Asianet Suvarna News Asianet Suvarna News

ಮಾಜಿ ಸಚಿವ ಹೆಚ್.ಡಿ. ರೇವಣ್ಣಗೆ ಲೈಂಗಿಕ ದೌರ್ಜನ್ಯ ಕೇಸಲ್ಲಿ ಜೈಲಾ, ಬೇಲಾ? ಆದೇಶ ಕಾಯ್ದಿರಿಸಿದ ಕೋರ್ಟ್

ಲೈಂಗಿಕ ದೌರ್ಜನ್ಯ ಆರೋಪಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಾದವನ್ನು ಆಲಿಸಿ ತೀರ್ಪು ಕಾಯ್ದಿರಿಸಿದೆ.

Hassan Sexual Abuse Case accused HD Revanna and Prajwal anticipatory bail application in Court sat
Author
First Published May 4, 2024, 4:44 PM IST

ಬೆಂಗಳೂರು (ಮೇ 04): ಮಾಜಿ ಸಚಿವ ಹೆಚ್.ಡಿ. ರೇವಣ್ಣ ವಿರುದ್ಧ ದಾಖಲಾದ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ವಿಚಾರಣೆಗೆ ಹಾಜರಾಗುವ ಮುನ್ನವೇ ನಿರೀಕ್ಷಣಾ ಜಾಮೀನು ಪಡೆಯಲು ಸಲ್ಲಿಕೆ ಮಾಡಲಾಗಿದೆ., ಈ ಅರ್ಜಿ ವಿಚಾರಣೆಗ ಮಾಡಿದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಎಸ್‌ಐಟಿ ಹಾಗೂ ರೇವಣ್ಣ ಪರ ವಕೀಲರ ವಾದ ಆಲಿಸಿದ ನ್ಯಾಯಾಧೀಶರು ಆದೇಶ ಕಾಯ್ದಿರಿಸಿದ್ದಾರೆ.

ಹಾಸನದ ಹೊಳೆ ನರಸೀಪುರ ಪೊಲೀಸ್ ಠಾಣೆಯಲ್ಲಿ ಶಾಸಕ ಹೆಚ್.ಡಿ. ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಸಲ್ಲಿಕೆ ಮಾಡಲಾಗಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಶನಿವಾರ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರ ಪೀಠದಲ್ಲಿ ವಿಚಾರಣೆ ಮಾಡಲಾಯಿತು. ಈ ವೇಳೆ ಆರೋಪಿಗಳಾದ ರೇವಣ್ಣ ಪರ ವಕೀಲರು ಮೂರ್ತಿ ಡಿ.ನಾಯ್ಕ್  ಅವರು ವಾದ ಮಂಡಿಸಿದರು. ಇನ್ನು ಪ್ರಕರಣ ತನಿಖೆ ಮಾಡುತ್ತಿರುವ ವಿಶೇಷ ತನಿಖಾ ದಳ (ಎಸ್‌ಐಟಿ) ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ವಾದ ಮಂಡಿಸಿದರು.

