ಜಾತಿ ನಿಂದನೆ ಕೇಸ್‌: ಬಿಜೆಪಿ ಶಾಸಕ ಮುನಿರತ್ನ ಅಮಾನತಿಗೆ ಕಾಂಗ್ರೆಸ್‌ ಆಗ್ರಹ

ಶಾಸಕರೊಬ್ಬರು ತಮ್ಮ ಕಚೇರಿಯಲ್ಲಿ ನಡೆಸಿದ ಸಂಭಾಷಣೆ ಬಗ್ಗೆ ಎಫ್‌ಎಎಲ್ ವರದಿಯಲ್ಲಿ ಆ ಧ್ವನಿ ಶಾಸಕರದ್ದೇ ಎಂಬುದು ಸಾಬೀತಾಗಿದೆ. ಸಂವಿಧಾನದ ಅಡಿ ಸದನದ ಸದಸ್ಯರಾಗಿ ಪ್ರಮಾಣವಚನ ಮಾಡಿರುವವರು ಜಾತಿ ನಿಂದನೆಯಂತಹ ಹೀನ ಕೃತ್ಯ ನಡೆಸಿದರೆ ಈ ಪೀಠ ಸಹಿಸಬಾರದು: ಕಾಂಗ್ರೆಸ್ ಸದಸ್ಯ ಪಿ.ಎಂ.ನರೇಂದ್ರಸ್ವಾಮಿ
 

Congress demands suspension of BJP MLA Munirathna on Caste Abuse case grg

ಸುವರ್ಣ ವಿಧಾನಸಭೆ(ಡಿ.17): ಬಿಜೆಪಿ ಸದಸ್ಯ ಮುನಿರತ್ನ ವಿರುದ್ಧ ಗಂಭೀರ ಜಾತಿ ನಿಂದನೆ ಪ್ರಕರಣ ಇರುವುದರಿಂದ ಅವರು ನಿರ್ದೋಷಿ ಎಂದು ಸಾಬೀತಾಗುವವರೆಗೂ ಸದನದಿಂದ ಅಮಾನತು ಮಾಡಬೇಕು ಎಂದು ಕಾಂಗ್ರೆಸ್ ಸದಸ್ಯರ ಆಗ್ರಹಕ್ಕೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸದನದಲ್ಲಿ ತೀವ್ರ ಗದಲದ ವಾತಾವರಣ ನಿರ್ಮಾಣವಾಯಿತು. 

ನಿಯಮ 69ರ ಅಡಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಪಿ.ಎಂ.ನರೇಂದ್ರಸ್ವಾಮಿ, ಶಾಸಕರೊಬ್ಬರು ತಮ್ಮ ಕಚೇರಿಯಲ್ಲಿ ನಡೆಸಿದ ಸಂಭಾಷಣೆ ಬಗ್ಗೆ ಎಫ್‌ಎಎಲ್ ವರದಿಯಲ್ಲಿ ಆ ಧ್ವನಿ ಶಾಸಕರದ್ದೇ ಎಂಬುದು ಸಾಬೀತಾಗಿದೆ. ಸಂವಿಧಾನದ ಅಡಿ ಸದನದ ಸದಸ್ಯರಾಗಿ ಪ್ರಮಾಣವಚನ ಮಾಡಿರುವವರು ಜಾತಿ ನಿಂದನೆಯಂತಹ ಹೀನ ಕೃತ್ಯ ನಡೆಸಿದರೆ ಈ ಪೀಠ ಸಹಿಸಬಾರದು. ಹೀಗಾಗಿ ನ್ಯಾಯಾಲಯ ನಿರ್ದೋಷಿ ಎನ್ನುವವರೆಗೆ ಅವರನ್ನು ಸದನದಿಂದ ಅಮಾನತು ಮಾಡಿ ಎಂದು ಆಗ್ರಹಿಸಿದರು. 

ಇಡ್ಲಿ ಮಾರುತ್ತಿದ್ದ ಮುನಿರತ್ನ, ಹನಿಟ್ರ್ಯಾಪ್ ಮಾಡಿ ಕೋಟ್ಯಾಧಿಪತಿಯಾದ?; ಲಗ್ಗೆರೆ ನಾರಾಯಣಸ್ವಾಮಿ

ಬಿಜೆಪಿ-ಜೆಡಿಎಸ್ ಆಕ್ಷೇಪ: 

ಪ್ರತಿಪಕ್ಷ ನಾಯಕ ಆ‌ರ್.ಅಶೋಕ್ ಮಾತನಾಡಿ, ನ್ಯಾಯಾಲಯದಲ್ಲಿರುವ ಪ್ರಕರಣ ಚರ್ಚೆಗೆ ಅವಕಾಶ ನೀಡಬಾರದು. ಒಂದೊಮ್ಮೆ ಅವಕಾಶ ನೀಡಿದರೆ ನಾವೂ ವಾಲ್ಮೀಕಿ ಹಗರಣ, ಮುಡಾ ಪ್ರಕರಣ ಚರ್ಚೆ ಮಾಡುತ್ತೇವೆ. ನ್ಯಾಯಾಲಯದಲ್ಲಿರುವ ಯಾವುದೇ ಪ್ರಕರಣ ಮಾತನಾಡಬಹುದು ಎಂದು ನೀವು ಆದೇಶ ಕೊಡಿ ಎಂದು ಕೋರಿದರು. 

