ಕಾಂಗ್ರೆಸ್ ನಾಯಕರಿಗೆ ತಮ್ಮ ಗ್ಯಾರಂಟಿಗಿಂತ, ಪೆನ್‌ಡ್ರೈವ್ ಮೇಲಿನ ವಿಶ್ವಾಸವೇ ಹೆಚ್ಚಾಗಿದೆ: ಬಿ.ವೈ. ವಿಜಯೇಂದ್ರ
ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್‌ಗೆ ತನ್ನ ಗ್ಯಾರಂಟಿಗಳ ಮೇಲಿನ ನಂಬಿಕೆಗಿಂತ ಪೆನ್‌ಡ್ರೈವ್ ಮೇಲಿನ ವಿಶ್ವಾಸವೇ ಹೆಚ್ಚಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಬೆಳಗಾವಿ (ಮೇ 04): ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಕಳೆದೊಂದು ವಾರದಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಕೇಸ್‌ನ ಹಿಂದೆ ಬಿದ್ದಿದ್ದಾರೆ. ಈಗ ಅವರಿಗೆ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಗ್ಯಾರಂಟಿಗಿಂತ ಪೆನ್‌ಡ್ರವೈವ್ ಕೇಸ್ ಮೇಲೆಯೇ ಹೆಚ್ಚು ವಿಶ್ವಾಸ ಇಟ್ಟುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದಾಗ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಬಿಜೆಪಿಗೆ ಮುಳುವಾಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮುಳುವಾಗಲಿ ಎಂಬ ಅಪೇಕ್ಷೆ ಕಾಂಗ್ರೆಸ್ ಪಕ್ಷದವರದ್ದಾಗಿದೆ. ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ನಿಂದ ಗೆಲ್ಲುತ್ತೇವೆ ಎನ್ನುವ ಮನಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ಕಳೆದ ಏಳೆಂಟು ದಿನಗಳಿಂದ ಗ್ಯಾರಂಟಿಗಳ ಬಗ್ಗೆ ವಿಶ್ವಾಸ ಕಳೆದುಕೊಂಡಿದೆ. ಪೆನ್ ಡ್ರೈವ್ ಬಗ್ಗೆಯೇ ಹೆಚ್ಚು ವಿಶ್ವಾಸ ಹೊಂದಿದಂತೆ ಕಾಣುತ್ತದೆ. ಈ ಪ್ರಕರಣದಲ್ಲಿ ಬಿಜೆಪಿ ನಿಲುವು ಸ್ಪಷ್ಟವಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಹೆಚ್.ಡಿ. ರೇವಣ್ಣಗೆ ಲೈಂಗಿಕ ದೌರ್ಜನ್ಯ ಕೇಸಲ್ಲಿ ಜೈಲಾ, ಬೇಲಾ? ಆದೇಶ ಕಾಯ್ದಿರಿಸಿದ ಕೋರ್ಟ್
ರಾಜ್ಯ ಸರ್ಕಾರ ವಿಶೇಷ ತನಿಖಾ ದಳ (ಎಸ್ಐಟಿ) ರಚನೆ ಮಾಡಿದ್ದು, ತನಿಖೆ ಶುರುವಾಗಿದೆ. ಯಾರೇ ತಪ್ಪಿತಸ್ಥರಿದ್ದರೂ ತನಿಖೆ ಎದುರಿಸಬೇಕು. ಕಾಂಗ್ರೆಸ್ ಪಕ್ಷದವರು ಈ ವಿಚಾರವನ್ನೆ ಮುಂದಿಟ್ಟುಕೊಂಡು, ಅದರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಕ್ಷುಲ್ಲಕ ರಾಜಕಾರಣ ಮಾಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ. ಗ್ಯಾರಂಟಿ ಬಿಟ್ಟು ಕೇವಲ ಪೆನ್ ಡ್ರೈವ್ ಪ್ರಕರಣದಿಂದ ಲೋಕಸಭೆ ಚುನಾವಣೆ ಗೆಲ್ಲುತ್ತೇವೆ ಎನ್ನುವ ಕಲ್ಪನೆಗೆ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.