ಮೊದಲು ರೇವಣ್ಣ ಪರ ವಕೀಲ ಮೂರ್ತಿ ಡಿ.ನಾಯ್ಕ್ ವಾದ ಮಂಡಿಸಿ, ಶಾಸಕ ಹೆಚ್.ಡಿ. ರೇವಣ್ಣ ವಿರುದ್ಧ ದೂರುದಾರನ ಹೇಳಿಕೆ ಬಿಟ್ಟರೆ ಬೇರೆ ಏನು ಇಲ್ಲ. ತಡರಾತ್ರಿ ತರಾತುರಿಯಲ್ಲಿ ಮತ್ತೊಂದು ಏಫ್ಐಆರ್ ದಾಖಲಾಗಿದೆ. ಅದರಲ್ಲಿಯೂ ನಾನ್ ಬೇಲೆಬಲ್ ಸೆಕ್ಷನ್ ಹಾಕಿ ಎಫ್ಐಆರ್ ದಾಖಲು ಮಾಡಿದ್ದಾರೆ. ಅಲ್ಲದೇ ತಕ್ಷಣ ಮತ್ತೆ 41ಎ ಯಲ್ಲಿ ನೊಟೀಸ್ ನೀಡಿದ್ದಾರೆ. ನಿನ್ನೆ ನಾನ್ ಬೆಲಬಲ್ ಸೆಕ್ಷನ್ ಹಾಕಿಲ್ಲ ಎಂದಿದ್ದರು. ಆದರೆ, ರಾತ್ರಿ ಇನ್ನೊಂದು ನಾನ್ ಬೆಲಬಲ್ ಸೆಕ್ಷನ್ FIR ಹಾಕಿದ್ದಾರೆ. ಅಲ್ಲದೇ ಇವತ್ತು ಶನಿವಾರ ಅಂತಾ ನೋಡಿಕೊಂಡು ನೊಟೀಸ್ ಜಾರಿಗೊಳಿಸಿದ್ದಾರೆ. ನಿನ್ನೆ ಎಫ್ಐಆರ್ ಹಾಕಿ, ಇಂದು ವಿಚಾರಣೆಗೆ ಬನ್ನಿ ಅಂತಾರೆ ಅದರಿಂದ, ಎಸ್ ಐಟಿ ಉದ್ದೇಶ ಏನು ಅಂತ  ಗೊತ್ತಾಗ್ತಾ ಇದೆ ಎಂದು ವಾದ ಮಂಡಿಸಿದರು. 

ಲೈಂಗಿಕ ದೌರ್ಜನ್ಯ ಪ್ರಕರಣ, ಇಬ್ಬರು ಸಂತ್ರಸ್ಥೆಯರ ಜೊತೆ ರೇವಣ್ಣ ನಿವಾಸ ಪರಿಶೀಲನೆಗೆ ಬಂದ ಎಸ್‌ಐಟಿ ತಂಡ

ಕಿಡ್ನಾಪ್ ಪ್ರಕರಣ ಆಗಬೇಕಾದರೆ ಹಲ್ಲೆ, ರ್ಯಾನ್ಸಮ್ (ಹಣಕ್ಕೆ ಬೇಡಿಕೆ) ಇರಬೇಕು. ಈ ಪ್ರಕರಣದಲ್ಲಿ ಈ ರೀತಿಯಲ್ಲಿ ನಡೆದೇ ಇಲ್ಲ. ಹೀಗಾಗಿ ಕಿಡ್ನಾಪ್ ಸೆಕ್ಷನ್ ಅಪ್ಲೈ ಆಗುವುದೇ ಇಲ್ಲ. ಜೊತೆಗೆ, 363 ಕಿಡ್ನಾಪಿಂಗ್ ಸೆಕ್ಷನ್ ಇದು ಬೆಲಬಲ್ ಸೆಕ್ಷನ್ ಆಗಿದೆ. ಬೆದರಿಕೆ, ಹಲ್ಲೆ, ಡಿಮ್ಯಾಂಡ್ ಇಲ್ಲ ಅಂದ್ರೆ ಈ ಸೆಕ್ಷನ್ ಅಪ್ಲೈ ಆಗಲ್ಲ. ಆದರೆ ಇಲ್ಲಿ 364A, 365 ನಾನ್ ಬೆಲಬಲ್ ಸೆಕ್ಷನ್ ಹಾಕಿದ್ದಾರೆ. ಸೆಕ್ಷನ್ 365 ಕೂಡ 7 ವರ್ಷ ಶಿಕ್ಷೆ & ದಂಡದ ಬಗ್ಗೆ ಹೇಳತ್ತಿದ್ದು, ಇದು ಕೂಡ ಬೆಲಬಲ್ ಆಗಿದೆ. ಆದರೆ ಇಲ್ಲಿ 364A ಹಾಕಲಾಗಿದೆ, 364A ಡೆತ್ ಸೆಂಟೆನ್ಸ್‌ವರೆಗೂ ಶಿಕ್ಷೆ ನೀಡಬಹುದಾಗಿರುತ್ತದೆ. ರೇವಣ್ಣ ವಿರುದ್ಧ ಅಂತ ಗಂಭೀರ ಆರೋಪಗಳು ಇಲ್ಲ. ಬೇರೆ ಆರೋಪಿ ಹೇಳಿದ್ದಾರೆ ಅನ್ನೋ ಅಂಶಕ್ಕೆ ಈ ರೀತಿ ಹಾಕಲಾಗಿದೆ ಎಂದು ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.

