ಇಡ್ಲಿ ಮಾರುತ್ತಿದ್ದ ಮುನಿರತ್ನ, ಹನಿಟ್ರ್ಯಾಪ್ ಮಾಡಿ ಕೋಟ್ಯಾಧಿಪತಿಯಾದ?; ಲಗ್ಗೆರೆ ನಾರಾಯಣಸ್ವಾಮಿ

ಬಿಬಿಎಂಪಿ ಮಾಜಿ ಕಾರ್ಪೋರೇಟರ್ ದಂಪತಿ, ಶಾಸಕ ಮುನಿರತ್ನ ಮೇಲೆ ಹನಿಟ್ರ್ಯಾಪ್ ಮತ್ತು ಕೊಲೆ ಸಂಚು ಆರೋಪ ಮಾಡಿದ್ದಾರೆ. ಮುನಿರತ್ನ ಹಲವು ಬಿಜೆಪಿ ನಾಯಕರ ವಿಡಿಯೋಗಳನ್ನು ಹೊಂದಿದ್ದಾರೆ ಮತ್ತು ಹನಿಟ್ರ್ಯಾಪ್ ಮೂಲಕ ಕೋಟ್ಯಾಧಿಪತಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

MLA Munirathna started honey trapping and became billionaire Laggere Narayanaswamy allegations sat

ಬೆಂಗಳೂರು (ಡಿ.02): ಬೆಂಗಳೂರಿನಲ್ಲಿ ಕೆಲವು ವರ್ಷಗಳ ಹಿಂದೆ ಇಡ್ಲಿ ಮಾರಾಟ ಮಾಡುತ್ತಾ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಶಾಸಕ ಮುನಿರತ್ನ ಕುಟುಂಬ, ಹನಿಟ್ರ್ಯಾಪ್ ಮಾಡಿಯೇ ಕೋಟ್ಯಾಧಿತಿ ಆಗಿದ್ದಾರೆಯೇ ಎಂದು ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಮಂಜುಳಾ ಅವರ ಪತಿ ಲಗ್ಗೆರೆ ನಾರಾಯಣಸ್ವಾಮಿ ಆರೋಪ ಮಾಡಿದ್ದಾರೆ.

ಅಶ್ಲೀಲ ವಿಡಿಯೋ ಸೃಷ್ಟಿಸಿ ಲಗ್ಗೆರೆ ವಾರ್ಡ್ ಮಾಜಿ ಮಹಿಳಾ ಕಾರ್ಪೋರೇಟರ್‌ ಪತಿ ನಾರಾಯಣಸ್ವಾಮಿಗೆ ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ ಆರೋಪದ ಮೇರೆಗೆ ಮುನಿರತ್ನ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಶನಿವಾರ ಎಫ್‌ಐಆರ್ ದಾಖಲಾಗಿದೆ. ಹಲವು ವರ್ಷಗಳಿಂದ ರಾಜಕೀಯದಲ್ಲಿರುವ ನಾರಾಯಣಸ್ವಾಮಿ ಅವರ ಪತ್ನಿ ಬಿಬಿಎಂಪಿ ಚುನಾವಣೆಯಲ್ಲಿ ಲಗ್ಗೆರೆ ವಾರ್ಡ್‌ನಿಂದ ಕಾರ್ಪೋರೇಟರ್ ಆಗಿ ಆಯ್ಕೆ ಆಗಿದ್ದರು. ಈ ಲಗ್ಗೆರೆ ವಾರ್ಡ್ ಆರ್‌.ಆ‌ರ್. ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರಲಿದ್ದು, ರಾಜಕೀಯ ಕಾರಣಗಳಿಂದ ಸ್ಥಳೀಯ ಶಾಸಕ ಮುನಿರತ್ನ ಅವರಿಗೆ ನಾರಾಯಣಸ್ವಾಮಿ ಎದುರಾಳಿ ಆಗಿದ್ದರು. ಈ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ನಾರಾಯಣಸ್ವಾಮಿ ಕುಟುಂಬದವರಿಗೆ ಮುನಿರತ್ನ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಮಾಜಿ ಕಾರ್ಪೋರೇಟರ್ ಮಂಜುಳಾ ಅವರ ಪತಿ ಲಗ್ಗೆರೆ ನಾರಾಯಣಸ್ವಾಮಿ ಅವರು, ಶಾಸಕ ಮುನಿರತ್ನ ನಮ್ಮ ಮೊಬೈಲ್‌ ಫೋನ್‌ಗಳನ್ನ ಟ್ರ್ಯಾಪ್ ಮಾಡಿಸಿದ್ದಾನೆ. ಕೆಲವು ಬಿಜೆಪಿ ನಾಯಕರ ವಿಡಿಯೋಗಳನ್ನು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ಮುಂದೆಯೇ ನಮಗೆ ತೋರಿಸಿದ್ದಾನೆ. ಇದೇ ವೇಳೆ ನಿನ್ನದು ಮತ್ತು ನಿನ್ನ ಹೆಂಡತಿಯದ್ದು ಇದೇ ತರ ವಿಡಿಯೋ ಬರುತ್ತದೆ ಎಂದು ನಮ್ಮನ್ನು ಹೆದರಿಸಿದ್ದನು. ರಾಜ್ಯದಲ್ಲಿ ಶೇ.50 ಶಾಸಕರ ವಿಡಿಯೋಗಳನ್ನ ಟ್ರ್ಯಾಪ್ ಮಾಡಿ‌ಇಟ್ಟುಕೊಂಡಿದ್ದಾನೆ ಎಂದು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ನಿರ್ದೇಶಕ ಗುರುಪ್ರಸಾದ್ ಸಾವಿನ ರಹಸ್ಯ; 4 ಮೊಬೈಲ್‌ಗಳಲ್ಲಿ ಪೊಲೀಸರಿಗೆ ಸಿಕ್ಕಿದ್ದೇನು?