ಸುಳ್ಳು ಹೇಳಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂಬ ಕಾಂಗ್ರೆಸ್ ನಾಯಕರ ಆರೋಪ ವಿಚಾರದ ಬಗ್ಗೆ ಮಾತನಾಡಿ, ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನ ಮೋದಿಯವರು ಅನುಷ್ಠಾನಕ್ಕೆ ತಂದಿದ್ದಾರೆ. ಅದರಿಂದ ಮೋದಿಯವರ ಜನಪ್ರಿಯತೆ ಮತ್ತಷ್ಟು ದ್ವಿಗುಣವಾಗಿದೆ. ಇದು ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ ಎಂದು ಹೇಳಿದರು.
ಹುಬ್ಬಳ್ಳಿ ಮುಸ್ಲಿಂ ಯುವಕನ ಕೃತ್ಯ ಅತ್ಯಂತ ಹೇಯವಾಗಿದೆ:
‘ಹುಬ್ಬಳ್ಳಿಯಲ್ಲಿ ಅಪ್ರಾಪ್ತೆಯನ್ನು ಮುಸ್ಲಿಂ ಯುವಕ ಗರ್ಭಿಣಿಯನ್ನಾಗಿಸಿರುವ ಹೇಯ ಕೃತ್ಯ ವರದಿಯಾಗಿದೆ’. 'ಕಾಂಗ್ರೆಸ್ ಸರ್ಕಾರ ಇದೆ ಎಂಬ ಧೈರ್ಯ, ಜಿಹಾದಿ ಮನಸ್ಥಿತಿಯ ಕ್ರಿಮಿನಲ್ ಗಳನ್ನು ಉತ್ತೇಜಿಸುತ್ತಿದೆ' ಎಂಬ ಆತಂಕ ಶಾಂತಿಪ್ರಿಯ ಕರುನಾಡ ಜನತೆಯನ್ನು ಕಾಡುತ್ತಿದೆ. ರಾಜ್ಯದಲ್ಲಿ ಹಿಂದೂ ಹೆಣ್ಣುಮಕ್ಕಳಿಗೆ ರಕ್ಷಣೆಯಿಲ್ಲದಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಕ್ರೋಶ ಹೊರ ಹಾಕಿದರು.
ಸಂಯುಕ್ತಾ ಪಿಎಂ ಆದ್ರೆ ರಾಹುಲ್, ಪ್ರಿಯಾಂಕಾ, ಸೋನಿಯಾ ಗಾಂಧಿ ಇವರ ಮನೆಯ ಕೆಲಸಕ್ಕೆ ಬರಬೇಕಾ?: ಯತ್ನಾಳ್
ಕಣ್ಣೆದುರೇ ಮೂಲಭೂತವಾದಿ ಪುಂಡರು ಅಟ್ಟಹಾಸ ಮೆರೆಯುತ್ತಲೇ ಇದ್ದರೂ ಓಲೈಕೆ ರಾಜಕಾರಣಕ್ಕೆ ಜೋತುಬಿದ್ದಿರುವ ಕಾಂಗ್ರೆಸ್ ಸರ್ಕಾರ ಉದ್ದೇಶ ಪೂರ್ವಕ ನಿಷ್ಕ್ರೀಯತೆ ತೋರುತ್ತಿದೆ, ರಾಕ್ಷಸೀ ಪ್ರವೃತ್ತಿ ಮೆರೆಯುತ್ತಿರುವವರ ವಿರುದ್ಧ ಮೆದು ಧೋರಣೆ ಅನುಸರಿಸುತ್ತಿದೆ. ಇದರಿಂದ ಹೆಣ್ಣು ಮಕ್ಕಳ ಮೇಲೆ ನಿರಂತರ ಕ್ರೌರ್ಯ ಸರಣೀ ರೂಪದಲ್ಲಿ ಎಗ್ಗಿಲ್ಲದೇ ಸಾಗಿದೆ. “ಹೆಣ್ಣು ಹೆತ್ತವರ ಆಕ್ರಂದನ ಅರಣ್ಯರೋಧನವಾಗಿದೆ, ಧೃತರಾಷ್ಟ್ರ ನಡವಳಿಕೆಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧರ್ಮಯುದ್ಧದಲ್ಲಿ(ಲೋಕಸಮರ) ಜನ ಪಾಠ ಕಲಿಸಬೇಕಿದೆ ಎಂದು ಶಾಸಕ ವಿ.ವೈ. ವಿಜಯೇಂದ್ರ ತಿಳಿಸಿದರು.