ಆರೋಪಿ ಪ್ರಭಾವಿಯಾಗಿದ್ದು ಯಾವುದೇ ಹಂತಕ್ಕೂ ಹೋಗಿ ತಿರುಚಬಹುದು ಅಂತಾ ಬರೆಯಲಾಗಿದೆ. ಕಾನೂನು ವ್ಯವಸ್ಥೆಯನ್ನೇ ತಿರುಚಬಹುದೆಂದು ಉಲ್ಲೇಖಿಸಿದ್ದಾರೆ. ಮತ್ತೊಬ್ಬ ಆರೋಪಿ ಅನೇಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಇವರು ರೇವಣ್ಣನ ಬಗ್ಗೆ ಆಕ್ಷೇಪಣೆ ಸಲ್ಲಿಸಿದ್ದಾರೋ, ಅವರ ಪುತ್ರನ ಬಗ್ಗೆಯೋ.? ಇವರ ಆಕ್ಷೇಪಣೆ ರೇವಣ್ಣನ ಬಗ್ಗೆ ಸಲ್ಲಿಸಬೇಕಿತ್ತು. ಆದರೆ ಇಲ್ಲಿ ಪ್ರಜ್ವಲ್ ರೇವಣ್ಣ ಬಗ್ಗೆ ಉಲ್ಲೇಖಿಸಿದ್ದಾರೆ. ಅಲ್ಲದೇ ಆ ಪ್ರಕರಣಕ್ಕೂ ಇದಕ್ಕೂ ಲಿಂಕ್ ಇದೆ ಎಂದಿದ್ದಾರೆ. ಇಲ್ಲಿ ಇದು ಹೇಗೆ ಅನ್ವಯವಾಗುತ್ತದೆ. ರೇವಣ್ಣ ವಿರುದ್ಧ ಕಿಡ್ನಾಪ್ ಆರೋಪಕ್ಕೆ ಯಾವುದೆ ಸಾಕ್ಷಿ ಇಲ್ಲ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡುವಂತೆ ರೇವಣ್ಣ ಪರ ವಕೀಲರಿ ನ್ಯಾಯಾಲಯದ ಮುಂದೆ ಮನವಿ ಮಾಡಿದರು. 

ಇದರ ನಂತರ ವಿಶೇಷ ತನಿಖಾ ದಳ (ಎಸ್ಐಟಿ) ಪರ ವಿಶೇಷ ಸರ್ಕಾರಿ ಅಭಿಯೋಜಕ (Special Public Prosecutor-SPP) ಬಿ.ಎನ್.ಜಗದೀಶ್ ವಾದ ಆರಂಭಿಸಿ, ಎಸ್ಐಟಿಯ ಮೊದಲ ಆದ್ಯತೆ ಸಂಸ್ರತ್ತೆಯರ ಸುರಕ್ಷತೆಯಾಗಿದೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಆ ಬಡ ಮಹಿಳೆ ಎಲ್ಲಿದ್ದಾರೆ ಅನ್ನೋದನ್ನ ಪತ್ತೆ ಹಚ್ಚಬೇಕಿದೆ. ಕಿಡ್ನಾಪ್‌ಗೆ ಒಳಗಾದ ಮಹಿಳೆಯ ಮಗ ಅಲವತ್ತುಕೊಂಡಿದ್ದಾನೆ. ಎಫ್ಐಆರ್ ನಲ್ಲಿ 364A ಸೆಕ್ಷನ್ ಅಳವಡಿಕೆ ಸರಿಯಾಗಿದೆ. ಈಗಾಗಲೇ ಆ ಸಂತ್ರಸ್ತೆ ಯ ವಿಡಿಯೋ ಪೋಟೋ, ವಿಡಿಯೋ ಬಹಿರಂಗವಾಗಿವೆ. 2 ಸಾವಿರಕ್ಕೂ ಹೆಚ್ಚು ವಿಡಿಯೋಗಳು ಎಂದು ಹೇಳಾಗುತ್ತದೆ. ಅವುಗಳಲ್ಲಿ ಒಬ್ಬಳು ಈ ಕಿಡ್ನಾಪ್ ಒಳಗಾಗಿರುವ ಮಹಿಳೆ ಎಂದು ದೂರು ದಾಖಲಾಗಿದೆ.