ಈ ವಿಚಾರವಾಗಿ ಮುನಿರನ್ನ ರಾಜಕೀಯವಾಗಿ ರಾಜೀನಾಮೆ ನೀಡಬೇಕು. ಅದೇ ರೀತಿ ಪಕ್ಷದಿಂದಲೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಆರ್.ಅಶೋಕ್ ಮನೆಯಲ್ಲಿ ನಮಗೂ ಮುನಿರತ್ನಗೂ ಗಲಾಟೆಯಾಗಿತ್ತು. ಆಗ ಅಶೋಕನಿಗೆ ಒಂದು ಗ್ರಾಮ ಪಂಚಾಯತಿ ಟಿಕೆಟ್ ಕೊಡಿಸೋಕು ಯೋಗ್ಯತೆ ಇಲ್ಲ. ಅಂಥದ್ದರಲ್ಲಿ ಅವನ ಬಳಿ ನೀನು ದೂರು ಕೊಡ್ತೀಯಾ? ನೀವು ಏನು ಮಾಡೋಕೆ ಆಗೋದಿಲ್ಲ ಎಂದು ಅಶೋಕ್ ಅವರ ಮನೆಯಲ್ಲೇ ಧಮ್ಕಿ ಹಾಕಿದ್ದನು ಎಂದು ಲಗ್ಗೆರೆ ನಾರಾಯಣಸ್ವಾಮಿ ತಿಳಿಸಿದ್ದಾರೆ.

ದೇವೇಗೌಡ, ಹೆಚ್.ಡಿ. ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ನಾನು ಭೇಟಿ ಮಾಡಿ ಶಾಸಕ ಮುನಿರತ್ನ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ. ಜೊತೆಗೆ, ಒಕ್ಕಲಿಗ ಮಠದ ಸ್ವಾಮೀಜಿ ನಿರ್ಮಲಾನಂದನಾಥ ಸ್ವಾಮಿಗಳಿಗೂ ದೂರು ನೀಡುತ್ತೇವೆ. ಇಡ್ಲಿ ಮಾರುತ್ತಿದ್ದ ಕುಟುಂಬ ಈಗ ಹೇಗೆ ಇಷ್ಟೊಂದು ಕೋಟ್ಯಾಧಿಪತಿ ಯಾದ. ಏನು ಬರೀ ಹನಿ ಟ್ರ್ಯಾಪ್ ಮಾಡಿಯೇ ಇಷ್ಟೊಂದ ಹಣ ಮಾಡಿದ್ದಾನಾ? ಬಿಜೆಪಿಯ ಸಾಕಷ್ಟು ಜನ ಶಾಸಕರ ಸಿಡಿಗಳು ಮುನಿರತ್ನ ಬಳಿ ಇವೆ. ದಯವಿಟ್ಟು ಅವನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಲಗ್ಗೆರೆ ನಾರಾಯಣ ಸ್ವಾಮಿ ಮನವಿ ಮಾಡಿದರು.

ಇದನ್ನೂ ಓದಿ: ಪಾಸ್‌ಪೋರ್ಟ್ ಅಪ್ಲೈ ಮಾಡಿರೋ ಸುಂದರ ಯುವತಿಗೆ 'ಹಗ್ ಮಾಡೋ ಆಫರ್' ಕೊಟ್ಟ ಪೊಲೀಸಪ್ಪ!

Latest Videos
Follow Us:
Download App:
  • android
  • ios