ಮಾಜಿ ಸಿಎಂ ಬಂಗಾರಪ್ಪ ರಾಜಕಾರಣದ ವಿಶ್ವವಿದ್ಯಾನಿಲಯ: ಬೇಳೂರು ಗೋಪಾಲಕೃಷ್ಣ
ಸಮಾಜಮುಖಿ ಚಿಂತನೆ ನಾಯಕರಾಗಿದ್ದ ಎಸ್.ಬಂಗಾರಪ್ಪ ಅವರು ಜಾರಿಗೊಳಿಸಿದ ಜನಪರ ಹಾಗೂ ದೂರದೃಷ್ಟಿಯ ಯೋಜನೆಗಳಿಂದಾಗಿ ಇಂದಿಗೂ ಅವರು ಜನಮಾನಸದಲ್ಲಿ ಚಿರಸ್ಥಾಯಿ ಆಗಿದ್ದಾರೆ ಎಂದು ಮಾಜಿ ಶಾಸಕ, ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಹೇಳಿದರು.
ಶಿವಮೊಗ್ಗ (ಡಿ.26): ಸಮಾಜಮುಖಿ ಚಿಂತನೆ ನಾಯಕರಾಗಿದ್ದ ಎಸ್.ಬಂಗಾರಪ್ಪ ಅವರು ಜಾರಿಗೊಳಿಸಿದ ಜನಪರ ಹಾಗೂ ದೂರದೃಷ್ಟಿಯ ಯೋಜನೆಗಳಿಂದಾಗಿ ಇಂದಿಗೂ ಅವರು ಜನಮಾನಸದಲ್ಲಿ ಚಿರಸ್ಥಾಯಿ ಆಗಿದ್ದಾರೆ ಎಂದು ಮಾಜಿ ಶಾಸಕ, ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಹೇಳಿದರು. ಇಲ್ಲಿನ ಜಿಲ್ಲಾ ಆರ್ಯ ಈಡಿಗರ ಭವನದಲ್ಲಿ ಸೋಮವಾರ ಜಿಲ್ಲಾ ಆರ್ಯ ಈಡಿಗರ ಸಂಘದ ವತಿಯಿಂದ ಆಯೋಜಿಸಿದ್ದ ಬಂಗಾರಪ್ಪ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರಾಜ್ಯ ಕಂಡ ಅಪರೂಪದ ರಾಜಕಾರಣಿಯಾಗಿದ್ದ ಬಂಗಾರಪ್ಪ ಅವರು ರಾಜ್ಯವಷ್ಟೇ ಅಲ್ಲ, ದೇಶದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ.
ಕೃಷಿ ಕಾರ್ಮಿಕರು, ರೈತರು, ದೀನ ದಲಿತರು ಮತ್ತು ಗ್ರಾಮೀಣ ಅಭ್ಯುದಯಕ್ಕಾಗಿ ನಿರಂತರವಾಗಿ ಶ್ರಮಿಸಿದ ಅವರು ಜನಪರ ಚಿಂತನೆಯ ನಾಯಕ ಎಂದು ಬಣ್ಣಿಸಿದರು. ಬಂಗಾರಪ್ಪ ಬಡವರ ಭಾಗ್ಯನಿಧಿ ಆಗಿದ್ದರು. ಅವರ ಬಡವರ ಪರವಾದ ಯೋಜನೆಗಳು ಇಂದಿಗೂ ರಾಜಕಾರಣಿಗಳಿಗೆ ಮಾರ್ಗದರ್ಶಕವಾಗಿವೆ. ಬಂಗಾರಪ್ಪ ರಾಜಕಾರಣದ ಒಂದು ವಿಶ್ವವಿದ್ಯಾನಿಲಯವಿದ್ದಂತೆ. ಅವರ ರಾಜಕೀಯ ಮೀಮಾಂಸೆಯನ್ನು ಕಲಿತ ಅನೇಕರು ಇಂದು ಬೇರೆ ಬೇರೆ ಪಕ್ಷಗಳಲ್ಲಿ ತಮ್ಮದೇ ಆದ ವಿಶೇಷ ಸ್ಥಾನ ಪಡೆದಿದ್ದಾರೆ.
ಒಕ್ಕಲಿಗ ಮೀಸಲಾತಿ ಹೋರಾಟಕ್ಕೆ ಸದಾ ಬೆಂಬಲ: ಎಚ್.ಡಿ.ಕುಮಾರಸ್ವಾಮಿ
ಅವರು ಮುಖ್ಯಮಂತ್ರಿ ಆಗಿದ್ದಾಗ ಬಡವರ ಪರವಾದ ಅನೇಕ ಯೋಜನೆಗಳನ್ನು ಜಾರಿಗೆ ತಂದವರು. ಅವರಿಗೆ ಬಡವರ ಬೆವರಿನ ಬೆಲೆ ಗೊತ್ತಿತ್ತು. ಹಾಗಾಗಿಯೇ ಇಡೀ ಕರ್ನಾಟಕದಲ್ಲಿ ಅವರೊಬ್ಬ ಧೀಮಂತ ನಾಯಕ ಎನಿಸಿಕೊಂಡರು ಎಂದರು. ಅವರ ನಿಷ್ಠೂರ ನುಡಿಗಳು ಕೂಡ ಇಷ್ಟವಾಗುತ್ತಿದ್ದವು. ನನ್ನಂತಹ ಅನೇಕ ವ್ಯಕ್ತಿಗಳನ್ನು ಗುರುತಿಸಿ ನಮಗೊಂದು ರಾಜಕೀಯ ಶಕ್ತಿಯನ್ನು ಅವರು ನೀಡಿದ್ದಾರೆ. ಆದರೆ, ಇಂದು ಅವರಿಂದ ಬೆಳಕಿಗೆ ಬಂದ ಕೆಲವರು ಅವರನ್ನೇ ಮರೆತಿರುವುದು ವಿಷಾದನೀಯ. ಅವರ ಸಿದ್ಧಾಂತಗಳು ಪಕ್ಷಾತೀತವಾಗಿವೆ. ಅದನ್ನು ಅನುಸರಿಸುವುದು ಇಂದಿನ ಎಲ್ಲ ರಾಜಕಾರಣಿಗಳ ಅಗತ್ಯವಾಗಿದೆ.