ಜೆಡಿಎಸ್‌ನಿಂದ ಧರಣಿ: 

ಈ ವೇಳೆ ಜೆಡಿಎಸ್‌ನ ಎಚ್.ಡಿ.ರೇವಣ್ಣ, ನ್ಯಾಯಾಲಯದಲ್ಲಿರುವ ಪ್ರಕರಣದ ಬಗ್ಗೆ ನಿಯಮ 69ರ ಅಡಿ ಪ್ರಸ್ತಾಪಿಸಲು ಅವಕಾಶವಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪಿ.ಎಂ. ನರೇಂದ್ರ ಸ್ವಾಮಿ, ನೀವು ದಲಿತ ವಿರೋಧಿ ಎಂದು ರೇವಣ್ಣ ವಿರುದ್ಧ ಆರೋಪ ಮಾಡಿದರು. ಇದಕ್ಕೆ ಕೆರಳಿದ ಜೆಡಿಎಸ್ ಸದಸ್ಯರು ದಲಿತ ವಿರೋಧಿ ಎಂಬ ಪದವನ್ನು ಕಡತದಿಂದ ತೆಗೆಸಬೇಕು ಎಂದು ಸ್ಪೀಕರ್ ಪೀಠದ ಎದುರು ಧರಣಿ ನಡೆಸಿದರು. ಈ ವೇಳೆ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ತೀವ್ರ ಗದ್ದಲದ ಸೃಷ್ಟಿಯಾದ ಹಿನ್ನೆಲೆಯಲ್ಲಿ ಸಭೆಯನ್ನು ಹತ್ತು ನಿಮಿಷಗಳ ಕಾಲ ಮುಂದೂಡಲಾಯಿತು. ಬಳಿಕ ಸೇರಿದ ಸದನದಲ್ಲಿ ಚರ್ಚೆಗೆ ಅವಕಾಶ ನೀಡದ ಸ್ಪೀಕ‌ರ್, ಮಂಗಳವಾರ ಅವಕಾಶ ನೀಡುವುದಾಗಿ ಹೇಳಿ ಚರ್ಚೆಗೆ ತೆರೆ ಎಳೆದರು.

ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಎಫ್‌ಐಆರ್‌: ಬಂಧನ ಭೀತಿ

ಕೈ-ಕೈ ಮಿಲಾಯಿಸುವ ಹಂತಕ್ಕೆ ದಲಿತ ಸದಸ್ಯರು 

ಜೆಡಿಎಸ್‌ ಸದಸ್ಯರು ಸದನದ ಬಾವಿಗಿಳಿದು ದರಣಿ ನಡೆಸುವ ವೇಳೆ ಜೆಡಿಎಸ್ ಸದಸ್ಯ ಸಮೃದ್ಧಿ ಮಂಜುನಾಥ್ ಕೂಡ ಬಾವಿಗಿಳಿದರು. ಇದಕ್ಕೆ ಕಾಂಗ್ರೆಸ್‌ನ ಪಿ.ಎಂ. ನರೇಂದ್ರಸ್ವಾಮಿ, 'ನೀನು ದಲಿತ ಅಲ್ವಾ? ದಲಿತರ ಮೇಲೆ ದೌರ್ಜನ್ಯ ಆದಾಗ ನೀನು ಹೇಗೆ ಅವರ ಪರ ಹೋಗ್ತಿಯಾ? ನೀನು ದಲಿತ ವಿರೋಧಿ ಆಡ್ತೀಯಾ?' ಎಂದು ಆಕ್ರೋಶ ವ್ಯಕ್ತಪಡಿಸಿ ಎಸ್‌ಸಿ/ಎಸ್ಟಿ ದೌರ್ಜನ್ಯ ಮಾಡುತ್ತಿರುವ ಬಿಜೆಪಿ, ಜೆಡಿಎಸ್‌ಗೆ ಧಿಕ್ಕಾರ ಎಂದು ಕೂಗಿದರು. 

ಗದ್ದಲದ ಹಿನ್ನೆಲೆ ಸ್ಪೀಕರ್ ಸಭೆ ಮುಂದೂಡಿದ ಬಳಿಕ ಕಾಂಗ್ರೆಸ್‌ ಸದಸ್ಯ ನಾರಾಯಣಸ್ವಾಮಿ ಅವರ ಬಳಿಗೆ ತೆರಳಿದ ಸಮೃದ್ಧಿ ಮಂಜುನಾಥ್ ವಿರುದ್ದ ಏರು ಧ್ವನಿಯಲ್ಲಿ ನಾರಾಯಣಸ್ವಾಮಿ ಜಗಳ ತೆಗೆದರು. ಹೇಗೆ ಅವರ ಪರ ಮಾತಾಡ್ತೀಯ ನೀನು. ಆ ರೀತಿ ಮಾತನಾಡಕೂಡದು ಎಂದು ಪರಸ್ಪರ ತಳ್ಳಾಡಿಕೊಂಡರು. ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆಯಲು ಮಧ್ಯ ಪ್ರವೇಶಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇಬ್ಬರನ್ನೂ ಸಮಾಧಾನಪಡಿಸಿ ಅವರವರ ಸ್ಥಳದಲ್ಲಿ ಕೂರಿಸಿದರು.

Latest Videos
Follow Us:
Download App:
  • android
  • ios