Breaking: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ದೊಡ್ಡ ರಕ್ತಪಾತದ ಸೂಚನೆ

ದೂರುದಾರರು ತನ್ನ ತಾಯಿಯನ್ನ ರೇವಣ್ಣ ಕಿಡ್ನಾಪ್ ಮಾಡಿಸಿದ್ದಾರೆ ಎಂದು ಹೇಳಿದ್ದಾರೆ. ಮಹಿಳೆಯನ್ನು ಎಸ್ಐಟಿ ‌ಮುಂದೆ ಹೇಳಿಕೆ‌ ನೀಡದಂತೆ, ದೂರು ನೀಡದಂತೆ ಬೆದರಿಸಲು ಕಿಡ್ನಾಪ್ ಮಾಡಲಾಗಿದೆ. ಆ ಮಹಿಳೆ‌ ಜೀವಂತವಾಗಿ ಇದ್ದಾಳೆ ಎಂದು ನಾವು ನಂಬಿದ್ದೇವೆ. ಹೆಚ್.ಡಿ.ರೇವಣ್ಣ, ಅಥವಾ ಪ್ರಜ್ವಲ್ ವಿರುದ್ಧ ಯಾವುದೇ ಮಹಿಳೆ ಹೇಳಿಕೆ/ದೂರು ನೀಡಿದರೆ ಇದೇ ರೀತಿ ಆಗುತ್ತದೆ ಎಂಬ ಸಂದೇಶ ರವಾನಿಸಲು ಈ ಕಿಡ್ನಾಪ್ ಮಾಡಿಸಲಾಗಿದೆ ಎಂದು ಎಸ್‌ಪಿಪಿ ವಾದ ಮಂಡಿಸಿದರು.

ಉತ್ತರ ಪ್ರದೇಶ, ಬಿಹಾರದಲ್ಲಿ ನಡೆಯುವ ರೀತಿ ಜನರನ್ನ ಎದರಿಸಲು ಈ ಹಂತಕ್ಕೆ ಆರೋಪಿಗಳು ಹೋಗಿದ್ದಾರೆ. ಜನರನ್ನ/ಸಂತ್ರಸ್ತೆಯರನ್ನ ರಕ್ಷಿಸುವುದು ಸರ್ಕಾರ/ಎಸ್ಐಟಿ ಕರ್ತವ್ಯವಾಗಿದೆ. ಈ ಪ್ರಕರಣಲ್ಲಿ ನಿರೀಕ್ಷಣಾ ಜಾಮೀನು ನೀಡಲು ಯೋಗ್ಯವಲ್ಲ. ಹೀಗಾಗಿ ಮಧ್ಯಂತರ ನಿರೀಕ್ಷಣಾ ಜಾಮೀನು ಕೂಡ ಮಂಜೂರು ಮಾಡಬಾರದು ಎಂದು ಎಸ್ಐಟಿ ಪರ ಎಸ್ಪಿಪಿ ಬಿ.ಎನ್.ಜಗದೀಶ್ ವಾದ ಮಂಡಿಸಿದರು.

Latest Videos
Follow Us:
Download App:
  • android
  • ios