ಪ್ರಸ್ತುತ ರಾಜಕಾರಣದ ದಿಕ್ಕುಗಳು ಬದಲಾಗುತ್ತಿರುವ ಸಂದರ್ಭದಲ್ಲಿ ಬಂಗಾರಪ್ಪ ಅವರ ರಾಜಕೀಯ ಬದುಕು ವರ್ಣರಂಜಿತವಾಗಿತ್ತು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಹುಲ್ತಿಕೊಪ್ಪ ಆರ್.ಶ್ರೀಧರ್, ಜಿ.ಡಿ.ಮಂಜುನಾಥ್, ಹೊನ್ನಪ್ಪ, ಬಿ.ಸುರೇಶ್, ಕಾಗೋಡು ರಾಮಪ್ಪ, ಎಸ್.ಎಂ.ಮಹೇಶ ಬಂಡಿ, ರಾಮಚಂದ್ರಪ್ಪ, ತೇಕಲೆ ರಾಜಪ್ಪ, ಡಿ.ದೇವಪ್ಪ, ಹೆಚ್.ಎನ್.ಮಹೇಂದ್ರ, ವೆಂಕಟೇಶ ಮೂರ್ತಿ, ಕೃಷ್ಣಮೂರ್ತಿ ತಡಗಣಿ ನಾಗರಾಜ್, ಕುಪ್ಪಯ್ಯ, ರಮೇಶ್, ಕೆ.ಎರ್ಳ.ಉಮೇಶ್, ರಾಜಕುಮಾರ್, ನಾಗರಾಜ್ ಮತ್ತಿತರಿದ್ದರು.
ಬಡವರ ಪರ ಕೆಲಸ ಮಾಡದ ರಾಜ್ಯ ಸರ್ಕಾರ: ರಾಜ್ಯ ಸರ್ಕಾರ ಬಡವರ ಪರ ಕೆಲಸ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಆರೋಪಿಸಿದರು. ಪಟ್ಟಣದ ವಿಶ್ರಾಂತಿ ಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪರೇಶ ಮೇಸ್ತ ಕೇಸು ಇಟ್ಟುಕೊಂಡು ರಾಜ್ಯದಲ್ಲಿ ಬಿಜೆಪಿಯವರು ಬೆಂಕಿ ಹಾಕಿ ಹಿಂದುತ್ವದ ವಾತಾವರಣ ಸೃಷ್ಟಿಸಿದರು. ಸಹಜ ಸಾವು ಎಂದು ವರದಿ ಬಂದಿದೆ. ಈಗೇನು ಹೇಳುತ್ತೀರಿ ಎಂದು ಅವರು ಪ್ರಶ್ನಿಸಿದರು. ಮೇಸ್ತ ಪ್ರಕರಣ ಕರಾವಳಿ, ಮಲೆನಾಡು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಮಾರಕವಾಯಿತು.
ಮಾತೃದ್ರೋಹ ಮಾಡಿದವರಿಗೆ ಬುದ್ಧಿ ಕಲಿಸಿ: ನಿಖಿಲ್ ಕುಮಾರಸ್ವಾಮಿ
ಬಿಜೆಪಿ ನಾಯಕರಾದ ವಿರುದ್ಧ ಕೇಸು ಹಾಕಬೇಕು. ತನಿಖೆ ಸರಿ ಇಲ್ಲ ಎಂದು ಅರ್ಜಿ ಹಾಕುತ್ತೇನೆ ಎನ್ನುವ ಬಿಜೆಪಿಗರಿಗೆ ನಾಚಿಕೆ ಆಗಬೇಕು ಎಂದು ಟೀಕಿಸಿದರು. ಸ್ಪೀಕರ್ ಕಾಗೇರಿ 25 ವರ್ಷದಿಂದ ಅಧಿಕಾರಿ ಅನುಭವಿಸಿದರೂ ತಾಲೂಕಿನ ಜನರಿಗೆ ಹಕ್ಕುಪತ್ರ ಕೊಡಿಸಲಾಗಿಲ್ಲ. ಮುಖ್ಯಮಂತ್ರಿಗಳೇ ಧಮ್ ಇದ್ದರೆ ಹಕ್ಕು ಪತ್ರ ಕೊಡಿ ಎಂದು ಸವಾಲೆಸೆದರು. ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನ್ಮನೆ, ಬಾಲಕೃಷ್ಣ ನಾಯ್ಕ, ಸಿ.ಆರ್. ನಾಯ್ಕ, ಚಂದ್ರು ಕಾನಡೆ, ಕೆ.ಟಿ. ಹೊನ್ನೆಗುಂಡಿ ಉಪಸ್ಥಿತರಿದ್ದರು.