುಜರಾತಿಗಳು, ಕನ್ನಡಿಗರು ಯಾರೂ ಗುಜರಾತ್ ಗೆ ವಲಸೆ ಹೋಗಿಲ್ಲ. ಯಡಿಯೂರಪ್ಪ ಯಾವ ಪಕ್ಷ ಅನ್ನೋದು ನಮಗೆ ಮುಖ್ಯ ಅಲ್ಲ, ಅವರೊಬ್ಬ ಮುತ್ಸದ್ದಿ ರಾಜಕಾರಣಿ, ಯಡಿಯೂರಪ್ಪಗೆ ಆದ ಅವಮಾನ ಕನ್ನಡಿಗರಿಗೆ ಆದ ಅವಮಾನ. ಕೇಶವ ಕೃಪಾ ಯಾವುದು..? ಅನ್ನ ದಾಸೋಹ ನೀಡುವ ಶರಣ ಬೇಕು, ಅನ್ನಕ್ಕಾಗಿ ಮನೆಯ ಮುಂದೆ ಕೈಕಟ್ಟಿ ನಿಲ್ಲುವ ಶರಣ ಬೇಕು. ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಬರಲ್ಲ. ಆದರೆ ಸೆಪ್ಟೆಂಬರ್ ನಲ್ಲಿ ಏನಾಗುತ್ತೆ ಕಾದು ನೋಡಿ  ಎಂದು ಹೊಸ ಬಾಂಬ್ ಸಿಡಿಸಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರು.

Follow Us:
Download App:
  • android
  • ios